ಕರ್ನಾಟಕ

karnataka

ETV Bharat / spiritual

ಶುಕ್ರವಾರದ ದಿನ ಭವಿಷ್ಯ : ಈ ರಾಶಿಯವರಿಗೆ ಇಂದು ಉದ್ಯಮದಲ್ಲಿ ಅದ್ಭುತ ಗಳಿಕೆ ಸಾಧ್ಯತೆ! - DAILY HOROSCOPE OF FRIDAY

ಶುಕ್ರವಾರದ ರಾಶಿ ಭವಿಷ್ಯ ಹೀಗಿದೆ.

Daily horoscope of Friday
ಶುಕ್ರವಾರದ ದಿನ ಭವಿಷ್ಯ (ETV Bharat)

By ETV Bharat Karnataka Team

Published : Nov 8, 2024, 4:57 AM IST

ಇಂದಿನ ಪಂಚಾಂಗ

08-11-2024, ಶುಕ್ರವಾರ

ಸಂವತ್ಸರ:ಕ್ರೋಧಿ ನಾಮ ಸಂವತ್ಸರ

ಆಯನ:ದಕ್ಷಿಣಾಯಣ

ಮಾಸ: ಕಾರ್ತಿಕ

ಪಕ್ಷ: ಶುಕ್ಲ

ತಿಥಿ: ಸಪ್ತಮಿ

ನಕ್ಷತ್ರ:ಉತ್ತರಾಷಾಢ

ಸೂರ್ಯೋದಯ: ಬೆಳಗ್ಗೆ 06:14 ಗಂಟೆಗೆ

ಅಮೃತಕಾಲ:ಬೆಳಗ್ಗೆ 07:41 ರಿಂದ 09:08 ಗಂಟೆವರೆಗೆ

ದುರ್ಮುಹೂರ್ತಂ: ಬೆಳಗ್ಗೆ 8:38 ರಿಂದ 9:26 ಗಂಟೆವರೆಗೆ ಹಾಗೂ ಮಧ್ಯಾಹ್ನ 15:02 ರಿಂದ 15:50 ಗಂಟೆವರೆಗೆ

ರಾಹುಕಾಲ: ಬೆಳಗ್ಗೆ 10:35 ರಿಂದ 12:01 ಗಂಟೆಯ ತನಕ

ಸೂರ್ಯಾಸ್ತ: ಸಂಜೆ 05:48 ಗಂಟೆಗೆ

ಮೇಷ : ನೀವು ಇಂದು ಮಹತ್ವಾಕಾಂಕ್ಷಿಯಾಗಿದ್ದೀರಿ ಅಥವಾ ನಿಮ್ಮದು ಇಂದು ಖಚಿತವಾದ ಯೋಜನೆ ಮತ್ತು ದೋಷರಹಿತ ಅನುಷ್ಠಾನ. ಆದರೂ, ನಿಮ್ಮ ಪ್ರಗತಿ ಬಸವನ ಹುಳುವಿನಂತೆ. ನಿರಾಸೆ ಹೊಂದಬೇಡಿ. ನಿಮಗೆ ದೇವರ ಕೃಪೆ ಇದೆ.

ವೃಷಭ :ನಿಮ್ಮದೇ ಸಾಧನೆಗಳನ್ನು ಯೋಜಿಸುವುದು ಮತ್ತು ಮಿತ್ರರ ಯಶಸ್ಸಿಗೆ ಕೊಡುಗೆ ನೀಡುವುದು ಇಂದಿನ ಕಾರ್ಯಸೂಚಿ. ವ್ಯಾಪಾರ ಅಥವಾ ಕೆಲಸದಲ್ಲಿ ನಿಮ್ಮ ಆಲೋಚನೆಗಳು ಚಲನಶೀಲವಾಗಿರುತ್ತವೆ ಮತ್ತು ಯಾವುದೇ ಯೋಜನೆಗಳು ನಿಮ್ಮ ಭವಿಷ್ಯಕ್ಕೆ ಸದೃಢ ತಳಹದಿ ನಿರ್ಮಿಸುತ್ತವೆ.

ಮಿಥುನ : ನೀವು ನಿಮ್ಮ ಸಮಯವನ್ನು ಇಂದು ಇತರರು ಮತ್ತು ಅವರ ಪ್ರೇರಣೆಗಳನ್ನು ಕಂಡುಕೊಳ್ಳುವಲ್ಲಿ ಕಳೆಯುತ್ತೀರಿ. ನೀವು ನಿಮ್ಮ ಕುಟುಂಬ ಸದಸ್ಯರೊಂದಿಗೆ ಭದ್ರತೆ ಮತ್ತು ಹಣಕಾಸಿನ ವಿಷಯಗಳನ್ನು ಚರ್ಚಿಸುತ್ತಾ ಕಾಲ ಕಳೆಯುತ್ತೀರಿ. ನೀವು ನಿಮ್ಮ ಆರೈಕೆಯ ಸ್ವಭಾವದಿಂದಾಗಿ ನೀವು ಜನರ ಪ್ರೀತಿ, ಆರೈಕೆ ಮತ್ತು ಮಮತೆ ಪಡೆಯುತ್ತೀರಿ.

