ಹೈದರಾಬಾದ್: ಸದ್ಯ ಟೀಂ ಇಂಡಿಯಾ ಬಾರ್ಡರ್ - ಗವಾಸ್ಕರ್ ಟೆಸ್ಟ್ ಸರಣಿಗಾಗಿ ಆಸ್ಟ್ರೇಲಿಯಾ ಪ್ರವಾಸದಲ್ಲಿರುವುದು ಗೊತ್ತೇ ಇದೆ. ಐದು ಪಂದ್ಯಗಳ ಈ ಸರಣಿಯಲ್ಲಿ ಈಗಾಗಲೇ ಎರಡು ಟೆಸ್ಟ್ಗಳು ಮುಗಿದಿವೆ. ಉಭಯ ತಂಡಗಳು ತಲಾ ಒಂದರಲ್ಲಿ ಗೆಲುವು ಸಾಧಿಸಿದೆ. ಇದೀಗ ಮೂರನೇ ಟೆಸ್ಟ್ಗಾಗಿ ಉಭಯ ತಂಡಗಳು ತಯಾರಿ ನಡೆಸಿವೆ.
ಶನಿವಾರ (ಡಿಸೆಂಬರ್ 14)ರಿಂದ ಬ್ರಿಸ್ಬೇನ್ನಲ್ಲಿ 3ನೇ ಟೆಸ್ಟ್ ನಡೆಯಲಿದೆ. ಇದಕ್ಕಾಗಿ ಅಡಿಲೇಡ್ ನಿಂದ ಭಾರತದ ಆಟಗಾರರು ಬ್ರಿಸ್ಬೇನ್ಗೆ ತೆರಳಿದ್ದಾರೆ. ಆದರೆ, ಅಡಿಲೇಡ್ ನಿಂದ ಬ್ರಿಸ್ಬೇನ್ಗೆ ಹೋಗುವ ಮುನ್ನ ಅಚ್ಚರಿಯ ಘಟನೆಯೊಂದು ನಡೆದಿದೆ. ತಡವಾಗಿ ಬಂದ ಸ್ಟಾರ್ ಆಟಗಾರನನ್ನು ಹೋಟೆಲ್ನಲ್ಲೇ ಬಿಟ್ಟು ಬಸ್ ವಿಮಾನ ನಿಲ್ದಾಣಕ್ಕೆ ಹೊರಟು ಹೋಗಿದೆ.
ವಾಸ್ತವವಾಗಿ, ಅಡಿಲೇಡ್ನಲ್ಲಿ ತಂಗಿದ್ದ ಭಾರತೀಯ ಆಟಗಾರರು ಗಬ್ಬಾಗೆ ತೆರಳಲು ಹೋಟೆಲ್ನಿಂದ ಹೊರ ಬಂದು ತಂಡಕ್ಕಾಗಿ ಕಾಯ್ದಿರಿಸಿದ್ದ ಬಸ್ನಲ್ಲಿ ಕುಳಿತಿದ್ದರು. ಆದರೇ ಜೈಸ್ವಾಲ್ ಹೋಟೆಲ್ನಿಂದ ಹೊರಬರಲು ತಡ ಮಾಡಿದ್ದರು. ಎಷ್ಟು ಕಾದರೂ ಬಾರದೇ ಇದ್ದ ಕಾರಣ ಬಸ್ ಜೈಸ್ವಾಲ್ ಅವರನ್ನು ಬಿಟ್ಟು ವಿಮಾನ ನಿಲ್ದಾಣಕ್ಕೆ ಹೊರಟು ಹೋಯ್ತು.
