ಕರ್ನಾಟಕ

karnataka

ETV Bharat / international

ಸಿರಿಯಾ ರಾಜಧಾನಿ ಮೇಲೆ ಇಸ್ರೇಲ್​ ದಾಳಿ; ಇಬ್ಬರು ಸಾವು, ಮೂವರಿಗೆ ಗಾಯ - ISRAELI AIRSTRIKE IN SYRIAN CAPITAL

ಇಸ್ರೇಲ್​ನ ಯಾವುದೇ ಕ್ಷಿಪಣಿ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಇರಾನ್ ಎಚ್ಚರಿಸಿದೆ. ಮತ್ತೊಂದು ಕಡೆ ಸಿರಿಯಾ ಮೇಲೆ ಇಸ್ರೇಲ್​ ಕ್ಷಿಪಣಿ ದಾಳಿ ನಡೆಸಿದೆ.

two-killed-three-injured-in-israeli-airstrike-in-syrian-capita
ಡಮಾಸ್ಕಸ್​ ಮೇಲೆ ಇಸ್ರೇಲ್​ ದಾಳಿ (ಸಂಗ್ರಹ ಚಿತ್ರ)

By ETV Bharat Karnataka Team

Published : Oct 22, 2024, 1:44 PM IST

ಡಮಾಸ್ಕಸ್​: ಸಿರಿಯಾದ ರಾಜಧಾನಿ ಡಮಾಸ್ಕಸ್​ನಲ್ಲಿ ನಾಗರಿಕರನ್ನು ಗುರಿಯಾಗಿಸಿಕೊಂಡು ಇಸ್ರೇಲ್​ ನಡೆಸಿದ ಕ್ಷಿಪಣಿ ದಾಳಿಯಲ್ಲಿ ಇಬ್ಬರು ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿದ್ದಾರೆ ಎಂದು ಸಿರಿಯಾ ರಕ್ಷಣಾ ಸಚಿವಾಲಯ ತಿಳಿಸಿದೆ.

ಮಜ್ಜೆಯ ಪೂರ್ವ ಭಾಗದಲ್ಲಿನ ಗೋಲ್ಡನ್​ ಮಜ್ಜೆಯ ಬಳಿಕ ವಾಹನ ಗುರಿಯಾಗಿಸಿ ಈ ದಾಳಿ ನಡೆಸಲಾಗಿದ್ದು, ಇದರಿಂದ ಸುತ್ತಮುತ್ತಲಿನ ಆಸ್ತಿಗಳಿಗೂ ಹಾನಿಯಾಗಿದೆ ಎಂದು ತಿಳಿಸಿದ್ದಾರೆ. ಇದಕ್ಕೆ ಮುನ್ನಾದಿನ ಸಿರಿಯಾ ಮೇಲೆ ನಡೆಸಿದ ಈ ಆಕ್ರಮಣಕಾರಿ ದಾಳಿಯನ್ನು ಇಸ್ರೇಲ್​ ನಡೆಸಿದೆ. ಆದರೆ, ಇಸ್ರೇಲ್​ ಮಾತ್ರ ಈ ದಾಳಿಯ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ ಎಂದು ಕ್ಸಿನುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಇತ್ತೀಚಿಗೆ ಸಿರಿಯಾ ಮೇಲೆ ಇಸ್ರೇಲ್​ ಮಿಲಿಟರಿ ದಾಳಿ ಹೆಚ್ಚಿದೆ. ಈ ದಾಳಿ ಕುರಿತು ಮಾತನಾಡಿದ ಇಸ್ರೇಲ್​, ಇರಾನ್​ ಬೆಂಬಲಿತ ಉಗ್ರರ ಪಡೆಗಳನ್ನು ಗುರಿಯಾಗಿಸಿಕೊಂಡು ಇಂತಹ ದಾಳಿಗಳನ್ನು ಮಾಡಲಾಗುತ್ತಿದೆ ಎಂದು ತಿಳಿದು ಬಂದಿದೆ.

ಶೀಘ್ರದಲ್ಲೇ ದಾಳಿಗೆ ಪ್ರತ್ಯುತ್ತರ:ಇರಾನ್ ವಿರುದ್ಧ ಯೋಜಿತ ಪ್ರತಿದಾಳಿಯನ್ನು "ಅತಿ ಶೀಘ್ರದಲ್ಲಿ" ನಡೆಸಲಾಗುವುದು ಎಂದು ಇಸ್ರೇಲಿ ಕ್ಯಾಬಿನೆಟ್ ಮಂತ್ರಿಗಳಿಗೆ ತಿಳಿಸಲಾಗಿದೆ ಎಂದು ಅಲ್ಲಿನ ರಾಜ್ಯ ಮಾಧ್ಯಮ ವರದಿ ಮಾಡಿದೆ.

