ಹೈದರಾಬಾದ್: ಭಾರತ ಈ ವರ್ಷ ಅತಿ ಹೆಚ್ಚಿನ ಹವಮಾನ ವೈಪರೀತ್ಯಕ್ಕೆ ಸಾಕ್ಷಿಯಾಗಲಿದ್ದು, ಏಪ್ರಿಲ್ ಅಂತ್ಯದಿಂದ ಆರಂಭವಾಗಲಿರುವ ಶಾಖದ ಅಲೆ ಮೇ ಅಂತ್ಯದವರೆಗೆ ಇರಲಿದೆ ಎಂದು ಕೇಂದ್ರ ಭೂ ವಿಜ್ಞಾನ ಸಚಿವ ಕಿರಣ್ ರಿಜಿಜು ತಿಳಿಸಿದ್ದು, ಜನರು ಮುನ್ನೆಚ್ಚರಿಕೆ ವಹಿಸುವಂತೆ ಮನವಿ ಮಾಡಿದ್ದಾರೆ.
ಏನಿದು ಶಾಖದ ಅಲೆ: ಅತಿ ಹೆಚ್ಚು ತಾಪಮಾನದ ಅವಧಿ ಇದಾಗಿದ್ದು, ಬೇಸಿಗೆಯಲ್ಲಿ ಅತ್ಯಂತ ಗರಿಷ್ಠ ಹವಾಮಾನ ದಾಖಲಾಗುತ್ತದೆ. ಯಾವುದೇ ಸ್ಥಳದಲ್ಲಿ ನಿರಂತರವಾಗಿ ಎರಡು ದಿನ 45 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾದರೆ ಅದು ಶಾಖದ ವಿಪರೀತ ಅಲೆ ಇರುವಂತಹ ಪರಿಸ್ಥಿತಿಗೆ ಕಾರಣವಾಗುತ್ತದೆ. ಐದು ಅಥವಾ ಹೆಚ್ಚಿನ ದಿನಗಳು ಈ ಸಮಯದಲ್ಲಿ ದೈನಂದಿನ ಗರಿಷ್ಠ ತಾಪಮಾನವು ಐದು ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಿರುವ ಸಾಧ್ಯತೆ ಇದೆ.
ಈ ಶಾಖದ ಅಲೆಯು ಶಾರೀರಿಕ ಒತ್ತಡಕ್ಕೆ ಕಾರಣವಾಗುವುದರ ಪರಿಣಾಮ ಸಾವು ಕೂಡ ಸಂಭವಿಸಬಹುದು. ಈ ಹಿನ್ನೆಲೆಯಲ್ಲಿ ಈ ಶಾಖದ ಅಲೆ ಅಥವಾ ಹೆಚ್ಚಿನ ಬಿಸಿಲಿನ ಸಂದರ್ಭದಲ್ಲಿ ಕೆಲವು ಮುನ್ನೆಚ್ಚರಿಕೆ ವಹಿಸುವುದು ಅಗತ್ಯವಾಗಿದೆ.
ಶಾಖ ಸಂಬಂಧಿತ ಅನಾರೋಗ್ಯ ತಡೆಗಟ್ಟುವ ಮಾರ್ಗ:
ಹೊರಾಂಗಣ ಚಟುವಟಿಕೆಗಳ ಬಗ್ಗೆ ಇರಲಿ ಎಚ್ಚರ:ಬಿರು ಬೇಸಿಗೆಯ ಅವಧಿಯಲ್ಲಿ ಹೊರಾಂಗಣ ಚಟುವಟಿಕೆ ನಡೆಸಲೇಬೇಕು ಎಂದರೆ ಅದನ್ನು ಬೆಳಗ್ಗೆ ಅಥವಾ ಸಂಜೆ ಸಮಯಕ್ಕೆ ಬದಲಾಯಿಸಿ. ನೆರಳಿನ ಪ್ರದೇಶದಲ್ಲಿ ಆಗ್ಗಾಗ್ಗೆ ವಿಶ್ರಾಂತಿ ಪಡೆಯಿರಿ. ಇದರಿಂದ ದೇಹದ ಥರ್ಮೋಸ್ಪಾಟ್ಗಳು ಚೇತರಿಸಿಕೊಳ್ಳುತ್ತವೆ. ಮಧ್ಯಾಹ್ನದ ಹೊತ್ತು ವಿಶೇಷವಾಗಿ ಮಧ್ಯಾಹ್ನ 12 ರಿಂದ 3ಗಂಟೆಯೊಳಗೆ ಹೊರಗೆ ಹೋಗುವುದನ್ನು ತಪ್ಪಿಸಿ.
ಆಹಾರ ಬಗ್ಗೆ ಕಾಳಜಿ: ಬೇಸಿಗೆಯಲ್ಲಿ ಹಗುರವಾದ ಊಟಕ್ಕೆ ಒತ್ತು ನೀಡಿ. ಹೆಚ್ಚು ಹಣ್ಣು ಮತ್ತು ನೀರು ಸಮೃದ್ಧವಾಗಿರುವ ಆಹಾರವನ್ನೇ ಆಯ್ಕೆ ಮಾಡಿ. ದೇಹವನ್ನು ತಂಪಾಗಿಸುವಂತಹ ಆಹಾರವನ್ನು ಆಯ್ಕೆ ಮಾಡಿ. ತಾಜಾ ಹಣ್ಣು, ಅದರಲ್ಲೂ ನೀರು ಹೆಚ್ಚಿರುವ ಸ್ಟ್ರಾಬೆರಿ, ಕಿತ್ತಳೆ, ಸೌತೆಕಾಯಿಗೆ ಆದ್ಯತೆ ನೀಡಿ, ಇದು ದೇಹವನ್ನು ತಂಪಾಗಿಸುವ ಜೊತೆಗೆ ಹೈಡ್ರೇಟ್ ಮಾಡುತ್ತದೆ. ಭಾರೀ, ಮಸಾಲೆ ಮತ್ತು ಎಣ್ಣೆ ಆಹಾರವೂ ದೇಹದ ತಾಪಮಾನ ಹೆಚ್ಚಿಸುತ್ತದೆ. ಇದರಿಂದ ದೂರವಿರಿ.
ನಿರ್ಜಲೀಕರಣಕ್ಕೆ ಒಳಗಾಗದಂತೆ ನೋಡಿಕೊಳ್ಳಿ:ಬಾಯಾರಿಕೆ ಆಗದಿದ್ದರೂ ಸಾಧ್ಯವಾದಷ್ಟು ನೀರನ್ನು ಸೇವಿಸಿ. ಹಣ್ಣಿನ ಜ್ಯೂಸ್, ತರಕಾರಿ ಜ್ಯೂಸ್ ಅನ್ನು ತಪ್ಪದೇ ಸೇವಿಸಿ. ಕಾರಣ ಇವು ಶಾಖ ಸಂಬಂಧಿ ಅನಾರೋಗ್ಯವನ್ನು ತಡೆಯುತ್ತದೆ. ವಿಪರೀತ ಶಾಖದ ಸಮಯದಲ್ಲಿ ನೀರಿಗೆ ಎಲೆಕ್ಟ್ರೋಲೈಟ್ ಸಮೃದ್ಧ ನೀರನ್ನು ಸೇವಿಸಿ. ಒಆರ್ಎಸ್ ಬಳಕೆ ಮಾಡಿ. ಮನೆಯಲ್ಲಿ ಮಾಡಿದ ಲಸ್ಸಿ, ಗಂಜಿ, ಶರಬತ್ತು, ಮಜ್ಜಿಗೆಯಂತಹ ದ್ರವಗಳನ್ನು ಸೇವಿಸಿ.
ಆಲ್ಕೋಹಾಲ್, ಕೆಫೆನ್ ಅಥವಾ ಹೆಚ್ಚಿನ ಮಟ್ಟದಲ್ಲಿ ಸಕ್ಕರೆಯನ್ನು ಸೇವಿಸಬೇಡಿ. ಇದು ದೇಹದಲ್ಲಿನ ನೀರಿನಾಂಶವನ್ನು ತೆಗೆದು ಹಾಕುತ್ತದೆ. ಕೋಲ್ಡ್ ಡ್ರಿಂಕ್ಸ್ ಸೇವನೆ ಕೂಡ ಬೇಡ ಕಾರಣ ಇದು ಹೊಟ್ಟೆ ನೋವಿಗೆ ಕಾರಣವಾಗುತ್ತದೆ.
ಹಗುರ - ತೇಳು ಬಟ್ಟೆ ಧರಿಸಿ: ಹಗುರವಾದ, ಸಡಿಲವಾದ ಹತ್ತಿ ಬಟ್ಟೆ ಧರಿಸಿ. ಹೊರಗೆ ಹೋಗುವಾಗ ಗಾಗಲ್ಸ್ (ಕನ್ನಡಕ), ಛತ್ತಿ, ಟೋಪಿ, ಶೂ ಅಥವಾ ಚಪ್ಪಲಿಗಳನ್ನು ಧರಿಸಿ.
ಮಾರ್ಗಸೂಚನೆ:
- ಹೊರಗಿನ ತಾಪಮಾನ ಹೆಚ್ಚಿರುವಾಗ ವಿಶೇಷವಾಗಿ ಮಧ್ಯಾಹ್ನ 12 ರಿಂದ 3 ಗಂಟೆಯವರೆಗೆ ಶ್ರಮದಾಯಕ ವ್ಯಾಯಾಮ ಚಟುವಟಿಕೆ ನಡೆಸಬೇಡಿ.
