ಕರ್ನಾಟಕ

karnataka

ETV Bharat / sports

ರೋಹಿತ್ ಶರ್ಮಾ ಕುರಿತಾದ ದೊಡ್ಡ ರಹಸ್ಯ ಬಹಿರಂಗಪಡಿಸಿದ ಶಿಖರ್​ ಧವನ್​ ಕೋಚ್! - interview with Shikhar Dhawan Coach

ಟೀಂ ಇಂಡಿಯಾದ ಸ್ಫೋಟಕ ಬ್ಯಾಟ್ಸ್​ಮನ್ ಶಿಖರ್ ಧವನ್​ ಅವರ ಬಾಲ್ಯದ ತರಬೇತುದಾರರಾದ ಮದನ್ ಶರ್ಮಾ ಅವರೊಂದಿಗೆ ಈಟಿವಿ ಭಾರತದ ಸಂಜಿಬ್ ಗುಹಾ ಸಂದರ್ಶನ ನಡೆಸಿದ್ದಾರೆ. ಅದರ ಸಂಪೂರ್ಣ ಸುದ್ದಿ ಇಲ್ಲಿದೆ.

ಶಿಖರ್​ ಧವನ್​ ಬಾಲ್ಯದ ಕೋಚ್​ರೊಂದಿಗೆ ಸಂದರ್ಶನ
ಶಿಖರ್​ ಧವನ್​ ಬಾಲ್ಯದ ಕೋಚ್​ರೊಂದಿಗೆ ಸಂದರ್ಶನ (ETV Bharat)

By ETV Bharat Sports Team

Published : Aug 24, 2024, 7:02 PM IST

ನವದೆಹಲಿ: ಭಾರತ ಕ್ರಿಕೆಟ್ ತಂಡದ ಸ್ಟಾರ್ ಬ್ಯಾಟ್ಸ್‌ಮನ್ ಶಿಖರ್ ಧವನ್ ಇಂದು ದೇಶೀಯ ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವನ್ನು ಪೋಸ್ಟ್ ಮಾಡಿದ್ದ ಅವರು ಇದರಲ್ಲಿ ತಮ್ಮ ಬಾಲ್ಯದ ತರಬೇತುದಾರ ಮತ್ತು ಮಾರ್ಗದರ್ಶಕರಾದ ಮದನ್ ಶರ್ಮಾ ಅವರಿಗೆ ಧನ್ಯವಾದ ತಿಳಿಸಿದ್ದರು. ಇದರ ಬೆನ್ನಲ್ಲೇ ಈಟಿವಿ ಭಾರತದ ಸಂಜಿಬ್ ಗುಹಾ ಅವರು ಶಿಖರ್​ ಧವನ್ ಅವರ ಬಾಲ್ಯದ ಕೋಚ್ ಮದನ್ ಶರ್ಮಾ ಅವರ ಸಂದರ್ಶನ ಮಾಡಿದ್ದಾರೆ. ಈ ಸಂದರ್ಶನದಲ್ಲಿ ರೋಹಿತ್​ ಶರ್ಮಾ ಅವರ ಕುರಿತು ದೊಡ್ಡ ರಹಸ್ಯ ಬಹಿರಂಗ ಪಡಿಸಿದ್ದಾರೆ.

