ಅಸ್ಸಾಂನಲ್ಲಿ ಕೋಣ ಮತ್ತು ಪಕ್ಷಿಗಳ ಕಾಳಗ. ಕೋಳಿ ಕಾಳಗದಷ್ಟೇ ಪ್ರಸಿದ್ಧ ಈ ಸ್ಪರ್ಧೆ. ಸಂಕ್ರಾಂತಿ ಸಂದರ್ಭ ನಡೆಸುವ ಆಚರಣೆ. ಸ್ಥಳೀಯ ಸಂಸ್ಕೃತಿ ಪ್ರಕಾರ ಎರಡು ಕೋಣಗಳನ್ನು ಕಣಕ್ಕೆ ಇಳಿಸಿ ಪೈಪೋಟಿಗೆ ಬಿಡುತ್ತಾರೆ. ಪಕ್ಷಿಗಳನ್ನು ಅದೇ ರೀತಿ ಅಖಾಡಕ್ಕಿಳಿಸುತ್ತಾರೆ. 9 ವರ್ಷಗಳ ನಂತರ ನಡೆಯಿತು ಕಾಳಗ. ವನ್ಯಜೀವಿ ಹಕ್ಕುಗಳ ಕಾರ್ಯಕರ್ತರ ವಿರೋಧದ ಹೊರತಾಗಿಯೂ. ಈ ಕಾಳಗ ನಡೆಯುತ್ತದೆ. ಗುವಾಹಟಿಯ ಹೊರವಲಯದಲ್ಲಿರುವ ದೇವಾಲಯದ ಆವರಣದಲ್ಲಿ ನಡೆದ ಕಾಳಗ. ಮೂವರು ತೀರ್ಪುಗಾರರಿಂದ ವಿಜೇತ ಪಾಣಿ-ಪಕ್ಷಿಗಳ ಹೆಸರು ಘೋಷಣೆಯಾಗಿ ಮಾಲೀಕರಿಗೆ 3.000 ರೂ. ಬಹುಮಾನ ನೀಡಲಾಯಿತು. 2014ರಲ್ಲಿ ಸುಪ್ರೀಂ ಕೋರ್ಟ್ ಇಂತಹ ಕಾಳಗಗಳನ್ನು ನಿಷೇಧಿಸಿತ್ತು. ಆದರೆ ಕಳೆದ ವರ್ಷ ಕೆಲ ರಾಜ್ಯ ಸರ್ಕಾರಗಳು ಈ ಪದ್ಧತಿಯನ್ನು ಪುನರುಜ್ಜೀವನಗೊಳಿಸಲು ಹೊಸ ಕಾನೂನುಗಳಿಗೆ ಸಹಿ ಹಾಕಿದವು. ಈ ವರ್ಷ ರೇಸ್ ನಡೆಯಿತು. 18ನೇ ಶತಮಾನದಿಂದ ಅಸ್ಸಾಂನಲ್ಲಿ ಈ ಸ್ಪರ್ಧೆ ನಡೆಯುತ್ತಿದೆ. ಹಬ್ಬ ಹರಿದಿನಕ್ಕೂ ಮುನ್ನ ಸ್ಥಳೀಯರು ಕಾಡಿನ ಪಕ್ಷಿಗಳನ್ನು ಹಿಡಿದು ತರಬೇತಿ ನೀಡುತ್ತಾರೆ. ಸ್ಪರ್ಧೆ ಮುಗಿದ ನಂತರ ಅವುಗಳನ್ನು ಸುರಕ್ಷಿತವಾಗಿ ಕಾಡುಗಳಿಗೆ ಬಿಡುತ್ತಾರೆ. ಸದ್ಯದ ಕಾನೂನಿನ ಪ್ರಕಾರ. ಪಕ್ಷಿಗಳಿಗೆ ಸೂಕ್ತ ಆಹಾರದ ಜೊತೆಗೆ ನೀರು ಒದಗಿಸಬೇಕು. ಬಳಿಕ ಸುರಕ್ಷಿತವಾಗಿ ಕಾಡಿಗೆ ಬಿಡಬೇಕು. ಸಂಘಟಕರು ನಿಯಮಗಳನ್ನು ಅನುಸರಿಸಲು ವಿಫಲವಾದರೆ ಸರ್ಕಾರ ಐದು ವರ್ಷಗಳ ಕಾಲ ಈ ಕಾಳಗವನ್ನು ನಿಷೇಧಿಸುತ್ತದೆ. ರೇಸ್ ನಡೆಯುವ ಸ್ಥಳದಲ್ಲಿ ಪಶುವೈದ್ಯಕೀಯ ತಂಡಗಳು ಉಪಸ್ಥಿತರಿರಬೇಕು. ಪ್ರಾಣಿ - ಪಕ್ಷಿಗಳಿಗೆ ತೊಂದರೆಯಾದರೆ ತಕ್ಷಣವೇ ಚಿಕಿತ್ಸೆ ಒದಗಿಸಬೇಕು. ಕೋಣ ಮತ್ತು ಪಕ್ಷಿಗಳ ಕಾಳಗಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತ. ರಾಜ್ಯದಲ್ಲಿ ಕೋಣ ಮತ್ತು ಪಕ್ಷಿಗಳ ಸ್ಪರ್ಧೆಯನ್ನು ತಕ್ಷಣವೇ ನಿಲ್ಲಿಸಬೇಕೆಂದು ಪ್ರಾಣಿ ಹಕ್ಕುಗಳ ಸಂಘಟನೆಗಳು ರಾಜ್ಯ ಸರ್ಕಾರವನ್ನು ಕೋರಿವೆ. ಸ್ಪರ್ಧೆ ವೀಕ್ಷಿಸಲು ಬಂದ ಜನಸಾಗರ