WORLD FIRST AID DAY 2024:ಗಾಯಗೊಂಡ ಅಥವಾ ನೋವಿನಿಂದ ಬಳಲುತ್ತಿರುವ ಯಾವುದೇ ವ್ಯಕ್ತಿಗೆ ಪ್ರಥಮ ಚಿಕಿತ್ಸೆ ನೀಡುವುದು ಈ ಕುರಿತು ಜಾಗೃತಿ ಮೂಡಿಸಲು ಪ್ರತಿ ವರ್ಷ ಸೆಪ್ಟೆಂಬರ್‌ನ ಎರಡನೇ ಶನಿವಾರದಂದು ವಿಶ್ವ ಪ್ರಥಮ ಚಿಕಿತ್ಸಾ ದಿನವನ್ನು ವಿಶ್ವದಾದ್ಯಂತ ಆಚರಿಸಲಾಗುತ್ತದೆ. ಈ ಬಾರಿ ಸೆಪ್ಟೆಂಬರ್ 14 ರಂದು ಈ ಆಚರಣೆ ಮಾಡಿಕೊಂಡು ಬರಲಾಗುತ್ತಿದೆ.
ವಿಶ್ವ ಪ್ರಥಮ ಚಿಕಿತ್ಸಾ ದಿನದ ಇತಿಹಾಸ 1859ರಲ್ಲಿ ಸೋಲ್ಪೆರಿನೊ ಕದನದ ಸಮಯದಲ್ಲಿ, ಯುವ ಉದ್ಯಮಿ ಹೆನ್ರಿ ಡ್ಯುನಾಂಟ್, ಹತ್ಯಾಕಾಂಡದಲ್ಲಿ ಗಾಯಗೊಂಡ ಅನೇಕರನ್ನು ಪುನರ್ವಸತಿ ಕಲ್ಪಿಸಲು ಸಹಾಯ ಮಾಡಿದರು. ಈ ಘಟನೆಯು ಎ ಮೆಮೊರಿ ಆಫ್ ಸೋಲ್ಫೆರಿನೊ ಎಂಬ ಪುಸ್ತಕವನ್ನು ಬರೆಯಲು ಕಾರಣವಾಯಿತು. ಈ ಪುಸ್ತಕದಲ್ಲಿ ಅವರು ತಮ್ಮ ಅನುಭವಗಳನ್ನು ವಿವರಿಸಿದ್ದಾರೆ. ನಂತರ ಹೆನ್ರಿ ಡ್ಯೂನಾಂಟ್ ಅಂತಾರಾಷ್ಟ್ರೀಯ ರೆಡ್ ಕ್ರಾಸ್ ಸಮಿತಿಯನ್ನು ಸ್ಥಾಪಿಸಿದರು. ಇದು ಪ್ರಥಮ ಚಿಕಿತ್ಸೆ ನೀಡಲು ಮತ್ತು ಜಾಗೃತಿ ಮೂಡಿಸಲು ಮೀಸಲಾಗಿರುವ ಸಂಸ್ಥೆಯಾಗಿದೆ. 2000ರಲ್ಲಿ ವಿಶ್ವ ಪ್ರಥಮ ಚಿಕಿತ್ಸಾ ದಿನದ ಆಚರಣೆ ಘೋಷಿಸಲಾಯಿತು. ಅಂದಿನಿಂದ, ಈ ದಿನವನ್ನು ಸೆಪ್ಟೆಂಬರ್ ಎರಡನೇ ಶನಿವಾರದಂದು ಆಚರಿಸಲಾಗುತ್ತದೆ.
ವಿಶ್ವ ಪ್ರಥಮ ಚಿಕಿತ್ಸಾ ದಿನಾಚರಣೆ ಮಹತ್ವವೇನು?: ಪ್ರಥಮ ಚಿಕಿತ್ಸಾ ಆರೈಕೆಯ ಪ್ರಾಮುಖ್ಯತೆ ಮತ್ತು ಹೇಗೆ ಮಾನವ ಜೀವಗಳನ್ನು ಉಳಿಸಬೇಕು ಎಂಬುದರ ಕುರಿತು ಜಾಗೃತಿ ಮೂಡಿಸುವುದು ಈ ದಿನದ ಮುಖ್ಯ ಉದ್ದೇಶವಾಗಿದೆ. ಈ ದಿನದಂದು ಶಾಲಾ - ಕಾಲೇಜುಗಳಲ್ಲಿ ರೆಡ್‌ಕ್ರಾಸ್‌ನಂತಹ ಸಂಸ್ಥೆಗಳಲ್ಲಿ ಹಲವು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ.
2024ರ ವಿಶ್ವ ಪ್ರಥಮ ಚಿಕಿತ್ಸಾ ದಿನದ ಥೀಮ್ ಏನು?:ಈ ವರ್ಷದ ಥೀಮ್ 'ಪ್ರಥಮ ಚಿಕಿತ್ಸೆ ಮತ್ತು ಕ್ರೀಡೆ'. ಪ್ರಥಮ ಚಿಕಿತ್ಸಾ ಜ್ಞಾನದ ಪ್ರಾಮುಖ್ಯತೆ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಮೂಲಭೂತ ಪ್ರಥಮ ಚಿಕಿತ್ಸಾ ತರಬೇತಿ ಪಡೆದುಕೊಳ್ಳಲು ವ್ಯಕ್ತಿಗಳನ್ನು ಪ್ರೋತ್ಸಾಹಿಸುವುದು ಈ ದಿನದ ಗುರಿಯಾಗಿದೆ.
