ಟೀಂ ಇಂಡಿಯಾದ ಮುಖ್ಯ ಕೋಚ್ ಗೌತಮ್ ಗಂಭೀರ್ ವಿರುದ್ಧ ಅಭಿಮಾನಿಗಳು ಮತ್ತು ಮಾಜಿ ಕ್ರಿಕೆಟರ್‌ವೋರ್ವರು ತೀವ್ರ ಆಕ್ರೋಶ ಹೊರಹಾಕುತ್ತಿದ್ದಾರೆ. ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟರ್ ಕೆ.ಎಲ್.ರಾಹುಲ್ ವಿಚಾರವಾಗಿ ಗರಂ ಆಗಿದ್ದಾರೆ.
ಭಾರತ ತಂಡ ಪ್ರವೇಶಿಸಿ 10 ವರ್ಷಗಳು ಕಳೆದರೂ ಕೆ.ಎಲ್.ರಾಹುಲ್ ಶಾಶ್ವತ ಸ್ಥಾನ ಪಡೆಯಲು ಹೆಣಗಾಡುತ್ತಿದ್ದಾರೆ. ರಾಹುಲ್ ಚೆನ್ನಾಗಿ ಆಡುತ್ತಿದ್ದಾರೆ ಎಂದು ಅವಕಾಶ ಕೊಟ್ಟಾಗಲೆಲ್ಲ ಪದೇ ಪದೇ ವಿಫಲರಾಗುತ್ತಿದ್ದಾರೆ. ಇದಕ್ಕೆ ಕಾರಣ ಬದಲಾಗುತ್ತಿರುವ ಬ್ಯಾಟಿಂಗ್ ಕ್ರಮಾಂಕ. ರಾಹುಲ್ ಓಪನರ್ ಆಗಿ ಮತ್ತ 5ನೇ ಕ್ರಮಾಂಕದಲ್ಲಿ ಉತ್ತಮ ದಾಖಲೆ ಹೊಂದಿದ್ದಾರೆ. ಆದರೆ ಅವರ ಸ್ಥಾನವನ್ನು ಬದಲಾಯಿಸುತ್ತಿದ್ದು ಇದರಿಂದ ಆತ್ಮವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆ ಎಂದು ಕ್ರಿಕೆಟ್ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಚಾಂಪಿಯನ್ಸ್ ಟ್ರೋಫಿಗೂ ಮೊದಲು ಭಾರತ ಮತ್ತು ಇಂಗ್ಲೆಂಡ್ ತಂಡಗಳು 3 ಪಂದ್ಯಗಳ ಏಕದಿನ ಸರಣಿ ಆಡುತ್ತಿವೆ. ಈಗಾಗಲೇ ಎರಡು ಪಂದ್ಯ ಮುಗಿದಿದ್ದು ಭಾರತ ಒಂದು ಪಂದ್ಯ ಬಾಕಿ ಇರುವಂತೆಯೇ ಸರಣಿ ಗೆದ್ದುಕೊಂಡಿದೆ. ಆದರೆ ಈ ಎರಡೂ ಪಂದ್ಯದಲ್ಲಿ ರಾಹುಲ್ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ. 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಬರುತ್ತಿರುವ ರಾಹುಲ್, ಮೊದಲೆರಡು ಪಂದ್ಯಗಳಲ್ಲಿ ಕ್ರಮವಾಗಿ 2 ಮತ್ತು 10 ರನ್ಗಳಿಗೆ ಔಟಾಗಿದ್ದಾರೆ.
ಗಂಭೀರ್ ವಿರುದ್ಧ ಆಕ್ರೋಶ:ರಾಹುಲ್ ಸತತ ಫ್ಲಾಪ್ ಆಗುತ್ತಿರುವುದಕ್ಕೆ ಕಾರಣ ಕೋಚ್ ಗಂಭೀರ್ ಎಂದು ಅಭಿಮಾನಿಗಳು ಆರೋಪಿಸಿದ್ದಾರೆ. ಉದ್ದೇಶಪೂರ್ವಕವಾಗಿ ರಾಹುಲ್ ಅವರ ಬ್ಯಾಟಿಂಗ್ ಕ್ರಮಾಂಕವನ್ನು ಬದಲಾಯಿಸಲಾಗುತ್ತಿದೆ.
ಇದರೊಂದಿಗೆ ಅವರ ಕ್ರಿಕೆಟ್ ಕೆರಿಯರ್ ಕೊನೆಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಅಭ್ಯಾಸವಿಲ್ಲದ ಸ್ಥಾನದಲ್ಲಿ ರಾಹುಲ್ಗೆ ಬ್ಯಾಟಿಂಗ್ಗೆ ಕಳುಹಿಸಿ ತಂಡದಿಂದ ಹೊರಗಿಡಲು ಪಿತೂರಿ ನಡೆಯುತ್ತಿದೆ. ರಾಹುಲ್ ಅವರೊಂದಿಗೆ ಚೆಲ್ಲಾಟ ಆಡಲಾಗುತ್ತಿದೆ ಎಂದು ದೂರಿದ್ದಾರೆ. ಅಲ್ಲದೇ ಸಾಮಾಜಿಕ ಜಾಲತಾಣದಲ್ಲಿ ಗಂಭೀರ್ ಅವರನ್ನು ಗುರಿಯಾಗಿಸಿ ಟ್ರೋಲ್ ಕೂಡ ಮಾಡಲಾಗುತ್ತಿದೆ.
ಮಾಜಿ ಕ್ರಿಕೆಟಿಗರಿಂದಲೂ ಟೀಕೆ:ಮತ್ತೊಂದೆಡೆ ಮಾಜಿ ಕ್ರಿಕೆಟಿಗರೂ ಗಂಭೀರ್ ನಡೆ ವಿರುದ್ಧ ಪ್ರಶ್ನೆಗಳನ್ನು ಎತ್ತಿದ್ದಾರೆ. ದೊಡ್ಡ ಗಣೇಶ್, ಕೃಷ್ಣಮಾಚಾರಿ ಶ್ರೀಕಾಂತ್, ಜಹೀರ್ ಖಾನ್ ಅವರು ಗಂಭೀರ್ ನಿರ್ಧಾರವನ್ನು ಪ್ರಶ್ನಿಸಿದ್ದಾರೆ. ಐದನೇ ಸ್ಥಾನದಲ್ಲಿ ರಾಹುಲ್ ಅತ್ಯುತ್ತಮ ದಾಖಲೆ ಹೊಂದಿದ್ದರೂ ಅವರನ್ನು ಹೀಗೆ ನಡೆಸಿಕೊಳ್ಳಲಾಗುತ್ತಿರುವುದು ತಪ್ಪೆಂದಿದ್ದಾರೆ.
1 ರಿಂದ 6ನೇ ಕ್ರಮಾಂಕದಲ್ಲಿ ರಾಹುಲ್ ಬ್ಯಾಟಿಂಗ್ ದಾಖಲೆ: