Cricketer Died: ಕ್ರಿಕೆಟ್ ಆಡುತ್ತಿರುವಾಗಲೇ ಆಟಗಾರ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ನಡೆದಿದ್ದು, ಇದರ ವಿಡಿಯೋ ಕೂಡ ವೈರಲ್ ಆಗಿದೆ.
ವಾಸ್ತವವಾಗಿ, ಮಹಾರಾಷ್ಟ್ರದ ಜಲ್ನಾ ಜಿಲ್ಲೆಯಲ್ಲಿ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಮಂಗಳವಾರ 'ಕ್ರಿಸ್ಮಸ್ ಕ್ರಿಕೆಟ್ ಟ್ರೋಫಿ' ಆಯೋಜಿಸಲಾಗಿತ್ತು. ಈ ವೇಳೆ, ಬ್ಯಾಟಿಂಗ್ ಮಾಡುತ್ತಿದ್ದ ವಿಜಯ್ ಪಟೇಲ್ ಇದ್ದಕ್ಕಿದ್ದಂತೆ ಪಿಚ್‌ನಲ್ಲಿ ಕುಸಿದು ಬಿದ್ದಿದ್ದರು. ಕೂಡಲೇ ಅಲ್ಲಿದ್ದ ಸಹ ಆಟಗಾರರು ದೌಡಾಯಿಸಿ ಏನಾಯ್ತು ಎಂದು ನೋಡುವಷ್ಟರಲ್ಲೇ ವಿಜಯ್ ಅವರ ಪ್ರಾಣಪಕ್ಷಿ ಹಾರಿಹೋಗಿದೆ.
ಕ್ರಿಸ್‌ಮಸ್ ಸಂದರ್ಭದಲ್ಲಿ ಆಯೋಜಿಸಲಾದ 'ಕ್ರಿಸ್‌ಮಸ್ ಟ್ರೋಫಿ ಕ್ರಿಕೆಟ್ ಪಂದ್ಯ'ದ ವೇಳೆ ಈ ಘಟನೆ ನಡೆದಿದೆ. ಮೈದಾನದಲ್ಲಿ ಬ್ಯಾಟ್ಸ್‌ಮನ್ ಸಿಕ್ಸರ್ ಬಾರಿಸಿದ ಬಳಿಕ ಅವರ ಆರೋಗ್ಯದಲ್ಲಿ ಏರುಪೇರು ಕಂಡುಬಂದಿತ್ತು. ಬಳಿಕ ಬ್ಯಾಟಿಂಗ್ ಮಾಡಲು ತೆರಳುತ್ತಿದ್ದಂತೆ ಕುಸಿದು ಬಿದ್ದಿದ್ದರು. ಮೈದಾನದಲ್ಲಿದ್ದ ತಂಡದ ಸಹ ಆಟಗಾರರು ಮತ್ತು ಸಂಘಟಕರು ಅವರನ್ನು ಆಸ್ಪತ್ರೆಗೆ ಕರೆದೊಯ್ಯಲು ಮುಂದಾಗಿದ್ದರು. ಆದ್ರೆ ದುರಾದೃಷ್ಟವಶಾತ್ ಅಷ್ಟೊತ್ತಿಗೆ ತಡವಾಗಿದ್ದ ಕಾರಣ ವಿಜಯ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಪ್ರತ್ಯಕ್ಷದರ್ಶಿಗಳ ಪ್ರಕಾರ, ವಿಜಯ್ ಪಟೇಲ್ ಅವರು ಸಂಪೂರ್ಣವಾಗಿ ಫಿಟ್ ಮತ್ತು ಉತ್ಸುಕರಾಗಿ ಕಾಣಿಸಿಕೊಂಡಿದ್ದರು. ಸಿಕ್ಸರ್ ಸಿಡಿಸಿ ಸಂಭ್ರಮಿಸುತ್ತಿರುವಾಗಲೇ ಇದ್ದಕ್ಕಿದ್ದಂತೆ ತೀವ್ರ ಎದೆನೋವು ಎಂದು ಕುಸಿದು ಬಿದ್ದಿದ್ದರು. ಆಗ ಸಹ ಆಟಗಾರರು ಕೂಡಲೇ ವೈದ್ಯರಿಗೆ ಕರೆ ಮಾಡಿ ವಿಷಯ ತಿಳಿಸಿದ್ದರು. ಆದರೆ ವೈದ್ಯರು ಸ್ಥಳಕ್ಕೆ ಬರುವಷ್ಟರಲ್ಲೇ ವಿಜಯ್ ಸಾವನ್ನಪ್ಪಿದರು ಎಂದು ತಿಳಿಸಿದ್ದಾರೆ.