ಒಬ್ಬ ವ್ಯಕ್ತಿಗೆ ಪ್ರಥಮ ಚಿಕಿತ್ಸೆ ಯಾವಾಗ ಬೇಕಾಗುತ್ತೆ?:ಅಪಘಾತದ ಸಮಯದಲ್ಲಿ ಒಬ್ಬ ವ್ಯಕ್ತಿಯು ರಕ್ತ ಮಡುವಿನಲ್ಲಿ ಅಥವಾ ಅವನ ದೇಹದಿಂದ ಅತಿಯಾದ ರಕ್ತಸ್ರಾವ ಅಥವಾ ಯಾವುದೇ ಅಂಗವು ತೀವ್ರ ನೋವಿನಿಂದ ಬಳಲುತ್ತಿದ್ದ ಸಮಯದಲ್ಲಿ ಪ್ರಥಮ ಚಿಕಿತ್ಸೆ ಅಗತ್ಯವಿದೆ.
- ಒಬ್ಬ ವ್ಯಕ್ತಿಯು ನೀರಿನಲ್ಲಿ ಮುಳುಗಿದಾಗ, ಆತನನ್ನು ಹೊರಗೆ ತಂದು ತಕ್ಷಣವೇ ಪ್ರಥಮ ಚಿಕಿತ್ಸೆ ನೀಡಬೇಕಾಗುತ್ತದೆ. ಹಾಗೂ ಅದು ಅಗತ್ಯವೂ ಹೌದು.
- ಹಾವು ಅಥವಾ ಇನ್ನಾವುದೇ ವಿಷಕಾರಿ ಕೀಟ ಕಚ್ಚಿದಾಗ ವ್ಯಕ್ತಿಗೆ ತುರ್ತು ಪ್ರಥಮ ಚಿಕಿತ್ಸೆ ಅಗತ್ಯ ಇದ್ದೇ ಇರುತ್ತೆ.
- ಒಬ್ಬ ವ್ಯಕ್ತಿಯು ಎತ್ತರದ ಕಟ್ಟಡದಿಂದ ಬಿದ್ದಾಗ ಪ್ರಥಮ ಚಿಕಿತ್ಸೆ ಅಗತ್ಯ, ಮಧುಮೇಹ ರೋಗಿಯು ಅವನ ರಕ್ತದಲ್ಲಿ ಕಡಿಮೆ ಗ್ಲೂಕೋಸ್ ಮಟ್ಟವನ್ನು ಹೊಂದಿದ್ದಾನೆ ಮತ್ತು ಉಸಿರಾಡಲು ಸಾಧ್ಯವಾಗುವುದಿಲ್ಲ. ಆಗ ಪ್ರಥಮ ಚಿಕಿತ್ಸೆ ಅಗತ್ಯವಿದೆ.
ತುರ್ತು ಪರಿಸ್ಥಿತಿಯಲ್ಲಿ ವ್ಯಕ್ತಿಗೆ ಪ್ರಥಮ ಚಿಕಿತ್ಸೆ ನೀಡುವುದು ಹೇಗೆ?:
- ಗಾಯಗೊಂಡ ವ್ಯಕ್ತಿಗೆ ಹೆಚ್ಚು ರಕ್ತಸ್ರಾವವಾಗುತ್ತಿದ್ದರೆ, ರಕ್ತಸ್ರಾವವನ್ನು ನಿಲ್ಲಿಸಲು ಒತ್ತಡ ಹಾಕಿ ಬಟ್ಟೆಯಿಂದ ಗಾಯವನ್ನು ಕಟ್ಟಿಕೊಳ್ಳಿ.
- ವಿಷಕಾರಿ ಹಾವು ಕಡಿತದ ಸಂದರ್ಭದಲ್ಲಿ, ಗಾಯವನ್ನು ಬಟ್ಟೆಯಿಂದ ಮುಚ್ಚುವುದು ಮತ್ತು ವಿಷವು ರಕ್ತದೊಂದಿಗೆ ಸೇರದಂತೆ ಗಟ್ಟಿಯಾಗಿ ಕಟ್ಟುವುದು ಬಹಳ ಮುಖ್ಯ.
- ಗಾಯಗೊಂಡವರ ಮೂಳೆ ಮುರಿದಿದ್ದರೆ ಬ್ಯಾಂಡೇಜ್ ಹಾಕಿದರೆ ಸ್ವಲ್ಪ ಮಟ್ಟಿಗೆ ನೋವು ಕಡಿಮೆ ಮಾಡಬಹುದು.
- ಶಿಶುಗಳು ಚಾಕು, ಪೆನ್ಸಿಲ್, ನಾಣ್ಯ, ರಬ್ಬರ್ ಮುಂತಾದ ವಸ್ತುಗಳನ್ನು ಬಾಯಿಗೆ ಹಾಕಿಕೊಂಡು ಗಂಟಲಿಗೆ ಸಿಲುಕಿಕೊಂಡರೆ, ತಕ್ಷಣವೇ ತಲೆಕೆಳಗಾಗಿ ಮತ್ತು ಬೆನ್ನಿನ ಮೇಲೆ ಹೊಡೆದರೆ ಆ ವಸ್ತುಗಳು ಹೊರಬರುವ ಸಾಧ್ಯತೆ ಹೆಚ್ಚು. ಇದರೊಂದಿಗೆ ಉಸಿರಾಟದ ತೊಂದರೆಗಳನ್ನು ತಪ್ಪಿಸಬಹುದು.
ಹಲವು ಕಾರಣಗಳಿಗಾಗಿ ಪ್ರಥಮ ಚಿಕಿತ್ಸೆ ಮುಖ್ಯ: