ಸಿಡ್ನಿ, ಆಸ್ಟ್ರೇಲಿಯಾ:ಸಿಡ್ನಿಯಿಂದ ನ್ಯೂಜಿಲೆಂಡ್‌ನ ಆಕ್ಲೆಂಡ್‌ಗೆ ಪ್ರಯಾಣಿಸುತ್ತಿದ್ದ ಚಿಲಿಯ ವಿಮಾನದಲ್ಲಿ ‘ಪ್ರಬಲ ಚಲನೆ’ (strong movement) ಉಂಟಾಗಿದ್ದರಿಂದ ಕನಿಷ್ಠ 50 ಜನರು ಗಾಯಗೊಂಡಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.
LATAM ಏರ್‌ಲೈನ್ಸ್ ಹೇಳಿಕೆ ಪ್ರಕಾರ, ವಿಮಾನ ಹಾರಾಟದ ವೇಳೆ ತಾಂತ್ರಿಕ ವೈಫಲ್ಯ ಕಂಡು ಬಂದಿದ್ದು, ಇದರಿಂದಾಗಿ ವಿಮಾನದೊಳಗೆ ಪ್ರಬಲವಾದ ಚಲನೆ ಉಂಟಾಗಿದೆ. ಕೂಡಲೆ ಪೈಲಟ್ ವಿಮಾನವನ್ನು ಆಕ್ಲೆಂಡ್‌ನಲ್ಲಿ ಲ್ಯಾಂಡಿಂಗ್ ಮಾಡಿದ್ದಾರೆ. ವಿಮಾನವು ಕೆಳಗಿಳಿದಾಕ್ಷಣ ಪ್ರಯಾಣಿಕರನ್ನು ಅರೆವೈದ್ಯರು ಚಿಕಿತ್ಸೆಗೊಳಪಡಿಸಿದರು.