ICC Champions Trophy 2025: ಇನ್ನು ಎರಡು ದಿನಗಳಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ 2025 ಪ್ರಾರಂಭವಾಗಲಿದೆ. ಫೆ.20ರಂದು ಟೂರ್ನಿಯ ಮೊದಲ ಪಂದ್ಯ ನಡೆಯಲಿದೆ. ಬಳಿಕ ಫೆ.20ರಂದು ಭಾರತವು ಬಾಂಗ್ಲಾದೇಶ ವಿರುದ್ಧ ತನ್ನ ಮೊದಲ ಪಂದ್ಯವನ್ನು ಆಡಲಿದೆ.
ಈ ಪಂದ್ಯಕ್ಕಾಗಿ ಟೀಮ್ ಇಂಡಿಯಾ ಸಕಲ ರೀತಿಯಿಂದ ಸಜ್ಜಾಗಿದೆ. ದುಬೈನಲ್ಲಿ ನಡೆಯಲಿರುವ ಈ ಪಂದ್ಯಕ್ಕಾಗಿ (IND vs BAN) ಉಭಯ ತಂಡಗಳ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಈಗಾಗಲೇ ದುಬೈಗೆ ಆಗಮಿಸಿರುವ ಟೀಮ್ ಇಂಡಿಯಾ ಭರ್ಜರಿ ತಾಲೀಮು ನಡೆಸಿದೆ.
ಇದರ ನಡುವೆಯೆ ಬಾಂಗ್ಲಾದೇಶದ ಮಾಜಿ ಆರಂಭಿಕ ಆಟಗಾರ ಇಮ್ರುಲ್ ಕಾಯೆಸ್ ತಮ್ಮ ಆಟಗಾರರಿಗೆ ಮಹತ್ವದ ಸಂದೇಶ ನೀಡಿದ್ದಾರೆ. ಭಾರತ ತಂಡದಲ್ಲಿ ಸ್ಟಾರ್ ವೇಗಿ ಬುಮ್ರಾ ಅನುಪಸ್ಥಿತಿಯ ಲಾಭ ಪಡೆಯುವಂತೆ ತಂಡಕ್ಕೆ ಸಲಹೆ ನೀಡಿದ್ದಾರೆ. ಮತ್ತೊಂದೆಡೆ, ಬುಮ್ರಾ ಇಲ್ಲ ಎಂದು ತಂಡವನ್ನು ಹಗುರವಾಗಿ ಪರಿಗಣಿಸಬೇಡಿ ಎಂದೂ ಎಚ್ಚರಿಕೆ ನೀಡಿದ್ದಾರೆ.
ಬಾಂಗ್ಲಾ ಆಟಗಾರರಿಗೆ ಎಚ್ಚರಿಕೆ : "ಟೀಮ್ ಇಂಡಿಯಾ ತುಂಬಾ ಬಲಿಷ್ಠ ತಂಡ. ಅದರ ಬ್ಯಾಟಿಂಗ್ ಮತ್ತು ಬೌಲಿಂಗ್ ವಿಭಾಗಗಳು ತುಂಬಾ ಬಲಿಷ್ಠವಾಗಿವೆ. ಆದರೆ.. ಬುಮ್ರಾ ತಂಡದಲ್ಲಿಲ್ಲ. ಕಳೆದ ಎರಡು ವರ್ಷಗಳಲ್ಲಿ ಅವರು ಟೀಮ್ ಇಂಡಿಯಾ ಪರ ಎಷ್ಟು ಉತ್ತಮ ಪ್ರದರ್ಶನ ನೀಡಿದ್ದಾರೆ ಎಂಬುದನ್ನು ನಾವು ನೋಡಿದ್ದೇವೆ. ಅವರ ಅನುಪಸ್ಥಿತಿ ಬಾಂಗ್ಲಾದೇಶ ತಂಡಕ್ಕೆ ವರದಾನವಾಗಲಿದೆ.