ಕರ್ನಾಟಕ

karnataka

ETV Bharat / sports

ಒಲಿಂಪಿಕ್​ ಚೊಚ್ಚಲ ಪಂದ್ಯದಲ್ಲಿ ಭಾರತದ ಬಾಕ್ಸರ್​ ನಿಖತ್​ ಜರೀನ್​ಗೆ ಜಯ; ಪ್ರೀ ಕ್ವಾರ್ಟರ್ ಫೈನಲ್​ಗೆ ಪ್ರವೇಶ - Paris Olympics 2024

ಭಾರತದ ಮಹಿಳಾ ಬಾಕ್ಸರ್ ನಿಖತ್ ಜರೀನ್ ತಮ್ಮ ಚೊಚ್ಚಲ ಒಲಿಂಪಿಕ್ಸ್​ ಪಂದ್ಯದಲ್ಲಿ ಜರ್ಮನಿಯ ಬಾಕ್ಸರ್ ಮ್ಯಾಕ್ಸಿ ಕ್ಲೋಟ್ಜರ್​ ವಿರುದ್ಧ ಗೆಲುವು ಸಾಧಿಸಿದ್ದಾರೆ.

ನಿಖತ್​ ಜರೀನ
ನಿಖತ್​ ಜರೀನ (AP Photos)

By ETV Bharat Sports Team

Published : Jul 28, 2024, 8:24 PM IST

ಪ್ಯಾರಿಸ್​: ಭಾರತದ ಸ್ಟಾರ್ ಮಹಿಳಾ ಬಾಕ್ಸರ್ ನಿಖತ್ ಜರೀನ್ ತಮ್ಮ ಚೊಚ್ಚಲ ಒಲಿಂಪಿಕ್ಸ್ ಅನ್ನು ಗೆಲುವಿನೊಂದಿಗೆ ಶುಭಾರಂಭ ಮಾಡಿದ್ದಾರೆ. ಇಂದು ನಡೆದ ಮಹಿಳೆಯರ 50 ಕೆಜಿ ವಿಭಾಗದ 32ನೇ ಸುತ್ತಿನ ಪಂದ್ಯದಲ್ಲಿ ಎದುರಾಳಿ ಜರ್ಮನಿಯ ಬಾಕ್ಸರ್ ಮ್ಯಾಕ್ಸಿ ಕ್ಲೋಟ್ಜರ್​ ವಿರುದ್ಧ 5-0 ಅಂತರದಿಂದ ಏಕಪಕ್ಷೀಯವಾಗಿ ಗೆದ್ದುಕೊಂಡರು.

ಈ ಗೆಲುವಿನೊಂದಿಗೆ ನಿಖತ್ ಜರೀನ್ ಪ್ರೀ ಕ್ವಾರ್ಟರ್ ಫೈನಲ್​ಗೆ ಪ್ರವೇಶವನ್ನು ಪಡೆದಿದ್ದಾರೆ. ಎರಡು ಬಾರಿಯ ವಿಶ್ವ ಚಾಂಪಿಯನ್ ನಿಖತ್ ಜರೀನ್ 2022ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಮತ್ತು 2022ರ ಏಷ್ಯನ್ ಗೇಮ್ಸ್‌ನಲ್ಲಿ ಕಂಚಿನ ಪದಕವನ್ನು ಗೆದ್ದಿದ್ದಾರೆ. ಅವರು 2022 ಮತ್ತು 2023ರಲ್ಲಿ ವಿಶ್ವ ಚಾಂಪಿಯನ್ ಆಗಿದ್ದರು. ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆಲ್ಲುವ ಸ್ಪರ್ಧಿಗಳ ಪೈಕಿ ನಿಖತ್ ಜರೀನ್ ಕೂಡ ಸೇರಿದ್ದಾರೆ.

ನಿಖತ್ ಝರೀನ್ ಅವರ ಮುಂದಿನ ಪಂದ್ಯ ಗುರುವಾರ ಏಷ್ಯನ್ ಗೇಮ್ಸ್ ಅಗ್ರ ಶ್ರೇಯಾಂಕದ ಮತ್ತು ಹಾಲಿ ಫ್ಲೈವೇಟ್ ವಿಶ್ವ ಚಾಂಪಿಯನ್ ಚೀನಾದ ವು ಯು ವಿರುದ್ಧ ನಡೆಯಲಿದೆ. ಅವರು ಮೊದಲ ಸುತ್ತಿನಲ್ಲಿ ಬೈ ಪಡೆದಿದ್ದಾರೆ.

ಇದನ್ನೂ ಓದಿ:ಏರ್​ ರಫೈಲ್​ ಸ್ಪರ್ಧೆ: ಫೈನಲ್​ಗೆ ಪ್ರವೇಶಿಸಿದ ಅರ್ಜುನ್​ ಬಾಬುತಾ - paris olympics 2024

ABOUT THE AUTHOR

...view details