ನವದೆಹಲಿ: ಇಂದು ಜನರು ತಮ್ಮಿಷ್ಟವಾದ ರೆಸ್ಟೋರೆಂಟ್, ಹೋಟೆಲ್ಗಳಿಂದ ಆಹಾರವನ್ನು ಮನೆಯಲ್ಲೇ ಕುಳಿತು, ಆರ್ಡರ್ ಮಾಡಿ ತರಿಸಿಕೊಳ್ಳುವ ಆ್ಯಪ್ಗಳ ಬಳಕೆಯ ಪ್ರಮಾಣದಲ್ಲಿ ಭಾರಿ ಪ್ರಮಾಣದಲ್ಲಿ ಏರಿಕೆ ಕಾಣುತ್ತಿದೆ. ಆದರೆ, ಈ ರೀತಿಯ ಫುಡ್ ಡಿಲಿವರಿ ಆ್ಯಪ್ಗಳ ಆಹಾರದ ಮೆನುವಿನಲ್ಲಿ ಪೌಷ್ಠಿಕಾಂಶದ ಮಾಹಿತಿಗಳು ಕಾಣುವುದಿಲ್ಲ. ಇದರಿಂದಾಗಿ ಗ್ರಾಹಕರಿಗೆ ಆರೋಗ್ಯಯುತ ಆಹಾರದ ಆಯ್ಕೆ ಕಗ್ಗಂಟಾಗಿದ್ದು, ಪೌಷ್ಟಿಕಾಂಶ ಭರಿತ ಆಹಾರ ಆಯ್ಕೆ ಮಾಡುವಲ್ಲಿ ತೊಂದರೆ ಅನುಭವಿಸುತ್ತಿದ್ದಾರೆ ಎಂಬ ಅಂಶವೂ ಈ ಅಧ್ಯಯನದ ವೇಳೆ ಕಂಡು ಬಂದಿದೆ.
ಸಿಡ್ನಿ ಯೂನಿವರ್ಸಿಟಿ ಸಂಶೋಧಕರು ಈ ಕುರಿತು ತನಿಖೆ ನಡೆಸಿದ್ದು, ಈ ಸಂಬಂಧ ಪ್ರಮುಖ ಆನ್ಲೈನ್ ಫುಡ್ ಡೆಲಿವರಿ ತಾಣಗಳ ಮೆನು (ಆಹಾರದ ಪಟ್ಟಿ)ಯನ್ನು ಇವರು ಪರಿಶೀಲನೆಗೆ ಒಳಪಡಿಸಿದ್ದಾರೆ. ಈ ವೇಳೆ ಉಬರ್ ಈಟ್ಸ್, ಮೆನುಲೊಗ್ ಸೇರಿ ಇತರ ಆನ್ಲೈನ್ ಫುಡ್ ಡೆಲಿವರಿ ಆಪ್ಗಳಲ್ಲಿನ 498 ಆಹಾರಗಳ ಕುರಿತು ನೀಡಿದ ವಿವರಣೆಯನ್ನು ಗಮನಿಸಲಾಗಿದೆ. ಈ ವೇಳೆ ಶೇ 6ರಷ್ಟು ಮೆನುಗಳಲ್ಲಿ ಕಡಿಮೆ ಪೌಷ್ಟಿಕಾಂಶದ ಲೇಬಲಿಂಗ್ ಅನ್ನು ಹೊಂದಿರುವ ವಿಚಾರ ಅಧ್ಯಯನದ ವೇಳೆ ಗಮನಕ್ಕೆ ಬಂದಿದೆ.
ಕಡಿಮೆ ಪೌಷ್ಟಿಕಾಂಶದ ಮಾಹಿತಿ ಒದಗಿಸಿದ ಗ್ರಾಹಕರು ಆಹಾರ ಸೇವನೆಯಿಂದ ಕಡಿಮೆ ಶಕ್ತಿ ಹೊಂದಿರುವುದು ಅನೇಕ ಅಧ್ಯಯನಗಳಲ್ಲಿ ಸಾಬೀತಾಗಿದೆ ಎಂದು ಅಧ್ಯಯನ ವರದಿಯಲ್ಲಿ ತಿಳಿಸಲಾಗಿದೆ. ಈ ಅಧ್ಯಯನವನ್ನು ಪಬ್ಲಿಕ್ ಹೆಲ್ತ್ ನ್ಯೂಟ್ರಿಷಿಯನ್ನಲ್ಲಿ ಪ್ರಕಟಿಸಲಾಗಿದೆ. ಆನ್ಲೈನ್ ಫುಡ್ ಡೆಲಿವರಿ ಆಪ್ಗಳಲ್ಲಿ ಗ್ರಾಹಕರಿಂದ ಸಾಕಷ್ಟು ಬೇಡಿಕೆ ಇದ್ದರೂ, ಆನ್ಲೈನ್ ಫ್ಲಾಟ್ ಫಾರ್ಮ್ಗಳು ಆಹಾರದ ಮೆನ ಲೇಬಲಿಂಗ್ ಅನ್ನು ಅಳವಡಿಸಿಕೊಳ್ಳುವಲ್ಲಿ ಹಿಂದೆ ಬಿದ್ದಿದೆ.