ಕರ್ನಾಟಕ

karnataka

ETV Bharat / sports

ಚೆನ್ನೈ ಹುಡುಗನ ಮೇಲೆ ಆರ್​ಸಿಬಿ ಸೇರಿ 3 ತಂಡಗಳ ಕಣ್ಣು: ಮೆಗಾ ಹರಾಜಿನಲ್ಲಿ ದೊಡ್ಡ ಮೊತ್ತ ಸಾಧ್ಯತೆ

ಚೆನ್ನೈನ ಸ್ಟಾರ್​ ಆಲ್​ರೌಂಡರ್‌ನನ್ನು ತಂಡಕ್ಕೆ ಸೇರಿಸಿಕೊಳ್ಳಬೇಕು ಎಂದು ಆರ್‌ಸಿಬಿ ಯೋಜನೆ ರೂಪಿಸಿದೆ.

ಭಾರತ ಕ್ರಿಕೆಟ್​ ತಂಡ
ಭಾರತ ಕ್ರಿಕೆಟ್​ ತಂಡ (IANS)

By ETV Bharat Sports Team

Published : 5 hours ago

IPL 2025 Auction: ಐಪಿಎಲ್ 2025ರ ಮೆಗಾ ಹರಾಜು ಮೊದಲೇ ಭಾರಿ ಸದ್ದು ಮಾಡುತ್ತಿದೆ. ಖ್ಯಾತನಾಮ ಆಟಗಾರರು ಈ ಬಾರಿ ಹರಾಜಿನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನಲಾಗುತ್ತಿದೆ. ಏತನ್ಮಧ್ಯೆ, ಚೆನ್ನೈ ಹಡುಗನನ್ನು ತಂಡದಲ್ಲಿ ಸೇರಿಸಿಕೊಳ್ಳಲು ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಸೇರಿ 3 ತಂಡಗಳು ತುದಿಗಾಲಲ್ಲಿ ನಿಂತಿವೆ.

ಹೌದು, ಈ ಬಾರಿ ಆರ್​ಸಿಬಿ ತಂಡದಲ್ಲಿ ದೊಡ್ಡ ಬದಲಾವಣೆಗೆ ಮುಂದಾಗಿದೆ. ವಿರಾಟ್​ ಕೊಹ್ಲಿ, ಗ್ರೀನ್​, ರಜತ್​ ಪಾಟೀದರ, ವಿಲ್​ಜಾಕ್ಸ್​ ಹೊರತುಪಡಿಸಿ ಉಳಿದ ಆಟಗಾರರನ್ನು ತಂಡದಿಂದ ಕೈಬಿಡುವ ಸಾಧ್ಯತೆ ಹೆಚ್ಚಿದೆ. ಅಲ್ಲದೇ ತಂಡಕ್ಕೆ ಕೆಲವು ಸ್ಟಾರ್​ ಆಟಗಾರರನ್ನು ಸೇರಿಸಿಕೊಳ್ಳಲು ಪಟ್ಟಿ ತಯಾರಿಸಿದೆ ಎನ್ನಲಾಗುತ್ತಿದೆ. ಆ ಪಟ್ಟಿಯಲ್ಲಿ ಚೆನ್ನೈ ಆಲ್​ರೌಂಡರ್​ ವಾಷಿಂಗ್ಟನ್​ ಸುಂದರ್​ ಹೆಸರು ಕೂಡ ಸೇರಿದೆ ಎನ್ನಲಾಗುತ್ತಿದೆ.

ಸದ್ಯ ನ್ಯೂಜಿಲೆಂಡ್​ ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್​ನಲ್ಲಿ ಉತ್ತಮ ಪ್ರದರ್ಶನ ತೋರುತ್ತಿರುವ ವಾಷಿಂಗ್ಟನ್​ ಸುಂದರ್​ ಈ ಬಾರಿ ಐಪಿಎಲ್​ನಲ್ಲಿ ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಕೊನೆಯ ಸೀಸನ್​ನಲ್ಲಿ ರೈಸರ್ಸ್ ಹೈದರಾಬಾದ್ ಪರ ಆಡಿದ್ದ ಸುಂದರ್ ಒಂದೇ ಒಂದು ಪಂದ್ಯವನ್ನು ಮಾತ್ರ ಆಡಿದ್ದರು. ಮೆಗಾ ಹರಾಜಿಗೂ ಮುನ್ನ ಫ್ರಾಂಚೈಸಿ ಸುಂದರ್ ಅವರನ್ನು ಕೈಬಿಡಲಿದೆ ಎಂದು ಹೇಳಲಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ 25ರ ಹರೆಯದ ಆಲ್‌ರೌಂಡರ್ ಹರಾಜಿಗೆ ಬರುವುದು ಖಚಿತ. ಅವರನ್ನು ಪಡೆಯಲು ಹಲವು 3 ತಂಡಗಳು ಪ್ರಯತ್ನಿಸುತ್ತಿವೆ.

