ಕರ್ನಾಟಕ

karnataka

ETV Bharat / health

ಚಹಾ ಕುಡಿಯುವುದು ಒಳ್ಳೆಯದ್ದಾ,ಕೆಟ್ಟದ್ದಾ?: ಟೀ ಸೇವನೆ ಬಿಡಲು ಸಾಧ್ಯವೇ ಇಲ್ಲವೇ.. ಹಾಗಾದರೆ ಈ 5 ವಿಷಯಗಳನ್ನು ನೆನಪಿನಲ್ಲಿಡಿ! - HOW TO REDUCE TEA SIDE EFFECTS - HOW TO REDUCE TEA SIDE EFFECTS

ನಮ್ಮ ದಿನಚರಿ ಬೆಳಗ್ಗೆ ಟೀ ಕುಡಿಯುವುದರೊಂದಿಗೇನೇ ಆರಂಭವಾಗುತ್ತದೆ, ಇನ್ನು ದಿನವಿಡೀ ಕೆಲವರು ಅನೇಕ ಕಪ್​ ಚಹಾವನ್ನು ತಮ್ಮ ದೇಹಕ್ಕೆ ಸೇರಿಸಿಕೊಂಡಿರುತ್ತಾರೆ. ಇಂತಿಪ್ಪ ಚಹಾ ಅನೇಕ ಅಡ್ಡ ಪರಿಣಾಮಗಳನ್ನು ಹೊಂದಿದೆ ಎಂಬುದು ನಿಮಗೆ ಗೊತ್ತಿರಬೇಕಾಗುತ್ತದೆ. ನೀವು ಚಹಾದೊಂದಿಗೆ ಈ ರೀತಿ ಮಾಡಿದರೆ, ಇನ್ನಷ್ಟು ಅಪಾಯಕಾರಿ ಆಗಬಹುದು. ಇನ್ನು ನೀವು ಚಹಾ ಕುಡಿಯುವುದನ್ನು ನಿಲ್ಲಿಸಲು ಸಾಧ್ಯವಿಲ್ಲ, ಆದ್ದರಿಂದ ಚಹಾ ಸೇವನೆ ಜೊತೆಗೆ ಏನನ್ನು ಮಾಡಬಾರದು ಎಂಬುದನ್ನು ನಾವು ಈ ಲೇಖನದಲ್ಲಿ ಹೇಳಲು ಹೊರಟಿದ್ದೇವೆ

Etv Bharat
Etv Bharat (Etv Bharat)

By ETV Bharat Karnataka Team

Published : Jun 20, 2024, 10:40 AM IST

ಹೈದರಾಬಾದ್: ದೇಶದ ಬಹುತೇಕ ಭಾಗಗಳಲ್ಲಿ ಕಾಫಿ ಕುಡಿಯುವುದು ತುಂಬಾ ಅಪರೂಪ, ಆದರೆ ನಿತ್ಯವೂ ತಪ್ಪದೇ ಚಹಾ ಕುಡಿಯುವುದನ್ನು ನೋಡಿದ್ದೇವೆ. ಟೀ ಬಹುತೇಕ ಪ್ರತಿಯೊಬ್ಬರ ಜೀವನದ ಅವಿಭಾಜ್ಯ ಅಂಗವಾಗಿದೆ. ಬೆಳಗಿನ ಉಪಾಹಾರ ಆದ ಮೇಲೆ ಬಹುತೇಕ ಎಲ್ಲರೂ ಪ್ರತಿದಿನ ಚಹಾವನ್ನು ಕುಡಿದೇ ಕುಡಿಯುತ್ತಾರೆ. ಅನೇಕರು ದಿನವೊಂದರಲ್ಲಿ ಹಲವಾರು ಬಾರಿ ಚಹಾವನ್ನು ಸೇವಿಸುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಜನರು ಚಹಾ ವ್ಯಸನದ ಅಪಾಯವನ್ನು ಎದುರಿಸುವುದು ಸಹ ಅಷ್ಟೇ ಸತ್ಯ. ಚಹಾದ ಬಗ್ಗೆ ಕೆಲವು ತಪ್ಪುಗಳನ್ನು ಸಹ ಜನರು ಮಾಡುತ್ತಾರೆ. ಅದರ ಪರಿಣಾಮಗಳು ತುಂಬಾ ಭಾರವಾಗಿರುತ್ತದೆ ಎಂಬುದನ್ನು ಸಹ ನೆನಪಿನಲ್ಲಿಟ್ಟುಕೊಳ್ಳಬೇಕು.

ಈಗಾಗಲೇ ನೀವು ಟೀ ಕುಡಿಯುವುದರ ದಾಸರಾಗಿದ್ದೀರಿ ಎಂದರೆ ಈಗ ಚಹಾ ಕುಡಿಯುವುದನ್ನು ನಿಲ್ಲಿಸಲು ಸಾಧ್ಯವಿಲ್ಲ. ಆದರೆ, ಚಹಾದ ಅಡ್ಡಪರಿಣಾಮಗಳನ್ನು ತೊಡೆದುಹಾಕಲು ಅಥವಾ ಕಡಿಮೆ ಮಾಡಲು ಕೆಲವು ವಿಧಾನಗಳನ್ನು ಅನುಸರಿಸುವುದು ಉತ್ತಮ. ಇಲ್ಲಿ ನಾವು ಆ ವಿಧಾನಗಳ ಬಗ್ಗೆ ಹೇಳುತ್ತಿದ್ದೇವೆ. ಈ ಸಲಹೆಗಳನ್ನು ಅಳವಡಿಸಿಕೊಳ್ಳುವ ಮೂಲಕ ನೀವು ಚಹಾದಿಂದ ಉಂಟಾಗುವ ಹಾನಿಯನ್ನು ತೊಡೆದುಹಾಕಬಹುದು ಅಥವಾ ಕಡಿಮೆ ಮಾಡಬಹುದು. ಆ ಮಾರ್ಗಗಳೆಂದರೆ

