ಕರ್ನಾಟಕ

karnataka

ETV Bharat / spiritual

ಮಂಗಳವಾರದ ಪಂಚಾಂಗ ಮತ್ತು ದಿನ ಭವಿಷ್ಯ - Daily Horoscope - DAILY HOROSCOPE

ಮಂಗಳವಾರದ ರಾಶಿ ಭವಿಷ್ಯ ಹೀಗಿದೆ.

Daily Horoscope of tuesday
ಮಂಗಳವಾರದ ದಿನ ಭವಿಷ್ಯ

By ETV Bharat Karnataka Team

Published : Apr 9, 2024, 5:00 AM IST

ಇಂದಿನ ಪಂಚಾಂಗ

09-04-2024, ಮಂಗಳವಾರ

ಸಂವತ್ಸರ :ಶುಭಕೃತ್

ಆಯನ :ಉತ್ತರಾಯಣ

ಮಾಸ :ಚೈತ್ರ

ಪಕ್ಷ :ಶುಕ್ಲ

ತಿಥಿ :ಪ್ರತಿಪದಾ

ನಕ್ಷತ್ರ :ರೇವತಿ

ಸೂರ್ಯೋದಯ :ಮುಂಜಾನೆ06:08 ಗಂಟೆಗೆ

ಅಮೃತಕಾಲ :ಮಧ್ಯಾಹ್ನ 12:19 ರಿಂದ 13:52 ಗಂಟೆವರೆಗೆ

ರಾಹುಕಾಲ :ಮಧ್ಯಾಹ್ನ15:25 ರಿಂದ 16:57 ಗಂಟೆವರೆಗೆ

ದುರ್ಮುಹೂರ್ತಂ :ಬೆಳಗ್ಗೆ8:32 ರಿಂದ 9:20 ಗಂಟೆವರೆಗೆ ಹಾಗೂ 11:44 ರಿಂದ 12:32 ಗಂಟೆವರೆಗೆ

ಸೂರ್ಯಾಸ್ತ :ಸಂಜೆ06:30 ಗಂಟೆಗೆ

ವರ್ಜ್ಯಂ :ಸಂಜೆ18:15 ರಿಂದ 19:50 ಗಂಟೆವರೆಗೆ

ಮೇಷ :ಭಾವನೆಗಳು ಸದಾ ಅಡೆತಡೆಗಳನ್ನು ಒಡ್ಡುತ್ತವೆ. ವಿಷಯಗಳು ದಾರಿ ತಪ್ಪಿದಾಗ, ಜೀವನ ಸ್ಫೂರ್ತಿ ಕಳೆದುಕೊಳ್ಳುತ್ತದೆ. ಆದರೆ ನೀವು ವಿಷಯಗಳ ಸಕಾರಾತ್ಮಕ ಭಾಗವನ್ನು ನೋಡಬೇಕು. ಡೈನಿಂಗ್ ಟೇಬಲ್ ಮೇಲಿರುವ ಆಹಾರ, ನಿಮ್ಮ ವಾರ್ಡ್ ರೋಬ್​ನಲ್ಲಿರುವ ಬಟ್ಟೆಗಳ ಕುರಿತಾಗಿ ನೀವು ದೇವರಿಗೆ ಕೃತಜ್ಞತೆ ಸಲ್ಲಿಸಿ.

ವೃಷಭ : ಬಣ್ಣದ ಪಟಾಕಿ ಸಿಡಿಸಿ ಮತ್ತು ಸಂಗೀತ ಹಚ್ಚಿರಿ. ಇಂದು ಹಬ್ಬದ ಉತ್ಸಾಹ ಅನುಭವಿಸಿ. ಈ ಮಧ್ಯಾಹ್ನ ಯಶಸ್ಸು ನಿಮ್ಮ ಮನೆಬಾಗಿಲು ಬಡಿಯುತ್ತದೆ. ನಿಮ್ಮ ಆಲೋಚನೆಗಳು ಆಶಾವಾದದೊಂದಿಗೆ ಸೇರುತ್ತವೆ. ತಡರಾತ್ರಿಯವರೆಗೂ ಪಾರ್ಟಿಯಲ್ಲಿ ನೀವು ಮುಳುಗುತ್ತೀರಿ.

