ಹೈದರಾಬಾದ್:ಆ್ಯಂಟಿ ಬಯೋಟಿಕ್ಗಳ ಅತಿಯಾದ ಬಳಕೆ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಇದು ಆಂಟಿಮೈಕ್ರೊಬಿಯಲ್ ಪ್ರತಿರೋಧ, ಆರೋಗ್ಯ ವೆಚ್ಚದಲ್ಲಿ ಹೆಚ್ಚಳ, ಆ್ಯಂಟಿಬಯೋಟಿಕ್ ಪರಿಣಾಮವನ್ನು ಕುಗ್ಗಿಸುವಿಕೆ ನಿರೋಧಕ ರೋಗಕಾರಕಗಳ ಹರಡುವಿಕೆ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಯನ್ನು ಹೊಂದಿದ್ದು, ಮಿತಿ ಮೀರಿದ ಬಳಕೆ ಹೊರತಾಗಿ ವಿವೇಚನಾಯುಕ್ತ ಬಳಕೆ ಅಗತ್ಯವನ್ನು ತೋರಿಸುತ್ತದೆ.
ಆ್ಯಂಟಿ ಬಯೋಟಿಕ್ಗಳ ಮಿತಿ ಮೀರಿದ ಶಿಫಾರಸು, ಅಪೂರ್ಣ ಚಿಕಿತ್ಸೆಗಳು, ನಿಯಂತ್ರಣದ ಕೊರತೆ, ಸಾರ್ವಜನಿಕ ನಿರ್ಲಕ್ಷ್ಯ ಮತ್ತು ಅಸಮರ್ಪಕ ಔಷಧಗಳ ಅಭಿವೃದ್ಧಿಯು ಆ್ಯಂಟಿ ಬಯೋಟಿಕ್ಗಳ ತಪ್ಪು ಬಳಕೆ ಮತ್ತು ಅಧಿಕ ಬಳಕೆಗೆ ಕಾರಣವಾಗುತ್ತದೆ. ಈ ಆ್ಯಂಟಿ ಬಯೋಟಿಕ್ ಕುರಿತ ಅಜ್ಞಾನವೂ ಜಾಗತಿಕ ಬಿಕ್ಕಟ್ಟಿಗೆ ಕಾರಣವಾಗಿದ್ದು, ಇದು ಸಾರ್ವಜನಿಕ ಆರೋಗ್ಯದ ಮೇಲೆ ಬೆದರಿಕೆ ಒಡ್ಡುತ್ತವೆ.
ಆ್ಯಂಟಿಬಯೋಟಿಕ್ಗಳ ಯಥೇಚ್ಛ ಬಳಕೆಯಿಂದ ಕಿಡ್ನಿ , ಲಿವರ್ ಮತ್ತು ನರ ವ್ಯವಸ್ಥೆ ಮೇಲೆ ಹೆಚ್ಚಿನ ಪರಿಣಾಮ ಬೀರಲಿದೆ ಎಂದು ಮೂತ್ರಪಿಂಡಶಾಸ್ತ್ರಜ್ಞರು (ನೆಫ್ರಾಲಜಿಸ್ಟ್) ತಿಳಿಸಿದ್ದಾರೆ. ಇದರ ಹೊರತಾಗಿ ಆ್ಯಂಟಿಬಯೋಟಿಕ್ಗಳ ಅಸಮಪರ್ಕ ಬಳಕೆಯು ಕಿಡ್ನಿ ಮೇಲೆ ಹೆಚ್ಚಿನ ಹಾನಿ ಮಾಡುವುದು ಸಾಮಾನ್ಯವಾಗಿದೆ ಎಂದು ಅವರು ತಿಳಿಸಿದ್ದಾರೆ.
ಹೈದರಾಬಾದ್ನ ಏಷ್ಯನ್ ಇನ್ಸಿಟಿಟ್ಯೂಟ್ ಆಫ್ ನೆಫ್ರಾಲಜಿ ಮತ್ತು ಯುರಾಲಾಜಿಯ ಮೂತ್ರಪಿಂಡಶಾಸ್ತ್ರಜ್ಞ ಡಾ ಎಂವಿ ರಾವ್ ಹೇಳುವಂತೆ, ವೈದ್ಯಕೀಯ ಶಿಫಾರಸ್ಸಿಲ್ಲದೇ ಆ್ಯಂಟಿ ಬಯೋಟಿಕ್ಗಳ ಮಾರಾಟದಿಂದ ಅತಿಯಾದ ಬಳಕೆ ಮತ್ತು ದುರ್ಬಳಕೆ ನಡೆಯುತ್ತಿದೆ. ಭಾರತದಲ್ಲಿ ಶಿಫಾರಸ್ಸಿನಲ್ಲದೇ ಔಷಧಗಳ ಮಾರಾಟವನ್ನು ತಡೆಯಬೇಕಿದೆ ಎಂದ ಅವರು ಸಲಹೆ ನೀಡಿದ್ದಾರೆ.
