ಕರ್ನಾಟಕ

karnataka

ETV Bharat / health

ಗರ್ಭಕಂಠ ಕ್ಯಾನ್ಸರ್​​ಗೆ ಇಮ್ಯೂನೋಥೆರಪಿ ಪರಿಣಾಮಕಾರಿ: ಅಧ್ಯಯನ - ಗರ್ಭಕಂಠ ಕ್ಯಾನ್ಸರ್

ಭಾರತದಲ್ಲಿ ಕೂಡ ಮಹಿಳೆಯರಿಗೆ ಕಾಡುವ ಕ್ಯಾನ್ಸರ್​ನಲ್ಲಿ ಗರ್ಭಕಂಠ ಕ್ಯಾನ್ಸರ್​ ಎರಡನೇ ಸ್ಥಾನವನ್ನು ಹೊಂದಿದ್ದು, ಈ ರೋಗಕ್ಕೆ ಲಸಿಕೆಗಳು ಪರಿಣಾಮಕಾರಿ ಚಿಕಿತ್ಸೆಯಾಗಿದೆ.

immunotherapy-effective-way-to-treat-for-cervical-cancer
immunotherapy-effective-way-to-treat-for-cervical-cancer

By ETV Bharat Karnataka Team

Published : Feb 3, 2024, 12:35 PM IST

ಹೈದರಾಬಾದ್​:ಇಮ್ಯೂನೋಥೆರಪಿ ಮೂಲಕ ಗರ್ಭಕಂಠ ಕ್ಯಾನ್ಸರ್​​ಗೆ ಆರಂಭಿಕ ಹಂತದಲ್ಲೇ ಪರಿಣಾಮಕಾರಿಯಾಗಿ ಚಿಕಿತ್ಸೆ ನೀಡಬಹುದಾಗಿದೆ ಎಂದು ಅಮೆರಿಕದ ರೊಟ್ಜರ್​ ಕ್ಯಾನ್ಸರ್​ ಸಂಸ್ಥೆ ತಿಳಿಸಿದೆ. ಗೈನಕಾಲಜಿ ಅಂಕೋಲಾಜಿಯಲ್ಲಿ ಈ ಅಧ್ಯಯನವನ್ನ ಪ್ರಕಟಿಸಲಾಗಿದೆ. ಹ್ಯೂಮನ್​ ಪುಪಿಲೊವೈರಸ್​ (ಎಚ್​ಪಿವಿ) ಲಸಿಕೆ ಲಭ್ಯತೆ ಹೊರತಾಗಿಯು ಇಂದು ಮಧ್ಯಮ ಆದಾಯ ಮತ್ತು ಕಡಿಮೆ ಆದಾಯದ ದೇಶದಲ್ಲಿ ಮಹಿಳೆಯರಲ್ಲಿ ಸಾವಿಗೆ ಕಾರಣವಾಗುತ್ತಿರುವ ಕ್ಯಾನ್ಸರ್​ನಲ್ಲಿ ಗರ್ಭಕಂಠ ಕ್ಯಾನ್ಸರ್​​ ಎರಡನೇ ಸ್ಥಾನ ಪಡೆದಿದೆ.

ಭಾರತದಲ್ಲಿ ಕೂಡ ಮಹಿಳೆಯರಿಗೆ ಕಾಡುವ ಕ್ಯಾನ್ಸರ್​ನಲ್ಲಿ ಗರ್ಭಕಂಠ ಕ್ಯಾನ್ಸರ್​ ಎರಡನೇ ಸ್ಥಾನವನ್ನು ಹೊಂದಿದ್ದು, ಇದು ಶೇ 18ರಷ್ಟು ಹೊಸ ಕ್ಯಾನ್ಸರ್​ ಪತ್ತೆಗೆ ಕಾರಣವಾಗುತ್ತಿದೆ ಎಂದು ಐಸಿಎಂಆರ್​ ತಿಳಿಸಿದೆ.

ಪೆಂಬ್ರೊಲಿಜುಮಾಬ್ ಲಸಿಕೆ ಪರಿಣಾಮಕಾರಿ: ಅಮೆರಿಕದ ಫುಡ್​ ಅಂಡ್​ ಡ್ರಗ್​ ಆಡ್ಮಿನಿಸ್ಟ್ರೇಷನ್ (ಎಫ್​ಡಿಎ)​, ಅಭಿವೃದ್ಧಿ ಹೊಂದಿದ ಗರ್ಭಕಂಠ ಕ್ಯಾನ್ಸರ್​ ಚಿಕಿತ್ಸೆಗಾಗಿ ಕೀಮೋಥೆರಪಿ ಮತ್ತು ವಿಕಿರಣ ಚಿಕಿತ್ಸೆಯೊಂದಿಗೆ ಇಮ್ಯುನೊಥೆರಪಿ ಪೆಂಬ್ರೊಲಿಜುಮಾಬ್ ಲಸಿಕೆಯನ್ನು ಅನುಮೋದಿಸಿದೆ. ಇದು ಗರ್ಭಕಂಠ ಕ್ಯಾನ್ಸರ್​​ಗೆ ಹೊಸ ಚಿಕಿತ್ಸಕ ವಿಧಾನವಾದ ಇಮ್ಯುನೊಥೆರಪಿ ಉದ್ದೇಶಿತ ಏಜೆಂಟ್‌ಗಳ ಸಂಯೋಜನೆಯನ್ನು ಹೊಂದಿದೆ.

