ನವದೆಹಲಿ:ಭಾರತ-ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಕ್ರಿಕೆಟ್ ಸರಣಿಯಲ್ಲಿ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ದಾಖಲೆಗಳ ಮೇಲೆ ದಾಖಲೆ ಬರೆಯುತ್ತಿದ್ದಾರೆ. ಈ ಸರಣಿಯಲ್ಲಿ ತಾವು ಆಡಿರುವ 4 ಟೆಸ್ಟ್ ಪಂದ್ಯಗಳ 8 ಇನ್ನಿಂಗ್ಸ್‌ನಲ್ಲಿ ಒಟ್ಟು 30 ವಿಕೆಟ್ ಪಡೆದಿದ್ದಾರೆ. ಈ ಅವಧಿಯಲ್ಲಿ ಇವರ ಅತ್ಯುತ್ತಮ ಪ್ರದರ್ಶನ 6/67 ಆಗಿದೆ.
ಸರಣಿಯಲ್ಲಿ ಬುಮ್ರಾ ಇದುವರೆಗೆ ಮೂರು ಬಾರಿ 5 ವಿಕೆಟ್ ಪಡೆದಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಗರಿಷ್ಠ ಐದು ವಿಕೆಟ್ ಗಳಿಸಿದ ವಿಶ್ವದ ಸಕ್ರಿಯ ವೇಗದ ಬೌಲರ್‌ಗಳಲ್ಲಿ ಬುಮ್ರಾ ಕೂಡ ಒಬ್ಬರು.
1. ಕಗಿಸೊ ರಬಾಡ:ದಕ್ಷಿಣ ಆಫ್ರಿಕಾದ ಅನುಭವಿ ವೇಗದ ಬೌಲರ್ ಕಗಿಸೊ ರಬಾಡ ಹೆಚ್ಚು ಬಾರಿ 5 ವಿಕೆಟ್ ಪಡೆದಿರುವ ಸಕ್ರಿಯ ವೇಗದ ಬೌಲರ್‌ಗಳಲ್ಲಿ ಒಬ್ಬರಾಗಿದ್ದಾರೆ. ಇವರು ಇದುವರೆಗೆ 69 ಟೆಸ್ಟ್ ಪಂದ್ಯಗಳ 169 ಇನ್ನಿಂಗ್ಸ್‌ನಲ್ಲಿ 312 ವಿಕೆಟ್ ಪಡೆದಿದ್ದಾರೆ. ಈ ಅವಧಿಯಲ್ಲಿ ಒಟ್ಟು 16 ಬಾರಿ ಐದು ವಿಕೆಟ್ ಉರುಳಿಸಿದ್ದಾರೆ.
2.ಮಿಚೆಲ್ ಸ್ಟಾರ್ಕ್:ಆಸ್ಟ್ರೇಲಿಯಾದ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ಹೆಚ್ಚು ಬಾರಿ ಐದು ವಿಕೆಟ್ ಪಡೆದು ಎರಡನೇ ಸ್ಥಾನದಲ್ಲಿದ್ದಾರೆ. ಇವರು 93 ಟೆಸ್ಟ್ ಪಂದ್ಯಗಳ 178 ಇನ್ನಿಂಗ್ಸ್‌ನಲ್ಲಿ ಒಟ್ಟು 373 ವಿಕೆಟ್ ಕಬಳಿಸಿದ್ದಾರೆ. 15 ಬಾರಿ ಐದು ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ.
3. ಜಸ್ಪ್ರೀತ್ ಬುಮ್ರಾ:ಭಾರತ ಕ್ರಿಕೆಟ್ ತಂಡದ ಅನುಭವಿ ವೇಗದ ಬೌಲರ್ ಮತ್ತು ಯಾರ್ಕರ್ ಕಿಂಗ್ ಜಸ್ಪ್ರೀತ್ ಬುಮ್ರಾ ಹೆಚ್ಚು ಬಾರಿ ಐದು ವಿಕೆಟ್ ಪಡೆದ ಸಕ್ರಿಯ ವೇಗದ ಬೌಲರ್‌ಗಳಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಬುಮ್ರಾ 44 ಟೆಸ್ಟ್ ಪಂದ್ಯಗಳ 85 ಇನ್ನಿಂಗ್ಸ್‌ನಲ್ಲಿ 203 ವಿಕೆಟ್ ಪಡೆದಿದ್ದಾರೆ. ಈ ಅವಧಿಯಲ್ಲಿ 13 ಬಾರಿ ಐದು ವಿಕೆಟ್ ಸಾಧನೆ ಮಾಡಿದ್ದಾರೆ.
4. ಪ್ಯಾಟ್ ಕಮಿನ್ಸ್:ಆಸ್ಟ್ರೇಲಿಯಾದನಾಯಕ ಪ್ಯಾಟ್ ಕಮ್ಮಿನ್ಸ್ ಹೆಚ್ಚು ಬಾರಿ 5 ವಿಕೆಟ್ ಪಡೆದ ಬೌಲರ್‌ಗಳಲ್ಲಿ 4ನೇ ಸ್ಥಾನದಲ್ಲಿದ್ದಾರೆ. ಕಮಿನ್ಸ್ 66 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಒಟ್ಟು 123 ಇನ್ನಿಂಗ್ಸ್‌ನಲ್ಲಿ 289 ವಿಕೆಟ್ ಪಡೆದಿದ್ದಾರೆ. ಈ ಅವಧಿಯಲ್ಲಿ ಒಟ್ಟು 13 ಬಾರಿ ಐದು ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ.
ಜೋಶ್ ಹ್ಯಾಜಲ್‌ವುಡ್ (ANI) 5. ಜೋಶ್ ಹ್ಯಾಜಲ್‌ವುಡ್:ಆಸ್ಟ್ರೇಲಿಯಾದ ವೇಗದ ಬೌಲರ್ ಜೋಶ್ ಹ್ಯಾಜಲ್‌ವುಡ್ ದೀರ್ಘ ಸ್ವರೂಪದ ಕ್ರಿಕೆಟ್‌ನಲ್ಲಿ ಹೆಚ್ಚು ಬಾರಿ ಐದು ವಿಕೆಟ್‌ಗಳನ್ನು ಪಡೆಯುವಲ್ಲಿ ಐದನೇ ಸ್ಥಾನದಲ್ಲಿದ್ದಾರೆ. ಇವರು 72 ಟೆಸ್ಟ್ ಪಂದ್ಯಗಳ 135 ಇನ್ನಿಂಗ್ಸ್‌ನಲ್ಲಿ 279 ವಿಕೆಟ್ ಪಡೆದಿದ್ದಾರೆ. ಇದರೊಂದಿಗೆ ಒಟ್ಟು 12 ಬಾರಿ ಐದಕ್ಕೂ ಹೆಚ್ಚು ವಿಕೆಟ್ ಉರುಳಿಸಿದ್ದಾರೆ. ಇವರು ಆರ್‌ಸಿಬಿ ಬೌಲರ್ ಎಂಬುದು ವಿಶೇಷ.
ಇದನ್ನೂ ಓದಿ:11 ಸಿಕ್ಸರ್, 15 ಬೌಂಡರಿ, 150ಕ್ಕೂ ಹೆಚ್ಚು ರನ್: ವಿಶ್ವದಾಖಲೆ ಬರೆದ IPL ಅನ್ಸೋಲ್ಡ್ ಆಟಗಾರ!