ಕರ್ನಾಟಕ

karnataka

ETV Bharat / spiritual

ವಾರದ ಭವಿಷ್ಯ: ಉದ್ಯೋಗ ಅರಸುತ್ತಿರುವವರಿಗೆ ಸಿಗಲಿಗೆ ಬಂಪರ್, ಪ್ರೇಮಿಗಳಿಗೂ ಶುಭ - WEEKLY HOROSCOPE

ಈ ವಾರದ ರಾಶಿ ಭವಿಷ್ಯ ಹೀಗಿದೆ.

Horoscope
ವಾರದ ರಾಶಿ ಭವಿಷ್ಯ (ETV Bharat)

By ETV Bharat Karnataka Team

Published : Dec 8, 2024, 6:48 AM IST

ಮೇಷ :ಪ್ರಾರಂಭದಲ್ಲಿ, ನಿಮ್ಮ ನಿಗದಿತ ಕಾರ್ಯಗಳು ನಿಗದಿತ ಸಮಯಕ್ಕೆ ಮುಗಿದಂತೆ ನೀವು ಕೆಲವು ಗೆಲುವುಗಳನ್ನು ಎದುರು ನೋಡುತ್ತೀರಿ. ಹಿರಿಯ ಮತ್ತು ಕಿರಿಯ ಸಹೋದ್ಯೋಗಿಗಳು ತಮ್ಮ ಸಂಪೂರ್ಣ ಬೆಂಬಲವನ್ನು ನೀಡುವ ಮೂಲಕ ನಿಮ್ಮ ವೃತ್ತಿ ಮತ್ತು ವ್ಯವಹಾರ ಜೀವನದಲ್ಲಿ ನಿಮ್ಮ ಗುರಿಗಳನ್ನು ತಲುಪಲು ನಿಮಗೆ ಅವಕಾಶಗಳು ಲಭಿಸಲಿವೆ. ಆದಾಗ್ಯೂ, ಈ ವಾರ ನಿಮ್ಮ ಹಣಕಾಸಿನ ಬಗ್ಗೆ ಜಾಗರೂಕರಾಗಿರುವುದು ಮುಖ್ಯ. ವ್ಯಾಪಾರದಲ್ಲಿರುವವರು ಬರುವ ಯಾವುದೇ ಅವಕಾಶಗಳಲ್ಲಿ ಜಾಣ್ಮೆಯಿಂದ ಹೂಡಿಕೆಗಳನ್ನು ಮಾಡಬೇಕು. ಪರಿಸ್ಥಿತಿಯು ಕಠಿಣವಾಗಿದ್ದರೂ ಸಹ, ನಿಮ್ಮ ಕುಟುಂಬದೊಂದಿಗೆ ಸಂಪರ್ಕ ಸಾಧಿಸಲು ನಿಮಗೆ ಸುಲಭವಾಗುತ್ತದೆ ಮತ್ತು ನಿಮ್ಮ ಸಂಗಾತಿ ನಿಮ್ಮ ಸವಾಲುಗಳನ್ನು ನಿಷ್ಠೆಯಿಂದ ಅರ್ಥಮಾಡಿಕೊಳ್ಳುತ್ತಾರೆ. ಪ್ರಣಯ ಸಂಬಂಧಗಳಲ್ಲಿ, ಎಚ್ಚರಿಕೆಯಿಂದ ಮುಂದುವರಿಯುವುದು ಮತ್ತು ನಿಮ್ಮ ಸಂಗಾತಿಯ ಅಗತ್ಯಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುವುದು ಉತ್ತಮ. ಈ ವಾರ ನಿಮ್ಮ ಪ್ರೇಮ ಜೀವನದಲ್ಲಿ ಸಂತೋಷ ಮತ್ತು ತೃಪ್ತಿಕರ ಸಮಯಕ್ಕೆ ಅವಕಾಶವಿದೆ. ನಿಮ್ಮ ಸಂಗಾತಿಯೊಂದಿಗೆ ಸಹಕರಿಸುವ ಮೂಲಕ, ನೀವು ನಿಮ್ಮ ಸಂಬಂಧವನ್ನು ಬಲಪಡಿಸಬಹುದು ಮತ್ತು ಪರಸ್ಪರ ಉತ್ತಮ ಬೆಂಬಲವನ್ನು ನೀಡಬಹುದು.

ವೃಷಭ :ಚೈತನ್ಯ ಮತ್ತು ಬೆಳವಣಿಗೆಯಿಂದ ತುಂಬಿದ ಪ್ರಯಾಣದೊಂದಿಗೆ ನೀವು ಸಂತೋಷ ಮತ್ತು ಯಶಸ್ಸಿನ ಅಲೆಯಲ್ಲಿದ್ದೀರಿ. ನಿಮ್ಮ ಆರೋಗ್ಯವು ಚೆನ್ನಾಗಿರಲಿದ್ದು ಇದು ನಿಮ್ಮ ವೃತ್ತಿಪರ ಪ್ರಯತ್ನಗಳಲ್ಲಿ ನಿಮ್ಮನ್ನು ತೊಡಗಿಸಿಕೊಂಡಿರುವಂತೆ ಮಾಡುತ್ತದೆ. ಮನೆಯಲ್ಲಿ ಮಂಗಳದಾಯಕ ಚಟುವಟಿಕೆಗಳೊಂದಿಗೆ ವಾರವನ್ನು ಪ್ರಾರಂಭಿಸಿ. ನಿಮ್ಮ ಕುಟುಂಬ ಮತ್ತು ಪ್ರೀತಿಪಾತ್ರರ ಬೆಂಬಲವನ್ನು ನೀವು ಪಡೆಯಲಿದ್ದು, ನಿಮ್ಮ ಸಂತೋಷವನ್ನು ಇನ್ನಷ್ಟು ಹೆಚ್ಚಿಸುತ್ತೀರಿ. ನಿಮ್ಮ ಮಹತ್ವಾಕಾಂಕ್ಷೆಗಳಲ್ಲಿ ಹೂಡಿಕೆ ಮಾಡಲು ನಿಮಗೆ ಅವಕಾಶ ಲಭಿಸಲಿದೆ. ನಿಮ್ಮ ಸಂಗಾತಿಯೊಂದಿಗೆ ಆಳವಾದ ಸಂಪರ್ಕ ಸಾಧಿಸಲು ಮತ್ತು ಆನಂದದಾಯಕ ಕ್ಷಣಗಳನ್ನು ಕಳೆಯಲು ನಿಮಗೆ ಅವಕಾಶ ಲಭಿಸಲಿದೆ. ವೈವಾಹಿಕ ಜೀವನವು ಸಂತೋಷದಿಂದ ಕೂಡಿರುತ್ತದೆ. ವಾರದ ಅಂತ್ಯದ ವೇಳೆಗೆ, ನಿಮ್ಮ ಪ್ರಯತ್ನಗಳನ್ನು ಗುರುತಿಸಲಾಗುತ್ತದೆ. ಇದರಿಂದ ನಿಮ್ಮ ವೃತ್ತಿಜೀವನಕ್ಕೆ ಇಂಬು ದೊರೆಯಲಿದ್ದು ನಿಮ್ಮ ಸಾಧನೆಗಳನ್ನು ಎಲ್ಲರೂ ಪ್ರಶಂಸಿಸಲಿದ್ದಾರೆ. ಈ ವಾರದಲ್ಲಿ ಗೃಹಗಳು ಅನುಕೂಲಕರವಾಗಿ ಇರುವುದರಿಂದ ಹಲವಾರು ಪ್ರಯೋಜನಗಳು ಲಭಿಸಲಿವೆ. ಆದ್ದರಿಂದ, ನಿಮ್ಮ ಸಂತೋಷ ಮತ್ತು ಯೋಗಕ್ಷೇಮವನ್ನು ಹೆಚ್ಚಿಸುವ ಗುರಿಯನ್ನು ಹೊಂದಿರುವ ಈ ವಾರವನ್ನು ಚೆನ್ನಾಗಿ ಬಳಸಿಕೊಳ್ಳಿ.