- ಪ್ರಯಾಣ ಮಾಡುವಾಗ ನೀರನ್ನು ತಪ್ಪದೇ ಕೊಂಡೊಯ್ಯಿರಿ.
- ಹೊರಗೆ ಕೆಲಸ ಮಾಡುವಾಗ ಟೋಪಿ ಅಥವಾ ಛತ್ರಿಗಳನ್ನು ಬಳಕೆ ಮಾಡಿ.
- ಉಪ್ಪು ಮತ್ತು ಮಿನರಲ್ಸ್ ಹೆಚ್ಚು ಸೇವಿಸಿ. ಹೆಚ್ಚಿನ ಬೆವರುವಿಕೆಯಿಂದ ದೇಹದಲ್ಲಿ ಉಪ್ಪಿನಾಂಶ ಮತ್ತು ಮಿನರಲ್ಸ್ ನಷ್ಟವಾಗುತ್ತದೆ. ಈ ಹಿನ್ನಲೆ ಇದರ ಬಗ್ಗೆ ಗಮನವಿರಲಿ.
- ವ್ಯಾಯಾಮ ಮಾಡುತ್ತಿದ್ದರೆ, ಪ್ರತಿ ಗಂಟೆಗೆ 2 ರಿಂದ 4 ಗ್ಲಾಸ್ಟ್ ತಣ್ಣಗಿನ ದ್ರವ ಸೇವಿಸಿ.
- ಬೆವರಿನಲ್ಲಿ ನಷ್ಟವಾಗುವ ಉಪ್ಪು ಮತ್ತು ಮಿನರಲ್ಸ್ ಅನ್ನು ಕ್ರೀಡಾ ಪಾನೀಯಗಳು ನೀಡುತ್ತದೆ. ಕಡಿಮೆ ಉಪ್ಪಿನ ಆಹಾರ ಸೇವಿಸುವವರು ನೀವಾಗಿದ್ದರೆ, ವೈದ್ಯರ ಸಲಹೆಯೊಂದಿಗೆ ಇದನ್ನು ಸೇವಿಸಿ
- ಮನೆಯನ್ನು ತಂಪಾಗಿಡಿ, ಸೂರ್ಯನ ಶಾಖ ಹೆಚ್ಚು ಬೀಳದಂತೆ ಕರ್ಟನ್, ಬಾಗಿಲು ಹಾಕಿರಿ. ರಾತ್ರಿ ಸಮಯದಲ್ಲಿ ಕಿಟಕಿ ತೆರೆಯಿರಿ.
- ಫ್ಯಾನ್ ಬಳಕೆ ಮಾಡಿ, ತಣ್ಣಿರಿನಿಂದ ಆಗಾಗ ಸ್ನಾನ ಮಾಡಿ. ಮಕ್ಕಳ ಆರೋಗ್ಯದ ಬಗಗ್ಗೆ ಹೆಚ್ಚಿನ ಕಾಳಜಿವಹಿಸಿ.
- ಮನೆಯೊಳಗೆ ತಂಪಾಗಿರಿ, ಆಗಾಗ್ಗೆ ತಣ್ಣೀರಿನ ಸ್ನಾನ ಅಥವಾ ಕಾಲು, ಕೈಗಳು, ಮುಖ ಮತ್ತು ಕತ್ತಿನ ನೀರಿನಿಂದ ಒದ್ದೆ ಮಾಡುತ್ತಿರಿ. ಒಲೆ ಮತ್ತು ಓವನ್ ಅನ್ನು ಕಡಿಮೆ ಬಳಸಿ.
- ಸಾಕು ಪ್ರಾಣಿಗಳು ಸಾಕಷ್ಟು ಪ್ರಮಾಣದ ನೀರನ್ನು ನೀಡಿ, ತಂಪು ಜಾಗದಲ್ಲಿರಿಸಿ.
ಇದನ್ನೂ ಓದಿ: ಮಾನಸಿಕ ಆರೋಗ್ಯದ ಮೇಲೂ ಬೀರುತ್ತದೆ ಬಿಸಿಲಿನ ತಾಪಮಾನ; ಕೆಜಿಎಂಯು ತಜ್ಞರ ಅಭಿಮತ
ವಿಶೇಷ ಸೂಚನೆ:(ಇಲ್ಲಿಒದಗಿಸಲಾದ ಸಲಹೆಗಳು ನಿಮ್ಮ ಮಾಹಿತಿಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರರ ಸಲಹೆಗಳನ್ನು ಆಧರಿಸಿ ನಾವು ಈ ಮಾಹಿತಿ ಒದಗಿಸುತ್ತಿದ್ದೇವೆ. ಇವುಗಳನ್ನು ಅನುಸರಿಸುವ ಮೊದಲು ವೈದ್ಯರ ಸಲಹೆ ಪಡೆಯುವುದು ಅತ್ಯಗತ್ಯ)