ಕರ್ನಾಟಕ

karnataka

ರಾಜ್ಯದ ಚಹಾ ಪ್ರಿಯರಿಗೆ ಆಘಾತಕಾರಿ ಸುದ್ದಿ: ಟೀ ಪುಡಿಯಲ್ಲಿ ಕೃತಕ ಬಣ್ಣ, ರಾಸಾಯನಿಕ ಅಂಶ ಪತ್ತೆ.. ಬಳಸುವ ಮುನ್ನ ಯೋಚಿಸಿ! - SHOCKING NEWS OF TEA POWDER

By ETV Bharat Karnataka Team

Published : Jul 12, 2024, 11:05 PM IST

ಚಹಾ ಎಲೆಗಳು ಮತ್ತು ಪುಡಿಯಲ್ಲಿ ರಾಸಾಯನಿಕ ಹಾಗೂ ಕೃತಕ ಬಣ್ಣ ಬಳಕೆ ಮಾಡುತ್ತಿರುವ ಅಂಶ ಬಯಲಾಗಿದೆ. ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಒಟ್ಟು 48 ಚಹಾ ಮಾದರಿಗಳನ್ನು ಆರೋಗ್ಯ ಇಲಾಖೆ ಸಂಗ್ರಹಿಸಿದೆ.

ಚಹಾ ಪುಡಿಯಲ್ಲಿ ಕೃತಕ ಬಣ್ಣ
ಚಹಾ ಪುಡಿಯಲ್ಲಿ ಕೃತಕ ಬಣ್ಣ (ETV Bharat)

ನವದೆಹಲಿ:ಕರ್ನಾಟಕದ ಚಹಾ ಪ್ರಿಯರಿಗೆ ಆಘಾತಕಾರಿ ಹಾಗೂ ಆತಂಕಕಾರಿ ಸುದ್ದಿಯೊಂದು ಇದೆ. ಟೀ ಪುಡಿಯಲ್ಲಿ ರಾಸಾಯನಿಕ ಹಾಗೂ ಕೃತಕ ಬಣ್ಣ ಬಳಕೆ ಮಾಡುತ್ತಿರುವ ಅಂಶವನ್ನು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್​ಎಸ್​ಎಸ್​​ಎಐ) ಪತ್ತೆ ಹಚ್ಚಿದೆ.

ಚಹಾ ಎಲೆಗಳು ಮತ್ತು ಪುಡಿಯಲ್ಲಿ ಹೆಚ್ಚಿನ ಪ್ರಮಾಣದ ಕೀಟನಾಶಕಗಳು ಮತ್ತು ಬಣ್ಣಗಳನ್ನು ಬಳಸುತ್ತಿರುವುದು ಕಂಡುಬಂದಿದೆ. ಟೀ ಪುಡಿಯಲ್ಲಿ ರೋಡಮೈನ್-ಬಿ ಮತ್ತು ಕಾರ್ಮೋಸಿನ್‌ನಂತಹ ಬಣ್ಣದ ಬಳಕೆಯು ತನಿಖೆಯಿಂದ ತಿಳಿದು ಬಂದಿದೆ. ಈ ಬಣ್ಣವು ವಿಷಕಾರಿಯಾಗಿದ್ದು, ಆರೋಗ್ಯಕ್ಕೆ ಹಾನಿಯುಂಟು ಮಾಡುತ್ತದೆ. ರೋಡಮೈನ್-ಬಿ ಎಂಬುದು ಬಟ್ಟೆಗಳು, ಕಾಗದ, ಚರ್ಮ, ಮುದ್ರಣ ಮತ್ತು ಪ್ಲಾಸ್ಟಿಕ್‌ಗಳಿಗೆ ಬಣ್ಣ ನೀಡುವ ರಾಸಾಯನಿಕವಾಗಿದೆ. ಇದನ್ನು ಕೆಂಪು ಮತ್ತು ಗುಲಾಬಿ ಬಣ್ಣಕ್ಕೆ ತಿರುಗಲು ಬಳಸಲಾಗುತ್ತದೆ.