ಮಿಥುನ :ಜೀವನದ ವಿವಿಧ ಸವಾಲುಗಳನ್ನು ನಿಭಾಯಿಸುವಲ್ಲಿ ನೀವು ಯಶಸ್ಸನ್ನು ಕಾಣುವ ಸಾಧ್ಯತೆಯಿದೆ. ನಿಮ್ಮ ಆಳವಾದ ವೃತ್ತಿಜೀವನ, ವ್ಯಾಪಾರ ಮತ್ತು ವೈಯಕ್ತಿಕ ಗುರಿಗಳು ಮನೆಯಲ್ಲಿ ಮತ್ತು ನಿಮ್ಮ ಪ್ರೀತಿಪಾತ್ರರ ಬೆಂಬಲದೊಂದಿಗೆ ಸಾಕಾರಗೊಳ್ಳುವ ಹಂತದಲ್ಲಿವೆ. ನಿಮ್ಮ ಆರೋಗ್ಯವು ಸ್ಥಿರವಾಗಿರುತ್ತದೆ., ಆದರೂ ನೀವು ಕುಟುಂಬದ ಹಿರಿಯ ಸದಸ್ಯರ ಯೋಗಕ್ಷೇಮದ ಬಗ್ಗೆ ಕಾಳಜಿ ವಹಿಸುತ್ತೀರಿ. ಆದ್ದರಿಂದ ನೀವು ಅವರಿಗೆ ಅಗತ್ಯವಾದ ನೆರವನ್ನು ಒದಗಿಸುವುದನ್ನು ಖಚಿತಪಡಿಸಿಕೊಳ್ಳಿ. ಉದ್ಯೋಗದಲ್ಲಿರುವ ವ್ಯಕ್ತಿಗಳಿಗೆ ವಾರದ ಆರಂಭದಲ್ಲಿ ಗಮನಾರ್ಹ ಅವಕಾಶಗಳು ದೊರೆಯಲಿದ್ದು, ಸಮುದಾಯದಲ್ಲಿ ನಿಮ್ಮ ಸ್ಥಾನಮಾನವನ್ನು ಹೆಚ್ಚಿಸಬಹುದು. ನಿಮ್ಮ ಪ್ರಣಯ ಸಂಬಂಧವು ಇನ್ನಷ್ಟು ಗಟ್ಟಿಗೊಳ್ಳುವ ನಿರೀಕ್ಷೆಯಿದೆ ಮತ್ತು ನಿಮ್ಮ ಸಂಗಾತಿಯಿಂದ ನೀವು ಅನಿರೀಕ್ಷಿತ ಉಡುಗೊರೆಯನ್ನು ಸಹ ಪಡೆಯಬಹುದು. ನಿಮ್ಮ ಮತ್ತು ನಿಮ್ಮ ಸಂಗಾತಿಯ ನಡುವಿನ ಬಾಂಧವ್ಯವು ಬಲಗೊಳ್ಳುವುದರೊಂದಿಗೆ ದಾಂಪತ್ಯ ಜೀವನವು ಸಂತೋಷದಾಯಕವಾಗಿರುತ್ತದೆ. ವಾರದ ಅಂತ್ಯದ ವೇಳೆಗೆ, ನಿಮ್ಮ ಮಕ್ಕಳ ಬಗ್ಗೆ ಸಕಾರಾತ್ಮಕ ಸುದ್ದಿಗಳನ್ನು ಸ್ವೀಕರಿಸುವ ಸಾಧ್ಯತೆ ಇದ್ದು, ಇದು ನಿಮ್ಮ ಖ್ಯಾತಿಯನ್ನು ಇನ್ನಷ್ಟು ಹೆಚ್ಚಿಸುತ್ತದೆ. ಹಿತೈಷಿಗಳ ಬೆಂಬಲದೊಂದಿಗೆ ದೀರ್ಘಾವಧಿಯ ಯೋಜನೆಗಳು ಅಂತಿಮವಾಗಿ ಕಾರ್ಯರೂಪಕ್ಕೆ ಬರಬಹುದು. ಸಂತೋಷ ಮತ್ತು ಸಮೃದ್ಧಿಗೆ ಗಮನ ನೀಡುವ ಮೂಲಕ ಮೂಲಕ ಈ ವಾರವನ್ನು ಚೆನ್ನಾಗಿ ಬಳಸಿಕೊಳ್ಳಿರಿ.

