ಕರ್ನಾಟಕ

karnataka

ETV Bharat / health

ಶುಗರ್ ಪೇಷಂಟ್​ಗಳು ಬೆಲ್ಲ ಸೇವಿಸೋದು ಉತ್ತಮವೇ? ತಜ್ಞರ ಸಲಹೆ ಹೀಗಿದೆ - EFFECTS OF JAGGERY ON DIABETES

ಮಧುಮೇಹಿಗಳು ಬೆಲ್ಲದಿಂದ ರೆಡಿ ಮಾಡಿದ ಸಿಹಿ ತಿಂಡಿಗಳನ್ನು ಸೇವಿಸಬಹುದೇ? ಇಲ್ಲವೆ ಬೆಲ್ಲವನ್ನು ಮಾತ್ರ ತಿನ್ನಬೇಕೇ ಅಥವಾ ಬೇಡವೇ ಎಂಬುದರ ಬಗ್ಗೆ ತಜ್ಞರು ವಿವರವಾಗಿ ತಿಳಿಸಿದ್ದಾರೆ.

CAN DIABETES PATIENTS EAT JAGGERY  WHICH SUGAR IS BEST FOR DIABETICS  HEALTH BENEFITS OF JAGGERY  IS JAGGERY GOOD FOR DIABETES
ಸಾಂದರ್ಭಿಕ ಚಿತ್ರ (FREEPIK)

By ETV Bharat Health Team

Published : Jan 16, 2025, 11:50 AM IST

CAN DIABETES PATIENTS EAT JAGGERY:ಇಂದಿನ ಆಧುನಿಕ ಯುಗದಲ್ಲಿ ಅನೇಕರು ಮಧುಮೇಹದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಈ ಹಿಂದೆ, ಟೈಪ್ 2 ಮಧುಮೇಹವು 40 ವಯಸ್ಸಿಗಿಂತಲೂ ಮೇಲ್ಪಟ್ಟವರಲ್ಲಿ ಮಾತ್ರ ಕಂಡುಬರುತ್ತಿತ್ತು. ಆದ್ರೆ, ಭಾರತದಲ್ಲಿ ಇತ್ತೀಚಿನ ದಿನಗಳಲ್ಲಿ ಸಕ್ಕರೆ ಕಾಯಿಲೆ 20 ರಿಂದ 30 ವರ್ಷ ವಯಸ್ಸಿನವರ ಮೇಲೂ ಹೆಚ್ಚು ಪರಿಣಾಮ ಬೀರುತ್ತಿದೆ.

25 ವರ್ಷದೊಳಗಿನ ಸುಮಾರು ಶೇ. 25ರಷ್ಟು ಜನರು ಟೈಪ್ 2 ಮಧುಮೇಹ ಕಾಯಿಲೆಯಿಂದ ಬಳಲುತ್ತಿದ್ದಾರೆ. ಭಾರತದ ಜನಸಂಖ್ಯೆಯ ಶೇ. 50ಕ್ಕಿಂತ ಹೆಚ್ಚು ಜನರು 25 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಹಾಗೂ ಶೇ 65ಕ್ಕಿಂತ ಹೆಚ್ಚು ಜನರು 35 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಇದ್ದಾರೆ. ಮಹಿಳೆಯರು ಆರಂಭಿಕ ಹಂತದಲ್ಲಿ ಟೈಪ್ 2 ಮಧುಮೇಹಕ್ಕೆ ಹೆಚ್ಚು ಒಳಗಾಗುತ್ತಾರೆ. ನಾವು ಸಂಭಾವ್ಯ ವಿನಾಶಕಾರಿ ಮಧುಮೇಹ ಸಾಂಕ್ರಾಮಿಕ ಕಾಯಿಲೆಯ ಅಂಚಿನಲ್ಲಿದ್ದೇವೆ.

