Punjab Kings new captain: ಐಪಿಎಲ್ 18ನೇ ಸೀಸನ್ ಆರಂಭಕ್ಕೆ ಇನ್ನೂ ಎರಡು ತಿಂಗಳು ಬಾಕಿ ಇದ್ದು ಈಗಿನಿಂದಲೇ ಎಲ್ಲಾ ತಂಡಗಳು ಸಕಲ ಸಿದ್ಧತೆ ಮಾಡಿಕೊಳ್ಳುತ್ತಿವೆ. ಈ ಆವೃತ್ತಿಯಲ್ಲಿ ಎಲ್ಲಾ 10 ತಂಡಗಳು ಬದಲಾದ ರೂಪದಲ್ಲಿ ಕಾಣಿಸಿಕೊಳ್ಳುತ್ತಿವೆ. ಕಾರಣ ಕಳೆದ ತಿಂಗಳು ಜೆಡ್ಡಾದಲ್ಲಿ ನಡೆದಿದ್ದ ಐಪಿಎಲ್ ಮೆಗಾ ಹರಾಜಿನಲ್ಲಿ ಎಲ್ಲಾ 10 ತಂಡಗಳ 182 ಆಟಗಾರರನ್ನು ಖರೀದಿಸಿವೆ. ಸಧ್ಯ ಹೆಚ್ಚಿನ ತಂಡಗಳು ಹೊಸ ನಾಯಕನ ಹುಡುಕಾಟದಲ್ಲಿ ಬ್ಯುಸಿ ಆಗಿವೆ. ಏತನ್ಮಧ್ಯೆ ಪಂಜಾಬ್ ಕಿಂಗ್ಸ್ ಇಂದು ನೂತನ ನಾಯಕನನ್ನು ಹೆಸರಿಸಿದೆ.
ಪಂಜಾಬ್ ಕಿಂಗ್ಸ್ ತನ್ನ ಹೊಸ ನಾಯಕನಾಗಿ ಶ್ರೇಯಸ್ ಐಯ್ಯರ್ ಅವರನ್ನು ನೇಮಿಸಿದೆ. ಮೆಗಾ ಹರಾಜಿನಲ್ಲಿ ಶ್ರೇಯಸ್ ಅಯ್ಯರ್ ಅವರನ್ನು ಪಂಜಾಬ್ ಕಿಂಗ್ಸ್ 26.75 ಕೋಟಿ ಕೊಟ್ಟು ಖರೀದಿ ಮಾಡಿತ್ತು. ಇಂದು ಸಲ್ಮಾನ್ ಖಾನ್ ಅವರು ಮುನ್ನಡೆಸುವ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಮೂಲಕ ಪಂಜಾಬ್ ಕಿಂಗ್ಸ್ ತಮ್ಮ ನೂತನ ನಾಯಕನನ್ನು ಹೆಸರನ್ನು ಘೋಷಿಸಿತು.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಐಯ್ಯರ್ ಪಂಜಾಬ್ ಕಿಂಗ್ಸ್ ಮ್ಯಾನೇಜ್ಮೆಂಟ್ಗೆ ಕೃತಜ್ಞತೆ ಸಲ್ಲಿಸಿದ್ದಾರೆ. "ತಂಡವು ನನ್ನ ಮೇಲೆ ನಂಬಿಕೆ ಇಟ್ಟಿರುವುದಕ್ಕೆ ಕೃತಜ್ಞತೆಗಳು. ಮತ್ತೊಮ್ಮೆ ಕೋಚ್ ರಿಕಿ ಪಾಂಟಿಂಗ್ ಅವರೊಂದಿಗೆ ಸೇರಿ ಕೆಲಸ ಮಾಡಲು ನಾನು ಉತ್ಸುಕನಾಗಿದ್ದೇನೆ. ಈ ಬಾರಿ ನಮ್ಮ ತಂಡವೂ ತಂಬ ಬಲಿಷ್ಠವಾಗಿದೆ. ಈ ಬಾರಿ ಉತ್ತಮ ಪ್ರದರ್ಶನದೊಂದಿಗೆ ಚೊಚ್ಚಲ ಕಪ್ ಗೆಲ್ಲುತ್ತೇವೆ ಎಂಬ ನಂಬಿಕೆ ನಮಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.