ಅಡಿಸ್ ಅಬಾಬಾ (ಇಥಿಯೋಪಿಯಾ):ದಕ್ಷಿಣ ಇಥಿಯೋಪಿಯಾದ ವೊಲೈಟಾ ಪ್ರದೇಶದಲ್ಲಿ ಭಾರಿ ಮಳೆಯಿಂದ ಉಂಟಾದ ಭೂಕುಸಿತದಲ್ಲಿ ಕನಿಷ್ಠ 13 ಜನರು ಸಾವನ್ನಪ್ಪಿದ್ದಾರೆ. ಇನ್ನು ಸಾವಿನ ಸಂಖ್ಯೆ ಹೆಚ್ಚಾಗುವ ನಿರೀಕ್ಷೆಯಿದೆ ಎಂದು ಸ್ಥಳೀಯ ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.
ವೊಲೈಟಾ ವಲಯದ ಮುಖ್ಯ ಆಡಳಿತಾಧಿಕಾರಿ ಸ್ಯಾಮ್ಯುಯೆಲ್ ಫೋಲಾ ಪ್ರತಿಕ್ರಿಯಿಸಿ, ಕಿಂಡೋ ದಿದಾಯೆ ಜಿಲ್ಲೆಯ ಪ್ರದೇಶದಿಂದ 300ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ. ಮೃತರಲ್ಲಿ ಮಕ್ಕಳೂ ಸೇರಿದ್ದಾರೆ. ನಾವು ಈಗ ಮುನ್ನೆಚ್ಚರಿಕೆಯಾಗಿ ಮತ್ತೊಂದು ದೊಡ್ಡ ಭೂಕುಸಿತವಾಗುವ ಸಾಧ್ಯತೆ ಹಿನ್ನೆಲೆ 300ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಿದ್ದೇವೆ'' ಎಂದು ತಿಳಿಸಿದರು.
ಸರ್ಕಾರದ ಮಾಹಿತಿ ಪ್ರಕಾರ, ವೊಲೈಟಾ ಪ್ರದೇಶದಲ್ಲಿ ತೀವ್ರ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಸೋಮವಾರದ ಭೂಕುಸಿತವು ಕಳೆದ ತಿಂಗಳು ದಕ್ಷಿಣ ಇಥಿಯೋಪಿಯಾದ ಮತ್ತೊಂದು ಪ್ರದೇಶದಲ್ಲಿ ಸಂಭವಿಸಿದ್ದ ಕಡಿಮೆ ಮಾರಣಾಂತಿಕವಾಗಿದೆ. ಆಗ ಸಂಭವಿಸಿದ್ದ ಭೂಕುಸಿತದಲ್ಲಿ 200ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು. ಇಥಿಯೋಪಿಯಾದ ಮಳೆಗಾಲದಲ್ಲಿ ಭೂಕುಸಿತಗಳು ಸಾಮಾನ್ಯವಾಗಿದೆ. ಇದು ಜುಲೈನಲ್ಲಿ ಪ್ರಾರಂಭವಾಯಿತು ಮತ್ತು ಸೆಪ್ಟೆಂಬರ್ ಮಧ್ಯದವರೆಗೆ ಇರುತ್ತದೆ ಎಂದು ನಿರೀಕ್ಷಿಸಲಾಗಿದೆ.