ಸತಾರ, ಮಹಾರಾಷ್ಟ್ರ: ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರು ಸತಾರಾದ ಮ್ಹಾಸ್ವಾದ್‌ನಲ್ಲಿ ಮಂದೇಶಿ ಫೌಂಡೇಶನ್ ನಿರ್ಮಿಸಿದ ಆಧುನಿಕ ಕ್ರೀಡಾಂಗಣದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದರು.
ಮ್ಹಾಸವಾಡದಲ್ಲಿ ಸಂಭ್ರಮವೋ ಸಂಭ್ರಮ:ಕ್ರಿಕೆಟ್ ದೇವರ ಆಗಮನದಿಂದ ಸತಾರದ ಮ್ಹಾಸವಾಡದಲ್ಲಿ ಸಂಭ್ರಮ ಮನೆ ಮಾಡಿತ್ತು. ಉದ್ಘಾಟನಾ ಕಾರ್ಯಕ್ರಮದಲ್ಲಿ ‘ಸಚಿನ್.. ಸಚಿನ್..’ ಎಂಬ ಜಯಘೋಷಗಳು ಮೊಳಗಿಸಿದವು. ಸಚಿನ್ ತೆಂಡೂಲ್ಕರ್ ಸಹಕುಟುಂಬ ಸಮೇತರಾಗಿ ಮಂದೇಶಿ ಫೌಂಡೇಶನ್ ನಿರ್ಮಾಣ ಮಾಡಿರುವ ಕ್ರೀಡಾಂಗಣಕ್ಕೆ ಆಗಮಿಸಿದ್ದರು.
ಕುಟುಂಬದೊಂದಿಗೆ ಕ್ರೀಡಾಂಗಣ ಉದ್ಘಾಟನೆಯಲ್ಲಿ ಪಾಲ್ಗೊಂಡ ಸಚಿನ್ (ETV Bharat) ಮಕ್ಕಳೊಂದಿಗೆ ಮಕ್ಕಳಾದ ಸಚಿನ್: ಮಗಳು ಸಾರಾ ಜತೆಗೂಡಿ ಹಗ್ಗಜಗ್ಗಾಟ ಆಡಿದ ಮಾಸ್ಟರ್ ಬ್ಲಾಸ್ಟರ್ (ETV Bharat) ಆಧುನಿಕ ಕ್ರೀಡಾಂಗಣ ಉದ್ಘಾಟಿಸಿದ ಸಚಿನ್ ತೆಂಡೂಲ್ಕರ್:ಮಂದೇಶಾತ್ಮದೇಶಿ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷ ಚೆಂತಾ ಸಿನ್ಹಾ ತಾಲೂಕಿನ ಮಹಾನಗರಿ ಮ್ಹಾಸವಾಡದಲ್ಲಿ ಆಧುನಿಕ ಕ್ರೀಡಾಂಗಣ ನಿರ್ಮಿಸಿದ್ದಾರೆ. ಇದರ ಉದ್ಘಾಟನೆಗೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರನ್ನು ಆಹ್ವಾನಿಸಲಾಗಿತ್ತು. ಸಚಿನ್ ತಮ್ಮ ಪತ್ನಿ ಅಂಜಲಿ ಮತ್ತು ಮಗಳು ಸಾರಾ ಅವರೊಂದಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕ್ರೀಡಾಂಗಣ ಉದ್ಘಾಟಿಸಿದ ಬಳಿಕ ತರಬೇತಿ ಪಡೆದ ಆಟಗಾರರೊಂದಿಗೆ ಸಚಿನ್ ತೆಂಡೂಲ್ಕರ್ ಸಂವಾದ ನಡೆಸಿದರು. ಈ ವೇಳೆ ಹಸ್ತಾಕ್ಷರ ಪಡೆಯಲು ಮಹಿಳೆಯರು, ಯುವತಿಯರು ಮುಗಿಬಿದ್ದರು.
