ಕರ್ನಾಟಕ

karnataka

ETV Bharat / photos

ಐಸ್​ಲ್ಯಾಂಡ್​ನಲ್ಲಿ ಜ್ವಾಲಾಮುಖಿ ಸ್ಫೋಟ: ಭೀಕರ ಘಟನೆಯ ಚಿತ್ರಣ ಹೀಗಿದೆ - ಐಸ್​ಲ್ಯಾಂಡ್​ ವಾಲ್ಕೆನೋ

Iceland Volcano 2024: ಐಸ್ಲ್ಯಾಂಡ್​ನ ಗ್ರಿಂಡ್ವಾಕ್​ ಪ್ರದೇಶದ ಬಳಿ ಜ್ವಾಲಾಮುಖಿ ಸ್ಫೋಟಗೊಂಡಿದೆ. ಲಾವಾ ಹತ್ತಿರದ ಪ್ರದೇಶಗಳಿಗೆ ಹರಡುತ್ತದೆ. ಮುನ್ನೆಚ್ಚರಿಕೆ ವಹಿಸಿ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ಭೀಕರ ಘಟನೆಯ ಫೋಟೋಗಳಿಲ್ಲಿವೆ ನೋಡಿ.

By ETV Bharat Karnataka Team

Published : Feb 9, 2024, 2:14 PM IST

ಐಸ್​ಲ್ಯಾಂಡ್​ನಲ್ಲಿ ಜ್ವಾಲಾಮುಖಿ ಸ್ಫೋಟ.
ಐಸ್‌ಲ್ಯಾಂಡ್‌ನ ನೈಋತ್ಯ ಪ್ರದೇಶದಲ್ಲಿ ಮತ್ತೊಮ್ಮೆ ಜ್ವಾಲಾಮುಖಿ ಸ್ಫೋಟಗೊಂಡಿದೆ.
ಗ್ರಿಂಡ್ವಾಕ್ ಉತ್ತರಕ್ಕೆ ಜ್ವಾಲಾಮುಖಿ ಸ್ಫೋಟಗೊಂಡಿದ್ದು, ನಿಂಗಿ ಪ್ರದೇಶಗಳಿಗೆ ಭಾರಿ ಪ್ರಮಾಣದ ಲಾವಾ ಹರಿಯುತ್ತಿದೆ.
ಸ್ಫೋಟದಲ್ಲಿ ಯಾವುದೇ ಪ್ರಾಣಹಾನಿ ಆಗಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕಳೆದ ಡಿಸೆಂಬರ್‌ನಿಂದ ಒಟ್ಟು ಮೂರು ಬಾರಿ ಜ್ವಾಲಾಮುಖಿ ಸ್ಫೋಟಗೊಂಡಿದೆ.
ಗುರುವಾರ ಬೆಳಗ್ಗೆ ಆರು ಗಂಟೆಗೆ ಈ ಜ್ವಾಲಾಮುಖಿ ಸ್ಫೋಟಗೊಂಡಿದ್ದು, ಸುಮಾರು ಮೂರು ಕಿ.ಮೀ.ವರೆಗೆ ಹರಡಿದೆ.
ಗುರುವಾರ ಮಧ್ಯಾಹ್ನದ ವೇಳೆಗೆ ಸ್ಫೋಟದ ಪ್ರಭಾವ ತಗ್ಗಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಉಕ್ಕಿ ಹರಿದ ಲಾವಾದಿಂದ ಹಲವೆಡೆ ಬ್ಲಾಕ್​ ಆಗಿದೆ.
ಪರಿಣಾಮ, ನೀರು ಪೂರೈಕೆ ಸ್ಥಗಿತಗೊಂಡಿದೆ.
ಜನರು ವಿದ್ಯುತ್ ಮತ್ತು ಬಿಸಿನೀರನ್ನು ಮಿತವಾಗಿ ಬಳಸುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.
ತೊಂದರೆಗೊಳಗಾದವರಿಗೆ ಪರಿಹಾರ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
ಜ್ವಾಲಾಮುಖಿಯಿಂದ ಹಾಳಾಗಿರುವ ಅಂಡರ್​​​ಗ್ರೌಂಡ್​ ವಾಟರ್​​ ಪೈಪ್ ಲೈನ್​ಗಳನ್ನು ಸರಿಪಡಿಸಲಾಗುತ್ತಿದೆ.
ಬಿಸಿನೀರಿನ ಕೊರತೆಯಿಂದಾಗಿ ಶಾಲೆಗಳು, ಜಿಮ್‌ಗಳು ಮತ್ತು ಈಜುಕೊಳಗಳನ್ನು ಮುಚ್ಚಲಾಗಿದೆ.
ಮುನ್ನೆಚ್ಚರಿಕೆ ಕ್ರಮವಾಗಿ, 3,800 ನಾಗರಿಕರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.
ಕಳೆದ ವರ್ಷ ಡಿಸೆಂಬರ್ 18 ರಂದು ಜ್ವಾಲಾಮುಖಿ ಸ್ಫೋಟಗೊಳ್ಳುವ ಮೊದಲು ಜನರನ್ನು ಸ್ಥಳಾಂತರಿಸಲಾಗಿತ್ತು.
ಐಸ್ಲ್ಯಾಂಡ್​​ನಲ್ಲಿ ಜ್ವಾಲಾಮುಖಿ ಸ್ಫೋಟ
ಐಸ್ಲ್ಯಾಂಡ್​​ನಲ್ಲಿ ಜ್ವಾಲಾಮುಖಿ ಸ್ಫೋಟ
ಐಸ್ಲ್ಯಾಂಡ್​​ನಲ್ಲಿ ಜ್ವಾಲಾಮುಖಿ ಸ್ಫೋಟ
ಐಸ್ಲ್ಯಾಂಡ್​​ನಲ್ಲಿ ಜ್ವಾಲಾಮುಖಿ ಸ್ಫೋಟ
ಐಸ್ಲ್ಯಾಂಡ್​​ನಲ್ಲಿ ಜ್ವಾಲಾಮುಖಿ ಸ್ಫೋಟ

ABOUT THE AUTHOR

...view details