ಕರ್ನಾಟಕ

karnataka

ETV Bharat / health

ಆರೋಗ್ಯಕರ, ಹೊಳೆಯುವ ತ್ವಚೆ ನಿಮ್ಮದಾಗಬೇಕೇ?: ಹಾಗಾದರೆ ತಜ್ಞರು ತಿಳಿಸುವ ಆಹಾರ ಪದ್ಧತಿ ಅನುಸರಿಸಿ!

Best Foods for Glowing Skin: ತ್ವಚೆಯ ಸೌಂದರ್ಯ ಹೆಚ್ಚಿಸಲು ಕೆಲವು ಆಹಾರಗಳು ಪ್ರಮುಖವಾಗಿವೆ. ಹಾಗಾದರೆ ತಜ್ಞರು ತಿಳಿಸುವಂತೆ ಈ ಆಹಾರ ಕ್ರಮಗಳನ್ನು ಅನುಸರಿಸಿದರೆ, ಚರ್ಮಕ್ಕೆ ಮಾತ್ರವಲ್ಲದೇ ಒಟ್ಟಾರೆ ದೇಹದ ಆರೋಗ್ಯಕ್ಕೂ ತುಂಬಾ ಒಳ್ಳೆಯದು.

By ETV Bharat Health Team

Published : 4 hours ago

Updated : 2 hours ago

BEST FOODS FOR GLOWING SKIN  FOODS THAT HELP SKIN GLOW  WHAT TO EAT TO IMPROVE SKIN GLOW  WHAT TO EAT TO MAKE FACE GLOW
ಸಾಂದರ್ಭಿಕ ಚಿತ್ರ (ETV Bharat)

Best Foods for Glowing Skin:ಪ್ರತಿಯೊಬ್ಬರೂ ಸುಂದರವಾದ ಹೊಳೆಯುವ ಚರ್ಮವನ್ನು ಹೊಂದಲು ಬಯಸುತ್ತಾರೆ. ಈ ಕಾರಣಕ್ಕಾಗಿ, ಮಾರುಕಟ್ಟೆಯಲ್ಲಿ ಲಭ್ಯವಿರುವ ಅನೇಕ ರೀತಿಯ ಸೌಂದರ್ಯವರ್ಧಕಗಳನ್ನು ಬಳಸುತ್ತಾರೆ. ಇದು ಕೆಲವೊಮ್ಮೆ ಅಡ್ಡ ಪರಿಣಾಮಗಳನ್ನು ಉಂಟುಮಾಡುತ್ತದೆ. ಆದರೆ, ಸೌಂದರ್ಯವರ್ಧಕ ಉತ್ಪನ್ನಗಳ ಅಗತ್ಯ ಇಲ್ಲದೇ ಈ ಆಹಾರದ ಕ್ರಮಗಳನ್ನು ನಿತ್ಯ ಅನುಸರಿಸಿದರೆ ಸಾಕು ತ್ವಚೆಯ ಸೌಂದರ್ಯ ಹೆಚ್ಚಿಸಲು ಸಹಕಾರಿಯಾಗುತ್ತದೆ. ಜೊತೆಗೆ ಉತ್ತಮವಾದ ಹೊಳೆಯುವ ತ್ವಚೆ ಪಡೆಯಬಹುದು ಎನ್ನುತ್ತಾರೆ ಪೌಷ್ಟಿಕಾಂಶ ತಜ್ಞರು.

ಖ್ಯಾತ ಪೌಷ್ಟಿಕತಜ್ಞೆ ಡಾ. ಶ್ರೀಲತಾ ಪ್ರತಿಕ್ರಿಯಿಸಿ, ತ್ವಚೆ ಸೌಂದರ್ಯವು ಕುಟುಂಬದ ಪರಂಪರೆ ಮೇಲೆ ಅವಲಂಬಿತವಾಗಿದೆ. ಇದಲ್ಲದೇ ನಾವು ತೆಗೆದುಕೊಳ್ಳುವ ಮುನ್ನೆಚ್ಚರಿಕೆಯಿಂದ ತ್ವಚೆಯ ಸೌಂದರ್ಯವೂ ಸುಧಾರಿಸುತ್ತದೆ ಎಂದು ಅವರು ವಿವರಿಸುತ್ತಾರೆ. ವಿಶೇಷವಾಗಿ ನಾವು ಸಮತೋಲಿತ ಆಹಾರ ಸೇವಿಸಬೇಕು. ಇದು ಎಲ್ಲ ರೀತಿಯ ಪೋಷಕಾಂಶಗಳನ್ನು ಹೊಂದಿದೆಯಾ ಎಂಬುದನ್ನು ಖಚಿತಪಡಿಸಿಕೊಳ್ಳಬೇಕಾಗುತ್ತದೆ. ಇದರ ಪರಿಣಾಮವಾಗಿ, ಚರ್ಮವು ಸುಧಾರಿಸುತ್ತದೆ.

