ಪ್ರಗತಿ ಶೆಟ್ಟಿ - ರಿಷಬ್ ಶೆಟ್ಟಿ. ಸತಿ ಪತಿಗಳಾಗಿ 8 ವರ್ಷ ಪೂರ್ಣ. ಪ್ರೇಮಪಕ್ಷಿಗಳ ದಾಂಪತ್ಯಕ್ಕೆ 8 ವರ್ಷಗಳ ಸಂಭ್ರಮ.. ಶುಕ್ರವಾರ ರಾತ್ರಿ (9-10-24) ವಿಶೇಷ ವಿಡಿಯೋ ಹಂಚಿಕೊಂಡ ಡಿವೈನ್ ಸ್ಟಾರ್.. ''ದಾಂಪತ್ಯ ಎಂಬ ನಮ್ಮ ಈ ಪಯಣಕ್ಕೆ ಇಂದಿಗೆ 8 ವರ್ಷದ ಹರುಷ'' ಎಂದು ಬರೆದುಕೊಂಡ ಕಾಂತಾರ ನಟ.. ಸದ್ಯ ಕನ್ನಡ ಚಿತ್ರರಂಗದಲ್ಲಿ ಮಾದರಿ ದಂಪತಿಯಾಗಿ ಗುರುತಿಸಿಕೊಂಡಿದ್ದಾರೆ.. ಮೇಡ್ ಫಾರ್ ಈಚ್ ಅದರ್ ಅಂತಾರೆ ಫ್ಯಾನ್ಸ್.. ಇವರ ಪ್ರೇಮಕಥೆ ಕೂಡ ಬಹಳ ಸುಂದರ.. ರಿಷಬ್ ಪ್ರಗತಿ ಮೊದಲು ಪರಿಚಯವಾಗಿದ್ದು ಚಿತ್ರಮಂದಿರವೊಂದರಲ್ಲಿ.. ಚಿತ್ರರಂಗದಲ್ಲಿ ಆರಂಭದ ದಿನಗಳಾದ ಹಿನ್ನೆಲೆ ಈಗಿರುವ ಜನಪ್ರಿಯತೆ ರಿಷಬ್ ಅವರಿಗಿರಲಿಲ್ಲ.. ಥಿಯೇಟರ್ಗೆ ಆಗಮಿಸಿದ ಹೆಚ್ಚಿನವರು ನಾಯಕ. ನಾಯಕಿಯರ ಸುತ್ತ ಜಮಾಯಿಸಿದ್ದರು.. ಆದ್ರೆ ಪ್ರಗತಿ ಶೆಟ್ಟಿ. ರಿಷಬ್ ಶೆಟ್ಟಿ ಅವರನ್ನು ಗುರುತಿಸಿ ನಿಮ್ಮ ಅಭಿಮಾನಿ ಎಂದು ಪರಿಚಯಿಸಿಕೊಂಡರು.. ಹೀಗೆ ಇಬ್ಬರ ಸ್ನೇಹ ಶುರುವಾಯಿತು.. ಸ್ನೇಹ ಪ್ರೀತಿಯಾಗಿ 8 ವರ್ಷಗಳ ಹಿಂದೆ ವೈವಾಹಿಕ ಜೀವನ ಪ್ರಾರಂಭಿಸಿದರು.. ಸ್ಟಾರ್ ಕಪಲ್ಗೆ ಇಬ್ಬರು ಮುದ್ದಾದ ಮಕ್ಕಳಿದ್ದಾರೆ.. ಏರಿಳಿತಗಳ ನಡುವೆ ಪತಿ ರಿಷಬ್ಗೆ ಸಾಥ್ ಕೊಟ್ಟ ಪ್ರಗತಿ.. ನಿಜವಾದ ಪ್ರೀತಿ ಸಾಬೀತು ಪಡಿಸಿದ ಜೋಡಿಯಿದು.. ಇವರ ಪ್ರೇಮಕಥೆ. ದಾಂಪತ್ಯ ಜೀವನ ಅನೇಕ ನವ ಜೋಡಿಗಳಿಗೆ ಸ್ಫೂರ್ತಿ.. ಸದ್ಯ ಸೊಷಿಯಲ್ ಮೀಡಿಯಾಗಳಲ್ಲಿ ಜೋಡಿಯ ಫೋಟೋ-ವಿಡಿಯೋಗಳು ಸದ್ದು ಮಾಡುತ್ತಿವೆ.. ಅಭಿಮಾನಿಗಳು ಶುಭ ಕೋರುತ್ತಿದ್ದಾರೆ.. ನಟನ ಮುಂದಿನ ಚಿತ್ರಗಳ ಮೇಲಿದೆ ಬೆಟ್ಟದಷ್ಟು ನಿರೀಕ್ಷೆ.. ರಿಷಬ್ ಪ್ರಗತಿ.. ಪ್ರಗತಿ ರಿಷಬ್.