ಕರ್ಕಾಟಕ :ಕರ್ಕಾಟಕ ರಾಶಿಯಲ್ಲಿ ಜನಿಸಿದ ವ್ಯಕ್ತಿಗಳು, ಈ ವಾರದಲ್ಲಿ ಶ್ರದ್ಧೆಯ ಪ್ರಯತ್ನ ಮತ್ತು ದಕ್ಷ ಸಮಯ ನಿರ್ವಹಣೆಯ ಮಹತ್ವವನ್ನು ಅರಿತುಕೊಳ್ಳಲಿದ್ದಾರೆ. ಸೋಮಾರಿತನವನ್ನು ದೂರ ಮಾಡಿ ನಿಮ್ಮ ಆಕಾಂಕ್ಷೆಗಳನ್ನು ಅರಿತುಕೊಳ್ಳಲು ಈ ಸಮಯವು ನಿಮ್ಮನ್ನು ಪ್ರೋತ್ಸಾಹಿಸುತ್ತದೆ. ವಾರವು ಮುಂದುವರೆದಂತೆ, ನಿಮ್ಮ ಕುಟುಂಬದೊಂದಿಗೆ ಬಂಧಗಳನ್ನು ಬಲಪಡಿಸುವ ಅನುಭವವನ್ನು ನೀವು ಅನುಭವಿಸುವಿರಿ. ಸಂಬಂಧಗಳು ಹೆಚ್ಚು ಪ್ರೀತಿಯಿಂದ ಕೂಡಿರುತ್ತವೆ ಮತ್ತು ಸಕಾರಾತ್ಮಕ ರೂಪಾಂತರಗಳು ಸಂಭವಿಸುತ್ತವೆ. ನಿಮ್ಮ ಪ್ರಣಯ ಸಂಬಂಧದಲ್ಲಿ ಯಾವುದೇ ಸಮಸ್ಯೆಗಳಿದ್ದರೆ, ನಿಮ್ಮ ಮತ್ತು ನಿಮ್ಮ ಸಂಗಾತಿಯ ನಡುವಿನ ಬಂಧವನ್ನು ಬಲಪಡಿಸುವ ಮೂಲಕ ಪರಿಸ್ಥಿತಿಯನ್ನು ಸರಿಪಡಿಸಲು ಸ್ನೇಹಿತೆಯೊಬ್ಬರ ಸಹಾಯ ದೊರೆಯಬಹುದು. ವೈವಾಹಿಕ ಬದುಕಿಗೆ ಸಂಬಂಧಿಸಿದಂತೆ, ನಿಮ್ಮ ಕುಟುಂಬದೊಂದಿಗೆ ಸಮಯವನ್ನು ಚೆನ್ನಾಗಿ ಆನಂದಿಸಲು ಮತ್ತು ಆನಂದದಾಯಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ನಿಮಗೆ ಅವಕಾಶ ದೊರೆಯಲಿದೆ. ಆರೋಗ್ಯಕ್ಕೆ ಸಂಬಂಧಿಸಿದಂತೆ, ಋತುಮಾನದ ಕಾಯಿಲೆಗಳು ಕಾಣಿಸಿಕೊಳ್ಳುವ ಸಾಧ್ಯತೆಯಿರುವುದರಿಂದ ಜಾಗರೂಕರಾಗಿರಲು ಸಲಹೆ ನೀಡಲಾಗುತ್ತದೆ. ಆದಾಗ್ಯೂ, ಸ್ನೇಹಿತರು, ಹಿತೈಷಿಗಳು ಅಥವಾ ನಿಮ್ಮ ಸಂಗಾತಿಯ ಬೆಂಬಲದೊಂದಿಗೆ, ನೀವು ಗಮನಾರ್ಹ ಸವಾಲುಗಳನ್ನು ನಿಭಾಯಿಸಲು ಸಾಧ್ಯವಾಗುತ್ತದೆ. ಈ ವಾರ ಬೆಳವಣಿಗೆ ಮತ್ತು ಸಾಧನೆಗೆ ಅವಕಾಶವನ್ನು ಒದಗಿಸುತ್ತದೆ. ಆದರೆ ನಿಮ್ಮ ಸಂಬಂಧಗಳು ಮತ್ತು ಆರೋಗ್ಯಕ್ಕೆ ಆದ್ಯತೆ ನೀಡುವುದು ಬಹಳ ಮುಖ್ಯ.