ಕರ್ಕಾಟಕ :ಆತ್ಮೀಯ ಮಿತ್ರರು ನಿಮ್ಮ ಮನಸ್ಥಿತಿ ಮತ್ತು ಪ್ರವೃತ್ತಿಯಿಂದ ಸಂತೋಷಪಡುತ್ತಾರೆ. ನೀವು ಅದನ್ನು ಈಡೇರಿಸಲು ಪ್ರಯತ್ನಿಸುತ್ತೀರಿ ಮತ್ತು ಅವರೊಂದಿಗೆ ಹೊರಗಡೆ ಹೋಗುತ್ತೀರಿ ಮತ್ತು ಆಕರ್ಷಕ ಸಂಜೆ ಕಳೆಯುತ್ತೀರಿ. ಪ್ರೀತಿ ಮತ್ತು ಸೌಹಾರ್ದ ಬಂಧಗಳು ದೀರ್ಘವಾಗಿರುತ್ತವೆ ಮತ್ತು ಫಲದಾಯಕವಾಗುತ್ತವೆ.

ಸಿಂಹ :ನಿಮ್ಮ ದಿನ ಸಂಪೂರ್ಣ ಮಿಶ್ರ ಫಲಿತಾಂಶಗಳು. ಒಂದು ಕಡೆ ನಿಮ್ಮ ಸಂಗಾತಿ ಅಥವಾ ವ್ಯಾಪಾರ ಪಾಲುದಾರರಿಂದ ನಿರಾಸೆ ಹೊಂದಿದ್ದೀರಿ. ಇನ್ನೊಂದೆಡೆ ನೀವು ಅಂದಾಜಿನಿಂದ ಉದ್ಯಮದಲ್ಲಿ ಅದ್ಭುತ ಗಳಿಕೆ ಪಡೆಯುತ್ತೀರಿ. ನೀವು ಕೆಲ ಮಿತ್ರರ ಸಲಹೆಯ ಮೇರೆಗೆ ಸಮತೋಲನ ಕಾಪಾಡಿಕೊಳ್ಳುತ್ತೀರಿ.

ಕನ್ಯಾ : ಆರೋಗ್ಯದ ವಿಷಯಕ್ಕೆ ಬಂದರೆ ಕಾಲಹರಣ ಬೇಡ. ನೀವು ಹಳೆಯ ಗಾಯಗಳನ್ನು ವಾಸಿ ಮಾಡಿಕೊಳ್ಳಲು ಉತ್ಸಾಹದಲ್ಲಿದ್ದೀರಿ. ಆದರೆ, ಶಾಂತಿ ಮತ್ತು ಸಮಾಧಾನ ಇಂದಿನ ಪ್ರಭಾವಿ ಅಂಶಗಳು. ನೀವು ಹೊರಗಡೆ ಹೋಗಿ ಮತ್ತು ಆನಂದಿಸಿ, ಕೇವಲ ಬ್ಯಾಟರಿ ಚಾರ್ಜ್ ಮಾಡಿಕೊಳ್ಳಲು ಎಂದು ತಿಳಿಯಿರಿ.

ತುಲಾ : ಈ ದಿನ ಬಹಳ ಹಂಬಲದ ದಿನ. ನೀವು ಉತ್ತಮ ಭವಿಷ್ಯಕ್ಕಾಗಿ ಹಂಬಲಿಸುತ್ತೀರಿ. ನೀವು ವಿಶ್ವದ ಕುರಿತು ನಿಮ್ಮ ಹೊರನೋಟ ಬದಲಾಯಿಸುತ್ತೀರಿ. ಅದಕ್ಕೆ ನಿಮ್ಮ ಪ್ರೀತಿಪಾತ್ರರು ಮತ್ತು ಅವರ ಆರೈಕೆಯ ಪ್ರವೃತ್ತಿ ಕಾರಣ. ಹಾಗೆ ಮಾಡುವುದರಿಂದ ನಿಮ್ಮ ಜೀವನವನ್ನು ಉತ್ತಮಪಡಿಸಲು ನೆರವಾಗುತ್ತದೆ.