ಯುವ ಕ್ರೀಡಾಪಟುಗಳೊಂದಿಗೆ ಸಂವಾದ ನಡೆಸಿದ ಮಾಸ್ಟರ್ ಬ್ಲಾಸ್ಟರ್ (ETV Bharat) ಮಗಳು ಸಾರಾ ಜತೆ ಗೂಡಿ ಹಗ್ಗ-ಜಗ್ಗಾಟದಲ್ಲಿ ಪಾಲ್ಗೊಂಡ ಕ್ರಿಕೆಟ್ ದೇವರು (ETV Bharat) ಮಾಸ್ಟರ್ ಬ್ಲಾಸ್ಟರ್ ಅವರನ್ನು ಸಾಂಪ್ರದಾಯಿಕ ರೀತಿಯಲ್ಲಿ ಸ್ವಾಗತಿಸಲಾಯಿತು. ಈ ಸಂದರ್ಭದಲ್ಲಿ ಸಚಿನ್ ತಮ್ಮ ಮಗಳು ಸಾರಾ ಅವರೊಂದಿಗೆ ಮಕ್ಕಳೊಂದಿಗೆ ಹಗ್ಗಜಗ್ಗಾಟದಲ್ಲಿ ಪಾಲ್ಗೊಂಡರು. ಈ ಆಟದಲ್ಲಿ ಕೊನೆಗೆ ಸಚಿನ್ ಪಡೆಯೇ ಗೆದ್ದಿತು. ಬಳಿಕ ಸಚಿನ್ ಉದಯೋನ್ಮುಖ ಆಟಗಾರರೊಂದಿಗೆ ಸಂವಾದ ನಡೆಸಿದರು. ಅವರ ಬಾಲ್ಯದ ನೆನಪುಗಳನ್ನು ಮೆಲುಕು ಹಾಕಿದರು. ಅಷ್ಟೇ ಅಲ್ಲ ಯುವ ಆಟಗಾರರಿಗೆ ಮಾರ್ಗದರ್ಶನ ಮತ್ತು ಸಲಹೆಯನ್ನು ಕೂಡಾ ನೀಡಿದರು. ನಾನು ಬಾಲ್ಯದಲ್ಲಿ ತುಂಬಾ ವಿನೋದಮಯವಾಗಿದ್ದೆ ಎಂಬುದನ್ನು ನೆನಪು ಮಾಡಿಕೊಂಡರು. ಮಗಳು ಸಾರಾ ಜತೆ ಗೂಡಿ ಹಗ್ಗ-ಜಗ್ಗಾಟದಲ್ಲಿ ಪಾಲ್ಗೊಂಡ ಕ್ರಿಕೆಟ್ ದೇವರು (ETV Bharat) ನೀವು ಮೋಜು ಮಾಡುತ್ತಿದ್ದೀರಾ ಎಂದು ಸಂವಾದದಲ್ಲಿ ಪಾಲ್ಗೊಂಡ ಆಟಗಾರರನ್ನ ಪ್ರಶ್ನಿಸಿದರು. ಮಜಾ ಮಾಡಬೇಕು, ಅದರಲ್ಲಿ ತಪ್ಪೇನಿಲ್ಲ. ಆದರೆ, ನಿಮ್ಮ ತರಬೇತುದಾರರು, ಪೋಷಕರು ನಿಮಗೆ ಏನಾದರೂ ಹೇಳಿದಾಗ ಅದನ್ನು ಕೇಳುವುದು ಹಾಗೂ ಪಾಲಿಸುವುದು ಸಹ ಅಷ್ಟೇ ಮುಖ್ಯವಾಗಿದೆ ಎಂದು ಸಚಿನ್ ಕಿವಿ ಮಾತು ಹೇಳಿದರು.
ಮಕ್ಕಳೊಂದಿಗೆ ಹಗ್ಗ ಜಗ್ಗಾಟ ಆಡಿದ ಸಚಿನ್ (ETV Bharat) ಇದನ್ನು ಓದಿ:ವಿಜಯ್ ಹಜಾರೆ ಟ್ರೋಫಿಗೆ ಕರ್ನಾಟಕದ ಸಂಭಾವ್ಯ ಆಟಗಾರರ ಪಟ್ಟಿ ಪ್ರಕಟ; ಸ್ಥಾನ ಪಡೆದವರ ಮಾಹಿತಿ ಇಲ್ಲಿದೆ