ಕರ್ನಾಟಕ

karnataka

ETV Bharat / sports

ಬ್ಯಾಟ್​ನಿಂದ ಹೆಲ್ಮೆಟ್​​ ಹೊಡೆದು ಕೋಪ ಹೊರಹಾಕಿದ ವಿಂಡೀಸ್​ ಬ್ಯಾಟರ್​: ವಿಡಿಯೋ ​ - Brathwaite Smashes Helmet

MAX60 ಕೆರಿಬಿಯನ್​ ಲೀಗ್​ ಪಂದ್ಯದ ವೇಳೆ ವೆಸ್ಟ್ ಇಂಡೀಸ್​ ಮಾಜಿ ನಾಯಕ ಕಾರ್ಲೋಸ್​ ಬ್ರಾಥ್​ವೈಟ್​ ಕೋಪದಿಂದ ಹೆಲ್ಮೆಟ್​ ಅನ್ನು ಒಡೆದು ಹಾಕಿದ್ದಾರೆ.

ಕಾರ್ಲೋಸ್​ ಬ್ರಾಥ್​ವೈಟ್
ಕಾರ್ಲೋಸ್​ ಬ್ರಾಥ್​ವೈಟ್ (X Post)

By ETV Bharat Sports Team

Published : Aug 26, 2024, 4:40 PM IST

ನವದೆಹಲಿ: MAX60 ಕೆರಿಬಿಯನ್ ಲೀಗ್ ಪಂದ್ಯದ ವೇಳೆ ವೆಸ್ಟ್ ಇಂಡೀಸ್ ಬ್ಯಾಟರ್​​ ಕಾರ್ಲೋಸ್ ಬ್ರಾಥ್‌ವೈಟ್ ಕೋಪದಿಂದ ತಮ್ಮ ಹೆಲ್ಮೆಟ್ ಅನ್ನು ಬ್ಯಾಟ್‌ನಿಂದ ಬಾರಿಸಿ ಒಡೆದು ಹಾಕಿದ್ದಾರೆ. ಶನಿವಾರ ನಡೆದ ನ್ಯೂಯಾರ್ಕ್ ಸ್ಟ್ರೈಕರ್ಸ್ ಮತ್ತು ಗ್ರ್ಯಾಂಡ್ ಕೇಮನ್ ಜಾಗ್ವಾರ್ಸ್ ನಡುವಿನ ಪಂದ್ಯದ ವೇಳೆ ಈ ಘಟನೆ ನಡೆದಿದೆ.

ಈ ಪಂದ್ಯದಲ್ಲಿ ತಿಸಾರ ಪೆರೇರಾ ನಾಯಕತ್ವದ ನ್ಯೂಯಾರ್ಕ್ ಸ್ಟ್ರೈಕರ್ಸ್ ಮೊದಲು ಬ್ಯಾಟ್ ಮಾಡಿತ್ತು. ಕಾರ್ಲೋಸ್ ಬ್ರಾಥ್‌ವೈಟ್ ಬ್ಯಾಟಿಂಗ್‌ಗೆ ಬರುವ ವೇಳೆ ಸ್ಟ್ರೈಕರ್ಸ್ ತಂಡ 74 ರನ್​ಗಳಿಗೆ 5 ವಿಕೆಟ್​ಗಳನ್ನು ಕಳೆದುಕೊಂಡಿತ್ತು. ನಂತರ ಕ್ರೀಸ್​​ಗಿಳಿದಿದ್ದ ಬ್ರಾಥ್‌ವೈಟ್,​ 4 ಎಸೆತಗಳಲ್ಲಿ 7 ರನ್ ಗಳಿಸಿದ್ದರು. ಇನಿಂಗ್ಸ್‌ನ 9ನೇ ಓವರ್​ನಲ್ಲಿ ಜೋಶುವಾ ಲಿಟಲ್ ಎಸೆದ ಶಾರ್ಟ್ ಬಾಲ್‌ ಅನ್ನು ಪುಲ್ ಶಾಟ್ ಹೊಡೆಯಲು ಬ್ರಾಥ್​ವೈಟ್​ ಪ್ರಯತ್ನಿಸಿದರು. ಆದರೆ, ಬ್ಯಾಟ್ ಬದಲಿಗೆ ಬೌಲ್​ ಭುಜಕ್ಕೆ ತಾಕಿ ವಿಕೆಟ್ ಕೀಪರ್​ ಕೈಸೇರಿತ್ತು.