ಮಿಥುನ : ನಿಮ್ಮ ಸಹೋದ್ಯೋಗಿಗಳೊಂದಿಗೆ ಇಂದು ಮ್ಯಾರಥಾನ್ ಸಭೆ ಇರಲಿದೆ. ಮೀಟಿಂಗ್ ಗಡುವುಗಳು ಮೀರುತ್ತಿರುವುದು ಮತ್ತು ಸಂಗಾತಿಯ ಬೇಡಿಕೆಗಳು ನಿಮ್ಮನ್ನು ದಿನದ ಅಂತ್ಯಕ್ಕೆ ಕೊಂಚ ಒತ್ತಡದಲ್ಲಿರಿಸುತ್ತವೆ. ಆದರೆ ನೀವು ಸಮಯವನ್ನು ವ್ಯಾಪಾರ, ಮನೆ ಮತ್ತು ಸಂತೋಷದ ನಡುವೆ ವಿಂಗಡಿಸುವುದರಲ್ಲಿ ಪರಿಣಿತರು. ನಿಮ್ಮ ಪ್ರಾರ್ಥನೆಗಳಿಗೆ ಉತ್ತರ ತಡರಾತ್ರಿಯ ಪಾರ್ಟಿ. ಅದನ್ನೇ ನೀವು ಆಲೋಚಿಸುತ್ತಿರುವುದು.

ಕರ್ಕಾಟಕ : ನೀವು ಇಡೀ ದಿನವನ್ನು ಗೃಹಕೃತ್ಯಗಳಲ್ಲಿ ಕಳೆಯುತ್ತೀರಿ ಮತ್ತು ಜವಾಬ್ದಾರಿಗಳನ್ನ ಹೊರೆ ಎಂದು ಭಾವಿಸುತ್ತೀರಿ. ಸಂಜೆಯ ವೇಳೆಗೆ ನೀವು ಪ್ರೀತಿಪಾತ್ರರಿಗೆ ವಿಶೇಷ ಗಮನ ನೀಡಿ ಪ್ರಭಾವಿಸುತ್ತೀರಿ; ನೀವು ಇತರರನ್ನೂ ಸಂತೋಷಗೊಳಿಸುತ್ತೀರಿ.

ಸಿಂಹ : ನೀವು ಇತರರಿಗೆ ನೆರವು ನೀಡುವ ಮೂಡ್​ನಲ್ಲಿದ್ದೀರಿ. ಆದರೆ ನೀವು ನಿಮ್ಮ ಪ್ರಯತ್ನದಲ್ಲಿ ಯಶಸ್ವಿಯಾಗುವುದಿಲ್ಲ. ದಿನದ ನಂತರದಲ್ಲಿ ನಿಮ್ಮ ಅನುಮಾನಗಳು ಕರಗಿ ಹೋಗುತ್ತವೆ ಮತ್ತು ಚಿತ್ರ ಸ್ಪಷ್ಟವಾಗುವುದನ್ನು ಕಾಣುತ್ತೀರಿ. ನೀವು ಇಂದು ಬಯಸಿದ ಫಲಿತಾಂಶಗಳನ್ನು ಪಡೆಯಲು ಹೆಚ್ಚು ಶ್ರಮಿಸಬೇಕು.

