ಹೈದರಾಬಾದ್:ಟಿ-20 ವಿಶ್ವಕಪ್ನಲ್ಲಿ ಆಡಲು ಅವಕಾಶ ಸಿಗದೇ ಬರೀ ಬೆಂಚ್ ಕಾದಿದ್ದ ಯಶಸ್ವಿ ಜೈಸ್ವಾಲ್ ಜಿಂಬಾಬ್ವೆ ವಿರುದ್ಧದ ಸರಣಿಯಲ್ಲಿ ಅಬ್ಬರಿಸಿದ್ದರು. ಇದು ಅವರ ವೃತ್ತಿಜೀವನದ ಶ್ರೇಯಾಂಕದಲ್ಲಿ ಮಹತ್ತರ ಬದಲಾವಣೆ ತಂದಿದೆ. ಐಸಿಸಿ ಬುಧವಾರ ಬಿಡುಗಡೆ ಮಾಡಿದ ರ್‍ಯಾಂಕಿಂಗ್ ಪಟ್ಟಿಯಲ್ಲಿ 4 ಸ್ಥಾನ ಜಿಗಿತ ಕಂಡು ವೃತ್ತಿಜೀವನದ ಅತ್ಯುತ್ತಮ ಹಂತಕ್ಕೆ ತಲುಪಿದ್ದಾರೆ.
ಟಿ-20 ಬ್ಯಾಟರ್ಗಳ ಪಟ್ಟಿಯಲ್ಲಿ ಅಗ್ರ 10 ರಲ್ಲಿ ಮೂವರು ಭಾರತೀಯ ಬ್ಯಾಟರ್ಗಳಿದ್ದಾರೆ. ಅದರಲ್ಲಿ 2ನೇ ಸ್ಥಾನದಲ್ಲಿ ಸೂರ್ಯಕುಮಾರ್ ಇದ್ದಾರೆ. ಟಾಪ್ 10 ರಲ್ಲಿದ್ದ ಯಶಸ್ವಿ ಜೈಸ್ವಾಲ್ ದಿಢೀರ್ ಏರಿಕೆ ಕಂಡು ಟಾಪ್ 6ನೇ ಸ್ಥಾನಕ್ಕೆ ಬಂದಿದ್ದಾರೆ. ಅಂದರೆ ನಾಲ್ಕು ಕ್ರಮಾಂಕ ಜಿಗಿತ ಕಂಡಿದ್ದಾರೆ. ಇನ್ನೊಬ್ಬ ಬ್ಯಾಟರ್ ಋತುರಾಜ್ ಗಾಯಕ್ವಾಡ್ ಒಂದು ಸ್ಥಾನ ಕುಸಿದು ಟಾಪ್ 8 ರಲ್ಲಿದ್ದಾರೆ. ಜೈಸ್ವಾಲ್ 743 ರೇಟಿಂಗ್ಸ್, ಸೂರ್ಯಕುಮಾರ್ 797, ಗಾಯಕ್ವಾಡ್ 684 ರೇಟಿಂಗ್ ಹೊಂದಿದ್ದಾರೆ. ಇನ್ನು ಆಸ್ಟ್ರೇಲಿಯಾದ ಟ್ರಾವಿಸ್ ಹೆಡ್ ವಿಶ್ವ ನಂ.1 ಸ್ಥಾನವನ್ನು ಉಳಿಸಿಕೊಂಡಿದ್ದಾರೆ.
ಜಿಂಬಾಬ್ವೆ ಸರಣಿಗೆ ತಂಡದ ಹಂಗಾಮಿ ನಾಯಕತ್ವ ವಹಿಸಿಕೊಂಡಿದ್ದ ಶುಭ್ಮನ್ ಗಿಲ್ ಕೂಡ ಶ್ರೇಯಾಂಕದಲ್ಲಿ ಏರಿಕೆ ಕಂಡಿದ್ದಾರೆ. 36 ಸ್ಥಾನಗಳನ್ನು ದಾಟಿ ಬಂದಿರುವ ಆಟಗಾರ 37 ನೇ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. 42 ನೇ ಶ್ರೇಯಾಂಕದಲ್ಲಿರವ ರೋಹಿತ್ ಶರ್ಮಾ ಮತ್ತು 51 ನೇ ರ್ಯಾಂಕ್ನಲ್ಲಿರುವ ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿದ್ದಾರೆ.