IND vs ENG 2nd ODI: ಭಾರತ ಮತ್ತು ಇಂಗ್ಲೆಂಡ್ ಮಧ್ಯೆ ಇಂದು ಎರಡನೇ ಏಕದಿನ ಪಂದ್ಯ ನಡೆಯುತ್ತಿದೆ. ಒಡಿಶಾದ ಬಾರಾಬತಿ ಮೈದಾನದಲ್ಲಿ ಉಭಯ ತಂಡಗಳು ಸೆಣಸುತ್ತಿವೆ. ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ಇಂಗ್ಲೆಂಡ್ ಮೊದಲು ಬ್ಯಾಟಿಂಗ್ ಮಾಡುವ ನಿರ್ಧಾರ ತೆಗೆದುಕೊಂಡಿದೆ. ಏತನ್ಮಧ್ಯೆ, ಗಾಯದಿಂದಾಗಿ ಮೊದಲ ಪಂದ್ಯದಿಂದ ಹೊರಗುಳಿದಿದ್ದ ವಿರಾಟ್ ಕೊಹ್ಲಿ ಎರಡನೇ ಪಂದ್ಯದಲ್ಲಿ ಆಡುತ್ತಿದ್ದಾರೆ.
5 ತಿಂಗಳ ಬಳಿಕ ಕೊಹ್ಲಿ ಕಮ್ಬ್ಯಾಕ್ :ವಿರಾಟ್ ಕೊಹ್ಲಿ 5 ತಿಂಗಳ ಬಳಿಕ ಏಕದಿನ ಪಂದ್ಯಕ್ಕೆ ಮರಳಿದ್ದಾರೆ. 2024ರಲ್ಲಿ ಆಗಸ್ಟ್ನಲ್ಲಿ ಶ್ರೀಲಂಕಾ ವಿರುದ್ಧ ನಡೆದಿದ್ದ ಸರಣಿಯಲ್ಲಿ ಕೊಹ್ಲಿ ಆಡಿದ್ದರು. ಇದಾದ ಬಳಿಕ ಭಾರತ ಯಾವುದೇ ಏಕದಿನ ಸರಣಿ ಆಡಿರಲಿಲ್ಲ.
ವಿಶ್ವದಾಖಲೆ ಬರೆಯಲು ಕೊಹ್ಲಿ ಸಜ್ಜು :ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಐತಿಹಾಸಿಕ ದಾಖಲೆ ಬರೆಯಲು ಸಜ್ಜಾಗಿದ್ದಾರೆ. ಈವರೆಗೆ 283 ಪಂದ್ಯಗಳಲ್ಲಿ 13,906 ರನ್ ಗಳಿಸಿರುವ ಕೊಹ್ಲಿ ಏಕದಿನ ಸ್ವರೂಪದಲ್ಲಿ 14000 ರನ್ ಪೂರ್ಣಗೊಳಿಸಲು ಅವರಿಗೆ 94 ರನ್ ಬೇಕಿದೆ. ಈ ಪಂದ್ಯದಲ್ಲಿ ಇದು ಸಾಧ್ಯವಾದರೆ ಅತೀ ಕಡಿಮೆ ಇನ್ನಿಂಗ್ಸ್ನಲ್ಲಿ ಈ ಸಾಧನೆ ಮಾಡಿದ ವಿಶ್ವದ ಮೊದಲ ಬ್ಯಾಟರ್ ಎನಿಸಿಕೊಳ್ಳಲಿದ್ದಾರೆ.
ಒಟ್ಟಾರೆ ವಿಶ್ವದ 3ನೇ ಬ್ಯಾಟರ್ ಆಗಲಿದ್ದಾರೆ. ಇದಕ್ಕೂ ಮೊದಲು ಸಚಿನ್ ತೆಂಡೂಲ್ಕರ್ ಮತ್ತು ಶ್ರೀಲಂಕಾದ ಸಂಗಕ್ಕಾರ ಏಕದಿನ ಕ್ರಿಕೆಟ್ನಲ್ಲಿ 14 ಸಾವಿರ ರನ್ ಪೂರ್ಣಗೊಳಿಸಿದ್ದಾರೆ. ತೆಂಡೂಲ್ಕರ್ 350 ಇನ್ನಿಂಗ್ಸ್ ತೆಗೆದುಕೊಂಡರೆ, ಸಂಗಕ್ಕಾರ ಈ ಸಾಧನೆ ಮಾಡಲು 378 ಇನ್ನಿಂಗ್ಸ್ ತೆಗದುಕೊಂಡಿದ್ದಾರೆ.