ಇದಕ್ಕೂ ಮೊದಲಿಗೆ ಮದನ್ ಶರ್ಮಾರಿಗೆ ಶಿಖರ್ ನಿವೃತ್ತಿ ಪಡೆದ ವಿಚಾರವಾಗಿ ಕೇಳಿದ ಪ್ರಶ್ನೆಗೆ, ಧವನ್​ ಕ್ರಿಕೆಟ್‌ನಲ್ಲಿ ಸುದೀರ್ಘ ಪ್ರಯಾಣವನ್ನು ಹೊಂದಿದ್ದಾರೆ, ನಾನು ಅವರ ಈ ಸುದೀರ್ಘ ಪ್ರಯಾಣವನ್ನು ಕಣ್ಣಾರೆ ಕಂಡಿದ್ದೇನೆ. ಚಿಕ್ಕವನಿದ್ದಾಗಿನಿಂದ ಹಿಡಿದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅತ್ಯುತ್ತಮ ಆಟಗಾರರನಾಗಿ ಬೆಳೆದು ನಿಂತಿರುವುದನ್ನು ಗಮನಿಸಿದ್ದೇನೆ. ಧವನ್​ ಇಷ್ಟು ದಿನಗಳ ಕಾಲ ಕ್ರಿಕೆಟ್​ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದಕ್ಕೆ ತುಂಬಾ ಹೆಮ್ಮೆ ಇದೆ. ಆದರೆ 2023ರ ಏಕದಿನ ವಿಶ್ವಕಪ್​ನಲ್ಲಿ ಅವರು ಆಡಿದ್ದರೆ ಈ ಖುಷಿ ನೂರ್ಮುಡಿಗೊಳ್ಳುತ್ತಿತ್ತು. ಆದರೂ ಅವರು ಈವರೆಗೆ ಮಾಡಿರುವ ಸಾಧನೆ ಬಗ್ಗೆ ನನಗೆ ಇಷ್ಟು ಖುಷಿ ಇದೆ ಎಂದು ಸಂತಸ ವ್ಯಕ್ತಪಡಿಸಿದರು.

ಶಿಖರ್ ಶ್ರಮಜೀವಿ:ನೀವು ಅವರ ವೃತ್ತಿಜೀವನದ ಪ್ರಮುಖ ವಿಷಯದ ಬಗ್ಗೆ ಏನಾದರೂ ಹೇಳಲು ಬಯಸುತ್ತೀರಾ ಎಂದು ಕೇಳಿದ ಪ್ರಶ್ನೆಗೆ, 'ಬಾಲ್ಯದಿಂದಲೂ ಕ್ರಿಕೆಟ್​ನಲ್ಲಿ ಆಸಕ್ತಿ ಹೊಂದಿದ್ದ ಧವನ್​ ಚಿಕ್ಕಂದಿನಿಂದಲೇ ಉತ್ತಮ ಆಟವಾಡುತ್ತಿದ್ದರು. ತಮ್ಮ ಉತ್ತಮ ಬ್ಯಾಟಿಂಗ್​ನಿಂದ ಮೊದಲ ಬಾರಿಗೆ 15 ವರ್ಷದೊಳಗಿನವರ ಭಾರತ ತಂಡಕ್ಕೆ ಆಯ್ಕೆಯಾಗಿದ್ದರು. ಆದರೆ ಒಂದು ಪಂದ್ಯವನ್ನು ಆಡಿದ ನಂತರ ಅವರನ್ನು ತಂಡದಿಂದ ಕೈಬಿಡಲಾಯಿತು. ಇದರ ನಂತರ, ಮುಂದಿನ ವರ್ಷ ಅವರು 17 ವರ್ಷದೊಳಗಿನವರ ಪಂದ್ಯದಲ್ಲಿ ಭಾಗವಹಿಸಿ ಇಲ್ಲಿ ಅತ್ಯುತ್ತಮ ಪರ್ಫಾಮೆನ್ಸ್​ ನೀಡಿದರು. ಇದಾದ ನಂತರ ದೇಶೀಯ ಕ್ರಿಕೆಟ್‌ನಲ್ಲೂ ಉತ್ತಮ ಪ್ರದರ್ಶನ ನೀಡಿದರು. ಇದರಿಂದಾಗಿ ವರ್ಷ 19 ವರ್ಷದೊಳಗಿನವರ ವಿಶ್ವಕಪ್ ತಂಡದಲ್ಲೂ ಸ್ಥಾನ ಪಡೆದರು ಎಂದು ತಿಳಿಸಿದರು.

