ಕರ್ನಾಟಕ

karnataka

ETV Bharat / international

ಭಾರತಕ್ಕೆ 4 ಬಿಲಿಯನ್​​​ ಡಾಲರ್​​ ಮೌಲ್ಯದ ಶಸ್ತ್ರಾಸ್ತ್ರ ಮಾರಾಟಕ್ಕೆ ಅನುಮತಿ ಕೊಟ್ಟ ಬೈಡನ್​ ಸರ್ಕಾರ

ಅತ್ಯಾಧುನಿಕ ಶಸ್ತ್ರಾಸ್ತ್ರ ಹಾಗೂ ಆಧುನಿಕ ಯುದ್ಧ ವಿಮಾನಗಳ ಮಾರಾಟಕ್ಕೆ ಅಮೆರಿಕದ ಬೈಡನ್​ ಸರ್ಕಾರ ಒಪ್ಪಿಕೊಂಡಿದೆ. ಈ ಮೂಲಕ ಭಾರತ - ಅಮೆರಿಕದ ರಕ್ಷಣಾ ಸಹಕಾರ ಮತ್ತೊಂದು ಮಜಲು ತಲುಪಿದೆ.

Biden administration approves 4 billion dollars arms package sale to India
ಭಾರತಕ್ಕೆ 4 ಬಿಲಿಯನ್​​​ ಡಾಲರ್​​ ಮೌಲ್ಯದ ಶಸ್ತ್ರಾಸ್ತ್ರ ಮಾರಾಟ ಕ್ಕೆ ಅನುಮತಿ ಕೊಟ್ಟ ಬೈಡನ್​ ಸರ್ಕಾರ

By ETV Bharat Karnataka Team

Published : Feb 1, 2024, 10:53 PM IST

ವಾಷಿಂಗ್ಟನ್: ಶಸ್ತ್ರಸಜ್ಜಿತ MQ 9 B ಡ್ರೋನ್‌ಗಳನ್ನು ಒಳಗೊಂಡಿರುವ ಅತ್ಯಾಧುನಿಕ ವಿಮಾನಗಳ ಮಾರಾಟಕ್ಕೆ ಅಮೆರಿಕ ಸರ್ಕಾರ ಅಸ್ತು ಎಂದಿದೆ. ಸುಮಾರು 4 ಶತಕೋಟಿ ಡಾಲರ್ ಮೌಲ್ಯದ ಶಸ್ತ್ರಾಸ್ತ್ರಗಳನ್ನು ಭಾರತಕ್ಕೆ ಮಾರಾಟ ಮಾಡಲು ಬೈಡನ್​ ಸರ್ಕಾರ ಅನುಮತಿ ಕೊಟ್ಟಿದೆ. ಈ ಸಂಬಂಧ ಅದು ಅಮೆರಿಕದ ಕಾಂಗ್ರೆಸ್​​ಗೆ ಮಾಹಿತಿ ಕೂಡಾ ನೀಡಿದೆ.

ಅಮೆರಿಕದ ರಕ್ಷಣಾ ಇಲಾಖೆಯ ಭಾಗವಾಗಿರುವ ಡಿಫೆನ್ಸ್ ಸೆಕ್ಯುರಿಟಿ ಕೋಆಪರೇಷನ್ ಏಜೆನ್ಸಿ ಗುರುವಾರ ಈ ಸಂಬಂಧ ಪತ್ರಿಕಾ ಪ್ರಕಟಣೆ ಹೊರಡಿಸಿದೆ. ಈ ಮಾರಾಟವು ಭಾರತ - ಅಮೆರಿಕ ಸಂಬಂಧವನ್ನು ಬಲಪಡಿಸಲು ಸಹಾಯ ಮಾಡುತ್ತದೆ ಎಂದು ಹೇಳಿದೆ. "ಇಂಡೋ-ಪೆಸಿಫಿಕ್ ಮತ್ತು ದಕ್ಷಿಣ ಏಷ್ಯಾ ಪ್ರದೇಶದಲ್ಲಿ ರಾಜಕೀಯ ಸ್ಥಿರತೆ, ಶಾಂತಿ ಮತ್ತು ಆರ್ಥಿಕ ಪ್ರಗತಿಗೆ ಹೊಸ ದೆಹಲಿಯು ಪ್ರಮುಖ ಶಕ್ತಿಯಾಗಿದೆ" ಎಂದು ಅದು ತನ್ನ ಪ್ರಕಟಣೆಯಲ್ಲಿ ಬಣ್ಣಿಸಿದೆ,

