ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಅಡಿಲೇಡ್ ಟೆಸ್ಟ್ ಪಂದ್ಯದ ವೇಳೆ ಮೊಹಮ್ಮದ್ ಸಿರಾಜ್ ಹಾಗೂ ಟ್ರಾವಿಸ್ ಹೆಡ್ ಮೈದಾನದಲ್ಲೇ ಗಲಾಟೆ ಮಾಡಿಕೊಂಡಿದ್ದರು. ಇದೀಗ ಈ ಇಬ್ಬರು ಆಟಗಾರರಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಶಾಕ್ ನೀಡಿದೆ.
ಇಬ್ಬರೂ ಆಟಗಾರರು ಐಸಿಸಿ ನಿಯಮ 2.5 ಅನ್ನು ಉಲ್ಲಂಘಿಸಿದ್ದಕ್ಕಾಗಿ ಐಸಿಸಿ ಪಂದ್ಯ ಶುಲ್ಕದ ಶೇ.20ರಷ್ಟು ದಂಡ ಹಾಕಲಾಗಿದೆ. ಇದೇ ವೇಳೆ, ಟ್ರಾವಿಸ್ ಹೆಡ್ ಅವರು ನಿಯಮ 2.1 ಅನ್ನು ಉಲ್ಲಂಘಿಸಿದ್ದಾಗಿಯೂ ಐಸಿಸಿ ತಿಳಿಸಿದೆ. ಈ ನಿಯಮ ಆಟಗಾರರನ್ನು ಅವಮಾನಿಸುವ ಅಥವಾ ಪ್ರಚೋದಿಸುವ ಭಾಷೆ ಅಥವಾ ಸನ್ನೆಗಳನ್ನು ಬಳಸಿರುವುದಕ್ಕೆ ಸಂಬಂಧಿಸಿದೆ. ಇಬ್ಬರೂ ತಮ್ಮ ತಪ್ಪುಗಳನ್ನು ಒಪ್ಪಿಕೊಂಡಿದ್ದು ಮತ್ತು ಮ್ಯಾಚ್ ರೆಫ್ರಿ ಪ್ರಸ್ತಾಪಿಸಿದನ್ನು ಒಪ್ಪಿಕೊಂಡ ಬಳಿಕ ಶಿಸ್ತು ಉಲ್ಲಂಘನೆಗಾಗಿ ಇಬ್ಬರಿಗೂ ತಲಾ ಒಂದು ಡಿಮೆರಿಟ್ ಪಾಯಿಂಟ್ ನೀಡಲಾಗಿದೆ.