ಕರ್ನಾಟಕ

karnataka

ETV Bharat / photos

ಬೆಂಗಳೂರಲ್ಲಿ ಚಾಲಕ ರಹಿತ ಮೆಟ್ರೋ: ಹಳಿಗಳ ಮೇಲೆ ಬೋಗಿಗಳ ಜೋಡಣೆ - Photo - Bangalore Namma metro

ಬೆಂಗಳೂರು: ನಮ್ಮ ಮೆಟ್ರೋದ ಚಾಲಕ ರಹಿತ ರೈಲಿನ ಬೋಗಿಗಳು ಹೆಬ್ಬಗೋಡಿಗೆ ಬಂದು ತಲುಪಿವೆ. ಹೊಸದಾಗಿ ಬಂದ ಆರು ಕೋಚ್‌ಗಳನ್ನು ಅನ್‌ಲೋಡ್ ಮಾಡಿ ಹಳಿಗಳ ಮೇಲೆ ಜೋಡಿಸಲಾಗಿದೆ. ಮೂರು ದಿನಗಳ ಹಿಂದೆ ನಮ್ಮ ಮೆಟ್ರೋದ ಪ್ರೊಟೊ ಟೈಪ್​ಗಳು ಬೆಂಗಳೂರಿಗೆ ಆಗಮಿಸಿದ್ದು, ಲಾರಿಗಳಿಂದ ಅನ್‌ಲೋಡ್ ಮಾಡಿ ಹಳಿಗಳ ಮೇಲೆ ಜೋಡಿಸಲಾಗಿದೆ. ಎಲೆಕ್ಟ್ರಾನಿಕ್ ಸಿಟಿಯ ಮೆಟ್ರೋ ಮಾರ್ಗದಲ್ಲಿ ಚಾಲಕ ರಹಿತ ಮೆಟ್ರೋದ ಪ್ರಯೋಗಾರ್ಥ ಪರೀಕ್ಷೆ ಮಾ.1 ರಂದು ನಡೆಯಲಿದೆ.

By ETV Bharat Karnataka Team

Published : Feb 18, 2024, 7:07 AM IST

ನಮ್ಮ ಮೆಟ್ರೋದ ಚಾಲಕರಹಿತ ರೈಲಿನ ಬೋಗಿಗಳು ಇತ್ತೀಚೆಗೆ ಹೆಬ್ಬಗೋಡಿಗೆ ಬಂದು ತಲುಪಿವೆ. ಹೊಸದಾಗಿ ಬಂದ ಆರು ಕೋಚ್‌ಗಳನ್ನು ಅನ್‌ಲೋಡ್ ಮಾಡಿ ಹಳಿಗಳ ಮೇಲೆ ಜೋಡಿಸಲಾಗಿದೆ.
ಎಲೆಕ್ಟ್ರಾನಿಕ್ ಸಿಟಿಯ ಮೆಟ್ರೋ ಮಾರ್ಗದಲ್ಲಿ ಚಾಲಕ ರಹಿತ ಮೆಟ್ರೋದ ಪ್ರಯೋಗಾರ್ಥ ಪರೀಕ್ಷೆ ಮಾ.1 ರಂದು ನಡೆಯಲಿದೆ.
ಮೆಟ್ರೋ ಕೋಚ್‌ಗಳು ಚಾಲಕ ರಹಿತವಾಗಿರುವುದರಿಂದ ಪ್ರಾಯೋಗಿಕ ಸಂಚಾರಕ್ಕೆ ಸಹಕಾರಿಯಾಗುವಂತೆ ಮಾಹಿತಿ ನೀಡಲು ಬೋಗಿ ನಿರ್ಮಿಸಿದ ಚೀನಾ ಕಂಪನಿಯ ಅಧಿಕಾರಿಗಳು ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಆ ಬಳಿಕ ಪ್ರಾಯೋಗಿಕ ಸಂಚಾರ ನಡೆಸಲಾಗುತ್ತದೆ.
ನಾಲ್ಕು ತಿಂಗಳ ಕಾಲ 37 ಪರೀಕ್ಷೆಗಳು ನಡೆಯಲಿವೆ. ಒಟ್ಟು 45 ದಿನಗಳವರೆಗೆ ಸಿಗ್ನಲಿಂಗ್ ಪರೀಕ್ಷೆಗಳು ನಡೆಯಲಿವೆ. ಚಲಿಸುವ ಮೊದಲು ಕೆಲವೊಂದು ಪರೀಕ್ಷೆಗಳನ್ನು ನಡೆಸಬೇಕಿದ್ದು, ಆ ಬಳಿಕ ಟ್ರ್ಯಾಕ್​ನಲ್ಲಿ 15 ಪರೀಕ್ಷೆಗಳನ್ನು ಮಾಡಬೇಕಿದೆ.
ನಂತರ ರೈಲ್ವೆ ಸುರಕ್ಷತೆಯ ಮುಖ್ಯ ಆಯುಕ್ತರು, ಕಮಿಷನರ್ ಆಫ್ ಮೆಟ್ರೋ ರೈಲ್ವೆ ಸುರಕ್ಷತೆ ಮತ್ತು ರೈಲ್ವೆ ಮಂಡಳಿಯಿಂದ ಅನುಮೋದನೆಯ ಅಗತ್ಯ..
ನಮ್ಮ ಮೆಟ್ರೋ ಅಧಿಕಾರಿಗಳಿಂದ ಮಾಹಿತಿ..
ಬೆಂಗಳೂರು ಚಾಲಕರಹಿತ ಮೆಟ್ರೋ...
ಬೆಂಗಳೂರು ಚಾಲಕರಹಿತ ಮೆಟ್ರೋ...
ಬೆಂಗಳೂರು ಚಾಲಕರಹಿತ ಮೆಟ್ರೋ...

ABOUT THE AUTHOR

...view details