TEA HELPFUL TO CONTROL BLOOD SUGAR: ಇತ್ತೀಚಿನ ದಿನಮಾನಗಳಲ್ಲಿ ಜೀವನಶೈಲಿ ಬದಲಾವಣೆಯಿಂದ ಮಧುಮೇಹ ಎಂಬ ಮಹಾಮಾರಿ ಕಾಟ ಕಾಮನ್ ಎಂಬಂತಾಗಿದೆ. ದೇಹದ ರಕ್ತದಲ್ಲಿನ ಸಕ್ಕರೆ ಪ್ರಮಾಣವು ತುಂಬಾ ಹೆಚ್ಚಾದಾಗ ಅದನ್ನು ಮಧುಮೇಹ ಒಂದು ಸ್ಥಿತಿ ಎಂದು ಕರೆಯಲಾಗುತ್ತದೆ. ರಕ್ತದಲ್ಲಿನ ಸಕ್ಕರೆಯ ಮಟ್ಟ ಹೆಚ್ಚಾಗುವುದರಿಂದ ರಕ್ತನಾಳಗಳಿಗೆ ಹಾನಿಯಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಹೃದಯ ಸಂಬಂಧಿ ಕಾಯಿಲೆಯೂ ಬರಬಹುದು.
ಮಧುಮೇಹವುಳ್ಳ ರೋಗಿಗಳು ತಮ್ಮ ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಾರೆ. ಮತ್ತು ವಹಿಸಬೇಕಾಗುತ್ತದೆ. ವಿಶೇಷವಾಗಿ ಅವರು ಸಿಹಿ ಪದಾರ್ಥಗಳನ್ನು ತಿನ್ನುವುದನ್ನು ಕಡಿಮೆ ಮಾಡಬೇಕಾಗುತ್ತದೆ. ಆದರೆ, ಅನೇಕರಿಗೆ ಟೀ ಕುಡಿಯುವ ಅಭ್ಯಾಸವಿರುತ್ತದೆ. ಅದನ್ನು ಬಿಡಲು ಬಹಳ ಕಷ್ಟವಾಗುತ್ತಿರುತ್ತದೆ. ಮಧುಮೇಹದ ನಂತರವೂ ಇವರು ಚಹಾ ತಪ್ಪಿಸಲು ಸಾಧ್ಯವೇ ಆಗುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ, ಮಧುಮೇಹ ರೋಗಿಗಳು ಹಾಲಿನ ಚಹಾ ಸೇವನೆ ಮಾಡುವುದು ತುಸು ಅಪಾಯಕಾರಿಯೇ ಸರಿ.
ಆರೋಗ್ಯ ತಜ್ಞರು ಹೇಳುವ ಪ್ರಕಾರ, ಮಧುಮೇಹಿಗಳು ಸಕ್ಕರೆಯೊಂದಿಗೆ ಮಾಡಿದ ಹಾಲಿನ ಚಹಾವನ್ನು ಕುಡಿಯುವುದನ್ನು ತಪ್ಪಿಸಬೇಕು. ಏಕೆಂದರೆ ದೇಹದಲ್ಲಿ ಇದು ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ. ಹೀಗಾಗಿ ಹಾಲು ಸೇರಿಸಿದ ಚಹಾವನ್ನು ಮಧುಮೇಹ ಹೊಂದಿರುವವರು ಕುಡಿಯಬಾರದು ಎಂದು ವೈದ್ಯರು ಸಲಹೆ ನೀಡುತ್ತಾರೆ. ಹಾಲು ಮತ್ತು ಚಹಾದ ಮಿಶ್ರಣವು ದೇಹಕ್ಕೆ ಹಾನಿಕರ.
ಗಿಡಮೂಲಿಕೆ ಚಹಾದಿಂದಾಗುವ ಪ್ರಯೋಜನಗಳು:ಮಧುಮೇಹ ನಿಯಂತ್ರಣಕ್ಕೆ ಗಿಡಮೂಲಿಕೆ ಚಹಾದ ಸೇವನೆಯು ಪ್ರಯೋಜನಕಾರಿಯಾಗಿದೆ, ಮಧುಮೇಹ ರೋಗಿಗಳಿಗೆ ಚಹಾವನ್ನು ತಪ್ಪಿಸಲು ಸಾಧ್ಯವಾಗದಿದ್ದರೆ ಅವರು ಗಿಡಮೂಲಿಕೆ ಚಹಾವನ್ನು ಸೇವಿಸಬೇಕು, ಏಕೆಂದರೆ ಅದರಿಂದ ಯಾವುದೇ ಹಾನಿಯಾಗುವ ಅಪಾಯವಿಲ್ಲ. ಕ್ಯಾಲ್ಸಿಯಂ, ಪೊಟ್ಯಾಸಿಯಮ್, ಮೆಗ್ನೀಸಿಯಮ್ ಮತ್ತು ವಿಟಮಿನ್ ಎ ಜೊತೆಗೆ, ಆಂಟಿ - ಆಕ್ಸಿಡೆಂಟ್‌ಗಳು, ಆಂಟಿಮೈಕ್ರೊಬಿಯಲ್‌ಗಳು ಗಿಡಮೂಲಿಕೆ ಚಹಾದಲ್ಲಿ ಕಂಡು ಬರುತ್ತವೆ. ಹೀಗಾಗಿ ಗಿಡಮೂಲಿಕೆ ಚಹಾ ಮಧುಮೇಹಕ್ಕೆ ಪ್ರಯೋಜನಕಾರಿಯಾಗಿದೆ.