ಕರ್ನಾಟಕ

karnataka

ETV Bharat / sports

ನೆದರ್ಲೆಂಡ್ಸ್ ವಿರುದ್ಧ ದಕ್ಷಿಣ ಆಫ್ರಿಕಾ ಗೆಲುವು; ಆಪತ್ಬಾಂಧವನಾದ ಮಿಲ್ಲರ್​ - South Africa Defeat Netherlands - SOUTH AFRICA DEFEAT NETHERLANDS

ಡೇವಿಡ್ ಮಿಲ್ಲರ್ ಜವಾಬ್ದಾರಿಯುತ ಬ್ಯಾಟಿಂಗ್‌ ನೆರವಿನಿಂದಾಗಿ ನೆದರ್ಲ್ಯಾಂಡ್ಸ್‌ ವಿರುದ್ಧ ದಕ್ಷಿಣ ಆಫ್ರಿಕಾ ಸೋಲಿನ ದವಡೆಯಿಂದ ಪಾರಾಯಿತು.

SOUTH AFRICA VS NETHERLANDS  DAVID MILLER  T20 WORLD CUP  OTTNEIL BAARTMAN
ನೆದರ್ಲ್ಯಾಂಡ್ಸ್‌ ವಿರುದ್ಧ ದಕ್ಷಿಣ ಆಫ್ರಿ ಗೆಲುವು (AP)

By PTI

Published : Jun 9, 2024, 1:26 PM IST

ನ್ಯೂಯಾರ್ಕ್:ಟಿ20 ವಿಶ್ವಕಪ್‌ನಲ್ಲಿ ಶನಿವಾರ ನಡೆದ ಪಂದ್ಯದಲ್ಲಿನೆದರ್ಲ್ಯಾಂಡ್ಸ್‌ ತಂಡವನ್ನು ದಕ್ಷಿಣ ಆಫ್ರಿಕಾ 4 ವಿಕೆಟ್‌ಗಳಿಂದ ಸೋಲಿಸಿತು. ನ್ಯೂಯಾರ್ಕ್‌ನಲ್ಲಿ ನಡೆದ ಈ ಪಂದ್ಯದಲ್ಲಿ ನೆದರ್ಲ್ಯಾಂಡ್ಸ್‌ ಕೇವಲ 103 ರನ್ ಗಳಿಸಲಷ್ಟೇ ಶಕ್ತವಾಯಿತು. ಸಾಧಾರಣ ಗುರಿ ತಲುಪಲು ದಕ್ಷಿಣ ಆಫ್ರಿಕಾ ಪರದಾಡಿತು. ಆದ್ರೆ, ಡೇವಿಡ್ ಮಿಲ್ಲರ್ 19ನೇ ಓವರ್‌ನಲ್ಲಿ ದಕ್ಷಿಣ ಆಫ್ರಿಕಾಕ್ಕೆ ಜಯ ತಂದುಕೊಟ್ಟರು.

ಕಳೆದ ಎರಡು ವಿಶ್ವಕಪ್‌ಗಳಲ್ಲಿ ನೆದರ್ಲ್ಯಾಂಡ್ಸ್‌ ತಮಗಿಂತ ಹೆಚ್ಚು ಬಲಿಷ್ಠ ತಂಡ ದಕ್ಷಿಣ ಆಫ್ರಿಕಾವನ್ನು ಸೋಲಿಸಿ ಇಡೀ ವಿಶ್ವವನ್ನೇ ಅಚ್ಚರಿಗೊಳಿಸಿತ್ತು. 2022ರ ಟಿ20 ವಿಶ್ವಕಪ್‌ನಲ್ಲಿ, ನೆದರ್ಲ್ಯಾಂಡ್ಸ್‌ ಗುಂಪು ಪಂದ್ಯದಲ್ಲಿ ದ.ಆಫ್ರಿಕಾವನ್ನು ಸೋಲಿಸಿತ್ತು. 2023ರ ಏಕದಿನ ವಿಶ್ವಕಪ್‌ನಲ್ಲೂ ಆಫ್ರಿಕನ್ ತಂಡವನ್ನು ನೆದರ್ಲ್ಯಾಂಡ್ಸ್‌ ಕಾಡಿತ್ತು.

ನಿನ್ನೆಯ ಪಂದ್ಯದಲ್ಲಿ ನೆದರ್ಲ್ಯಾಂಡ್ಸ್‌ ಮೊದಲು ಬ್ಯಾಟ್ ಮಾಡಿತು. ಆದರೆ, ಮತ್ತೊಮ್ಮೆ ಈ ಮೈದಾನದ ಪಿಚ್​ ವೇಗದ ಬೌಲರ್‌ಗಳಿಗೆ ನೆರವಾಯಿತು. ಮಾರ್ಕೊ ಜಾನ್ಸನ್ (2/20) ಮತ್ತು ಒಟ್ನೀಲ್ ಬಾರ್ಟ್‌ಮನ್ (4/11) 5 ಓವರ್‌ಗಳೊಳಗೆ 3 ವಿಕೆಟ್‌ಗಳನ್ನು ಉರುಳಿಸಿದರು. ಪವರ್‌ಪ್ಲೇಯಲ್ಲಿ ನೆದರ್ಲೆಂಡ್ಸ್ 20 ರನ್ ಗಳಿಸಲಷ್ಟೇ ಶಕ್ತವಾಯಿತು. ಆದರೆ, 10ನೇ ಓವರ್‌ನಲ್ಲಿ ನಾಲ್ಕನೇ ವಿಕೆಟ್ ನಷ್ಟಕ್ಕೆ 35 ರನ್ ಗಳಿಸಿತು. 12ನೇ ಓವರ್‌ನಲ್ಲಿ ನೆದರ್ಲ್ಯಾಂಡ್ಸ್‌ 2 ವಿಕೆಟ್ ಕಳೆದುಕೊಂಡು 48 ರನ್ ಕಲೆ ಹಾಕಿತು. ಇಲ್ಲಿಂದ ತಂಡ 70-80 ರನ್‌ ತಲುಪುವುದೇ ಕಷ್ಟವೆಂದು ಅಂದಾಜಿಸಲಾಗಿತ್ತು. ಆದರೆ ಸಿಬ್ರಾಂಡ್ ಎಂಗೆಲ್‌ಬ್ರೆಕ್ಟ್ (40) ಮತ್ತು ಲೋಗನ್ ವ್ಯಾನ್ ಬೀಕ್ (23) ಏಳನೇ ವಿಕೆಟ್‌ಗೆ 54 ರನ್‌ಗಳ ಉಪಯುಕ್ತ ಜೊತೆಯಾಟದ ಮೂಲಕ ತಂಡವನ್ನು 100 ರನ್‌ಗಳ ಗಡಿ ದಾಟಿಸಿದರು. ಕೊನೆಯ ಓವರ್‌ನಲ್ಲಿ ಬಾರ್ಟ್‌ಮನ್ 3 ವಿಕೆಟ್ ಪಡೆದು ನೆದರ್ಲ್ಯಾಂಡ್ಸ್‌ ಅನ್ನು ಕೇವಲ 103 ರನ್‌ಗಳಿಗೆ ನಿಯಂತ್ರಿಸಿದರು.

ಇದನ್ನೂ ಓದಿ:ಟಿ20 ವಿಶ್ವಕಪ್: ಆಸ್ಟ್ರೇಲಿಯಾ ದಿಟ್ಟ ಪ್ರದರ್ಶನಕ್ಕೆ ಶರಣಾದ ಇಂಗ್ಲೆಂಡ್ - Australia Nails England

ABOUT THE AUTHOR

...view details