ವೃಶ್ಚಿಕ : ನೀವು ಹೊಸ ವ್ಯಾಪಾರೋದ್ಯಮ ಪ್ರಾರಂಭಿಸಲು ಯೋಜಿಸುತ್ತಿರುವುದರಿಂದ ನಿಮ್ಮ ಶಕ್ತಿಯ ಮಟ್ಟ ಎಲ್ಲಕ್ಕಿಂತ ಇಂದು ಹೆಚ್ಚಾಗಿದೆ. ನೀವು ನಿರೀಕ್ಷಿತ ಫಲಿತಾಂಶಗಳಿಗೆ ಸದೃಢ ಪ್ರಯತ್ನ ಮತ್ತು ಕಠಿಣ ಪರಿಶ್ರಮ ಹಾಕಲಿದ್ದೀರಿ. ಎಲ್ಲವನ್ನೂ ಪರಿಗಣಿಸಿದರೆ ಈ ದಿನ ಉತ್ಪಾದಕ ಮತ್ತು ಮೌಲಿಕ ಎನಿಸುತ್ತದೆ.

ಧನು : ನಿಮ್ಮ ಕೋಪ ಬೆಂಕಿಯುಂಡೆಯಷ್ಟು ಬಿಸಿಯಾಗಿದೆ. ಕೋಪ ವಿಶ್ವವನ್ನು ನಾಶ ಮಾಡುತ್ತದೆ ಎಂದು ಜನರು ಹೇಳುತ್ತಾರೆ. ನೀವು ನಿಮ್ಮ ಆಕ್ರಮಣಕಾರಿ ವರ್ತನೆಯಿಂದ ನಿಮ್ಮದೇ ಕಾಲಿಗೆ ಏಟು ಮಾಡಿಕೊಳ್ಳುತ್ತೀರಿ. ಶಾಂತವಾಗಿರಿ ಮತ್ತು ಕೆಲಸ ಮಾಡುವ ಮುನ್ನ ಚಿಂತಿಸಿ. ನೀವು ಹಣಕಾಸಿನ ಕೊರತೆ ಎದುರಿಸುವ ಸಾಧ್ಯತೆಗಳಿವೆ. ಅದನ್ನು ಎಚ್ಚರಿಕೆಯಿಂದ ನಿಭಾಯಿಸಿ.

ಮಕರ :ಇಂದು ನೀವು ನಿಮ್ಮ ಗುರಿಗಳನ್ನು ಸಾಧಿಸಲು ಸಮಂಜಸ ಮತ್ತು ಅಸಮಂಜಸ ದಾರಿಗಳಲ್ಲಿ ಪವರ್ ಗೇಮ್ ಆಡುತ್ತೀರಿ. ಬೌದ್ಧಿಕ ಪ್ರಗತಿ ಅಸಾಧಾರಣವಾಗಿದೆ. ಹಾಗೆಯೇ ನಿಮ್ಮ ಸ್ವಭಾವವೂ. ಅಂತಹ ಹಂತದ ಸಂಪೂರ್ಣ ಬಳಕೆ ಮಾಡಿಕೊಳ್ಳಿ.

ಕುಂಭ :ಅನಿರೀಕ್ಷಿತ ಮತ್ತು ಆಶ್ಚರ್ಯಕರ ವಿಷಯಗಳು ನಿಮ್ಮನ್ನು ಇಂದು ಚಕಿತಗೊಳಿಸುತ್ತವೆ. ಸಾಧನೆ, ಹಣ, ಪ್ರೀತಿ ಯಾವುದರ ಕುರಿತು ನೀವು ದಿಢೀರ್ ಎಂದು ಬಯಕೆ ಕಳೆದುಕೊಳ್ಳುತ್ತೀರೋ ಅದು ನಿಮ್ಮ ದಾರಿಯಲ್ಲಿ ದಿಢೀರ್ ಬರುತ್ತದೆ. ದಿನದ ಅಂತ್ಯಕ್ಕೆ, ನೀವು ಓದು, ಸಂಶೋಧನೆ, ಚರ್ಚೆ ಅಥವಾ ಅಂತಹ ಚಟುವಟಿಕೆಗಳಲ್ಲಿ ಕಾಲ ಕಳೆಯುತ್ತೀರಿ.

ಮೀನ :ಈ ದಿನ ನೀವು ಮನೆಯಲ್ಲಿ ಹಾಗೂ ಕೆಲಸದ ಸ್ಥಳದಲ್ಲಿ ವಿಷಯಗಳನ್ನು ನಿರ್ವಹಿಸುತ್ತಿರುತ್ತೀರಿ. ಮನೆ ನವೀಕರಣ ಯೋಜನೆಗಳಲ್ಲಿ ತೊಡಗಿಕೊಳ್ಳುವುದನ್ನು ನಿರೀಕ್ಷಿಸಿ. ಅಲ್ಲಿ ವೆಚ್ಚಗಳು ಏರುತ್ತವೆ. ಕಠಿಣ ದಿನದ ಕೆಲಸದ ನಂತರ ಪ್ರಶಂಸೆ ಮತ್ತು ಕೃತಜ್ಞತೆ ನಿಮ್ಮ ದಾರಿಯಲ್ಲಿ ಬರುತ್ತವೆ.

ABOUT THE AUTHOR

...view details