ನಾಯಕ ರೋಹಿತ್ ಶರ್ಮಾ ಮತ್ತು ಕೋಚ್ ಗೌತಮ್ ಗಂಭೀರ್ ಸೇರಿದಂತೆ ಇಡೀ ತಂಡವು ಹೋಟೆಲ್ ಹೊರಗೆ ಜೈಸ್ವಾಲ್ಗಾಗಿ ಕಾಯ್ದಿದ್ದರು. 20 ನಿಮಿಷಗಳು ಕಳೆದರೂ ಬಾರದೇ ಇದ್ದ ಕಾರಣ ಬಸ್ ಹೊರಟು ಹೋಯ್ತು. ಬಳಿಕ ತಂಡದ ಮ್ಯಾನೇಜ್ಮೆಂಟ್ ಜೈಸ್ವಾಲ್ಗೆ ವಿಶೇಷ ಕಾರಿನ ವ್ಯವಸ್ಥೆ ಮಾಡಿದೆ. ಹಿರಿಯ ಭದ್ರತಾ ಅಧಿಕಾರಿಯೊಂದಿಗೆ ಜೈಸ್ವಾಲ್ ಕಾರಿನಲ್ಲಿ ಪ್ರಯಾಣಿಸಿ ವಿಮಾನ ನಿಲ್ದಾಣಕ್ಕೆ ತಲುಪಿ ತಂಡವನ್ನು ಸೇರಿಕೊಂಡರು. ಈ ವಿಚಾರವಾಗಿ ನಾಯಕ ರೋಹಿತ್ ಶರ್ಮಾ ಕೂಡ ಜೈಸ್ವಾಲ್ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ ಎಂದು ವರದಿಯಾಗಿದೆ.
ಅಡಿಲೇಡ್ನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಕಾಂಗರೂ ಪಡೆ 10 ವಿಕೆಟ್ಗಳಿಂದ ಭಾರತದ ವಿರುದ್ಧ ಜಯ ಸಾಧಿಸಿತು. ಇದಕ್ಕೂ ಮುನ್ನ ಪರ್ತ್ನಲ್ಲಿ ನಡೆದಿದ್ದ ಮೊದಲ ಟೆಸ್ಟ್ನಲ್ಲಿ ಟೀಂ ಇಂಡಿಯಾ 295 ರನ್ಗಳ ಜಯ ಸಾಧಿಸಿತ್ತು. ಇದೀಗ ಎರಡೂ ತಂಡಗಳು 1-1 ಗೆಲುವಿನೊಂದಿಗೆ ಸರಣಿಯಲ್ಲಿ ಸಮಬಲ ಸಾಧಿಸಿವೆ.
ಆಸೀಸ್ ವಿರುದ್ಧ ಜೈಸ್ವಾಲ್: ಪರ್ತ್ನಲ್ಲಿ ನಡೆದಿದ್ದ ಮೊದಲ ಟೆಸ್ಟ್ನ ಪ್ರಥಮ ಇನ್ನಿಂಗ್ಸ್ನಲ್ಲಿ ಶೂನ್ಯಕ್ಕೆ ನಿರ್ಗಮಿಸಿದ್ದ ಜೈಸ್ವಾಲ್ ಎರಡನೇ ಇನ್ನಿಂಗ್ಸ್ನಲ್ಲಿ ಶತಕ ಸಮೇತ 161 ರನ್ಗಳನ್ನು ಚಚ್ಚಿದ್ದರು. ಎರಡನೇ ಟೆಸ್ಟ್ನ ಮೊದಲ ಇನ್ನಿಂಗ್ಸ್ನಲ್ಲಿ ಮತ್ತೆ ಶೂನ್ಯಕ್ಕೆ ನಿರ್ಗಮಿಸಿದ್ದ ಜೈಸ್ವಾಲ್, ಎರಡನೇ ಇನ್ನಿಂಗ್ಸ್ನಲ್ಲೂ ಕೇವಲ 27 ರನ್ ಕಲೆ ಹಾಕಿ ನಿರ್ಗಮಿಸಿದ್ದರು. ಇದೀಗ ಮೂರನೇ ಟೆಸ್ಟ್ನಲ್ಲಿ ಕಮ್ಬ್ಯಾಕ್ ಮಾಡಲು ನೆಟ್ಸ್ನಲ್ಲಿ ಅಭ್ಯಾಸ ನಡೆಸಿದ್ದಾರೆ.
ಇದನ್ನೂ ಓದಿ:ಬದಲಾಗದ ಹಳೇ ಚಾಳಿ: ಈ ಬಾರಿ ಆತ್ಮೀಯ ಸ್ನೇಹಿತನ ಜೊತೆಗೆ ಜಗಳಕ್ಕಿಳಿದ ಸ್ಟಾರ್ ಕ್ರಿಕೆಟರ್..!