ಶಿಖರ್​ ಧವನ್​ (ETV Bharat Graphics)

ಬಾಲ್ಯದಿಂದಲೂ ಶಿಖರ್ ಆಫ್‌ಸೈಡ್ ಬ್ಯಾಟಿಂಗ್ ಉತ್ತಮವಾಗಿ ಆಡುತ್ತಿದ್ದರು. ಇದು ಅವರ ಮೆಚ್ಚಿನ ಹೊಡೆತವೂ ಆಗಿತ್ತು. ಚೆನ್ನಾಗಿ ಸ್ಲಾಗ್ ಸ್ವೀಪ್ ಕೂಡ ಆಡುತ್ತಿದ್ದರು, ಲಾಂಗ್ ಫ್ಲಿಕ್ ಶಾಟ್​ಗಳನ್ನು ಹೊಡೆಯುತ್ತಿದ್ದರು. ನಂತರ ಅವರು ತಮ್ಮ ಕವರ್ ಡ್ರೈವ್‌ನಲ್ಲಿ ಹೆಚ್ಚಿನ ಫೋಕಸ್​ ಮಾಡಿದ್ದರು ಎಂದು ಹೇಳಿದರು.

ನಂತರ ಶಿಖರ್​ ಅವರ ಸ್ಟ್ರಾಂಗ್​ ಮತ್ತು ವೀಕ್​ ಪಾಯಿಂಟ್​ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಶರ್ಮಾ, 'ಧವನ್​ ಸ್ಟ್ರಾಂಗ್ ಪಾಯಿಂಟ್ ಕೂಡ ವೀಕ್ ಪಾಯಿಂಟ್ ಆಗಿತ್ತು. ಆರಂಭಿಕ ಬ್ಯಾಟರ್​ ಆಗಿ ಧವನ್ ರೋಹಿತ್ ಜೊತೆ ಕ್ರೀಸ್​ಗಿಳಿಯುತ್ತಿದ್ದಾಗ ರೋಹಿತ್​ಗೆ ಸೆಟ್ಲ್ ಆಗಲು ಸಮಯ ತೆಗೆದುಕೊಳ್ಳುತ್ತಿದ್ದರು. ಹೀಗಿರುವಾಗ ಶಿಖರ್ ಅವರಿಗೆ​ ವೇಗವಾಗಿ ಆಡಬೇಕು ಎಂದು ಹೇಳುತ್ತಿದ್ದರು. ಇಂತಹ ಪರಿಸ್ಥಿತಿಯಲ್ಲಿ ರನ್ ಗಳಿಸಲು ಹೋಗಿ ಹಲವು ಬಾರಿ ಔಟ್ ಆಗಿದ್ದಾರೆ.​ ಇದು ಎಲ್ಲೋ ಧವನ್ ಮೈನಸ್ ಪಾಯಿಂಟ್ ಆಗಿತ್ತು ಎಂದು ಹೇಳಿದ್ದಾರೆ.

ವೀರೂ, ಗೌತಮ್​ ಬಳಿಕ ಧವನ್​ ಉತ್ತಮ ಓಪನರ್​: ಉತ್ತಮ ಆರಂಭಿಕ ಬ್ಯಾಟರ್ ಆಗಿ​ ಯಾರನ್ನು ಆಯ್ಕೆ ಮಾಡಿಕೊಳ್ಳುತ್ತೀರಿ ಎಂಬ ಪ್ರಶ್ನೆಗೆ, 'ಹಿಂದಿನ ಕ್ರಿಕೆಟ್​ಗೆ ಮತ್ತು ಈಗಿನದ್ದಕ್ಕೆ ಬಹಳ ವ್ಯತ್ಯಾಸವಿದೆ. ಶಿಖರ್​ ವೇಗದ ಆರಂಭ ಮಾಡುತ್ತಿದ್ದರು. ಈ ಹಿಂದೆ ವೀರೂ ಕೂಡ ಹೀಗೆ ಮಾಡಿತ್ತಿದ್ದರು. ಶಿಖರ್​ ಕೂಡ ತಮ್ಮ ಚೊಚ್ಚಲ ಟೆಸ್ಟ್‌ನಲ್ಲಿ ಶತಕ ಗಳಿಸಿ ಉತ್ತಮ ಸ್ಟ್ರೈಕ್ ರೇಟ್‌ನೊಂದಿಗೆ ದಾಖಲೆ ಬರೆದಿದ್ದರು. ನನ್ನ ಪ್ರಕಾರ ವೀರೇಂದ್ರ ಸೆಹ್ವಾಗ್​, ಗೌತಮ್ ಗಂಭೀರ್​ ಮತ್ತು ಶಿಖರ್ ಧವನ್​ ಉತ್ತಮ ಆರಂಭಿಕರಾಗಿದ್ದರು ಎಂದು ಹೇಳಿದರು.

