ಸಾಮಾನ್ಯವಾಗಿ ಗಂಡಸರು ಕೂದಲು ಅಥವಾ ಗಡ್ಡ ಸ್ವಲ್ಪ ಬೆಳೆದಿದೆ ಎಂದು ಗೊತ್ತಾದರೂ, ತಕ್ಷಣ ಸಲೂನ್ಗೆ ಹೋಗಿ ಅಥವಾ ಸ್ವತಃ ಗಡ್ಡ ತೆಗೆಯುವುದನ್ನು ಮಾಡುತ್ತಾರೆ. ಆದರೆ ನಿಮಗೆ ಗೊತ್ತಾ? ಜ್ಯೋತಿಷ್ಯದ ಪ್ರಕಾರ, ಯಾವಾಗೆಂದರೆ ಆವಾಗ ಕೂದಲು ಕತ್ತರಿವುಸುವುದು ಅಥವಾ ಗಡ್ಡ ತೆಗೆಯುವುದು ಒಳ್ಳೆಯದಲ್ಲ. ಹಾಗೆ ಮಾಡಿದರೆ ನೀವು ಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಹಾಗಾದರೆ ಕ್ಷೌರ ಮಾಡಲು ಮತ್ತು ಗಡ್ಡ ತೆಗೆಯಲು ಯಾವ ದಿನಗಳು ಒಳ್ಳೆಯದು? ಈ ಬಗ್ಗೆ ಜ್ಯೋತಿಷಿಗಳು ಏನು ಹೇಳುತ್ತಾರೆ ನೋಡೋಣ..
ನಮ್ಮಲ್ಲಿ ಹಲವರು ವಾರಾಂತ್ಯದಲ್ಲಿ ಹೇರ್ ಕಟ್ ಮತ್ತು ಶೇವಿಂಗ್ ಮಾಡಿಕೊಳ್ಳುತ್ತಾರೆ. ಭಾನುವಾರ ರಜಾದಿನವಾದ್ದರಿಂದ ವಿಶೇಷವಾಗಿ ಉದ್ಯೋಗಿಗಳು ಮತ್ತು ವಿದ್ಯಾರ್ಥಿಗಳು ಆ ದಿನ ಸಲೂನ್ಗೆ ಹೋಗುತ್ತಾರೆ. ಆದರೆ, ಜ್ಯೋತಿಷ್ಯದ ಪ್ರಕಾರ ಭಾನುವಾರ ಮತ್ತು ಶನಿವಾರ ಗಡ್ಡ ತೆಗೆಯುವುದು ಕ್ಷೌರ ಮಾಡದೇ ಇರುವುದು ಉತ್ತಮ ಎಂದು ಜ್ಯೋತಿಷಿ ಮಾಚಿರಾಜು ವೇಣುಗೋಪಾಲ್ ಹೇಳುತ್ತಾರೆ.
ಅಲ್ಲದೇ ಕ್ಷೌರ ಮಾಡಿಸಿಕೊಳ್ಳುವಾಗ ಮೊದಲು ಗಡ್ಡ ತೆಗೆದು, ನಂತರ ಕೂದಲು ಕತ್ತರಿಸಿಕೊಳ್ಳಿ. ಹೀಗೆ ಮಾಡುವುದರಿಂದ ಕುಟುಂಬದ ಬೆಳವಣಿಗೆ ಆಗುತ್ತದೆ ಎಂದು ಹೇಳಲಾಗುತ್ತದೆ. ಇಲ್ಲಿ ಕುಟುಂಬದ ಬೆಳವಣಿಗೆ ಎಂದರೆ ಯುವಕರಾಗಿ ಉಳಿಯುವುದು. ಅದೇ ರೀತಿ, ಜ್ಯೋತಿಷ್ಯವು ಕ್ಷೌರವು ಒಬ್ಬರ ಜೀವನದ ಬೆಳವಣಿಗೆಯಲ್ಲಿ ಹೆಚ್ಚಿನ ಮಹತ್ವ ಹೊಂದಿದೆ ಎಂದು ಹೇಳುತ್ತದೆ.
ಹಾಗಾದರೆ ಯಾವಾಗ ಕ್ಷೌರ ಮಾಡಿಸಬೇಕು?: ಈ ಮೂರು ದಿನಗಳಲ್ಲಿ ಕ್ಷೌರ ಮಾಡಿಕೊಳ್ಳುವುದು ಉತ್ತಮ. ಈ ದಿನಗಳಲ್ಲಿ ಮಾಡುವುದರಿಂದ, ನೀವು ಅದೃಷ್ಟವನ್ನು ಆಹ್ವಾನಿಸಿದಂತೆ ಮತ್ತು ಅಸಾಧಾರಣ ಫಲಿತಾಂಶಗಳು ನಿಮ್ಮದಾಗಬಹುದು. ವಾರದ ಬುಧವಾರ, ಗುರುವಾರ ಮತ್ತು ಸೋಮವಾರದಂದು ಕ್ಷೌರ ಮತ್ತು ಗಡ್ಡ ತೆಗೆಯುವುದು ಉತ್ತಮ ಎಂದು ಮಾಚಿರಾಜು ಹೇಳುತ್ತಾರೆ.