Ind W vs Aus W, 1st ODI: ಭಾರತ ಮತ್ತು ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ ತಂಡಗಳ ನಡುವಿನ ಐಸಿಸಿ ಮಹಿಳಾ ಚಾಂಪಿಯನ್ಸ್ ಟೂರ್ನಿ ಆರಂಭವಾಗಿದೆ. ಇಂದಿನ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ಹೀನಾಯವಾಗಿ ಸೋಲನುಭವಿಸಿತು. ಬ್ರಿಸ್ಬನ್ ಮೈದಾನದಲ್ಲಿ ಪಂದ್ಯ ನಡೆಯಿತು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಭಾರತದ ಮಹಿಳೆಯರು ನಿರೀಕ್ಷೆಗೆ ತಕ್ಕ ಪ್ರದರ್ಶನ ನೀಡುವಲ್ಲಿ ವಿಫಲರಾದರು. ಕೇವಲ 100 ರನ್ಗಳಿಗೆ ಆಲೌಟ್ ಆದರು. ಹರ್ಲೀನ್ ಡಿಯೋಲ್ (19), ಹರ್ಮನ್ ಪ್ರೀತ್ ಕೌರ್ (17), ಜೆಮಿಮಾ ರೋಡ್ರಿಗಸ್ (23), ರಿಚಾ ಘೋಷ್ (14) ಬಿಟ್ಟರೆ ಉಳಿದ ಬ್ಯಾಟರ್ಗಳು ಎರಡಂಕಿ ಗಳಿಸಲಿಲ್ಲ.
ಸಾಮಾನ್ಯ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ಕೇವಲ 16.2 ಓವರ್ಗಳಲ್ಲೇ ಗುರಿ ತಲುಪಿತು. ಆರಂಭಿಕರಾಗಿ ಬ್ಯಾಟಿಂಗ್ಗಿಳಿದ ಲಿಚಿಫೀಲ್ಡ್ (35), ಜಿಯಾರ್ಜಿಯಾ ವೊಲ್ (46*) 48 ರನ್ಗಳ ಜೊತೆಯಾಟವಾಡಿ ಗೆಲುವಿನ ರುವಾರಿಗಳಾದರು.