  • ಚಹಾವನ್ನು ಹೆಚ್ಚು ಹೊತ್ತು ಕುದಿಸಬೇಡಿ: ಚಹಾವು ಕೆಲವು ಅಂಶಗಳನ್ನು ಒಳಗೊಂಡಿರುತ್ತದೆ (ಉದಾ-ಆಲ್ಕಲಾಯ್ಡ್‌ಗಳು) ಇದು ಹೆಚ್ಚು ಕುದಿಸಿದಾಗ ಸಕ್ರಿಯವಾಗುತ್ತದೆ. ಈ ಅಂಶಗಳು ನಿಮ್ಮ ದೇಹ ಮತ್ತು ಮೆದುಳಿನ ಮೇಲೆ ಬಹಳ ನಕಾರಾತ್ಮಕ ಪರಿಣಾಮ ಬೀರುತ್ತವೆ.
  • ಊಟವಾದ ತಕ್ಷಣ ಟೀ ಕುಡಿಯಬೇಡಿ: ಊಟವಾದ ತಕ್ಷಣ ಟೀ ಕುಡಿಯುವುದರಿಂದ ದೇಹದಲ್ಲಿ ಸತು ಮತ್ತು ಕಬ್ಬಿಣದ ಅಂಶಗಳ ಹೀರಿಕೊಳ್ಳುವಿಕೆಯನ್ನು ಕಡಿಮೆ ಮಾಡುತ್ತದೆ, ಇದು ದೇಹದಲ್ಲಿ ಕಬ್ಬಿಣದ ಕೊರತೆಯನ್ನು ಉಂಟುಮಾಡುತ್ತದೆ.
  • ಖಾಲಿ ಹೊಟ್ಟೆಯಲ್ಲಿ ಚಹಾ ಕುಡಿಯಬೇಡಿ: ಬಹುತೇಕರು ಹಾಸಿಗೆಯಲ್ಲಿ ಅಥವಾ ಬೆಳಗ್ಗೆ ಉಪಾಹಾರದೊಂದಿಗೆ ಚಹಾವನ್ನು ಕುಡಿಯುವ ಅಭ್ಯಾಸ ಹೊಂದಿದ್ದಾರೆ, ಇದು ತುಂಬಾ ಅಪಾಯಕಾರಿ. ಇದು ಹೊಟ್ಟೆಯಲ್ಲಿ ಸುಡುವ ಸಂವೇದನೆಯನ್ನು ಉಂಟುಮಾಡಬಹುದು ಮತ್ತು ನಿಮಗೆ ಗ್ಯಾಸ್ ಸಮಸ್ಯೆಯನ್ನುಂಟು ಮಾಡಬಹುದು. ಹಾಗಾಗಿ ಈ ಅಭ್ಯಾಸವನ್ನು ಬಿಡುವುದು ಉತ್ತಮ
  • ಚಹಾವನ್ನು ಮತ್ತೆ ಬಿಸಿ ಮಾಡಬೇಡಿ: ಚಹಾಕ್ಕೆ ಸಕ್ಕರೆಯನ್ನು ಸೇರಿಸಲಾಗುತ್ತದೆ ಮತ್ತು ಆದ್ದರಿಂದ ಅದನ್ನು ಮತ್ತೆ ಬಿಸಿ ಮಾಡುವುದರಿಂದ ಸಕ್ಕರೆಯ ಕಾರಣದಿಂದಾಗಿ ಬ್ಯಾಕ್ಟೀರಿಯಾದ ಬೆಳವಣಿಗೆಯ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ. ಇದರೊಂದಿಗೆ, ಅದರ ಪರಿಮಳ ಮತ್ತು ಉತ್ಕರ್ಷಣ ನಿರೋಧಕ ಗುಣಲಕ್ಷಣಗಳನ್ನೂ ಸಹ ಅದು ಕಡಿಮೆ ಮಾಡುತ್ತದೆ.
  • ಒಂದು ದಿನದಲ್ಲಿ ಹೆಚ್ಚು ಚಹಾ ಸೇವಿಸಬೇಡಿ: ವೈದ್ಯರ ಪ್ರಕಾರ, ಒಬ್ಬ ವ್ಯಕ್ತಿಯು ದಿನಕ್ಕೆ ಒಂದು ಅಥವಾ ಎರಡು ಕಪ್​​ಗಿಂತ ಹೆಚ್ಚಿನ ಚಹಾ ಸೇವನೆ ಮಾಡಬಾರದು.

ಇದನ್ನು ಓದಿ:ಚಪಾತಿ Vs ರೈಸ್: ಆರೋಗ್ಯಕ್ಕೆ ಯಾವುದು ಒಳ್ಳೆಯದು ಗೊತ್ತಾ? ಈ ಬಗ್ಗೆ ಸಂಶೋಧನೆ ಏನು ಹೇಳುತ್ತೆ? - Chapati Vs Rice Health Benefits

ABOUT THE AUTHOR

...view details