ಸಿಂಹ :ನಿಮ್ಮ ವೃತ್ತಿ ಮತ್ತು ವ್ಯವಹಾರದ ಪ್ರಯತ್ನಗಳು ಸುಗಮ, ಫಲಪ್ರದ ಮತ್ತು ಲಾಭದಾಯಕವಾಗುವ ಸಾಧ್ಯತೆಯಿದೆ. ನಿಮ್ಮ ವೈಯಕ್ತಿಕ ಸಂಬಂಧಗಳಲ್ಲಿ, ವಿಶೇಷವಾಗಿ ನಿಮ್ಮ ಸಂಗಾತಿಯೊಂದಿಗೆ, ಕಾಣಿಸಿಕೊಳ್ಳುವ ಯಾವುದೇ ಸಮಸ್ಯೆಗಳು ಅಥವಾ ತಪ್ಪುಗ್ರಹಿಕೆಗಳು ನಿವಾರಣೆಗೊಳ್ಳಲಿದ್ದು, ಆಳವಾದ ಸಂಬಂಧವು ರೂಪುಗೊಳ್ಳಲಿದೆ. ನಿಮ್ಮ ಪ್ರಣಯ ಜೀವನದಲ್ಲಿಯೂ ನೀವು ಸಂತೋಷ ಮತ್ತು ನೆಮ್ಮದಿಯನ್ನು ಅನುಭವಿಸುವಿರಿ. ಮಹತ್ವದ ಕೌಟುಂಬಿಕ ಜವಾಬ್ದಾರಿಗಳು ನಿಮ್ಮ ಹೆಗಲಿಗೆ ಬರಬಹುದು. ಆದ್ದರಿಂದ ನಿಮ್ಮ ಗುರಿಗಳ ಮೇಲೆ ಕೇಂದ್ರೀಕರಿಸುವುದು ಮುಖ್ಯವಾಗಿದೆ. ನಿಮ್ಮ ಆರೋಗ್ಯದ ಬಗ್ಗೆ ಜಾಗರೂಕರಾಗಿರಿ. ಬದಲಾಗುತ್ತಿರುವ ಋತುಗಳು ದೈಹಿಕ ಅಸ್ವಸ್ಥತೆಯನ್ನು ಉಂಟುಮಾಡಬಹುದು. ಈ ವಾರ ನಿಮ್ಮ ಪ್ರೇಮ ಜೀವನಕ್ಕೆ ಉತ್ತಮ ಸಮಯವಾಗಿದೆ. ನಿಮ್ಮ ಸಂಗಾತಿಯೊಂದಿಗಿನ ನಿಮ್ಮ ಸಂಬಂಧವು ಬಲವಾಗಿ ಬೆಳೆಯುತ್ತದೆ ಮತ್ತು ನಿಮ್ಮ ದಾಂಪತ್ಯದಲ್ಲಿ ಧನಾತ್ಮಕ ಕಂಪನವು ಇರುತ್ತದೆ. ನಿಮ್ಮ ಹಿರಿಯರು ನಿಮ್ಮ ಆಶೀರ್ವದಿಸಲಿದ್ದಾರೆ. ಯುವಜನರಿಗೆ ಈ ವಾರ ಮೋಜು ಮಾಡಲು ಅವಕಾಶವಿದೆ. ಆದರೂ ಕೆಲವು ಬಿಡುವಿಲ್ಲದ ಅವಧಿಗಳು ಮತ್ತು ಬಳಲಿಕೆ ಇರಬಹುದು. ಹೀಗಾಗಿ ನಿಮ್ಮ ಯೋಗಕ್ಷೇಮವನ್ನು ನೋಡಿಕೊಳ್ಳುವುದು ಅತ್ಯಗತ್ಯ. ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಿ. ನಿಮ್ಮ ಕಠಿಣ ಪರಿಶ್ರಮವು ಧನಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ, ಯಶಸ್ಸಿನ ಕಡೆಗೆ ನಿಮ್ಮನ್ನು ಮಾರ್ಗದರ್ಶನ ಮಾಡುತ್ತದೆ.

ಕನ್ಯಾ :ನಿಮ್ಮ ಪ್ರತಿಸ್ಪರ್ಧಿಗಳು ನಿಮ್ಮ ಮೇಲಧಿಕಾರಿಗಳು ಮತ್ತು ಅಧೀನ ಅಧಿಕಾರಿಗಳ ನಡುವೆ ತೊಂದರೆಗಳನ್ನು ಉಂಟುಮಾಡಲು ಪ್ರಯತ್ನಿಸಬಹುದು ಅಥವಾ ನಿಮ್ಮನ್ನು ದಾರಿ ತಪ್ಪಿಸಲು ಪ್ರಯತ್ನಿಸಬಹುದು. ಅಂತಹ ಸಂದರ್ಭಗಳಲ್ಲಿ, ಈ ಅಡೆತಡೆಗಳನ್ನು ನಿವಾರಿಸಲು ಅನುಭವಿ ವ್ಯಕ್ತಿ ಅಥವಾ ಹಿರಿಯರಿಂದ ಮಾರ್ಗದರ್ಶನ ಪಡೆಯುವುದು ಅಗತ್ಯವಾಗಬಹುದು. ಹೀಗಾಗಿ, ಸಮತೋಲನವನ್ನು ಕಾಪಾಡಿಕೊಳ್ಳುವುದು ಮತ್ತು ನಿಮ್ಮ ಗುರಿಗಳನ್ನು ತಲುಪಲು ನಿಮ್ಮ ಜೀವನದ ಎಲ್ಲಾ ಅಂಶಗಳನ್ನು ಪರಿಗಣಿಸುವುದು ಅತ್ಯಗತ್ಯ. ಪ್ರೇಮಿಗಳು ತಮ್ಮ ಪ್ರಣಯ ಪಾಲುದಾರರೊಂದಿಗೆ ಶಾಂತಿಯುತವಾಗಿ ಸಹಬಾಳ್ವೆ ನಡೆಸಲು ಈ ಅವಧಿಯು ವಿಶೇಷವಾಗಿ ಅನುಕೂಲಕರವಾಗಿದೆ. ವೈವಾಹಿಕ ಸಂಬಂಧವು ಇನ್ನಷ್ಟು ಬೆಳೆಯಲಿದೆ. ಅದೇನೇ ಇದ್ದರೂ, ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಗುರಿಯಲ್ಲಿ ಗೊಂದಲವನ್ನು ತಪ್ಪಿಸಲು ಯತ್ನಿಸಬೇಕು ಮತ್ತು ಅವರ ವಿದ್ಯಾರ್ಥಿ ಜೀವನವನ್ನು ಪೂರ್ಣವಾಗಿ ಆನಂದಿಸಲು ಶ್ರಮಿಸಬೇಕು. ಅಲ್ಲದೆ, ಈ ವಾರ ನಿಮ್ಮ ಆರೋಗ್ಯದ ಬಗ್ಗೆ ಗಮನ ಹರಿಸುವುದು ಅತ್ಯಗತ್ಯ. ನಿಮ್ಮ ದೈಹಿಕ ಯೋಗಕ್ಷೇಮಕ್ಕೆ ಹೆಚ್ಚು ಗಮನ ಕೊಡುವುದು ನಿರ್ಣಾಯಕವಾಗಿದೆ ಮತ್ತು ನಿಮ್ಮ ದೈನಂದಿನ ದಿನಚರಿಯಲ್ಲಿ ಪೌಷ್ಟಿಕ ಆಹಾರ, ನಿಯಮಿತ ವ್ಯಾಯಾಮ ಮತ್ತು ಧ್ಯಾನವನ್ನು ಸಂಯೋಜಿಸಲು ಶಿಫಾರಸು ಮಾಡಲಾಗಿದೆ. ವಾರದ ಅಂತ್ಯದ ವೇಳೆಗೆ, ವ್ಯಾಪಾರ ಕ್ಷೇತ್ರದ ವ್ಯಕ್ತಿಗಳು ತಮ್ಮ ಕ್ಷೇತ್ರದಲ್ಲಿ ಹೆಚ್ಚು ನುರಿತ ವ್ಯಕ್ತಿಗಳಿಂದ ಸವಾಲುಗಳನ್ನು ಎದುರಿಸುತ್ತಾರೆ.