ಕನ್ಯಾ : ನಿಮ್ಮ ಧೈರ್ಯದ ಸ್ವಭಾವ ಹಲವು ಜನರನ್ನು ಪ್ರಭಾವಿಸುತ್ತದೆ. ನಿಮ್ಮ ಶೋ ಹಾಳು ಮಾಡುವ ಯಾವುದೋ ಒಂದರ ಬಗ್ಗೆ ಹುಷಾರಾಗಿರಿ. ನಿಮ್ಮ ಆಂತರಿಕ ಸ್ವಯಂ ಶಿಸ್ತಿನ ಬಗ್ಗೆ ನೀವು ಸಾಕಷ್ಟು ಪ್ರಗತಿ ಕಾಣುತ್ತೀರಿ. ಸಂಜೆ ನಿಮ್ಮ ಮಕ್ಕಳ ವರ್ತನೆ ನಿಮಗೆ ನಗು ತರುತ್ತದೆ.

ತುಲಾ : ನೀವು ಅಂತಿಮವಾಗಿ ನಿಮ್ಮ ಪ್ರೀತಿಪಾತ್ರರ ಉದ್ದೇಶಕ್ಕೆ ಸಜ್ಜಾಗಿದ್ದೀರಿ. ನಿಮ್ಮ ಭವಿಷ್ಯದ ಜೀವನಸಂಗಾತಿ ಆಕರ್ಷಿಸಲು ನೀವು ನಿಮ್ಮ ಹೊರನೋಟ ಸುಧಾರಿಸಿಕೊಳ್ಳಲು ಪ್ರಯತ್ನಿಸುತ್ತೀರಿ. ನೀವು ನಿಮ್ಮ ಪ್ರೀತಿಪಾತ್ರರೊಂದಿಗೆ ಭಾವನಾತ್ಮಕವಾಗಿ ಹತ್ತಿರವಾಗುವ ನಿಮ್ಮ ಹಳೆಯ ನೆನಪುಗಳನ್ನು ಹಂಚಿಕೊಳ್ಳುತ್ತೀರಿ.

ವೃಶ್ಚಿಕ : ನೀವು ನಿಮ್ಮ ಸಂಗಾತಿಯೊಂದಿಗೆ ಮಾತಿಲ್ಲದ ಬಾಂಧವ್ಯ ಹಂಚಿಕೊಂಡಿದ್ದೀರಿ. ನೀವು ಪರಸ್ಪರ ಮಾತನಾಡದೇ ಇದ್ದರೂ ನಿಮ್ಮ ಕಣ್ಣುಗಳು ಸಾವಿರ ಮಾತನಾಡುತ್ತವೆ. ಕೆಲಸದಲ್ಲಿ ನಿಮ್ಮ ಕೌಶಲ್ಯಗಳು ಮತ್ತು ಪ್ರತಿಭೆಗಳು ಗಮನ ಸೆಳೆಯುತ್ತವೆ ಮತ್ತು ನೀವು ಅದಕ್ಕೆ ಪ್ರಶಂಸೆಯನ್ನೂ ಪಡೆಯುತ್ತೀರಿ. ಯಶಸ್ಸಿನ ವೈಭವ ಅನುಭವಿಸುವ ಸಮಯ.

ಧನು :ನಿಮ್ಮ ಟ್ರಾವೆಲ್ ಬ್ಯಾಗ್ ಸಜ್ಜು ಮಾಡಿಕೊಳ್ಳಿ. ವ್ಯಾಪಾರ ಪ್ರವಾಸ ಕಾದಿದೆ. ಹಣ ವಿಶ್ವವನ್ನು ಸುತ್ತುವಂತೆ ಮಾಡುತ್ತದೆ. ಹಾಗೆಯೇ ಇಂದು ಹಣಕಾಸಿನ ವಿಷಯಗಳನ್ನ ನೀವು ಆದ್ಯತೆಯಾಗಿ ಪರಿಗಣಿಸಿ. ಸಂಜೆಯಲ್ಲಿ ಆರಾಮಾಗಿ ಕುಳಿತು ಯಶಸ್ಸಿನ ವೈಭವ ಅನುಭವಿಸಿ.

