ಕರ್ನಾಟಕ

karnataka

ETV Bharat / sports

ವಿನೇಶ್​ ಫೋಗಟ್​ ಅನರ್ಹತೆ ಬೆನ್ನಲ್ಲೆ ಮತ್ತೊಂದು ಆಘಾತ: ಶಿಸ್ತು ನಿಯಮ ಉಲ್ಲಂಘಿಸಿದ ಆಂಟಿಮ್​ ​ಒಲಿಂಪಿಕ್ಸ್​ನಿಂದ ಹೊರಕ್ಕೆ! - Paris Olympics 2024

ಒಲಿಂಪಿಕ್ಸ್​ ಶಿಸ್ತು ನಿಯಮ ಉಲ್ಲಂಘಿಸಿದ್ದಕ್ಕಾಗಿ ಭಾರತದ ಯುವ ಕುಸ್ತಿಪಟು ಆಂಟಿಮ್​ ಪಂಗಲ್​ ಮತ್ತು ತಂಡಕ್ಕೆ ಪ್ಯಾರಿಸ್​ನಿಂದ ಗಡಿಪಾರು ಮಾಡಲಾಗಿದೆ.

ಶಿಸ್ತು ನಿಯಮ ಉಲ್ಲಂಘಿಸಿದ ಆಂಟಿಮ್​ ​ಒಲಿಂಪಿಕ್ಸ್​ನಿಂದ ಹೊರಕ್ಕೆ
ಶಿಸ್ತು ನಿಯಮ ಉಲ್ಲಂಘಿಸಿದ ಆಂಟಿಮ್​ ​ಒಲಿಂಪಿಕ್ಸ್​ನಿಂದ ಹೊರಕ್ಕೆ (AP Photo)

By ETV Bharat Sports Team

Published : Aug 8, 2024, 1:03 PM IST

ಪ್ಯಾರಿಸ್​ (ಫ್ರಾನ್ಸ್​):ಈ ಬಾರಿಯ ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಭಾರತೀಯ ಕುಸ್ತಿ ತಂಡಕ್ಕೆ ಒಂದರ ಮೇಲೊಂದು ಆಘಾತ ಎದುರಾಗುತ್ತಿದೆ. ನಿನ್ನೆಯಷ್ಟೇ ಮಹಿಳೆಯರ 50 ಕೆಜಿ ಕುಸ್ತಿ ವಿಭಾಗದ ಫೈನಲ್​ ಪಂದ್ಯದಿಂದ ವಿನೇಶ್​ ಫೋಗಟ್​ ಅವರನ್ನು ಅನರ್ಹಗೊಳಿಸಲಾಗಿತ್ತು. ಇದೀಗ ಆಂಟಿಮ್​ ಪಂಗಲ್​ ಮತ್ತು ಅವರ ಸಹಾಯಕ ಸಿಬ್ಬಂದಿಯನ್ನು ಪ್ಯಾರಿಸ್​ನಿಂದ ಗಡಿಪಾರು ಮಾಡಲು ನಿರ್ಧರಿಸಲಾಗಿದೆ.

ಮಹಿಳೆಯರ 53 ಕೆಜಿ ಕುಸ್ತಿ ವಿಭಾಗದ ಮೊದಲ ಪಂದ್ಯದಲ್ಲಿ ಸೋಲನುಭವಿಸಿದ್ದ ಆಂಟಿಮ್​ ಪಂಗಲ್​ಗೆ ಕಂಟಕ ಎದುರಾಗಿದೆ. ಒಲಿಂಪಿಕ್ಸ್​ ಶಿಸ್ತು ನಿಯಮ ಉಲ್ಲಂಘಿಸಿದ್ದಕ್ಕಾಗಿ ಅಂತಿಮ್​​ ಪಂಗಲ್​ ಮತ್ತು ಅವರ ಇಡೀ ತಂಡವನ್ನು ಪ್ಯಾರಿಸ್​ನಿಂದ ಗಡಿಪಾರು ಮಾಡಲಾಗುತ್ತಿದೆ. ಈ ಬಗ್ಗೆ ಭಾರತೀಯ ಒಲಿಂಪಿಕ್​ ಅಸೋಸಿಯೇಷನ್​ ಗಮನಕ್ಕೂ ತರಲಾಗಿದೆ. ​