ಅವರ ವೈಯಕ್ತಿಕ ಜೀವನದ ಸಮಸ್ಯೆಗಳು ಕ್ರಿಕೆಟ್ ಮೇಲೆ ಪರಿಣಾಮ ಬೀರಿದೆಯೇ ಎಂಬ ಪ್ರಶ್ನೆಗೆ ನೀವು ಏನು ಹೇಳಲು ಬಯಸುತ್ತೀರಿ ಎಂದು ಕೇಳಿದಾಗ ಪ್ರತಿಕ್ರಿಯಿಸಿದ ಕೋಚ್, 'ನನಗೆ ಧವನ್​ ಅವರ ವೈಯಕ್ತಿಕ ಜೀವನದ ಬಗ್ಗೆ ಹೆಚ್ಚು ಗೊತ್ತಿಲ್ಲ. ಏಕೆಂದರೆ ಅವರು ತಮ್ಮ ವೈಯಕ್ತಿಕ ಜೀವನದ ಮಾಹಿತಿಯನ್ನು ನನ್ನೊಂದಿಗೆ ಹಂಚಿಕೊಂಡಿಲ್ಲ. ನನ್ನ ಪ್ರಕಾರ ವೈಯಕ್ತಿಕ ಜೀವನವು ಅವರ ವೃತ್ತಿಜೀವನದ ಮೇಲೆ ಪರಿಣಾಮ ಬೀರಿಲ್ಲ ಎಂದೆನಿಸುತ್ತದೆ. ಅವರು ಸ್ಥಿರವಾಗಿ ಪ್ರದರ್ಶನ ನೀಡಿದ್ದಾರೆ. ದೇಶಕ್ಕೆ ಏನಾದರು ಕೊಡುಗೆ ನೀಡಬೇಕೆಂಬ ಆಸೆ ಅವರಲ್ಲಿತ್ತು ಎಂದಿದ್ದಾರೆ.

ಮುಂದುವರೆದು ಮಾತನಾಡುತ್ತ, ಕೋಚ್ ಆಗಿ ನಾನು ಶಿಖರ್​ ಅನ್ನು ಮೊದಲ ದಿನ ನೆಟ್​ನಲ್ಲಿ ಹೇಗೆ ನೋಡಿದ್ದೇನೋ ಇಂದಿಗೂ ಅವರು ಅದೇ ಶೈಲಿಯಲ್ಲಿ ಆಡಿದ್ದಾರೆ. ಬಾಲ್ಯದಲ್ಲಿಯೂ ಕಷ್ಟಪಡುತ್ತಿದ್ದ ಅವರು ಇಂದಿಗೂ ಹಾಗೆ ಸಾಗುತ್ತಿದ್ದಾರೆ. ಅವರು ಶ್ರಮಜೀವಿ ಎಂದು ತಿಳಿಸಿದ್ದಾರೆ. ಅವರು ದೇಶಕ್ಕಾಗಿ ಅನೇಕ ಪಂದ್ಯಾವಳಿಗಳನ್ನು ಆಡಿ ಗೆಲುವನ್ನು ತಂದುಕೊಟ್ಟಿದ್ದಾರೆ ಮತ್ತು ವಿಶ್ವಕಪ್ ನಲ್ಲೂ ಆಡಿದ ಅನುಭವವಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:ಟಿಕೆಟ್​ ದರ 15 ರೂ. ಮಾಡಿದರೂ ಪಾಕ್​ನಲ್ಲಿ ಪಂದ್ಯ ವೀಕ್ಷಣೆಗೆ ಬಾರದ ಜನ: ಉಚಿತ ಪ್ರವೇಶ ಘೋಷಿಸಿದ ಪಿಸಿಬಿ! - PCB Announce Free Ticket

ABOUT THE AUTHOR

...view details