" ಅಮೆರಿಕ ವಿದೇಶಾಂಗ ಇಲಾಖೆ 3.99 ಶತಕೋಟಿ ಡಾಲರ್​​ ಅಂದಾಜು ವೆಚ್ಚದಲ್ಲಿ MQ-9B ರಿಮೋಟ್ ಪೈಲಟೆಡ್ ವಿಮಾನ ಮತ್ತು ಸಂಬಂಧಿತ ಸಲಕರಣೆಗಳನ್ನು ಭಾರತ ಸರ್ಕಾರಕ್ಕೆ ಮಾರಾಟ ಮಾಡುವ ನಿರ್ಣಯಕ್ಕೆ ಅನುಮೋದನೆ ನೀಡಿದೆ. ಡಿಫೆನ್ಸ್ ಸೆಕ್ಯುರಿಟಿ ಕೋ ಆಪರೇಷನ್ ಏಜೆನ್ಸಿಯು ಕಾಂಗ್ರೆಸ್​​​​​ಗೆ ಈ ಮಾಹಿತಿ ನೀಡುವ ಅಗತ್ಯ ಪ್ರಮಾಣೀಕರಣವನ್ನೂ ಕೂಡಾ ಪಡೆದುಕೊಂಡಿದೆ ಎಂದು ರಕ್ಷಣಾ ಇಲಾಖೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಅಮೆರಿಕದ ಹೇಳಿಕೆಯ ಪ್ರಕಾರ, ಭಾರತ ಸರ್ಕಾರವು 31 MQ-9B ಸ್ಕೈ ಗಾರ್ಡಿಯನ್ ವಿಮಾನವನ್ನು ಖರೀದಿಗೆ ಅವಕಾಶ ನೀಡುವಂತೆ ಮನವಿ ಮಾಡಿತ್ತು. 161 ಎಂಬೆಡೆಡ್ ಗ್ಲೋಬಲ್ ಪೊಸಿಷನಿಂಗ್ ಮತ್ತು ಇನರ್ಷಿಯಲ್ ನ್ಯಾವಿಗೇಷನ್ ಸಿಸ್ಟಮ್ಸ್ (EGIs), 35 L3 ರಿಯೊ ಗ್ರಾಂಡೆ ಕಮ್ಯುನಿಕೇಷನ್ಸ್ ಇಂಟೆಲಿಜೆನ್ಸ್ ಸೆನ್ಸರ್ ಸೂಟ್‌ಗಳು, 170 AGM-114R ಹೆಲ್ಫೈರ್ ಕ್ಷಿಪಣಿಗಳು, 16 M36E9 ಹೆಲ್ಫೈರ್ ಕ್ಯಾಪ್ಟಿವ್ ಏರ್ ಟ್ರೈನಿಂಗ್ ಕ್ಷಿಪಣಿಗಳು (CATM), 310 GBU-39B/B ಲೇಸರ್ ಸಣ್ಣ ವ್ಯಾಸದ ಬಾಂಬ್‌ಗಳು (LSDB); ಮತ್ತು ಲೈವ್ ಫ್ಯೂಜ್‌ಗಳೊಂದಿಗೆ ಎಂಟು GBU-39B/B LSDB ಮಾರ್ಗದರ್ಶಿ ಪರೀಕ್ಷಾ ವಾಹನಗಳ (GTVಗಳ) ಖರೀದಿಗೆ ಭಾರತ ಪ್ರಸ್ತಾವನೆ ಸಲ್ಲಿಸಿತ್ತು.

ಪ್ರಸ್ತಾವಿತ ಮಾರಾಟವು ಅಮೆರಿಕ - ಭಾರತದ ಸ್ನೇಹ ಸಂಬಂಧವನ್ನು ಬಲಪಡಿಸಲು ನೆರವಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಅಷ್ಟೇ ಅಲ್ಲ 'ಪ್ರಮುಖ ರಕ್ಷಣಾ ಪಾಲುದಾರ'ನಾಗುವ ಮೂಲಕ ಅಮೆರಿಕ ವಿದೇಶಾಂಗ ನೀತಿ ಮತ್ತು ರಾಷ್ಟ್ರೀಯ ಭದ್ರತಾ ಉದ್ದೇಶಗಳನ್ನು ಬೆಂಬಲಿಸಲಿದೆ. ಹಾಗೂ ಇಂಡೋ-ಪೆಸಿಫಿಕ್ ಮತ್ತು ದಕ್ಷಿಣ ಏಷ್ಯಾ ಪ್ರದೇಶದಲ್ಲಿ ಶಾಂತಿ ಮತ್ತು ಆರ್ಥಿಕ ಪ್ರಗತಿಗೆ ಈ ಡೀಲ್​​​ ಸಹಕಾರಿ ಆಗಲಿದೆ ಎಂದು ಅಮೆರಿಕ ರಕ್ಷಣಾ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ಇದನ್ನು ಓದಿ:ಮಧ್ಯಂತರ ಬಜೆಟ್​ನಲ್ಲಿ ರಕ್ಷಣಾ ವಲಯಕ್ಕೆ ಬಂಪರ್​: ₹ 6.21 ಲಕ್ಷ ಕೋಟಿ ಅನುದಾನ ಹಂಚಿಕೆ

ABOUT THE AUTHOR

...view details