ಮಕರ : ಆದ್ಯತೆಯ ಪಟ್ಟಿಯಲ್ಲಿ ನೀವು ಕೆಲಸವನ್ನು ಕುಟುಂಬ ಜೀವನಕ್ಕಿಂತ ದೂರ ಇರಿಸಿದ್ದೀರಿ. ಇದರಿಂದ ನಿಮ್ಮ ಸಂಗಾತಿ ನೀವು ಆತ/ಆಕೆಯತ್ತ ತಕ್ಕಷ್ಟು ಗಮನ ನೀಡುತ್ತಿಲ್ಲ ಎಂದು ದೂರುತ್ತಿದ್ದಾರೆ. ಇಂದು, ನೀವು ಆತ/ಆಕೆಯನ್ನು ನಿರಾಸೆಗೊಳಿಸುವುದಿಲ್ಲ. ನೀವು ನಿಮ್ಮ ಪ್ರಿಯತಮೆಯೊಂದಿಗೆ ಪ್ರಣಯದ ಪ್ರಯಾಣ ಯೋಜಿಸಿದ್ದೀರಿ. ವೃತ್ತಿಪರವಾಗಿ, ನೀವು ಶ್ರೇಷ್ಠರು. ಬಾಸ್​ಗಳ ಪ್ರಶಂಸೆ ಪಡೆಯುತ್ತೀರಿ ಮತ್ತು ನಿಮ್ಮ ವಿರೋಧಿಗಳನ್ನು ಮೀರುತ್ತೀರಿ. ಈ ಸಾಧನೆಗಳು ಅವುಗಳ ಶಕ್ತಿಗಾಗಿ ಪರೀಕ್ಷಿಸಲ್ಪಡಬೇಕು.

ಕುಂಭ : ನೀವು ನಿಮ್ಮ ಜೀವನದಲ್ಲಿ ಮಿತ್ರರ ಪ್ರಾಮುಖ್ಯತೆಯನ್ನು ಅರ್ಥ ಮಾಡಿಕೊಳ್ಳುತ್ತೀರಿ. ಮತ್ತು ನೀವು ಅವರೊಂದಿಗೆ ಸಂಪರ್ಕದಲ್ಲಿರಲು ಹೆಚ್ಚು ಪ್ರಯತ್ನಿಸುತ್ತೀರಿ. ನಿಮ್ಮ ಸಂವಹನ ಕೌಶಲ್ಯಗಳು ನಿಮಗೆ ಕೆಲಸ ಸುಸೂತ್ರ ಮಾಡುವುದಲ್ಲದೆ ನಿಮ್ಮ ಪ್ರತಿಸ್ಪರ್ಧಿಗಳೂ ನಿಮ್ಮ ಪ್ರತಿಭೆಗಳನ್ನು ಶ್ಲಾಘಿಸುತ್ತಾರೆ. ಈ ಕೌಶಲ್ಯ ನಿಮ್ಮ ಪ್ರಿಯತಮೆಗೂ ಮೆಚ್ಚುಗೆಯಾಗಿ ನಿಮಗೆ ಮನೆಯಲ್ಲಿ ಅದ್ಭುತಗಳನ್ನು ಮಾಡುತ್ತದೆ.

ಮೀನ :ಈ ದಿನ ಕೆಲಸದ ದೃಷ್ಟಿಯಿಂದ ಸಾಕಷ್ಟು ಒತ್ತಡ ತುಂಬಿದೆ. ನೀವು ನಿಮ್ಮ ಅದ್ಭುತ ಬುದ್ಧಿಶಕ್ತಿಯಿಂದ ಮತ್ತು ಮನವೊಲಿಸುವ ಶಕ್ತಿಯಿಂದ ಸ್ಪರ್ಧಿಗಳಿಗಿಂತ ಮುಂದಿರುತ್ತೀರಿ. ನೀವು ಇಂದು ಪ್ರಾಜೆಕ್ಟ್​​ಗಳನ್ನು ನಿಭಾಯಿಸುವ ರೀತಿಗೆ ಹಲವು ಪುರಸ್ಕಾರಗಳನ್ನು ಪಡೆಯುತ್ತೀರಿ.

ABOUT THE AUTHOR

...view details