Jasprit Bumrah: ಟೀಂ ಇಂಡಿಯಾದ ಸ್ಟಾರ್ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ತಮ್ಮ ವಿಧ್ವಂಸಕ ಬೌಲಿಂಗ್ ಮೂಲಕ ಆಸ್ಟ್ರೇಲಿಯಾದಲ್ಲಿ ಸಂಚಲನ ಮೂಡಿಸಿದ್ದಾರೆ. ಗಬ್ಬಾದಲ್ಲಿ ನಡೆದ ಮೂರನೇ ಟೆಸ್ಟ್‌ನಲ್ಲಿ ಮಿಚೆಲ್ ಸ್ಟಾರ್ಕ್ ಅವರ ವಿಕೆಟ್ ಪಡೆಯುವ ಮೂಲಕ ಆಸ್ಟ್ರೇಲಿಯಾ ನೆಲದಲ್ಲಿ ತಮ್ಮ 50 ವಿಕೆಟ್‌ಗಳನ್ನು ಪೂರೈಸಿದರು. ಭಾರತ ಪರ ಈ ಸಾಧನೆ ಮಾಡಿದ ಎರಡನೇ ಬೌಲರ್ ಎನಿಸಿಕೊಂಡಿದ್ದಾರೆ.
ಇದಕ್ಕೂ ಮುನ್ನ ಭಾರತದ ದಿಗ್ಗಜ ಕಪೀಲ್ ದೇವ್ ಈ ಸಾಧನೆ ಮಾಡಿದ್ದಾರೆ. ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ ಆಸ್ಟ್ರೇಲಿಯಾ ನೆಲದಲ್ಲಿ ಗರಿಷ್ಠ 51 ವಿಕೆಟ್ ಪಡೆದಿದ್ದಾರೆ. ಬುಮ್ರಾ ಈಗ ಕಪಿಲ್ ದೇವ್ ಅವರ ಈ ದಾಖಲೆಯನ್ನು ಮುರಿಯುವ ಹೊಸ್ತಿಲಲ್ಲಿದ್ದಾರೆ. ಪ್ರಸ್ತುತ ತಂಡದಲ್ಲಿ ಜಸ್ಪ್ರೀತ್ ಬುಮ್ರಾ ಹೊರತುಪಡಿಸಿ, ಆಸ್ಟ್ರೇಲಿಯಾದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಭಾರತೀಯರನ್ನು ಬೌಲರ್ ಬಗ್ಗೆ ನೋಡಿದೆ ಆರ್ ಅಶ್ವಿನ್ ಟಾಪ್ 5ರಲ್ಲಿದ್ದಾರೆ. ಅಶ್ವಿನ್ ಈ ವರೆಗೂ ಕಾಂಗರೂ ನಾಡಲ್ಲಿ 40 ವಿಕೆಟ್ ಪಡೆದ ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ.
ಆಸ್ಟ್ರೇಲಿಯಾದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಭಾರತೀಯ ಬೌಲರ್
ಗಬ್ಬಾ ಟೆಸ್ಟ್‌ನಲ್ಲಿ 10 ರಲ್ಲಿ 6 ವಿಕೆಟ್ ಬುಮ್ರಾ ಹೆಸರಿನಲ್ಲಿವೆ. ತಮ್ಮ ಮಾರಕ ಬೌಲಿಂಗ್ ಮೂಲಕ, ಆಸ್ಟ್ರೇಲಿಯಾದ ಆರಂಭಿಕರಾದ ಉಸ್ಮಾನ್ ಖವಾಜಾ, ನಾಥನ್ ಮೆಕ್‌ಸ್ವೀನಿ, ಸ್ಟೀವ್ ಸ್ಮಿತ್, ಟ್ರಾವಿಸ್ ಹೆಡ್, ಮಿಚೆಲ್ ಮಾರ್ಷ್ ಮತ್ತು ಮಿಚೆಲ್ ಸ್ಟಾರ್ಕ್ ಅವರ ವಿಕೆಟ್‌ಗಳನ್ನು ಪಡೆದರು.
ಪಂದ್ಯದ ಹೈಲೈಟ್ಸ್:ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ್ದ ಆಸ್ಟ್ರೇಲಿಯಾ 445 ರನ್ಗಳನ್ನು ಕಲೆ ಹಾಕಿತು. ಆಸೀಸ್ ಪರ ಮೊದಲ ಇನ್ನಿಂಗ್ಸ್ನಲ್ಲಿ ಸ್ಟೀವ್ ಸ್ಮಿತ್ ಮತ್ತು ಟ್ರಾವಿಸ್ ಹೆಡ್ ಅಬ್ಬರಿಸಿದರು. ಈ ಇಬ್ಬರು ಬ್ಯಾಟರ್ಗಳು ಆಕರ್ಷಕ ಶತಕ ಸಿಡಿಸಿ ತಂಡದ ಸ್ಕೋರ್ಗೆ ದೊಡ್ಡ ಕೊಡುಗೆ ನೀಡಿದರು. ಹೆಡ್ 16 ಎಸೆತಗಳನ್ನು ಎದುರಿಸಿ 152 ರನ್ ಬಾರಿಸಿದರು. ಇದರಲ್ಲಿ 18 ಬೌಂಡರಿಗಳು ಸೇರಿವೆ. ಮತ್ತೊಂದೆಡೆ ಸ್ಮಿತ್ ತಮ್ಮ ಇನ್ನಿಂಗ್ಸ್ನಲ್ಲಿ 190 ಎಸೆತಗಳನ್ನು ಎದುರಿಸಿ 101 ರನ್ ಕಲೆಹಾಕಿದರು. ಕೊನೆಯಲ್ಲಿ ಅಲೇಕ್ಸ್ ಕ್ಯಾರಿ ಅರ್ಧಶತಕ ಸಿಡಿಸಿ ಮಿಂಚಿದರು. ಈ ಮೂವರ ಬ್ಯಾಟಿಂಗ್ ಆಧಾರದ ಮೇಲೆ ಆಸ್ಟ್ರೇಲಿಯಾ ಬೃಹತ್ ಸ್ಕೋರ್ ಕಲೆಹಾಕುವಲ್ಲಿ ಯಶಸ್ವಿಯಾಗಿದೆ.
ಭಾರತದ ಪರ ಬೌಲಿಂಗ್ನಲ್ಲಿ, ಜಸ್ಪ್ರೀತ್ ಬುಮ್ರಾ 6, ಮೊಹಮ್ಮದ್ ಸಿರಾಜ್ 2, ಆಕಾಶ್ ದೀಪ್ ಮತ್ತು ನಿತೀಶ್ ಕುಮಾರ್ ರೆಡ್ಡಿ ತಲಾ ಒಂದು ವಿಕೆಟ್ ಪಡೆದರು.
ಇದನ್ನೂ ಓದಿ:ಆಸೀಸ್ ಬ್ಯಾಟರ್ಗಳ ಚೆಂಡಾಡುತ್ತಿರುವ ಜಸ್ಪ್ರೀತ್ ಬೂಮ್ರಾಗೆ__ಎಂದು ನಿಂದಿಸಿದ ಮಹಿಳಾ ಕಾಮೆಂಟೇಟರ್!