ಇಮ್ಯುನೊಥೆರಪಿಯು ಕ್ಯಾನ್ಸರ್ ಕೋಶಗಳನ್ನು ನಿರ್ಮೂಲನೆ ಮಾಡಲು ಸಹಾಯ ಮಾಡಲು ಪ್ರತಿರಕ್ಷಣಾ ವ್ಯವಸ್ಥೆಯ ಶಕ್ತಿಯನ್ನು ಬಳಕೆ ಮಾಡುತ್ತದೆ. ಇದು ಸಾಂಪ್ರದಾಯಿಕ ಕಿಮೋ ಥೆರಪಿಗಿಂತ ಭಿನ್ನ ಪರಿಣಾಮ ಹೊಂದಿದ್ದು, ಸಹಿಷ್ಣು ಶಕ್ತಿಯನ್ನು ಹೊಂದಿದೆ.

ಸಾವಿನ ಅಪಾಯ ಕಡಿಮೆ: ಎಚ್​ಪಿವಿ ಸೋಂಕಿನಿಂದ ಉಂಟಾಗುವ ಗರ್ಭಕಂಠ ಕ್ಯಾನ್ಸರ್​​ಗೆ ತಡೆಯಲು ಎಚ್​ಪಿವಿ ಲಸಿಕೆಗಳೇ ಸಹಾಯ ಮಾಡುತ್ತದೆ. ಪೆಂಬ್ರೊಲಿಜುಮಾಬ್ ಲಸಿಕೆ ಜೊತೆಗೆ ಕೀಮೋಥೆರಪಿ ಗರ್ಭಕಂಠದ ಕ್ಯಾನ್ಸರ್ ರೋಗಿಗಳಲ್ಲಿ ಸಾವಿನ ಅಪಾಯವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ.

ಈ ಹಿಂದೆ ಇಮ್ಯುನೊಥೆರಪಿ ಹೆಚ್ಚು ಪರಿಣಾಮಕಾರಿ ಚಿಕಿತ್ಸೆಯಲ್ಲಿ ಬಳಕೆ ಮಾಡಲಾಗುತ್ತಿತ್ತು. ಇದೀಗ ಸ್ಥಳೀಯವಾಗಿ ಅಭಿವೃದ್ಧಿ ಹೊಂದಿದ ಗರ್ಭಕಂಠದ ಕ್ಯಾನ್ಸರ್‌ ಚಿಕಿತ್ಸೆಯಲ್ಲಿ ಕಿಮೊ ರೇಡಿಯೇಶನ್‌ಗೆ ಇಮ್ಯುನೊಥೆರಪಿ ಲಸಿಕೆ ನೀಡುವುದು ಹೆಚ್ಚಿನ ಪ್ರಯೋಜನಕಾರಿಯಾಗಿದ್ದು, ಇದರಿಂದ ರೋಗಿಗಳು ಗುಣಮುಖರಾಗಬಹುದು ಎಂಬ ಭರವಸೆಯಿದೆ.

ಎಚ್​ಪಿವಿ ಲಸಿಕೆ ಹೆಚ್ಚು ಸುರಕ್ಷಿತವಾಗಿದ್ದು, ಪರಿಣಾಮಕಾರಿಯಾಗಿದೆ ಎಂಬುದನ್ನು ಈಗಾಗಲೇ ಅನೇಕ ಅಧ್ಯಯನಗಳು ತೋರಿಸಿದೆ. ಈ ಲಸಿಕೆಗಳನ್ನು ಸೋಂಕು ಹರಡುವ ಮೊದಲೇ ನೀಡಬೇಕು. ಲಸಿಕೆ ಪಡೆಯುವ ಮೂಲಕ ರೋಗವನ್ನು ಸಂಪೂರ್ಣವಾಗಿ ನಾಶ ಮಾಡಬಹುದಾಗಿದೆ. ಹಲವು ದೇಶದಲ್ಲಿ ಇದು ಈಗಾಗಲೇ ಯಶಸ್ವಿಯಾಗಿದೆ ಎಂದು ಅಧ್ಯಯನ ತಿಳಿಸಿದೆ.

ಇದನ್ನೂ ಓದಿ: ರೂಪದರ್ಶಿ ಪೂನಂ ಪಾಂಡೆ ಬಲಿ ಪಡೆದ ಗರ್ಭಕಂಠದ ಕ್ಯಾನ್ಸರ್​: ಇದು ಹೇಗೆ ಉಂಟಾಗುತ್ತದೆ, ಅದರ ಲಕ್ಷಣಗಳೇನು?

ABOUT THE AUTHOR

...view details