ಅಕ್ಟೋಬರ್ 1 ರಂದು ಇರಾನ್ ಇಸ್ರೇಲ್ ಮೇಲೆ ಸುಮಾರು 180 ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಉಡಾಯಿಸಿತ್ತು. ಅಷ್ಟೇ ಅಲ್ಲ ಇಸ್ರೇಲ್​ ಈ ದಾಳಿಯನ್ನು ಸಮರ್ಥವಾಗಿ ತಡೆದಿತ್ತು. ಟೆಹ್ರಾನ್‌ನಲ್ಲಿ ಹಮಾಸ್ ರಾಜಕೀಯ ನಾಯಕ ಇಸ್ಮಾಯಿಲ್ ಹನಿಯೆಹ್ ಮತ್ತು ಬೈರುತ್‌ನಲ್ಲಿ ಹಿಜ್ಬುಲ್ಲಾ ನಾಯಕ ಹಸನ್ ನಸ್ರಲ್ಲಾ ಅವರ ಹತ್ಯೆಗಳಿಗೆ ಪ್ರತಿಕ್ರಿಯೆಯಾಗಿ ತನ್ನ ದೇಶವು ಪ್ರತೀಕಾರ ತೀರಿಸಿಕೊಳ್ಳುತ್ತದೆ ಎಂದು ಇರಾನ್​​ ಕೂಡಾ ಪ್ರತಿಜ್ಞೆ ಮಾಡಿದೆ

ಭಾನುವಾರ ನಡೆದ ಕ್ಯಾಬಿನೆಟ್ ಸಭೆಯಲ್ಲಿ ಇರಾನ್​ ದಾಳಿಗೆ ಪ್ರತೀಕಾರವಾಗಿ "ಶೀಘ್ರದಲ್ಲೇ"ದಾಳಿ ನಡೆಸಬೇಕಾಗುತ್ತದೆ ಎಂದು ಮಂತ್ರಿಗಳಿಗೆ ತಿಳಿಸಲಾಯಿತು ಎಂದು ಇಸ್ರೇಲ್​​ ಸರ್ಕಾರಿ ಸ್ವಾಮ್ಯದ ಕಾನ್ ಟಿವಿಯನ್ನು ಉಲ್ಲೇಖಿಸಿ ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ

ಇಸ್ರೇಲ್​​ಗೆ ಅಮೆರಿಕದ ಥಾಡ್​​​​​​ ರಕ್ಷಣೆ:ಈ ನಡುವೆ ಸಂಭಾವ್ಯ ದಾಳಿಗಳನ್ನು ತಡೆಯುವ ಉದ್ದೇಶದಿಂದ ಅಮೆರಿಕ ಈಗಾಗಲೇ ಸಹಾಯಕ್ಕೆ ಧಾವಿಸಿದೆ. US ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್, ಟರ್ಮಿನಲ್ ಹೈ ಆಲ್ಟಿಟ್ಯೂಡ್ ಏರಿಯಾ ಡಿಫೆನ್ಸ್ -THAAD ರಕ್ಷಣೆಯನ್ನು ಇಸ್ರೇಲ್‌ನಲ್ಲಿ ನೀಡುವುದಾಗಿ ಘೋಷಿಸಿದ ಕೆಲವೇ ಗಂಟೆಗಳ ನಂತರ ಈ ವರದಿ ಬಂದಿದೆ, ಜೊತೆಗೆ ಸುಮಾರು 100 US ಸೈನಿಕರು ಅದನ್ನು ನಿರ್ವಹಿಸಲು ರೆಡಿಯಾಗಿದ್ದಾರೆ.

ಇರಾನ್​​ನಿಂದಲೂ ಪ್ರತಿದಾಳಿಯ ಎಚ್ಚರಿಕೆ:ಈ ನಡುವೆ ಇರಾನ್​ ಕೂಡಾ ಎಚ್ಚರಿಕೆ ನೀಡಿದೆ. ಯಾವುದೇ ಇಸ್ರೇಲ್ ಕ್ಷಿಪಣಿ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಅದು ಘೋಷಿಸಿದೆ.

ಇದನ್ನೂ ಓದಿ: ಪ್ಯಾಲೆಸ್ಟೈನ್​ ಜನರಿಗೆ 30 ಟನ್ ಔಷಧ, ಆಹಾರ ಸಾಮಗ್ರಿ ರವಾನಿಸಿದ ಭಾರತ

ABOUT THE AUTHOR

...view details