ತುಲಾ :ನೀವು ಕೆಲಸದಲ್ಲಿ ಮುಳುಗಿ ಹೋಗಲಿದ್ದು, ಇದು ನಿಮ್ಮ ವೃತ್ತಿಜೀವನದ ಗುರಿಗಳಲ್ಲಿ ಯಶಸ್ಸು ಮತ್ತು ಪ್ರಗತಿಗೆ ಕಾರಣವಾಗಬಹುದು. ಈ ಅವಧಿಯಲ್ಲಿ, ವಿಶೇಷವಾಗಿ ಯಾವುದೇ ಪ್ರಯಾಣವನ್ನು ಪ್ರಾರಂಭಿಸುವ ಮೊದಲು, ನಿಮ್ಮ ಆರೋಗ್ಯ ಮತ್ತು ನಿಮ್ಮ ಆಸ್ತಿಯ ಸುರಕ್ಷತೆಗೆ ಆದ್ಯತೆ ನೀಡುವುದು ಅಗತ್ಯ. ಪ್ರೇಮದ ವಿಚಾರದಲ್ಲಿ, ಯಾವುದೇ ತಪ್ಪುಗ್ರಹಿಕೆಯನ್ನು ಬಗೆಹರಿಸುವುದು ಮತ್ತು ಭಾವನೆಗಳಿಂದ ಮುಳುಗುವುದನ್ನು ತಪ್ಪಿಸುವುದು ಅತ್ಯಗತ್ಯ. ಆರೋಗ್ಯಕರ ಪ್ರಣಯ ಸಂಬಂಧಗಳನ್ನು ಕಾಪಾಡಿಕೊಳ್ಳುವಲ್ಲಿ ಪರಿಣಾಮಕಾರಿ ಸಂವಹನವು ಪ್ರಮುಖವಾಗಿದೆ. ನಿಮ್ಮ ಸಂಗಾತಿಯು ನಿಮ್ಮ ಜೊತೆಗಿರಲಿದ್ದು ವೈವಾಹಿಕ ಜೀವನದಲ್ಲಿ ಸಂತೃಪ್ತಿ ದೊರೆಯಲಿದೆ. ವಾರದ ಅಂತ್ಯದ ವೇಳೆಗೆ, ಕೆಲಸದಲ್ಲಿ ಸಹೋದ್ಯೋಗಿಯೊಂದಿಗೆ ಸಂಪರ್ಕ ಸಾಧೀಸಲು ಸಲಹೆ ನೀಡಲಾಗುತ್ತದೆ. ನಿಮ್ಮ ಸಮಗ್ರತೆ ಮತ್ತು ವರ್ಚಸ್ಸನ್ನು ಎತ್ತಿಹಿಡಿಯುವ ಜೊತೆಗೆ, ಶ್ರದ್ಧೆಯಿಂದ ಕೆಲಸ ಮಾಡುವುದು ಮತ್ತು ನಿಮ್ಮ ಅಪೇಕ್ಷಿತ ಫಲಿತಾಂಶಗಳನ್ನು ಸಾಧಿಸುವುದು ಅಗತ್ಯ. ಪ್ರತಿಪಾದನೆ ಮತ್ತು ಸಂವಹನದಲ್ಲಿ ತೊಡಗಿರುವವರಿಗೆ ಈ ವಾರವು ವಿಶೇಷವಾಗಿ ಪ್ರಮುಖವಾದುದು. ಈ ಕ್ಷೇತ್ರಗಳಲ್ಲಿ ಎಚ್ಚರಿಕೆಯಿಂದ ಕಾರ್ಯತಂತ್ರ ರೂಪಿಸಬೇಕಾದ ಅಗತ್ಯವಿರುತ್ತದೆ.

ವೃಶ್ಚಿಕ :ಪ್ರಸ್ತುತ ಉದ್ಯೋಗದಲ್ಲಿರುವವರಿಗೆ ತಮ್ಮ ವೃತ್ತಿಪರ ಬೆಳವಣಿಗೆ ಮತ್ತು ಆರ್ಥಿಕ ಸ್ಥಿರತೆಯನ್ನು ಗಣನೀಯವಾಗಿ ಹೆಚ್ಚಿಸುವುದಕ್ಕಾಗಿ ಪ್ರಗತಿ ಅಥವಾ ಸ್ಥಳಾಂತರಕ್ಕಾಗಿ ಹೊಸ ಅವಕಾಶಗಳು ದೊರೆಯಬಹುದು. ಜಾಣ್ಮೆಯ ಹೂಡಿಕೆಗಳ ಮೂಲಕ ಆರ್ಥಿಕ ಲಾಭದ ಅವಕಾಶಗಳು ಮತ್ತು ಹಿಂದಿನವುಗಳಿಂದ ಪ್ರತಿಫಲವನ್ನು ಪಡೆಯುವ ಸಾಮರ್ಥ್ಯವೂ ಲಭಿಸಲಿದೆ. ಈ ವಾರವು ನಿಮ್ಮ ಪ್ರೀತಿಪಾತ್ರರ ಜೊತೆಗೆ ಸಂತೋಷ ಮತ್ತು ಸಂತೃಪ್ತಿಯಿಂದ ಕೂಡಿದ ಸಮಯವನ್ನು ಆನಂದಿಸಲು ಅವಕಾಶವನ್ನು ನೀಡುತ್ತದೆ. ದಾಂಪತ್ಯ ಸಂಬಂಧದಲ್ಲಿರುವವರಿಗೆ ಇದು ಸಂತೃಪ್ತಿಯ ಅವಧಿಯಾಗಿರಬಹುದು. ಮಕ್ಕಳ ಕುರಿತಾದ ಯಾವುದೇ ಚಿಂತೆಯು ಬಗೆಹರಿಯಲಿದೆ. ಆರೋಗ್ಯವು ಸಹಜ ಸ್ಥಿತಿಗೆ ಮರಳಬಹುದು ಮತ್ತು ವ್ಯಾಪಾರದ ಪ್ರಗತಿಯ ಚಿಹ್ನೆಗಳು ಕಾಣಿಸಿಕೊಳ್ಳಬಹುದು. ನಿಮ್ಮ ವ್ಯಾಪಾರದ ಪ್ರಯತ್ನಗಳಲ್ಲಿ ಮತ್ತು ನಿಮ್ಮ ಯಶಸ್ಸಿನ ಪ್ರಯಾಣದಲ್ಲಿ ಮುನ್ನಡೆಯಲು ಈ ವಾರ ಅತ್ಯುತ್ತಮ ಅವಕಾಶವನ್ನು ಒದಗಿಸುತ್ತದೆ. ಸಾರ್ವಜನಿಕ ಯೋಜನೆಗಳಲ್ಲಿ ಯಶಸ್ಸು ದೊರೆಯಲಿದ್ದು ವೈಯಕ್ತಿಕ ಸಂಬಂಧಗಳು ಗಟ್ಟಿಗೊಳ್ಳಲಿವೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಈ ವಾರವು ಪ್ರಯೋಜನಕಾರಿಯಾಗಿರಲಿದ್ದು, ಇದು ಹಲವಾರು ಸಕಾರಾತ್ಮಕ ಅವಕಾಶಗಳನ್ನು ನೀಡುತ್ತದೆ. ನಿಮ್ಮ ಗುರಿಗಳನ್ನು ಗಮನಿಸಲು ಮತ್ತು ನಿಮ್ಮ ವೃತ್ತಿಪರ ಉದ್ದೇಶಗಳಿಗೆ ಅಂಟಿಕೊಂಡಿರಲು ಇದು ಸಕಾಲವಾಗಿದ್ದು, ಇದು ನಿಸ್ಸಂದೇಹವಾಗಿ ಯಶಸ್ಸಿಗೆ ಕಾರಣವಾಗುತ್ತದೆ.

