ಕೊಲಂಬೊ: ಶ್ರೀಲಂಕಾ ಪುರುಷರ ಕ್ರಿಕೆಟ್ ತಂಡದ ಬೌಲಿಂಗ್ ಕೋಚ್ ಆಗಿ ಪಾಕಿಸ್ತಾನದ ಮಾಜಿ ವೇಗಿ ಅಕೀಬ್ ಜಾವೇದ್ ಅವರನ್ನು ನೇಮಕ ಮಾಡಲಾಗಿದೆ. ಮುಂಬರಲಿರುವ ಅಂದರೆ ಜೂನ್ 2024ರಲ್ಲಿ ವೆಸ್ಟ್ ಇಂಡೀಸ್ ಮತ್ತು ಅಮೆರಿಕದಲ್ಲಿ ನಡೆಯಲಿರುವ ಟಿ-20 ವಿಶ್ವಕಪ್ ಪಂದ್ಯಾವಳಿವರೆಗೂ ಅವರು ತಂಡದ ವೇಗದ ಬೌಲಿಂಗ್ ಕೋಚ್ ಆಗಿ ತತ್ಕ್ಷಣದಿಂದ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಶ್ರೀಲಂಕಾ ಕ್ರಿಕೆಟ್ ತಂಡ (ಎಸ್ಎಲ್ಸಿ) ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ
51 ವರ್ಷದ ಅಕೀಬ್ ಪಾಕಿಸ್ತಾನದ ಪರ 163 ಏಕದಿನ ಪಂದ್ಯ ಮತ್ತು 22 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. 1992 ವಿಶ್ವ ಕಪ್ ಗೆದ್ದ ಪಾಕಿಸ್ತಾನ ತಂಡದಲ್ಲಿ ಅಕೀಬ್ ಇದ್ದರು. ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಒಟ್ಟಾರೆ 236 ವಿಕೆಟ್ ಪಡೆದಿದ್ದಾರೆ. ಅಕೀಬ್ ಸದ್ಯ ಪಾಕಿಸ್ತಾನ ಸೂಪರ್ ಲೀಗ್ನ ಲಾಹೋರ್ ಕಾಲಂದರ್ ತಂಡಕ್ಕೆ ಮುಖ್ಯ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ತಂಡವೂ 2022 ಮತ್ತು 2023 ರಲ್ಲಿ ಪ್ರಶಸ್ತಿ ಗೆದ್ದಿದೆ.
ಅಕೀಬ್ ಅವರಿಗೆ ಆತ್ಮೀಯ ಸ್ವಾಗತವನ್ನು ಕೋರುತ್ತೇವೆ. ಬೌಲಿಂಗ್ ಕೋಚಿಂಗ್ನಲ್ಲಿ ಅವರು ಅಂತಾರಾಷ್ಟ್ರೀಯವಾಗಿ ಅದ್ಬುತ ಅನುಭವ ಹೊಂದಿದ್ದು, ಆ ಬಗ್ಗೆ ನಂಬಿಕೆ ಹೊಂದಿದ್ದೇವೆ. ಅವರ ಈ ಅನುಭವ ನಮ್ಮ ಬೌಲರ್ಗಳಿಗೆ ಮುಂಬರುವ ಐಸಿಸಿ ಮೆನ್ಸ್ ಟಿ-20 ವರ್ಲ್ಡ್ ಕಪ್ಗೆ ಉತ್ತಮ ರೂಪ ನೀಡಲಿದೆ ಎಂದು ಶ್ರೀ ಲಂಕಾ ಕ್ರಿಕೆಟ್ ಸಿಇಒ ಆಶ್ಲೆ ಡೆ ಸಿಲ್ವಾ ತಿಳಿಸಿದ್ದಾರೆ