ಪ್ರೋಟೀನ್‌ಗಳಲ್ಲಿ ಹೇರಳವಾಗಿರುವ ಅಮೈನೋ ಆಮ್ಲಗಳು ಚರ್ಮಕ್ಕೆ ಅಗತ್ಯವಾದ ಕಾಲಜನ್ ಅನ್ನು ಉತ್ಪಾದಿಸುತ್ತದೆ ಎಂದು ಹೇಳಲಾಗುತ್ತದೆ. ಇದು ಸುಕ್ಕುಗಳು ಮತ್ತು ಶುಷ್ಕ ಚರ್ಮ ತಡೆಯುತ್ತದೆ ಎಂದು ತಿಳಿಸುತ್ತಾರೆ. ಹಾಲು, ಮೊಸರು, ಅಗಸೆಕಾಳು, ಮೀನು, ಮೊಟ್ಟೆ, ಕೋಳಿ ಮಾಂಸ ಸೇವಿಸುವುದರಿಂದ ಚರ್ಮ ಸುಕ್ಕುಗಟ್ಟುವುದನ್ನು ತಡೆಯುತ್ತದೆ. ವಿಟಮಿನ್ ಎ, ವಿಟಮಿನ್ ಇ, ಸತು ಮತ್ತು ಸೆಲೆನಿಯಂನಂತಹ ಖನಿಜಗಳು ಸಹ ಚರ್ಮದ ಸೌಂದರ್ಯ ಸುಧಾರಿಸುತ್ತದೆ ಎಂದು ತಜ್ಞರು ವಿವರಿಸುತ್ತಾರೆ.

ವಿಟಮಿನ್ ಚರ್ಮದ ಸೌಂದರ್ಯಕ್ಕೆ ಸಹಾಯ ಮಾಡುತ್ತದೆ. ಅಲ್ಲದೇ, ಇದು ಹೊರಗಿನ ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡುವ ಹೆಚ್ಚಿನ ಶಕ್ತಿಯನ್ನು ಹೊಂದಿದೆ. ಹಾಲು, ಸೊಪ್ಪು, ಅರಿಶಿನ, ಕಡು ಹಳದಿ ತರಕಾರಿಗಳಲ್ಲಿ ವಿಟಮಿನ್ ಎ ಸಮೃದ್ಧವಾಗಿದೆ. ಆದ್ದರಿಂದ ಇವುಗಳನ್ನು ಹೆಚ್ಚು ಸೇವಿಸುವುದನ್ನು ಖಚಿತಪಡಿಸಿಕೊಳ್ಳಿ. ವಿಟಮಿನ್ ಎ ಮೀನಿನಲ್ಲಿಯೂ ಹೇರಳವಾಗಿದೆ. ಅದಕ್ಕಾಗಿಯೇ ನೀವು ವಾರಕ್ಕೆ ಎರಡು ಬಾರಿ ಮೀನು ತಿನ್ನಲು ಪ್ರಯತ್ನಿಸಬೇಕು. ವಿಟಮಿನ್ - ಇ ಉತ್ಕರ್ಷಣ ನಿರೋಧಕವಾಗಿಯೂ ಕಾರ್ಯನಿರ್ವಹಿಸುತ್ತದೆ. ವಿಟಮಿನ್ - ಇ -ಚರ್ಮವನ್ನು ಕಾಂತಿಯುತಗೊಳಿಸಲು ತುಂಬಾ ಉಪಯುಕ್ತವಾಗಿದೆ. ಕೆಲವು ಜನರು ಸಹಾಯ ಮಾಡುವ ಕ್ಯಾಪ್ಸುಲ್​ಗಳನ್ನು ಸಹ ತೆಗೆದುಕೊಳ್ಳುತ್ತಾರೆ. ನಾವು ಸೇವಿಸುವ ಆಹಾರದಲ್ಲಿ ಝಿಂಕ್ ಹೇರಳವಾಗಿರುವುದಿಲ್ಲ. ಇದು ಹೆಚ್ಚಾಗಿ ಅಡಿಕೆ, ಸೂರ್ಯಪಾನದ ಬೀಜ, ಕುಂಬಳಕಾಯಿ ಬೀಜಗಳು ಮತ್ತು ಕಲ್ಲಂಗಡಿ ಬೀಜಗಳಲ್ಲಿ ಕಂಡುಬರುತ್ತದೆ. ಸೆಲೆನಿಯಮ್ ಹೆಚ್ಚಾಗಿ ಮೀನು ಮತ್ತು ಕೆಲವು ವಿಧದ ಎಣ್ಣೆಕಾಳುಗಳಲ್ಲಿ ಕಂಡುಬರುತ್ತದೆ. ಒಂದು ವಾರದಲ್ಲಿ ಈ ಕಾಳುಗಳನ್ನು ತಿನ್ನುವುದರಿಂದ ವಿಟಮಿನ್ ಎ, ವಿಟಮಿನ್ ಇ, ಸತು ಮತ್ತು ಸೆಲೆನಿಯಮ್ ದೊರೆಯುತ್ತದೆ.

