ಕರ್ನಾಟಕ

karnataka

ETV Bharat / health

ಮಧುಮೇಹಿಗಳು ದಿನವೂ ಮೊಟ್ಟೆ ಸೇವಿಸಿದ್ರೆ ಏನಾಗತ್ತೇ ಗೊತ್ತಾ? - DIABETIC DIET BOILED EGGS - DIABETIC DIET BOILED EGGS

ಮಧುಮೇಹಿಗಳಿಗೆ ಪ್ರತಿನಿತ್ಯ ಮೊಟ್ಟೆ ಸೇವಿಸುವುದು ಪ್ರಯೋಜನ ಸಿಗಲಿದೆಯಾ ಅಥವಾ ವಾರಕ್ಕೆ ಎಷ್ಟು ಸೇವನೆ ಮಾಡಿದರೆ ಉತ್ತಮ ಎಂಬ ಗೊಂದಲ ಮೂಡುವುದು ಸಹಜ. ಹೌದು ಆ ಎಲ್ಲ ಗೊಂದಲಗಳಿಗೆ ಈ ಲೇಖನದಲ್ಲಿ ಪರಿಹಾರ ನೀಡುವ ಪ್ರಯತ್ನ ಮಾಡಲಾಗಿದೆ.

what happen if daibitic consume egga daily
ಸಾಂದರ್ಭಿಕ ಚಿತ್ರ (ಈಟಿವಿ ಭಾರತ್​​)

By ETV Bharat Karnataka Team

Published : Jul 13, 2024, 2:19 PM IST

ಹೈದರಾಬಾದ್​: ಆರೋಗ್ಯ ತಜ್ಞರ ಪ್ರಕಾರ, ದಿನಕ್ಕೆ ಒಂದು ಮೊಟ್ಟೆ ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದು. ಆದರೆ, ಮಧುಮೇಹಗಳಿಗೂ ಈ ಡಯಟ್​ ಉತ್ತಮವಾ ಎಂಬ ಪ್ರಶ್ನೆ ಮೂಡುತ್ತದೆ. ಕಾರಣ ಮಧುಮೇಹದಿಂದ ಬಳಲುತ್ತಿರುವವರಿಗೆ ತಿನ್ನುವ ವಿಚಾರದಲ್ಲಿ ಎಲ್ಲ ತಿನಿಸುಗಳಲ್ಲೂ ಲೆಕ್ಕಾಚಾರ ಮಾಡಿ ಸೇವಿಸುತ್ತಾರೆ. ಅಲ್ಲದೇ, ಅವರು ಆಹಾರ ಸೇವನೆ ವಿಚಾರದಲ್ಲಿ ಅತಿ ಎಚ್ಚರಿಕೆವಹಿಸುವುದು ಕೂಡ ಅಗತ್ಯವಾಗಿರುತ್ತದೆ. ಈ ಹಿನ್ನಲೆ ಮಧುಮೇಹಿಗಳಿಗೆ ನಿತ್ಯ ಮೊಟ್ಟೆ ಸೇವಿಸುವುದು ಪ್ರಯೋಜನ ಸಿಗಲಿದೆಯಾ ಅಥವಾ ವಾರಕ್ಕೆ ಎಷ್ಟು ಸೇವನೆ ಮಾಡುವುದು ಉತ್ತಮ ಎಂಬ ಗೊಂದಲ ಮೂಡುವುದು ಸಹಜ. ಅದಕ್ಕೆಲ್ಲ ತಜ್ಞರು ಉತ್ತರ ನೀಡಿದ್ದಾರೆ.

ಮಧುಮೇಹಿಗಳಲ್ಲಿ ಸಾಮಾನ್ಯವಾಗಿ ಆಲಸ್ಯ ಮತ್ತು ಸೋಮಾರಿತನದ ಲಕ್ಷಣಗಳು ಕಾಣುತ್ತದೆ. ಈ ಲಕ್ಷಣಗಳು ಸಮತೋಲಿತ ಆಹಾರದ ಕೊರತೆಯಿಂದಲೂ ಕಾಣಬಹುದಾಗಿದೆ, ಇದೇ ಕಾರಣಕ್ಕೆ ಮಧುಮೇಹಿಗಳು ತಮ್ಮ ಆಹಾರದಲ್ಲಿ ಪ್ರೋಟಿನ್​ಗೆ ಒತ್ತು ನೀಡುವುದು ಅವಶ್ಯಕವಾಗಿದೆ. ಹೈದರಾಬಾದ್​ನ ಖ್ಯಾತ ಪೌಷ್ಟಿಕಾಂಶತಜ್ಞೆ ಲತಾಶಶಿ ಪ್ರಕಾರ, ಮಧುಮೇಹಿಗಳು ನಿತ್ಯ ಮೊಟ್ಟೆ ಸೇವಿಸುವುದು ಆರೋಗ್ಯ ದೃಷ್ಟಿಯಿಂದ ಉತ್ತಮವಾದ ಕ್ರಮವಾಗಿದೆ. ಆದರೆ, ಇಲ್ಲಿ ಗಮನಿಸಬೇಕಾದ ಮತ್ತೊಂದು ಅಂಶ ಎಂದರೆ, ಇವರು ದಿನಕ್ಕೆ ಎಷ್ಟು ಪ್ರೋಟಿನ್​ ಸೇವಿಸುತ್ತಾರೆ ಎಂಬುದರ ಮೇಲೆ ಮೊಟ್ಟೆ ಸೇವನೆ ನಿರ್ಧರಿತವಾಗುತ್ತದೆ.

ಮಧುಮೇಹಿಗಳು ದಿನಕ್ಕೆ ಒಂದಕ್ಕಿಂತ ಕಡಿಮೆ ಮೊಟ್ಟೆ ಸೇವಿಸುವಂತೆ ಅಥವಾ ವಾರದಲ್ಲಿ ಐದಕ್ಕಿಂತ ಹೆಚ್ಚಿಲ್ಲದಂತೆ ಸೇವಿಸುವಂತೆ ಸಲಹೆ ನೀಡಲಾಗುತ್ತದೆ. ಮೊಟ್ಟೆ ಸೇವನೆ ದೇಹದ ಕೊಬ್ಬನ್ನು ಹೆಚ್ಚಿಸುವುದಿಲ್ಲ. ಮಧುಮೇಹಿಗಳಲ್ಲಿ ರಕ್ತದ ಕೊಬ್ಬು ಏರಿಳಿತವಾಗದ ರೀತಿ ನೋಡಿಕೊಳ್ಳುವುದು ಮುಖ್ಯವಾಗಿದೆ. ಅನೇಕ ಅಧ್ಯಯನಗಳು ಹೇಳುವಂತೆ ಮೊಟ್ಟೆಯು ಕೊಲೆಸ್ಟ್ರಾಲ್​ ಮಟ್ಟ ಹೆಚ್ಚಿಸುವುದಿಲ್ಲ.

ವಾರಕ್ಕೆ ಎಷ್ಟು ಮೊಟ್ಟೆಯನ್ನು ನಿರ್ದಿಷ್ಟವಾಗಿ ತಿನ್ನಬೇಕು ಎಂಬುದಕ್ಕೆ ರಕ್ತದಲ್ಲಿನ ಲಿಪಿಡ್​ ಪ್ರೋಫೈಲ್​ ಪರೀಕ್ಷೆ ನಡೆಸುವುದು ಉತ್ತಮ ಎನ್ನುತ್ತಾರೆ ಲತಾಶಶಿ. ಈ ಪರೀಕ್ಷೆ ಮೂಲಕ ರಕ್ತದಲ್ಲಿನ ನಿಮ್ಮ ಕೊಲೆಸ್ಟ್ರಾಲ್​ ಮಟ್ಟ ತಿಳಿಯಲಿದೆ. ಇದರ ಆಧಾರದ ಮೇಲೆ ಆರೋಗ್ಯ ತಜ್ಞರು ಎಷ್ಟು ಮೊಟ್ಟೆ ಸೇವನೆ ಮಾಡಬೇಕು ಎಂದು ಸಲಹೆ ನೀಡುತ್ತಾರೆ.

ವಿಶೇಷ ಸೂಚನೆ:ಇಲ್ಲಿ ನೀಡಿರುವ ಎಲ್ಲ ಆರೋಗ್ಯ ಮಾಹಿತಿ ಮತ್ತು ಸಲಹೆಗಳು ನಿಮ್ಮ ತಿಳಿವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ಈ ಮಾಹಿತಿಯನ್ನು ಒದಗಿಸುತ್ತಿದ್ದೇವೆ. ಇವುಗಳನ್ನು ಅನುಸರಿಸುವ ಮೊದಲು ಪರಿಣತ ವೈದ್ಯರ ಸಲಹೆಗಳನ್ನು ತೆಗೆದುಕೊಳ್ಳುವುದು ಉತ್ತಮ.

ಇದನ್ನೂ ಓದಿ: ದಿನಕ್ಕೆ ಹತ್ತೇ ಹತ್ತು ಪಿಸ್ತಾ ತಿಂದು ನೋಡಿ: ನಿಮ್ಮಲ್ಲಿ ಯಾವೆಲ್ಲ ಬದಲಾವಣೆ ಆಗುತ್ತೆ ಗೊತ್ತಾ?

ABOUT THE AUTHOR

...view details