ಧನು :ಆರಂಭದಲ್ಲಿ, ನಿಮ್ಮ ಆಹಾರವನ್ನು ನಿರ್ಲಕ್ಷಿಸುವುದರಿಂದ ಅಥವಾ ದೀರ್ಘಕಾಲದ ಅನಾರೋಗ್ಯದ ಕಾರಣದಿಂದಾಗಿ ನೀವು ಆರೋಗ್ಯ ಸಮಸ್ಯೆಗಳನ್ನು ಎದುರಿಸಬಹುದು. ಹೀಗಾಗಿ ನಿಮ್ಮ ದೈಹಿಕ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಬೇಕಾಗುತ್ತದೆ. ನಿಮ್ಮ ಯೋಗಕ್ಷೇಮವನ್ನು ಹೆಚ್ಚಿಸಲು, ಸ್ಥಿರವಾದ ದೈಹಿಕ ಚಟುವಟಿಕೆ ಮತ್ತು ಪೌಷ್ಟಿಕ ಆಹಾರದೊಂದಿಗೆ ನಿಮ್ಮ ಪೋಷಣೆ ಮತ್ತು ನೀರಿನ ಸೇವನೆಗೆ ಗಮನ ನೀಡುವುದು ಬಹಳ ಮುಖ್ಯ. ವಿಶೇಷವಾಗಿ ಪರೀಕ್ಷೆಗಳಿಗೆ ಸಜ್ಜಾಗುತ್ತಿರುವ ವಿದ್ಯಾರ್ಥಿಗಳಿಗೆ ಈ ವಾರವು ಸಾಕಷ್ಟು ಚಟುವಟಿಕೆಗಳಿಂದ ಕೂಡಿರಲಿದ್ದು, ಅವರು ತಮ್ಮ ಪ್ರಯತ್ನಗಳಿಗೆ ತಕ್ಕುದಾದ ಪ್ರತಿಫಲವನ್ನು ಪಡೆಯಲಿದ್ದಾರೆ. ಈ ಬಿಡುವಿಲ್ಲದ ವೇಳಾಪಟ್ಟಿಯ ನಡುವೆ, ನಿಮ್ಮ ಶೈಕ್ಷಣಿಕ ಗುರಿಯ ಮೇಲೆ ಕೇಂದ್ರೀಕರಿಸುವುದು ಮತ್ತು ನಿಮ್ಮ ಉದ್ದೇಶಗಳಿಗೆ ಬದ್ಧವಾಗಿರುವುದು ಮುಖ್ಯವಾಗಿದೆ. ಪ್ರೇಮ ಜೀವನಕ್ಕೆ ವಿಷಯಗಳಿಗೆ ಈ ವಾರ ವಿಶೇಷವಾಗಿ ಅನುಕೂಲಕರವಾಗಿದೆ. ನಿಮ್ಮ ಪ್ರಣಯ ಸಂಗಾತಿಯು ನಿಮ್ಮ ಅಗತ್ಯತೆಗಳನ್ನು ಗ್ರಹಿಸುತ್ತಾರೆ ಮತ್ತು ಬೆಂಬಲವನ್ನು ನೀಡಲಿದ್ದು, ಬದುಕಿನಲ್ಲಿ ತೃಪ್ತಿ ಇರಲಿದೆ. ವಾರದ ಅಂತ್ಯದ ವೇಳೆಗೆ, ನೀವು ಶುಭ ಸುದ್ದಿಯನ್ನು ಸ್ವೀಕರಿಸಲಿದ್ದೀರಿ. ಗೃಹಿಣಿಯರು ಆಧ್ಯಾತ್ಮಿಕ ಅಭ್ಯಾಸಗಳಿಗೆ ಹೆಚ್ಚಿನ ಸಮಯವನ್ನು ವಿನಿಯೋಗಿಸುತ್ತಾರೆ. ಈ ಅವಧಿಯಲ್ಲಿ, ನಿಮ್ಮ ಜವಾಬ್ದಾರಿಗಳನ್ನು ಪೂರೈಸಲು ನಿಮ್ಮ ಸಮಯ ಮತ್ತು ಶಕ್ತಿಯನ್ನು ಸಮತೋಲನಗೊಳಿಸುವುದು ಅತ್ಯಗತ್ಯ. ಈ ವಾರ, ನಿಮ್ಮ ಆರೋಗ್ಯ ಮತ್ತು ಸಂಬಂಧಗಳನ್ನು ಉತ್ತಮಗೊಳಿಸುವತ್ತ ಗಮನಹರಿಸಿ ಮತ್ತು ಸಕಾರಾತ್ಮಕ ಮತ್ತು ತಾಳ್ಮೆಯ ದೃಷ್ಟಿಕೋನವನ್ನು ಕಾಪಾಡಿಕೊಳ್ಳಿ.