ಲಕ್ನೋ ಸೂಪರ್ ಜೈಂಟ್ಸ್:ಐಪಿಎಲ್ 2024ರಲ್ಲಿ, ದೀಪಕ್ ಹೂಡಾ ಮತ್ತು ಕೃನಾಲ್ ಪಾಂಡ್ಯ ಲಕ್ನೋ ಸೂಪರ್‌ಜೈಂಟ್ಸ್ ತಂಡದಲ್ಲಿ ಇಬ್ಬರು ಪ್ರಮುಖ ಆಲ್‌ರೌಂಡರ್‌ಗಳಾಗಿ ಹೊರಹೊಮ್ಮಿದರು. ಆದರೆ ಈ ಇಬ್ಬರು ಹೇಳಿಕೊಳ್ಳುವ ಪ್ರದರ್ಶನ ತೋರಲಿಲ್ಲ. ಫ್ರಾಂಚೈಸಿ ಈಗ ಈ ಇಬ್ಬರು ಆಟಗಾರರನ್ನು ಉಳಿಸಿಕೊಳ್ಳುವ ಸಾಧ್ಯತೆ ಕಡಿಮೆಯಾಗಿದೆ. ಇಂತಹ ಪರಿಸ್ಥಿತಿಯಲ್ಲಿ, ಮೆಗಾ ಹರಾಜಿನಲ್ಲಿ ವಾಷಿಂಗ್ಟನ್ ಸುಂದರ್ ಅವರನ್ನು ಖರೀದಿಸಲು ಚಿಂತಿಸುತ್ತಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು:ಆರ್​​ಸಿಬಿ ತಂಡಕ್ಕೆ ಬೌಲಿಂಗ್ ದೊಡ್ಡ ಸಮಸ್ಯೆಯಾಗಿದೆ. ಅಲ್ಲದೇ ಆಲ್‌ರೌಂಡರ್ ಕೊರತೆ ಕೂಡ ಇದೆ. ಕಳೆದ ಋತುವಿನಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಉತ್ತಮ ಪ್ರದರ್ಶನ ತೋರುವಲ್ಲಿ ವಿಫಲರಾಗಿದ್ದರು. ಹಾಗಾಗಿ ಈ ಬಾರಿ ತಂಡದಿಂದ ಕೈಬಿಡಲು ಆರ್​ಸಿಬಿ ಮುಂದಾಗಿದೆ ಎನ್ನಲಾಗುತ್ತಿದೆ. ಅಲ್ಲದೇ ಮೆಗಾ ಹರಾಜಿನಲ್ಲಿ ವಾಷಿಂಗ್ಟನ್ ಸುಂದರ್ ಅವರನ್ನು ಖರೀದಿಸಿದರೆ, ತಂಡಕ್ಕೆ ಲಾಭದಾಯಕ ಆಗಲಿದೆ.

ಚೆನ್ನೈ ಸೂಪರ್ ಕಿಂಗ್ಸ್:ಚೆನ್ನೈ ಸೂಪರ್ ಕಿಂಗ್ಸ್‌ನ ಪ್ರಸ್ತುತ ಪ್ರಮುಖ ಆಲ್‌ರೌಂಡರ್ ರವೀಂದ್ರ ಜಡೇಜಾ ಹಲವು ವರ್ಷಗಳಿಂದ ಫ್ರಾಂಚೈಸಿಯ ಭಾಗವಾಗಿದ್ದಾರೆ. ಆದರೆ ಕಳೆದ ಋತುವಿನಲ್ಲಿ ಜಡೇಜಾ ತಮ್ಮ ಫ್ಲಾಪ್​ ಆಗಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲೂ ವೈಟ್ ಬಾಲ್ ಕ್ರಿಕೆಟ್​ನಲ್ಲಿ ವಿಶೇಷ ಸಾಧನೆ ಮಾಡಲು ಸಾಧ್ಯವಾಗಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಫ್ರಾಂಚೈಸ್ ಖಂಡಿತವಾಗಿಯೂ ಬ್ಯಾಕಪ್ ಆಲ್‌ರೌಂಡರ್ ಅನ್ನು ಹುಡುಕುತ್ತಿದೆ. ಹಾಗಾಗಿ ಸುಂದರ್ ತಂಡಕ್ಕೆ ಉತ್ತಮ ಆಯ್ಕೆ ಎನ್ನಲಾಗಿದೆ.

ABOUT THE AUTHOR

...view details