ಪಾಮ್ ಬೀಚ್(ಅಮೆರಿಕ): ಸೆಪ್ಟೆಂಬರ್ 10 ರಂದು ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಹಾಗೂ ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಒಪ್ಪಿಕೊಂಡಿದ್ದಾರೆ ಎಂದು ಅಮೆರಿಕನ್ ಬ್ರಾಡ್ಕಾಸ್ಟಿಂಗ್ ಕಂಪನಿ- ABC ಘೋಷಿಸಿದೆ. ಮೂರು ವಿವಿಧ ಮಾಧ್ಯಮಗಳೊಂದಿಗೆ ಸಂವಾದ ನಡೆಸುವುದಾಗಿ ಡೋನಾಲ್ಡ್ ಟ್ರಂಪ್ ಸಹ ತಮ್ಮ ಸುದ್ದಿಗೋಷ್ಠಿಯಲ್ಲಿ ದೃಢಪಡಿಸಿದ್ದಾರೆ.
ಗುರುವಾರ ಫ್ಲೋರಿಡಾದ ತನ್ನ ಮಾರ್-ಎ-ಲಾಗೊ ರೆಸಾರ್ಟ್ ನಲ್ಲಿ ಟ್ರಂಪ್ ಸುದ್ದಿಗಾರರೊಂದಿಗೆ ಮಾತನಾಡಿದರು. ಈ ಚರ್ಚೆಯಲ್ಲಿ ಹ್ಯಾರಿಸ್ಭಾ ಗವಹಿಸಲು ಒಪ್ಪಿಕೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ. ಇದಕ್ಕೆ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಕಮಲ ಹ್ಯಾರಿಸ್, "ಡೊನಾಲ್ಡ್ ಟ್ರಂಪ್ ಅಂತಿಮವಾಗಿ ಸೆಪ್ಟೆಂಬರ್ 10 ರಂದು ನನ್ನೊಂದಿಗೆ ಚರ್ಚಿಸಲು ಬದ್ಧರಾಗಿದ್ದಾರೆ ಎಂದು ನಾನು ಕೇಳಿದ್ದೇನೆ. ಈ ಕ್ಷಣಗಳಿಗಾಗಿ ನಾನು ಎದುರು ನೋಡುತ್ತಿದ್ದೇನೆ" ಎಂದು ಅವರು ಪ್ರತಿಕ್ರಿಯಿಸಿದ್ದಾರೆ.
ಈ ಚರ್ಚೆಗೆ ಉಪಾಧ್ಯಕ್ಷ ಹ್ಯಾರಿಸ್ ಮತ್ತು ಮಾಜಿ ಅಧ್ಯಕ್ಷ ಟ್ರಂಪ್ ಇಬ್ಬರೂ ಹಾಜರಾಗಲಿರುವುದನ್ನು ದೃಢಪಡಿಸಿದ್ದಾರೆ ಎಂದು ಎಬಿಸಿ ನೆಟ್‌ವರ್ಕ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಅಧ್ಯಕ್ಷ ಜೋ ಬೈಡನ್ ಅವರು ಚುನಾವಣೆಯಿಂದ ತಾವು ಹಿಂದೆ ಸರಿಯುತ್ತಿರುವುದಾಗಿ ಘೋಷಿಸಿದ ಬಳಿಕ ಟ್ರಂಪ್ ಈ ಹಿಂದೆ ಎಬಿಸಿ ನ್ಯೂಸ್ ಚರ್ಚೆಯಿಂದ ಹೊರಗುಳಿದಿದ್ದರು.
ಸಂವಾದ ನಡೆಸುವುದು ಬಹಳ ಮುಖ್ಯ ಎಂದು ನಾನು ಭಾವಿಸುತ್ತೇನೆ. ಹಾಗೂ ಸೆಪ್ಟೆಂಬರ್ 4 ರಂದು ನಾವು ಫಾಕ್ಸ್ ಬ್ರಾಡ್ಕಾಸ್ಟಿಂಗ್ ಕಂಪನಿಯೊಂದಿಗೆ ಚರ್ಚೆಗೆ ಒಪ್ಪಿಕೊಂಡಿದ್ದೇವೆ. ಇನ್ನು ಸೆಪ್ಟೆಂಬರ್ 10 ರಂದು ಎನ್ಬಿಸಿ ಜತೆ ಹಾಗೂ ಸೆಪ್ಟೆಂಬರ್ 25 ರಂದು ABC ಯೊಂದಿಗೂ ಸಂವಾದ ನಡೆಸಲಿದ್ದೇವೆ ಎಂದು ಟ್ರಂಪ್ ಇನ್ನೊಂದೆಡೆ ಹೇಳಿಕೊಂಡಿದ್ದಾರೆ.