ನವದೆಹಲಿ:ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಐಆರ್‌ಡಿಎಐ) ಆರೋಗ್ಯ ವಿಮಾ ಪಾಲಿಸಿಗಳನ್ನು ಖರೀದಿಸಲು ವಯಸ್ಸಿನ ಮಿತಿ ತೆಗೆದುಹಾಕಿದ್ದು, ಈ ನಿಯಮ 2024ರ ಏಪ್ರಿಲ್ 1ರಿಂದ ಜಾರಿಗೆ ಬರಲಿದೆ.
ಹೊಸ ನಿಯಮದ ಪ್ರಕಾರ, ವಯಸ್ಸಿನ ಹೊರತಾಗಿ ಯಾರು ಬೇಕಾದರೂ ಹೊಸ ಆರೋಗ್ಯ ವಿಮೆ ಖರೀದಿಸಲು ಅರ್ಹರಾಗಿರುತ್ತಾರೆ. ಎಲ್ಲಾ ವಯೋಮಾನದ ವಿಮಾದಾರರಿಗೂ ಆರೋಗ್ಯ ವಿಮೆ ಖರೀದಿಸಲು ಅನುಕೂಲ ಮಾಡಿಕೊಡಲಾಗಿದೆ. ವಿಮಾದಾರರು ವಿಶೇಷವಾಗಿ ಹಿರಿಯ ನಾಗರಿಕರು, ವಿದ್ಯಾರ್ಥಿಗಳು, ಮಕ್ಕಳು, ಹೆರಿಗೆ ಮತ್ತು ಪ್ರಾಧಿಕಾರದಿಂದ ನಿರ್ದಿಷ್ಟಪಡಿಸಿದ ಯಾವುದೇ ಇತರ ಗುಂಪಿಗೆ ಸೇರಿದವರು ಕೂಡಾ ವಿಮೆ ಸೌಲಭ್ಯ ಹೊಂದಬಹುದು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.