ಎಫ್​ಎಸ್​ಎಸ್​​ಎಐ ಮೂಲಗಳ ಪ್ರಕಾರ, ಕೀಟನಾಶಕಗಳು ಮತ್ತು ರಸಗೊಬ್ಬರಗಳನ್ನು ಚಹಾ ಎಲೆಗಳಿಗೆ ಸೇರಿಸಲಾಗುತ್ತದೆ, ಇದು ಕ್ಯಾನ್ಸರ್​ಗೆ ಕಾರಣವಾಗಬಹುದು. ಈ ತೋಟಗಳಲ್ಲಿ ಚಹಾ ಬೆಳೆಯುವಾಗ ಹೆಚ್ಚಿನ ಪ್ರಮಾಣದಲ್ಲಿ ಕೀಟನಾಶಕಗಳನ್ನು ಬಳಸಲಾಗುತ್ತದೆ. ಹೀಗಾಗಿ ಕರ್ನಾಟಕದ ಆರೋಗ್ಯ ಇಲಾಖೆಯು ಶೀಘ್ರದಲ್ಲೇ ಇಂತಹ ಚಹಾ ತೋಟಗಳ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಿದೆ ಎಂದು ವರದಿಯಾಗಿದೆ.

ಉತ್ತರ ಕರ್ನಾಟಕದಲ್ಲಿ ಮಾದರಿಗಳ ಸಂಗ್ರಹ:ಆರೋಗ್ಯ ಇಲಾಖೆಯು ಇದುವರೆಗೆ ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಒಟ್ಟು 48 ಚಹಾ ಮಾದರಿಗಳನ್ನು ಸಂಗ್ರಹಿಸಿದೆ. ಬಾಗಲಕೋಟೆ, ಬೀದರ್, ಗದಗ, ಧಾರವಾಡ, ಹುಬ್ಬಳ್ಳಿ, ವಿಜಯನಗರ, ಕೊಪ್ಪಳ ಮತ್ತು ಬಳ್ಳಾರಿಯಂತಹ ಜಿಲ್ಲೆಗಳಲ್ಲಿ ಪರಿಶೀಲನೆ ಮಾಡಲಾಗಿದೆ. ಚಹಾದಲ್ಲಿ ಕೀಟನಾಶಕಗಳ ಪ್ರಮಾಣ ನಿಗದಿತ ಮಿತಿಗಿಂತ ಹೆಚ್ಚಿರುವುದು ಕಂಡುಬಂದಿದೆ.

ಈ ಹಿಂದೆ ಕರ್ನಾಟಕ ಸರ್ಕಾರವು ಗೋಬಿ ಮಂಚೂರಿಯನ್, ಪಾನಿ ಪುರಿ ಮತ್ತು ಕಬಾಬ್‌ಗಳಿಗೆ ಕೃತಕ ಬಣ್ಣ ಬಳಕೆ ಮಾಡುವುದನ್ನು ನಿಷೇಧಿಸಿತ್ತು. ಬೀದಿಗಳಲ್ಲಿ ಮಾರಾಟವಾಗುವ ಈ ಆಹಾರ ಪದಾರ್ಥಗಳಲ್ಲಿ ಕೃತಕ ಬಣ್ಣಗಳನ್ನು ಸಹ ಬಳಸಲಾಗುತ್ತಿತ್ತು. ಕಬಾಬ್ ತಯಾರಿಕೆಯಲ್ಲಿ ಯಾವುದೇ ಕೃತಕ ಬಣ್ಣಗಳನ್ನು ಉಪಯೋಗಿಸುವಂತಿಲ್ಲ. ಕೃತಕ ಬಣ್ಣಗಳು ಬಳಕೆದಾರರ ಆರೋಗ್ಯದ ಮೇಲೆ ತೀವ್ರ ಪರಿಣಾಮ ಉಂಟುಮಾಡುತ್ತಿವೆ. ಈ ಆದೇಶ ಉಲ್ಲಂಘನೆಯ ಪ್ರಕರಣಗಳು ಕಂಡುಬಂದಲ್ಲಿ ತಯಾರಿಸುವವರ ಮೇಲೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ-2006ರಡಿ 7 ವರ್ಷಗಳಿಂದ ಜೀವಾವಧಿ ಅವಧಿಯವರೆಗೆ ಜೈಲು ಶಿಕ್ಷೆ ಮತ್ತು 10 ಲಕ್ಷ ರೂ. ಗಳವರೆಗೆ ದಂಡ ವಿಧಿಸುವ ಬಗ್ಗೆ ಎಚ್ಚರಿಸಲಾಗಿದೆ.

ಇದನ್ನೂ ಓದಿ:ರಾಜ್ಯಾದ್ಯಂತ ಮೀನು, ಚಿಕನ್‌ ಕಬಾಬ್​ಗೆ ಕೃತಕ ಬಣ್ಣ ಬಳಕೆ ನಿಷೇಧ: ಉಲ್ಲಂಘಿಸಿದರೆ ಜೈಲು ಶಿಕ್ಷೆ, ಭಾರೀ ದಂಡ!

ABOUT THE AUTHOR

...view details