ಒಂದು ತಿಂಗಳ ಕಾಲ ಈರುಳ್ಳಿಯನ್ನು ಆಹಾರದಲ್ಲಿ ಸೇವಿಸದಿದ್ದರೆ ದೇಹದಲ್ಲಿ ಕೆಲವು ಬದಲಾವಣೆಗಳು ಸಂಭವಿಸಬಹುದು ಎನ್ನುತ್ತಾರೆ ಹಿರಿಯ ಆಹಾರ ತಜ್ಞೆ ಡಾ. ಸ್ವಾತಿ. ಮೇಲಾಗಿ ಹಲವು ಆರೋಗ್ಯ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ ಎಂದು ಅವರು ಹೇಳುತ್ತಾರೆ.
ಜೀರ್ಣಕ್ರಿಯೆ ಸಮಸ್ಯೆ: ಈರುಳ್ಳಿಯಲ್ಲಿ ಡೈಟರಿ ಫೈಬರ್ ಅಂಶ ಚೆನ್ನಾಗಿದೆ. ಆರೋಗ್ಯಕರ ಜೀರ್ಣಾಂಗ ವ್ಯವಸ್ಥೆಗೆ ಇದು ಅತ್ಯಗತ್ಯ. ಒಂದು ತಿಂಗಳು ಈರುಳ್ಳಿ ತಿನ್ನದೇ ಇದ್ದರೆ ದೇಹದಲ್ಲಿ ನಾರಿನಂಶ ಕಡಿಮೆಯಾಗುವ ಸಾಧ್ಯತೆ ಇದೆ. ಮಲಬದ್ಧತೆ ಮತ್ತು ಇತರ ಜೀರ್ಣಾಂಗದ ಸಮಸ್ಯೆಗಳು ಉದ್ಭವಿಸಬಹುದು ಎನ್ನುತ್ತಾರೆ ಡಯಟಿಷಿಯನ್ ಸ್ವಾತಿ.
2017 ರಲ್ಲಿ "ಇಂಟರ್ನ್ಯಾಷನಲ್ ಜರ್ನಲ್ ಆಫ್ ಗ್ಯಾಸ್ಟ್ರೋಎಂಟ್ರಾಲಜಿ" ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ಈರುಳ್ಳಿಯನ್ನು ಸೇವಿಸದಿರುವುದು ನಮಗೆ ಡೈಟರಿ ಫೈಬರ್ ಕಡಿಮೆ ಒದಗಿಸುತ್ತದೆ. ಇದರಿಂದಾಗಿ ಮಲಬದ್ಧತೆ ಮತ್ತು ಅಜೀರ್ಣದಂತಹ ಜೀರ್ಣಕ್ರಿಯೆ ಸಮಸ್ಯೆಗಳ ಸಾಧ್ಯತೆಯನ್ನು ಹೆಚ್ಚಿಸುತ್ತದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ಚೀನಾದ ಶಾಂಘೈ ಇನ್‌ಸ್ಟಿಟ್ಯೂಟ್ ಆಫ್ ಪಬ್ಲಿಕ್ ಹೆಲ್ತ್‌ನ ಪ್ರಾಧ್ಯಾಪಕ ಡಾ. ಲಿ-ಕಿಯಾಂಗ್ ವಾಂಗ್ ಸಂಶೋಧನೆಯಲ್ಲಿ ಭಾಗವಹಿಸಿದ್ದರು. ಆಹಾರದ ನಾರಿನಂಶ ಹೇರಳವಾಗಿರುವ ಈರುಳ್ಳಿಯನ್ನು ತಿನ್ನದೇ ಇರುವುದರಿಂದ ಜೀರ್ಣಕ್ರಿಯೆಗೆ ತೊಂದರೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದರು.
ಆ್ಯಂಟಿ ಇನ್ಫ್ಲೆಮೆಟರಿ ಶಕ್ತಿ ಕಡಿಮೆಯಾಗುತ್ತದೆ:ಸಾಮಾನ್ಯವಾಗಿ ಈರುಳ್ಳಿಯಲ್ಲಿರುವ ಆಲಿಸಿನ್, ಕ್ವೆರ್ಸೆಟಿನ್, ಆ್ಯಂಟಿ ಇನ್ಫ್ಲೆಮೆಟರಿ ಮತ್ತು ಆ್ಯಂಟಿ ಆ್ಕಕ್ಸಿಡೆಂಟ್ ಗುಣಗಳನ್ನು ಹೊಂದಿವೆ. ಹಾಗಾಗಿ ಈರುಳ್ಳಿ ಸೇವಿಸದಿದ್ದರೆ ದೇಹದಲ್ಲಿ ಆ್ಯಂಟಿ ಇನ್ಫ್ಲೆಮೆಟರಿ ಹಾಗೂ ಆಕ್ಸಿಡೇಟಿವ್ ಸ್ಟ್ರೆಸ್ ಉಂಟಾಗುವ ಸಾಧ್ಯತೆ ಇರುತ್ತದೆ. ಇದು ಕಾಲಾನಂತರದಲ್ಲಿ ದೀರ್ಘಕಾಲದ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ ಎನ್ನುತ್ತಾರೆ ಡಾ.ಸ್ವಾತಿ.