ಕರ್ನಾಟಕ

karnataka

ETV Bharat / health

ನಿಮ್ಮ ಮುಖದ ಫ್ಯಾಟ್ ಕರಗಿಸಲು ವೈದ್ಯರು ನೀಡಿರುವ ಸಲಹೆಗಳಿವು.. - Reduce Facial Fat

Effective Ways To Reduce Facial Fat: ಮುಖದ ಮೇಲೆ ಕೊಬ್ಬು ಸಂಗ್ರಹವಾದರೆ, ನೀವು ಚಿಕ್ಕವರಾಗಿದ್ದರೂ, ನೀವು ವಯಸ್ಸಾದವರಂತೆ ಕಾಣುತ್ತೀರಿ. ನೀವು ಕೂಡ ಇದೇ ರೀತಿಯ ಮುಖದ ಕೊಬ್ಬಿನ ಸಮಸ್ಯೆಯಿಂದ ಬಳಲುತ್ತಿದ್ದೀರಾ? ಹಾಗಾದ್ರೆ, ಇದೀಗ ಮುಖದ ಮೇಲಿನ ಕೊಬ್ಬನ್ನು ಕಡಿಮೆ ಮಾಡುವುದು ಹೇಗೆ ಎಂಬುದನ್ನು ಇಲ್ಲಿ ತಿಳಿಯೋಣ..

HOW TO REDUCE DOUBLE CHIN NATURALLY  Effective Ways To Reduce Facial Fat  HOME REMEDIES FOR FACIAL FAT  REDUCE FACIAL FAT TIPS
ಮುಖದ ಮೇಲಿನ ಫ್ಯಾಟ್ (ETV Bharat)

By ETV Bharat Health Team

Published : Sep 3, 2024, 1:47 PM IST

Effective Ways To Reduce Facial Fat:ಸಾಮಾನ್ಯವಾಗಿ ದಪ್ಪಗಿರುವವರ ಮುಖವೂ ಸಹ ಸ್ವಲ್ಪ ದಪ್ಪವಾಗಿ ಕಾಣುತ್ತದೆ. ಇದಕ್ಕೆ ಕಾರಣ.. ದೇಹದ ಇತರ ಭಾಗಗಳಲ್ಲಿ ಕೊಬ್ಬು ಶೇಖರಣೆಯಾಗಿ.. ಮುಖದ ಮೇಲೂ ಕೊಬ್ಬು ಹೆಚ್ಚುತ್ತದೆ. ಆದರೆ, ಕೆಲವರಿಗೆ ತೆಳ್ಳಗಿದ್ದರೂ ಮುಖದಲ್ಲಿ ಕೊಬ್ಬಿರುತ್ತದೆ. ಇದರಿಂದ ಅವರು ಆಕರ್ಷಕರಾಗಿ ಕಾಣುವುದಿಲ್ಲ. ಆದರೆ, ಕೆಲವು ಸಲಹೆಗಳನ್ನು ಅನುಸರಿಸಿ ಮುಖದ ಮೇಲಿರುವ ಕೊಬ್ಬನ್ನು ಬಹಳ ಸುಲಭವಾಗಿ ಕಡಿಮೆ ಮಾಡಿಕೊಳ್ಳಬಹುದು ಎನ್ನುತ್ತಾರೆ ವೈದ್ಯರು. ಆ ಸಲಹೆಗಳು ಯಾವುವು ಎಂಬುದರ ಮಾಹಿತಿ ಇಲ್ಲಿದೆ.

ಮುಖದ ವ್ಯಾಯಾಮ: ಮುಖದ ಕೊಬ್ಬಿನಿಂದ ಬಳಲುತ್ತಿರುವ ಜನರು ರಕ್ತ ಪರಿಚಲನೆ ಸುಧಾರಿಸಲು ಮುಖದ ವ್ಯಾಯಾಮವನ್ನು ಮಾಡಬಹುದು. ಅಲ್ಲದೆ, ಮುಖದ ಸ್ನಾಯುಗಳು ಬಲಗೊಳ್ಳುತ್ತವೆ. ಮತ್ತು ಮುಖದ ಮೇಲಿನ ಕೊಬ್ಬು ಕರಗುತ್ತದೆ ಎಂದು ತಜ್ಞರು ಹೇಳುತ್ತಾರೆ. ಅದಕ್ಕಾಗಿಯೇ ಪ್ರತಿದಿನ ಕೆಲವು ಮುಖದ ವ್ಯಾಯಾಮಗಳನ್ನು ಸೂಚಿಸಲಾಗುತ್ತದೆ.