ನಂತರ ಎದುರಾಳಿ ತಂಡ ಔಟ್​ಗಾಗಿ ಅಂಪೈರ್​ಗೆ ಮನವಿ​ ಮಾಡಿತ್ತು. ಮನವಿಗೆ ಒಪ್ಪಿಗೆ ಸೂಚಿಸಿದ ಅಂಪೈರ್​ ಔಟ್ ಎಂದು ತೀರ್ಪು ನೀಡಿದರು. ಇದರಿಂದ ಕೋಪಗೊಂಡ ಬ್ರಾಥ್​ವೈಟ್​ ಪೆವಿಲಿಯನ್​ಗೆ ಮರಳುವ ವೇಳೆ ಬೌಂಡರಿ ಲೈನ್​ ಬಳಿ ತಲುಪುತ್ತಿದ್ದಂತೆ, ತಾವು ಧರಿಸಿದ್ದ ಹೆಲ್ಮೇಟ್​ ತೆಗೆದು, ಬ್ಯಾಟ್​ನಿಂದ ಚೆಂಡಿನಂತೆ ಹೊಡೆದು ಮೈದಾನದಿಂದ ಹೊರಗೆ ಕಳುಹಿಸಿದ್ದಾರೆ. ಇದರ ವಿಡಿಯೋ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್​ ಆಗುತ್ತಿದೆ.

ಈ ಪಂದ್ಯವನ್ನು ಗೆಲ್ಲುವ ಮೂಲಕ ಕಾರ್ಲೋಸ್ ಬ್ರಾಥ್‌ವೈಟ್ ತಂಡ ನ್ಯೂಯಾರ್ಕ್ ಸ್ಟ್ರೈಕರ್ಸ್ ಫೈನಲ್‌ಗೆ ಪ್ರವೇಶಿಸಿತ್ತು. ಪ್ರಶಸ್ತಿ ಹಣಾಹಣಿಯಲ್ಲಿ ನ್ಯೂಯಾರ್ಕ್ ಕೆರಿಬಿಯನ್ ಟೈಗರ್ಸ್ ತಂಡವನ್ನು ಎದುರಿಸಿತ್ತು. ಆದರೆ, ಫೈನಲ್‌ ಹಣಾಹಣಿಯಲ್ಲಿ ಸ್ಟ್ರೈಕರ್ಸ್ ನೀಡಿದ್ದ 126 ರನ್‌ಗಳ ಗುರಿಯನ್ನು ಬೆನ್ನಟ್ಟಿದ್ದ ಸ್ಟ್ರೈಕರ್ಸ್​ ತಂಡ, 69 ರನ್‌ಗಳಿಗೆ ಆಲೌಟ್​ ಆಯಿತು. ಇದರೊಂದಿಗೆ 56 ರನ್‌ಗಳಿಂದ ಸೋಲುಂಡು ಚಾಂಪಿಯನ್​ ಪಟ್ಟಕ್ಕೇರುವ ಅವಕಾಶ ಕಳೆದುಕೊಂಡಿತು.

ಕಾರ್ಲೋಸ್ ಬ್ರಾಥ್‌ವೈಟ್ ಕೊನೆಯ ಬಾರಿಗೆ 2019ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ ಆಡಿದ್ದರು. ನಂತರ ಅವರು ಹೆಚ್ಚಾಗಿ ಕಾಮೆಂಟೇಟರ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ​

ಇದನ್ನೂ ಓದಿ:ವಿರಾಟ್​ ಕೊಹ್ಲಿ ಬಳಿ ಇವೆ 10 ದುಬಾರಿ ವಾಚ್​ಗಳು: ಒಂದೊಂದರ ಬೆಲೆ ಕೇಳಿದರೆ ಶಾಕ್​ ಆಗ್ತೀರಾ! - Virat Kohli Expensive Watches

ABOUT THE AUTHOR

...view details