- ಶ್ರೀಲತಾ, ಪೌಷ್ಟಿಕತಜ್ಞೆ

ಇವೆಲ್ಲವನ್ನೂ ತೆಗೆದುಕೊಳ್ಳುವುದರಿಂದ ತ್ವಚೆಯಲ್ಲಿ ಹಲವು ಬದಲಾವಣೆಗಳನ್ನು ಕಾಣಬಹುದು. ಸಮತೋಲಿತ ಆಹಾರವು ಚರ್ಮದ ಸೌಂದರ್ಯದಲ್ಲಿ ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಉತ್ತಮ ಪೌಷ್ಟಿಕಾಂಶ ಸೇವಿಸುವಾಗ, ಹೊರಗೆ ಸಿಗುವ ಜಂಕ್ ಫುಡ್‌ಗಳನ್ನು ಕಡಿಮೆ ಮಾಡುವುದರಿಂದ ಚರ್ಮಕ್ಕೆ ಮಾತ್ರವಲ್ಲದೆ ಒಟ್ಟಾರೆ ಆರೋಗ್ಯಕ್ಕೂ ಪ್ರಯೋಜನವಾಗುತ್ತದೆ ಎಂದು ತಜ್ಞರು ಹೇಳುತ್ತಾರೆ.

ಹೆಚ್ಚಿನ ಮಾಹಿತಿಗಾಗಿ ಈ ವೆಬ್​ಸೈಟ್​ನ್ನು ಸಂರ್ಕಿಸಬಹುದು:

ಓದುಗರ ಗಮನಕ್ಕೆ:ಇಲ್ಲಿ ನಿಮಗೆ ನೀಡಿರುವ ಎಲ್ಲ ಆರೋಗ್ಯ ಮಾಹಿತಿ ಹಾಗೂ ಸಲಹೆಗಳು ನಿಮ್ಮ ತಿಳಿವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿಯನ್ನು ನೀಡಿದ್ದೇವೆ. ಆದರೆ, ಇವುಗಳನ್ನು ಅನುಸರಿಸುವ ಮೊದಲು ಪರಿಣಿತ ವೈದ್ಯರ ಸಲಹೆಗಳನ್ನು ತೆಗೆದುಕೊಳ್ಳುವುದು ಒಳ್ಳೆಯದು.

ಇದನ್ನೂ ಓದಿ:

ಈ ಚಿಕ್ಕ ಕಾಳು ಕೊಲೆಸ್ಟ್ರಾಲ್​​​ ಬೆಣ್ಣೆಯಂತೆ ಕರಗಿಸುತ್ತೆ: ಹಲವು ರೋಗಗಳಿಗೆ ಇದು ರಾಮಬಾಣ!

ನಿಮಗೆ ಅತಿಯಾಗಿ ಕೂದಲು ಉದುರುತ್ತಿದೆಯೇ?: ಈ ಪ್ಯಾಕ್ ಹಾಕಿದರೆ ಲಭಿಸುತ್ತೆ ಉತ್ತಮ ಫಲಿತಾಂಶ!

Last Updated : 2 hours ago

ABOUT THE AUTHOR

...view details