ತೂಕ ಕಡಿಮೆ ಮಾಡಿಕೊಳ್ಳಿ: ಅಧಿಕ ತೂಕದಿಂದಾಗಿ, ಮುಖ ಸೇರಿದಂತೆ ದೇಹದ ಎಲ್ಲಾ ಭಾಗಗಳಲ್ಲಿ ಕೊಬ್ಬು ಸಂಗ್ರಹವಾಗುತ್ತದೆ. ಹಾಗಾಗಿ ತೂಕ ಇಳಿಸಿಕೊಳ್ಳಲು ಪ್ರತಿನಿತ್ಯ ಬೆವರು ಹರಿಸಲು ನಡಿಗೆ, ಓಟ, ಸೈಕ್ಲಿಂಗ್ ಮುಂತಾದ ವ್ಯಾಯಾಮಗಳನ್ನು ಮಾಡಬೇಕು ಎನ್ನುತ್ತಾರೆ ತಜ್ಞರು. 2014 ರಲ್ಲಿ 'ಇಂಟರ್ನ್ಯಾಷನಲ್ ಜರ್ನಲ್ ಆಫ್ ಒಬೆಸಿಟಿ'ನಲ್ಲಿ ಪ್ರಕಟವಾದ ಅಧ್ಯಯನವು ಏರೋಬಿಕ್ ವ್ಯಾಯಾಮವನ್ನು (ಓಟ, ಸೈಕ್ಲಿಂಗ್ ಅಥವಾ ಈಜು) ಮಾಡುವುದರಿಂದ ಮುಖದ ಕೊಬ್ಬನ್ನು ಕಡಿಮೆ ಮಾಡಬಹುದು ಎಂದು ಕಂಡುಹಿಡಿದಿದೆ. ಕೊರಿಯಾದ ಸಿಯೋಲ್ ನ್ಯಾಷನಲ್ ಯೂನಿವರ್ಸಿಟಿ ಬುಂಡಾಂಗ್ ಆಸ್ಪತ್ರೆಯ ಡಾ.ಯೂನ್ ಜೆ.ಹೆಚ್. ​​(Ji Hyun Yoon) ಈ ಸಂಶೋಧನೆಯಲ್ಲಿ ಭಾಗವಹಿಸಿದ್ದರು.

ಮುಖದ ಮಸಾಜ್: ಮಸಾಜ್ ಮುಖದಲ್ಲಿ ರಕ್ತ ಪರಿಚಲನೆ ಸುಧಾರಿಸುತ್ತದೆ. ಇದು ಚರ್ಮಕ್ಕೆ ರಕ್ತವನ್ನು ಒದಗಿಸಿ ಚರ್ಮವನ್ನು ಆರೋಗ್ಯವಾಗಿಡುತ್ತದೆ ಎನ್ನುತ್ತಾರೆ ತಜ್ಞರು. ಆದ್ದರಿಂದ, ನಿಯಮಿತವಾಗಿ ಮುಖದ ಮಸಾಜ್ ಮಾಡಿ.

ಸಾಕಷ್ಟು ನೀರು ಕುಡಿಯಿರಿ: ಸಾಕಷ್ಟು ನೀರು ಕುಡಿಯುವುದರಿಂದ ಚರ್ಮವು ಆರೋಗ್ಯಕರವಾಗಿರುತ್ತದೆ. ಇದು ಅನಗತ್ಯ ಆಹಾರ ಸೇವನೆಯನ್ನೂ ಕಡಿಮೆ ಮಾಡಬಹುದು. ಅಲ್ಲದೆ, ಸಾಕಷ್ಟು ನೀರು ಕುಡಿಯುವುದರಿಂದ ದೇಹದಿಂದ ವಿಷವನ್ನು ಹೊರಹಾಕುತ್ತದೆ. ಇದರಿಂದ ಮುಖ ಸುಂದರವಾಗಿ ಕಾಣುತ್ತದೆ ಎನ್ನುತ್ತಾರೆ ತಜ್ಞರು.