ಆ್ಯಂಟಿಬಯೋಟಿಕ್ಗಳ ಮಿತಿಮೀರಿದ ಶಿಫಾರಸು ಮತ್ತು ಆ್ಯಂಟಿಬಯೋಟಿಕ್ ಕೋರ್ಸ್ ಅನ್ನು ಸಂಪೂರ್ಣ ಮಾಡದೇ ಇರುವುದು ಮೂತ್ರಪಿಂಡದ ಹಾನಿ ಮತ್ತು ಆ್ಯಂಟಿಬಯೋಟಿಕ್ ನಿರೋದಕ ಸೋಂಕುಗಳ ಹೆಚ್ಚಳಕ್ಕೆ ಕಾರಣವಾಗುತ್ತದೆ ಎನ್ನುತ್ತಾರೆ ಡಾ ಶ್ರೀಕಾಂತ್. ವಿಶೇಷ ಜಿನೆಟಿಕ್ಗಳಿಂದ ಅವುಗಳನ್ನು ತಯಾರಿಸಲಾಗುತ್ತದೆ. ಅಮೋಕ್ಸಿಸಿಲಿನ್‌ನಂತಹ ಪೆನ್ಸಿಲಿನ್ ಗುಂಪುಗಳು ಈ ಆ್ಯಂಟಿಬಯೋಟಿಕ್ ಬಳಕೆಯಿಂದಾಗಿ ಮೂತ್ರಪಿಂಡದ ಸಮಸ್ಯೆಗೆ ಕಾರಣವಾಗುತ್ತದೆ. ಅಷ್ಟೇ ಅಲ್ಲದೇ ಇದರಿಂದ ಜೀವಕ್ಕೆ ಹಾನಿಯಾಗುವ ಸಾಧ್ಯತೆ ಇದೆ. ಅಷ್ಟೇ ಅಲ್ಲ ಮಾರಣಾಂತಿಕ ಮೂತ್ರದ ಸೋಂಕು ಬೆಳೆಯಬಹುದು. ಇದು ಮೂತ್ರದಿಂದ ರಕ್ತದಲ್ಲಿ ಯಾವುದೇ ಸಮಯದಲ್ಲಿ ಬೆರೆತು ರಕ್ತದ ಸೆಪ್ಸಿಸ್ಗೆ ಕಾರಣವಾಗಬಹುದು.
ಇಂತಹ ಸೋಂಕು ಮುಂದೆ ಕಿಡ್ನಿ ಹಾನಿಗೆ ಕಾರಣವಾಗುತ್ತದೆ. ಸೆಪ್ಟಿಕ್ ರಕ್ತವೂ ಕಿಡ್ನಿಯ ಕಾರ್ಯವನ್ನು ನಿಲ್ಲಿಸಬಹುದು. ಇದು ಕಿಡ್ನಿಯ ಕಾರ್ಯಕ್ಕೆ ಅಡ್ಡಿಯುಂಟು ಮಾಡುತ್ತದೆ. ಈ ಹಿನ್ನೆಲೆಯಲ್ಲಿ ಈ ಆ್ಯಂಟಿಬಯೋಟಿಕ್ಗಳ ಅಜಾಗರೂಕ ಬಳಕೆಯ ದುಷ್ಪರಿಣಾಮಗಳಿಂದ ಸಮುದಾಯವನ್ನು ರಕ್ಷಿಸಲು ವಿವಿಧ ಕ್ರಮಗಳನ್ನು ಕೈಗೊಳ್ಳಬೇಕು ಎಂದು ನೆಫ್ರಾಲಜಿಸ್ಟ್ಗಳು ಒತ್ತಿ ಹೇಳಿದ್ದಾರೆ. ಅಲ್ಲದೇ ಈ ಸಂಬಂಧ ಜನರಲ್ಲಿ ತಿಳಿವಳಿಕೆ ಹೆಚ್ಚಿಸುವುದು ಅತ್ಯಗತ್ಯ ಎಂದು ಪ್ರತಿಪಾದಿಸಿದ್ದಾರೆ.
ಆಂಟಿಮೈಕ್ರೊಬಿಯಲ್ಗಳ ಪರಿಣಾಮಕಾರಿ ಬಳಕೆಯನ್ನು ಹೆಚ್ಚಿಸಲು ಆಂಟಿಮೈಕ್ರೊಬಿಯಲ್ ಉಸ್ತುವಾರಿ ಕಾರ್ಯಕ್ರಮಗಳು ಅಗತ್ಯವಿದೆ. ಈ ಗುರಿಯು ರೋಗಿಗಳ ಆರೋಗ್ಯವನ್ನು ಸುಧಾರಿಸುವುದು, ಸುಧಾರಿಸುವುದು, ಸೂಕ್ಷ್ಮಜೀವಿಯ ಪ್ರತಿರೋಧವನ್ನು ಕಡಿಮೆ ಮಾಡುವುದು ಮತ್ತು ಔಷಧ-ನಿರೋಧಕ ಜೀವಿಗಳಿಂದ ಸೋಂಕನ್ನು ತಡೆಗಟ್ಟುವ ಗುರಿ ಹೊಂದಿದೆ
ಆ್ಯಂಟಿಬಯೋಟಿಕ್ಗಳ ಡೋಸೆಜ್, ಅವಧಿ ಮತ್ತು ನಿರ್ವಹಣೆ ವಿಧಾನ ಕುರಿತು ವೃತ್ತಿಪರರಿಗೆ ಮಾರ್ಗದರ್ಶನ ನೀಡುತ್ತದೆ. ಪ್ರಿಸ್ಕ್ರಿಪ್ಷನ್ ರಹಿತ ಆಂಟಿಬಯೋಟಿಕ್‌ಗಳನ್ನು ಮಾರಾಟದ ವಿರುದ್ದ ಕಟ್ಟು ನಿಟ್ಟಿನ ಕ್ರಮಕ್ಕೆ ತಜ್ಞರು ಇದೇ ವೇಳೆ ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಭಾರತದ ಕೋಟ್ಯಂತರ ಮಹಿಳೆಯರನ್ನು ಕಾಡುತ್ತಿದೆ ಎಂಡೊಮೆಟ್ರಿಯೊಸಿಸ್: ಏನಿದು?