ಏನಿದು ಘಟನೆ:ಆಂಟಿಮ್​ ಅವರು ಕುಸ್ತಿ ಪಂದ್ಯದ ನಂತರ ಗೇಮ್ಸ್​ ವಿಲೇಜ್​ ತೊರೆದು ತನ್ನ ಸಹೋದರಿ ಮತ್ತು ತರಬೇತುದಾರರು ತಂಗಿದ್ದ ಹೋಟೆಲ್​ಗೆ ಭೇಟಿ ನೀಡಿದ್ದರು. ಬಳಿಕ ಹೊಟೆಲ್​ನಲ್ಲಿದ್ದ ತನ್ನ ಸಹೋದರಿಗೆ ಒಲಿಂಪಿಕ್ಸ್​ ಕ್ರೀಡಾಪಟುಗಳಿಗೆ ನೀಡಲಾಗುವ ಮಾನ್ಯತ ಕಾರ್ಡ್​ (ಐಡಿ ಫ್ರೂಫ್​) ನೀಡಿ ಗೇಮ್ಸ್​ ವಿಲೇಜ್​ನಲ್ಲಿರುವ ತನಗೆ ಸಂಬಂಧಿಸಿದ ವಸ್ತುಗಳನ್ನು ತೆಗೆದುಕೊಂಡು ಬರುವಂತೆ ತಿಳಿಸಿ ಕಳುಹಿಸಿದ್ದಾರೆ.

ಅದರಂತೆ ಗೇಮ್ಸ್​ ವಿಲೇಜ್ ಒಳಗೆ ಪ್ರವೇಶಿಸಿದ ಆಂಟಿಮ್​ ಸಹೋದರಿ ಬಳಿಕ ವಾಪಸ್​ ಆಗುವಾಗ ಭದ್ರತಾ ಕೈಗೆ ಸಿಕ್ಕಿಬಿದ್ದಿದ್ದಾರೆ. ಈ ವೇಳೆ ಒಲಿಂಪಿಕ್ಸ್​ ನಿಯಮ ಉಲ್ಲಂಘನೆ ಮಾಡಿರುವುದು ಬೆಳಕಿಗೆ ಬಂದಿದೆ. ಕೂಡಲೇ ಆಂಟಿಮ್​ ಸಹೋದರಿಯನ್ನು ಪೊಲೀಸ್​ ಠಾಣೆಗೆ ಕರೆದೊಯ್ದು ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದಾರೆ . ಇದರ ಬೆನ್ನಲ್ಲೆ ಆಂಟಿಮ್​ ಅವರ ಮಾನ್ಯತೆ ರದ್ದುಗೊಳಿಸುವುದರ ಜೊತೆಗೆ ಇದರಲ್ಲಿ ಭಾಗಿಯಾಗಿರುವ ಸಹಾಯಕ ಸಿಬ್ಬಂದಿಗಳಿಗೆ ಮನೆಗೆ ಕಳುಹಿಸುವುದಾಗಿ ಭಾರತೀಯ ಒಲಿಂಪಿಕ್​ ಅಸೋಸಿಯೇಶನ್​ಗೆ ತಿಳಿಸಿಲಾಗಿದೆ. ಆಂಟಿಮ್​ ಅವರ ಈ ನಡುಗೆಯಿಂದ ಭಾರತಕ್ಕೆ ಮುಜುಗರ ಉಂಟಾಗಿದೆ.

ಇದನ್ನೂ ಓದಿ:ವೇಟ್‌ ಲಿಪ್ಟಿಂಗ್​ನಲ್ಲಿ ಭಾರತಕ್ಕೆ ಕಂಚಿನ ಪದಕ ಜಸ್ಟ್​​ಮಿಸ್​: 1 ಕೆಜಿಯಿಂದಾಗಿ 4ನೇ ಸ್ಥಾನಕ್ಕೆ ಇಳಿದ ಮೀರಾಬಾಯಿ ಚಾನು - 4th place in weight lifting

ABOUT THE AUTHOR

...view details