ಉಪ್ಪನ್ನು ಕಡಿಮೆ ಮಾಡಿ: ಕೆಲವರು ತಮ್ಮ ಆಹಾರದಲ್ಲಿ ಹೆಚ್ಚು ಉಪ್ಪನ್ನು ಬಳಸುತ್ತಾರೆ. ಆದರೆ, ಕೊಬ್ಬಿನ ಸಮಸ್ಯೆಯಿಂದ ಬಳಲುತ್ತಿರುವವರು ಆಹಾರದಲ್ಲಿ ಉಪ್ಪಿನ ಬಳಕೆಯನ್ನು ಕಡಿಮೆ ಮಾಡಬೇಕು. ಅಲ್ಲದೆ, ಉಪ್ಪು ಸಮೃದ್ಧವಾಗಿರುವ ಜಂಕ್ ಫುಡ್ ಮತ್ತು ಫಾಸ್ಟ್ ಫುಡ್​ನಿಂದ ದೂರವಿರಲು ತಜ್ಞರು ಸಲಹೆ ನೀಡುತ್ತಾರೆ.

ಚೆನ್ನಾಗಿ ನಿದ್ದೆ ಮಾಡಿ: ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್ ಫೋನ್ ಬಳಕೆ ಹೆಚ್ಚಾಗಿರುವುದರಿಂದ ಅನೇಕರಿಗೆ ರಾತ್ರಿಯ ನಿದ್ದೆ ಬರುವುದಿಲ್ಲ. ಮಧ್ಯರಾತ್ರಿಯವರೆಗೆ ಫೋನ್ ನೋಡುತ್ತಾರೆ. ಇದರಿಂದ ರಾತ್ರಿ ಸರಿಯಾಗಿ ನಿದ್ದೆ ಮಾಡದ ಕಾರಣ ಮುಖದ ಕೊಬ್ಬನ್ನು ಹೆಚ್ಚಿಸುವ ಅಪಾಯವಿದೆ. ಹಾಗಾಗಿ ಇದನ್ನು ಕಡಿಮೆ ಮಾಡಲು ರಾತ್ರಿ 7ರಿಂದ 8 ಗಂಟೆಯಾದರೂ ನಿದ್ದೆ ಮಾಡಬೇಕು ಎನ್ನುತ್ತಾರೆ ತಜ್ಞರು. ಈ ಸಲಹೆಗಳನ್ನು ಪಾಲಿಸಿದರೆ ಕೆಲವೇ ದಿನಗಳಲ್ಲಿ ಮುಖದ ಕೊಬ್ಬನ್ನು ಕಡಿಮೆಯಾಗುವ ಮೂಲಕ ನೀವು ಸುಂದರವಾಗಿ ಕಾಣುತ್ತೀರಿ.

ಓದುಗರಿಗೆ ಸೂಚನೆ:ಇಲ್ಲಿ ನಿಮಗೆ ನೀಡಿರುವ ಎಲ್ಲ ಆರೋಗ್ಯ ಮಾಹಿತಿ ಮತ್ತು ಸಲಹೆಗಳು ನಿಮ್ಮ ತಿಳುವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿಯನ್ನು ನಿಮಗೆ ನೀಡಿದ್ದೇವೆ. ಆದರೆ, ಇವುಗಳನ್ನು ಅನುಸರಿಸುವ ಮೊದಲು ಪರಿಣತ ವೈದ್ಯರ ಸಲಹೆಯನ್ನು ಅನುಸರಿಸುವುದು ಉತ್ತಮ.

ಇದನ್ನೂ ಓದಿ:

ABOUT THE AUTHOR

...view details