ಮಕರ :ನಿಮ್ಮ ವೃತ್ತಿ ಬದುಕಿನಲ್ಲಿ ಶ್ರದ್ಧೆಯ ಕೆಲಸ ಮತ್ತು ಸಮರ್ಪಣಾ ಭಾವವನ್ನು ಗುರುತಿಸಲಾಗುತ್ತದೆ ಮತ್ತು ಗೌರವಿಸಲಾಗುತ್ತದೆ. ನಿಮ್ಮ ಮೇಲಧಿಕಾರಿಗಳು ಮತ್ತು ಅಧೀನ ಅಧಿಕಾರಿಗಳು ನಿಮ್ಮ ಕೊಡುಗೆಗಳನ್ನು ಶ್ಲಾಘಿಸುತ್ತಾರೆ ಮತ್ತು ನೀವು ಅವರ ಬೆಂಬಲವನ್ನು ಸ್ವೀಕರಿಸುತ್ತೀರಿ. ಕಳೆದ ವಾರ ನೀವು ಎದುರಿಸಿದ ಸಮಸ್ಯೆಗಳು ಬಗೆಹರಿಸಲಿದ್ದು, ನಿಮ್ಮ ಸಂಪತ್ತು ಬೆಳೆಯುತ್ತದೆ. ಪ್ರೇಮ ಜೀವನಕ್ಕೆ ಸಂಬಂಧಿಸಿದ ವಿಷಯಗಳಿಗೂ ಈ ವಾರ ಅನುಕೂಲಕರವಾಗಿದೆ. ನಿಮ್ಮ ಪ್ರಣಯ ಸಂಬಂಧಗಳು ಬಲಗೊಳ್ಳುತ್ತವೆ ಮತ್ತು ನಿಮ್ಮ ಕುಟುಂಬವು ನಿಮ್ಮ ಪ್ರೇಮವನ್ನು ಬೆಂಬಲಿಸಬಹುದು. ನಿಮ್ಮ ವೈವಾಹಿಕ ಜೀವನವು ಇನ್ನಷ್ಟು ಗಟ್ಟಿಗೊಳ್ಳಲಿದ್ದು ನಿಮ್ಮ ಸಂಗಾತಿಯೊಂದಿಗೆ ವಿಹಾರಕ್ಕೆ ಹೋಗಲು ನಿಮಗೆ ಅವಕಾಶವಿದೆ. ಈ ವಾರವು ವಿದ್ಯಾರ್ಥಿಗಳಿಗೆ ಅದೃಷ್ಟದಿಂದ ಕೂಡಿರಲಿದೆ. ವಿಶೇಷವಾಗಿ ಪರೀಕ್ಷೆಗಳು ಮತ್ತು ಸ್ಪರ್ಧೆಗಳಿಗೆ ತಯಾರಿ ನಡೆಸುತ್ತಿರುವವರು ಧನಾತ್ಮಕ ಫಲಿತಾಂಶಗಳನ್ನು ಸ್ವೀಕರಿಸುವ ಸಾಧ್ಯತೆಯಿದೆ. ನಿಮ್ಮ ಪ್ರೀತಿಪಾತ್ರರೊಂದಿಗೆ ಮತ್ತೆ ಒಂದಾಗಲು ನಿಮಗೆ ಅವಕಾಶವಿದೆ ಮತ್ತು ಅವರ ಪ್ರೋತ್ಸಾಹದಿಂದ ನಿಮ್ಮ ಕಾರ್ಯಗಳನ್ನು ತ್ವರಿತವಾಗಿ ಸಾಧಿಸುವಿರಿ. ನಿಮ್ಮ ವೈಯಕ್ತಿಕ ಜೀವನದಲ್ಲಿ ಈ ವಾರ ತಾಳ್ಮೆಯಿಂದ ಇರುವುದನ್ನು ಖಚಿತಪಡಿಸಿಕೊಳ್ಳಲು ಸಮಯ ಮತ್ತು ಶ್ರಮವನ್ನು ವಿನಿಯೋಗಿಸುವುದು ಮುಖ್ಯವಾಗಿದೆ. ನಿಮ್ಮ ಯೋಗಕ್ಷೇಮಕ್ಕಾಗಿ, ಆರೋಗ್ಯಕರ ಆಹಾರ ಶೈಲಿಯನ್ನು ಕಾಪಾಡಿಕೊಳ್ಳುವುದು ಮತ್ತು ನಿಯಮಿತ ದೈಹಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದು ಬಹಳ ಮುಖ್ಯ.

