ಅಬುಧಾಬಿ (ಯುಎಇ): ಮಧ್ಯ ಆಫ್ರಿಕಾದ ಚಾಡ್ ದೇಶದ ಆದಿವಾಸಿ ಮಹಿಳಾ ಮತ್ತು ಪೀಪಲ್ಸ್ ಅಸೋಸಿಯೇಶನ್ನ ಅಧ್ಯಕ್ಷೆ ಹಿಂದು ಔಮರೌ ಇಬ್ರಾಹಿಂ ಅವರಿಗೆ 'ಜಾಯೆದ್' ಎರಡನೇ ಪದಕ ಪ್ರಶಸ್ತಿ ಒಲಿದು ಬಂದಿದೆ.
ಯುಎಇ ಅಧ್ಯಕ್ಷ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರು ಹಿಂದು ಔಮರೌ ಇಬ್ರಾಹಿಂ ಅವರಿಗೆ ಈ ಪ್ರಶಸ್ತಿ ಘೋಷಿಸಿದ್ದರು.
ಸಮ್ಮೇಳನದ ಯಶಸ್ಸಿಗಾಗಿ ಪ್ರಶಸ್ತಿ:ಕಳೆದ ವರ್ಷ ಯುಎಇಯಲ್ಲಿ ಆಯೋಜಿಸಲಾಗಿದ್ದ ಹವಾಮಾನ ಬದಲಾವಣೆ ಮೇಲಿನ UN ಫ್ರೇಮ್‌ವರ್ಕ್ ಸಮಾವೇಶಕ್ಕಾಗಿ COP28 ಸಮ್ಮೇಳನದ ಯಶಸ್ಸಿಗೆ ಅವರ ಪ್ರಮುಖ ಕೊಡುಗೆಗಳನ್ನು ಗುರುತಿಸಿ ಪದಕ ನೀಡಲಾಗಿದೆ. ರಿಪಬ್ಲಿಕ್ ಆಫ್ ಚಾಡ್‌ನ ಯುಎಇ ರಾಯಭಾರಿ ರಶೀದ್ ಸಯೀದ್ ಅಲ್ ಶಮ್ಸಿ ಅವರು ಔಮರೌ ಇಬ್ರಾಹಿಂ ಅವರಿಗೆ ಪದಕ ನೀಡಿ ಗೌರವಿಸಿದರು. ಅವರು ಈ ಪ್ರಶಸ್ತಿಗಾಗಿ ಅಧ್ಯಕ್ಷ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರಿಗೆ ಕೃತಜ್ಞತೆ ಸಲ್ಲಿಸಿದರು.
ವಿಶ್ವಸಂಸ್ಥೆಯ ಹವಾಮಾನ ಬದಲಾವಣೆ ಸಮ್ಮೇಳನದಲ್ಲಿ ಮುಕ್ತಾಯಗೊಂಡ ಐತಿಹಾಸಿಕ ಯುಎಇ ಒಮ್ಮತವನ್ನು ಔಮರೌ ಇಬ್ರಾಹಿಂ ಶ್ಲಾಘಿಸಿದರು. ಇದು ಜಾಗತಿಕ ಹವಾಮಾನ ಕ್ರಮಕ್ಕೆ ಮತ್ತು ಸುಸ್ಥಿರತೆಗೆ ನಿರ್ಣಾಯಕ ಉಲ್ಲೇಖವಾಗಿದೆ ಎಂದು ಹೇಳಿದ್ದಾರೆ. ಬಳಿಕ ಅಲ್ ಶಮ್ಸಿ ಔಮರೌ ಇಬ್ರಾಹಿಂ ಅವರನ್ನು ಅಭಿನಂದಿಸಿದರು. ಹಾಗೇ COP28(ವಿಶ್ವಸಂಸ್ಥೆಯ ಹವಾಮಾನ ಬದಲಾವಣೆ ಸಮ್ಮೇಳನ)ನಲ್ಲಿ ಚಾಡ್ ದೇಶದ ಭಾಗವಹಿಸುವಿಕೆಯನ್ನು ಶ್ಲಾಘಿಸಿದರು.
ಏನಿದು ಜಾಯೆದ್ ಪ್ರಶಸ್ತಿ?: ಜಾಯೆದ್ ಎರಡನೇ ಪದಕವು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಸ್ಥಾಪಿಸಿದ ಪ್ರಶಸ್ತಿಯಾಗಿದೆ. ಇದನ್ನು ಹವಾಮಾನ ಬದಲಾವಣೆಯ ಮೇಲಿನ ವಿಶ್ವಸಂಸ್ಥೆಯ ಚೌಕಟ್ಟಿನ ಸಮಾವೇಶದ ಯಶಸ್ಸಿಗೆ ಗಮನಾರ್ಹ ಕೊಡುಗೆ ನೀಡಿವ ವ್ಯಕ್ತಿಗಳಿಗೆ ನೀಡಲಾಗುತ್ತದೆ. ಈ ಮೂಲಕ ಅವರ ಕೊಡುಗೆಗಳನ್ನು ಗುರುತಿಸಲಾಗುತ್ತದೆ.
ಇದನ್ನೂ ಓದಿ:ಸಿರಿಯಾದಿಂದ ಹಿಜ್ಬುಲ್ಲಾಗೆ ಶಸ್ತ್ರಾಸ್ತ್ರಗಳ ವರ್ಗಾವಣೆ ಪ್ರದೇಶದ ಮೇಲೆ ಇಸ್ರೇಲ್ ವಾಯುಪಡೆ ದಾಳಿ