ಬೊಜ್ಜಿನ ಸಮಸ್ಯೆ ಹೊಂದಿರುವವರು ಈ ಕಾಯಿಲೆಗೆ ದೊಡ್ಡ ಕಾರಣವೆಂದು ಗಮನಿಸಲಾಗಿದೆ. ಬದಲಾದ ಜೀವನಶೈಲಿ ಹಾಗೂ ಆಹಾರ ಪದ್ಧತಿ, ವ್ಯಾಯಾಮದ ಕೊರತೆಯೂ ಸಹ ಸಕ್ಕರೆ ಕಾಯಿಲೆಗೆ ಅಪಾಯಕಾರಿ ಅಂಶವಾಗಿದೆ. ಸಕ್ಕರೆ ಕಾಯಿಲೆಗೆ ಯಾವುದೇ ಚಿಕಿತ್ಸೆ ಇಲ್ಲ. ಆದ್ರೆ, ಇದನ್ನು ನಿಯಂತ್ರಿಸಲು ಜನರು ಆಹಾರ ಕ್ರಮದಲ್ಲಿ ಹಾಗೂ ಜೀವನಶೈಲಿಯಲ್ಲಿ ಬದಲಾವಣೆ ಸೇರಿದಂತೆ ಹಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಮಧುಮೇಹ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳಿಗೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವುದು ಬಹುಮುಖ್ಯವಾಗಿದೆ. ರೋಗಿಯ ದೇಹದಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟ ಏರಿಕೆಯಾದರೆ ಅವರು ಅನೇಕ ಆರೋಗ್ಯದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ಇದರಿಂದ ಮಧುಮೇಹಿಗಳು ಶುಗರ್​ ಇರುವ ಆಹಾರವನ್ನು ಸೇವಿಸಬಾರದು. ಮಧುಮೇಹಿಗಳು ಸಕ್ಕರೆ ಸೇವನೆಯಿಂದಾಗಿ ತಮ್ಮ ರಕ್ತದಲ್ಲಿ ಗ್ಲೂಕೋಸ್/ಸಕ್ಕರೆ ಮಟ್ಟ ಹೆಚ್ಚಾಗುವ ಅಪಾಯವಿರುತ್ತದೆ. ಇದಕ್ಕಾಗಿಯೇ ಶುಗರ್​ ಪೇಷಂಟ್​ಗಳು ಇದನ್ನು ತಡೆಯಲು ಸಿಹಿತಿಂಡಿಗಳನ್ನು ಸೇವಿಸಬಾರದು. ಇದೀಗ ಮಧುಮೇಹಿಗಳು ಬೆಲ್ಲ ಸೇವಿಸಬಹುದೇ ಎಂಬುದರ ಬಗ್ಗೆ ತಿಳಿದುಕೊಳ್ಳೋಣ.

ಮಧುಮೇಹಿಗಳು ಬೆಲ್ಲ ತಿನ್ನೋದು ಸುರಕ್ಷಿತವೇ?:sciencedirect.com ವೆಬ್​ಸೈಟ್​ನಲ್ಲಿ ಪ್ರಕಟವಾದ ವರದಿಯಲ್ಲಿ ತಿಳಿಸಿದ ತಜ್ಞರು ಹಾಗೂ ಸಂಶೋಧನೆಯ ಪ್ರಕಾರ, ಬೆಲ್ಲ ತುಂಬಾ ಆರೋಗ್ಯಕರವಾಗಿದೆ. ಆದರೆ, ಮಧುಮೇಹದಲ್ಲಿ ಈ ಸೇವನೆ ಮಾಡೋದು ಒಳ್ಳೆಯದಲ್ಲ. ಬೆಲ್ಲ ಹಾಗೂ ಸಕ್ಕರೆ ಎರಡನ್ನೂ ಕಬ್ಬಿನ ರಸದಿಂದ ತಯಾರಿಸಲಾಗುತ್ತದೆ. ಆದ್ದರಿಂದ ಶುಗರ್​ ಪೇಷಂಟ್​ಗಳಿಗೆ ಬೆಲ್ಲ ಸೇವನೆ ಮಾಡುವುದು ಅಷ್ಟೊಂದು ಸುರಕ್ಷಿತವಲ್ಲ.

ಬೆಲ್ಲ ಸೇವನೆ ಮಾಡುವುದರಿಂದ ಶುಗರ್​ ಲೆವಲ್​ ಇನ್ನೂ ಜಾಸ್ತಿಯಾಗುತ್ತದೆ. ಮಧುಮೇಹ ಇರುವವರು ಸಿಹಿ ಏನನ್ನಾದರೂ ತಿನ್ನಬೇಕೆಂದು ಅನಿಸಿದರೆ, ಬೆಲ್ಲದ ಬದಲು, ಸಿಹಿ ಗೆಣಸಿನಂತಹ ನೈಸರ್ಗಿಕ ಸಿಹಿಕಾರಕಗಳನ್ನು ಬಳಕೆ ಮಾಡಬಹುದು. ಜೊತೆಗೆ ಮಧುಮೇಹ ರೋಗಿಗಳು ಇದನ್ನು ಮಿತವಾಗಿ ಸೇವಿಸುವುದು ಒಳ್ಳೆಯದಲ್ಲ. ಮಧುಮೇಹಿಗಳು ಕುದಿಸಿದ ಸಿಹಿ ಗೆಣಸನ್ನು ಸೀಮಿತ ಪ್ರಮಾಣದಲ್ಲಿ ಸೇವನೆ ಮಾಡಬೇಕು. ಏಕೆಂದರೆ, ಸಿಹಿ ಗೆಣಸಿನ ಗ್ಲೈಸೆಮಿಕ್ ಸೂಚ್ಯಂಕ ತುಂಬಾ ಕಡಿಮೆ ಇದೆ. ಶುಗರ್​ ಪೇಷಂಟ್​ಗಳು ಕಿತ್ತಳೆ, ಆವಕಾಡೊ, ಖರ್ಜೂರ ಕೂಡ ಸೇವಿಸಬಹುದು.