ಕುಂಭ :ನಿಮ್ಮ ಆತ್ಮೀಯರ ಬೆಂಬಲವು ನಿಮಗೆ ಇರುತ್ತದೆ. ಅದೇನೇ ಇದ್ದರೂ, ಉದ್ಯೋಗದ ಸ್ಥಳದಲ್ಲಿರುವ ವಿರೋಧಿಗಳ ಬಗ್ಗೆ ನೀವು ಜಾಗರೂಕರಾಗಿರಬೇಕು. ನಿಮ್ಮ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ನಿಮ್ಮ ಬೆಂಬಲಿಗರ ಸಲಹೆಯನ್ನು ಪರಿಗಣಿಸುವುದು ನಿರ್ಣಾಯಕವಾಗಿದೆ. ವೃತ್ತಿಯ ವಿಚಾರದಲ್ಲಿ ಈ ಅವಧಿಯು ಅನುಕೂಲಕರವಾಗಿರುತ್ತದೆ. ನಿಮ್ಮ ವೃತ್ತಿಪರ ಪ್ರಯತ್ನಗಳಲ್ಲಿ ನೀವು ಬಯಸಿದ ಆದಾಯವನ್ನು ನೀವು ಪಡೆಯಲಿದ್ದೀರಿ. ನಿಮ್ಮ ವೃತ್ತಿಜೀವನದ ಹಾದಿಯಲ್ಲಿ ಬದಲಾವಣೆಗಳನ್ನು ಮಾಡಲು ಮತ್ತು ಉತ್ತಮ ಅವಕಾಶಗಳನ್ನು ಹುಡುಕಲು ಇದು ಸೂಕ್ತ ಕ್ಷಣವಾಗಿದೆ. ಪ್ರಣಯ ಸಂಬಂಧಗಳಲ್ಲಿ ಬಂಧ ಮತ್ತು ಅನ್ಯೋನ್ಯತೆ ಬಲಗೊಳ್ಳಲಿದ್ದು, ನಿಮ್ಮ ದಾಂಪತ್ಯದ ಜೀವನದಲ್ಲಿ ಸಂತೋಷವನ್ನು ಖಾತ್ರಿಗೊಳಿಸುತ್ತದೆ. ನಿಮ್ಮ ಯೋಗಕ್ಷೇಮಕ್ಕೆ ಆದ್ಯತೆ ನೀಡುವುದು ಮುಖ್ಯ. ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳ ಬಗ್ಗೆ ಎಚ್ಚರ ವಹಿಸಿದರೆ ನಿಮ್ಮ ಯೋಗಕ್ಷೇಮವನ್ನು ಕಾಪಾಡಿಕೊಳ್ಳಲು ಸಹಾಯ ದೊರೆಯುತ್ತದೆ. ನೀವು ಸ್ವಲ್ಪ ಸಮಯದಿಂದ ನಿಮ್ಮ ವೃತ್ತಿಪರ ಜೀವನದಲ್ಲಿ ಬದಲಾವಣೆಯನ್ನು ಮಾಡಿಕೊಳ್ಳಲು ಯೋಚಿಸುತ್ತಿದ್ದರೆ, ಈ ವಾರ ಅದಕ್ಕೆ ಸೂಕ್ತ ಸಮಯವಾಗಿದೆ. ಈ ಅವಧಿಯಲ್ಲಿ ಕೆಲಸದಲ್ಲಿ ಸ್ಥಿರವಾದ ಪ್ರಯತ್ನವನ್ನು ಮಾಡುವ ಮೂಲಕ, ನೀವು ಯಶಸ್ಸನ್ನು ಸಾಧಿಸಬಹುದು.

ಮೀನ :ವ್ಯಾಪಾರಕ್ಕೆ ಸಂಬಂಧಿಸಿದ ವ್ಯವಹಾರಗಳು ನಿಮ್ಮ ಪರವಾಗಿರುವ ಸಾಧ್ಯತೆಯಿದೆ. ಇದು ನಿಮ್ಮ ಆರ್ಥಿಕ ಸ್ಥಿತಿಯನ್ನು ಸುಧಾರಿಸುವ ಗಮನಾರ್ಹ ಬೆಳವಣಿಗೆಗೆ ಕಾರಣವಾಗಬಹುದು. ನಿಮ್ಮ ಮಕ್ಕಳ ಸಾಧನೆಗಳು ನಿಮಗೆ ಗೌರವವನ್ನು ಗಳಿಸಲಿದ್ದು ಸಂತೋಷದಾಯಕ ಕುಟುಂಬ ವಾತಾವರಣವನ್ನು ಸೃಷ್ಟಿಸುತ್ತವೆ. ಪ್ರಣಯ ಸಂಬಂಧವೂಚ ಚೆನ್ನಾಗಿರಲಿದೆ. ನೀವು ಬಯಸಿದಲ್ಲಿ, ನಿಮ್ಮ ಭಾವನೆಗಳನ್ನು ಹಂಚಿಕೊಳ್ಳಲು ನೀವು ಧೈರ್ಯವನ್ನು ತೋರಬಹುದು. ಇದು ನಿಮ್ಮ ಪ್ರಣಯ ಜೀವನದಲ್ಲಿ ಧನಾತ್ಮಕ ಬೆಳವಣಿಗೆಗಳಿಗೆ ಕಾರಣವಾಗಬಹುದು. ನಿಮ್ಮ ವೈವಾಹಿಕ ಜೀವನವು ಆನಂದದಾಯಕವಾಗಿರುತ್ತದೆ. ಕೌಟುಂಬಿಕ ಬಂಧಗಳು ಇನ್ನಷ್ಟು ಬಲಗೊಳ್ಳುತ್ತವೆ. ಆರೋಗ್ಯ ಸಮಸ್ಯೆಗಳು ಕಡಿಮೆಯಾಗುವ ಸಾಧ್ಯತೆಯಿದೆ. ನಿಮ್ಮ ಮನಸ್ಸು ಧಾರ್ಮಿಕ ಮತ್ತು ಸಾಮಾಜಿಕ ಪ್ರಯತ್ನಗಳಲ್ಲಿ ಸಕ್ರಿಯವಾಗಿರುತ್ತದೆ. ವಾರದ ಅಂತ್ಯದ ವೇಳೆಗೆ, ನೀವು ಏಕಾಂತವನ್ನು ಹುಡುಕಲು ಒಲವು ತೋರಬಹುದು ಮತ್ತು ಶಾಂತಿಯ ಕ್ಷಣಗಳನ್ನು ಆನಂದಿಸಬಹುದು. ಅದು ನಿಮ್ಮ ಮಾನಸಿಕ ಯೋಗಕ್ಷೇಮ ಮತ್ತು ಚೇತರಿಕೆಯು ಹೆಚ್ಚಿಸುತ್ತದೆ. ಈ ಅವಧಿಯಲ್ಲಿ, ನಿಮ್ಮ ಆಲೋಚನೆಗಳು ಧಾರ್ಮಿಕ ಮತ್ತು ಆಧ್ಯಾತ್ಮಿಕ ಅನ್ವೇಷಣೆಗಳ ಕಡೆಗೆ ಆಕರ್ಷಿತವಾಗುವ ಸಾಧ್ಯತೆಯಿದೆ. ನಿಮ್ಮ ಜೀವನದ ಅರ್ಥವನ್ನು ಅರಿತುಕೊಳ್ಳಲು ಅವಕಾಶ ಲಭಿಸಲಿದೆ.

ABOUT THE AUTHOR

...view details