ಆದಾಗ್ಯೂ, ವಿಜಯ್ ಪಟೇಲ್ ಅವರ ಸಾವಿಗೆ ಅಧಿಕೃತ ಕಾರಣವನ್ನು ಇನ್ನೂ ದೃಢೀಕರಿಸಲಾಗಿಲ್ಲ. ಆದರೆ ಪ್ರಾಥಮಿಕ ತನಿಖೆಗಳ ಪ್ರಕಾರ ಅವರಿಗೆ ಹಠಾತ್ ಹೃದಯಾಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ. ಕಳೆದ ತಿಂಗಳು ಇಂತಹದ್ದೇ ಘಟನೆ ನಡೆದಿತ್ತು. ಪುಣೆಯಲ್ಲಿ ನಡೆದಿದ್ದ ಕ್ರಿಕೆಟ್ ಪಂದ್ಯಾವಳಿ ವೇಳೆ ಬ್ಯಾಟಿಂಗ್ ಮಾಡುತ್ತಿದ್ದ 35 ವರ್ಷದ ಆಟಗಾರ ಕುಸಿದು ಬಿದ್ದು ಸಾವನ್ನಪ್ಪಿದ್ದರು. 35 ವರ್ಷದ ಇಮ್ರಾನ್ ಸತತ ಎರಡು ಬೌಂಡರಿ ಬಾರಿಸಿ ಬಳಿಕ ಕುಸಿದುಬಿದ್ದು ಸಾವನ್ನಪ್ಪಿದ್ದರು.
ಕಳೆದ ವಾರ ಪಶ್ಚಿಮ ಬಂಗಾಳದ ಮಾಜಿ ರಣಜಿ ಕ್ರಿಕೆಟರ್ ಕೂಡ ಸಾವನ್ನಪ್ಪಿದ್ದರು. ಭೋಜನ ಸೇವಿಸಿ ನಿದ್ರಿಸುತ್ತಿರುವಾಗಲೇ ಸಾವನ್ನಪ್ಪಿದ್ದರು. ವಿಜಯ್ ಹಜಾರೆ, ರಣಜಿ ಟ್ರೋಫಿಯಂತಹ ಪ್ರತಿಷ್ಠತ ಟೂರ್ನಿಗಳಲ್ಲಿ ಭಾಗಿಯಾಗಿ ತಂಡವನ್ನು ಗೆಲ್ಲಿಸಿದ್ದ ಬ್ಯಾಟರ್ ಶುಭೋಜಿತ್ ಬ್ಯಾನರ್ಜಿ ಹಠಾತ್ ನಿಧನ ಹೊಂದಿದ್ದರು. ರಣಜಿ ಟ್ರೋಫಿಯಲ್ಲಿ ಬಂಗಾಳ ತಂಡವನ್ನು ಪ್ರತಿನಿಧಿಸಿದ್ದರು. ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ತಿಳಿಸಿದ್ದರು.
ಇದನ್ನೂ ಓದಿ:ಮಹಾ ದುರಂತ!; ಕ್ರಿಕೆಟ್ ಆಡುವಾಗಲೇ ಕುಸಿದು ಬಿದ್ದು ಆಲ್ರೌಂಡರ್ ಸಾವು: ಶೋಕ ಸಾಗರದಲ್ಲಿ ಕ್ರೀಡಾಲೋಕ!