ಬೆಲ್ಲದ ಪ್ರಯೋಜನಗಳೇನು?:

  • ಬೆಲ್ಲವನ್ನು ಸಕ್ಕರೆ ರೀತಿ ಸಂಸ್ಕರಿಸದ ಕಾರಣಕ್ಕೆ ಬೆಲ್ಲವನ್ನು ಸಕ್ಕರೆಗಿಂತ ಆರೋಗ್ಯಕರವೆಂದು ಹೇಳಲಾಗುತ್ತದೆ. ಬೆಲ್ಲದಲ್ಲಿ ಕಬ್ಬಿಣ ಹಾಗೂ ಇತರ ಕೆಲವು ಪೋಷಕಾಂಶಗಳು ಇವೆ. ಬೆಲ್ಲ ದೇಹಕ್ಕೆ ತುಂಬಾ ಉಪಯುಕ್ತವಾಗಿದೆ.
  • ಬೆಲ್ಲ ತಿನ್ನುವುದರಿಂದ ಜೀರ್ಣಶಕ್ತಿ ಹೆಚ್ಚಾಗುತ್ತದೆ. ಗ್ಯಾಸ್ಟ್ರಿಕ್, ಉಬ್ಬುವುದು ಮತ್ತು ಇತರ ಹೊಟ್ಟೆಯ ತೊಂದರೆಗಳನ್ನು ಕಡಿಮೆ ಮಾಡುತ್ತದೆ. ನಿಯಮಿತವಾಗಿ ಬೆಲ್ಲ ತಿನ್ನುವುದರಿಂದ ರಕ್ತ ಕೂಡ ಶುದ್ಧವಾಗುತ್ತದೆ. ಬೆಲ್ಲ ಸೇವಿಸುವುದರಿಂದ ದೇಹದ ದೌರ್ಬಲ್ಯ ದೂರವಾಗಿ ದೇಹಕ್ಕೆ ಶಕ್ತಿ ಲಭಿಸುತ್ತದೆ.
  • ಬೆಲ್ಲವು ಪೊಟ್ಯಾಸಿಯಮ್ ಎಂಬ ಪೋಷಕಾಂಶ ಹೊಂದಿದೆ. ಇದು ನಿಮ್ಮ ರಕ್ತದೊತ್ತಡ ನಿಯಂತ್ರಣದಲ್ಲಿ ಇಡಲು ಸಹಾಯ ಮಾಡುತ್ತದೆ. ನಿಯಮಿತವಾಗಿ ಬೆಲ್ಲದ ನೀರನ್ನು ಕುಡಿಯುವುದರಿಂದ ನಿಮ್ಮ ರಕ್ತದೊತ್ತಡ ನಿಯಂತ್ರಿಸಲು ಸಾಧ್ಯವಿದೆ.

ಹೆಚ್ಚಿನ ಮಾಹಿತಿಗಾಗಿ ಈ ವೆಬ್​ಸೈಟ್​ನ್ನು ವೀಕ್ಷಿಸಬಹುದು:

ಓದುಗರಿಗೆ ಮುಖ್ಯ ಸೂಚನೆ:ಇಲ್ಲಿ ನಿಮಗೆ ನೀಡಿರುವ ಎಲ್ಲ ಆರೋಗ್ಯ ಮಾಹಿತಿ ಮತ್ತು ಸಲಹೆಗಳು ನಿಮ್ಮ ತಿಳಿವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆ ಆಧರಿಸಿ ನಾವು ಈ ಮಾಹಿತಿ ನಿಮಗೆ ನೀಡಿದ್ದೇವೆ. ಆದರೆ, ಇವುಗಳನ್ನು ಅನುಸರಿಸುವ ಮೊದಲು ಪರಿಣಿತ ವೈದ್ಯರ ಸಲಹೆಯನ್ನು ತೆಗೆದುಕೊಳ್ಳುವುದು ಉತ್ತಮ.

ಇವುಗಳನ್ನೂ ಓದಿ:

ABOUT THE AUTHOR

...view details