ದುಬೈ:ಭಾರೀ ನಿರೀಕ್ಷೆ ಮೂಡಿಸಿದ್ದ ವನಿತೆಯರ ಟಿ-20 ವಿಶ್ವಕಪ್ನಲ್ಲಿ ಹೊಸ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತು. ದಕ್ಷಿಣಾ ಆಫ್ರಿಕಾ ವನಿತೆಯರ ಮೇಲೆ ಸವಾರಿ ಮಾಡಿದ ನ್ಯೂಜಿಲ್ಯಾಂಡ್ ವನಿತೆಯರು ಚೊಚ್ಚಲ ವಿಶ್ವಕಿರೀಟವನ್ನು ಮುಡಿಗೇರಿಸಿಕೊಂಡರು. ಸತತ 2ನೇ ಬಾರಿಗೆ ಹರಿಣಗಳ ತಂಡ ನಿರಾಸೆ ಅನುಭವಿಸಿ ಚೋಕರ್ಸ್ ಹಣೆಪಟ್ಟಿಯನ್ನು ಹಾಗೇ ಉಳಿಸಿಕೊಂಡಿತು.
ಕಿವೀಸ್ನ ಅಮೇಲಿಯಾ ಕೆರ್ ಆಲ್ರೌಂಡರ್ ಆಟ, ತಂಡದ ಸಾಂಘಿಕ ಪ್ರದರ್ಶನದಿಂದ ನ್ಯೂಜಿಲ್ಯಾಂಡ್ ಮಹಿಳೆಯರು ದುಬೈನ ಕ್ರೀಡಾಂಗಣದಲ್ಲಿ ನಡೆದ ಫೈನಲ್ ರಾರಾಜಿಸಿದರು. ಯಾವುದೇ ಹಂತದಲ್ಲಿ ಹರಿಣಗಳ ತಂಡ ಮೇಲೇಳದಂತೆ ತಡೆದರು. ಇದರಿಂದ ತಂಡ 32 ರನ್ಗಳ ಸೋಲು ಕಂಡಿತು.
ಮೊದಲು ಬ್ಯಾಟ್ ಮಾಡಿದ ನ್ಯೂಜಿಲ್ಯಾಂಡ್ ವನಿತೆಯರು ಸೂಜಿ ಬೆಟ್ಸ್, ಅಮೇಲಿಯಾ ಕೆರ್, ಬ್ರೂಕ್ ಹ್ಯಾಲ್ಲಿಡೇ ಅವರ ಭರ್ಜರಿ ಬ್ಯಾಟಿಂಗ್ನಿಂದಾಗಿ ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ಗೆ 158 ರನ್ ಗಳಿಸಿತು. ಬಲಿಷ್ಠ ಆಟಗಾರ್ತಿಯರಿದ್ದರೂ ಒತ್ತಡ ನಿಭಾಯಿಸಲಾಗದೇ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ದಕ್ಷಿಣ ಆಫ್ರಿಕಾ ವನಿತೆಯರು 9 ವಿಕೆಟ್ಗೆ 126 ರನ್ ಗಳಿಸಲಷ್ಟೆ ಶಕ್ತವಾಗಿ ಪ್ರಶಸ್ತಿ ಗೆಲ್ಲುವ ಅವಕಾಶವನ್ನು ತಪ್ಪಿಸಿಕೊಂತು.