ಅದ್ಭುತ ರುಚಿಯ ಮೈಸೂರು ಸ್ಟೈಲ್ನ ಟೊಮೆಟೊ ರಸಂ ರೆಡಿ ಮಾಡೋದು ಹೇಗೆ ಗೊತ್ತಾ? - Mysuru Tomato Rasam - MYSURU TOMATO RASAM
Mysuru Tomato Rasam Recipe: ಹವಾಮಾನವು ತಂಪಾಗಿರುವಾಗ, ಸೂಪ್ ಮತ್ತು ರಸಂಗಳು ಊಟದೊಂದಿಗೆ ಅದ್ಭುತವಾಗಿರುತ್ತದೆ. ಪ್ರತಿದಿನ ಒಂದೇ ರೀತಿ ಸಾಂಬಾರ್ ಸೇವಿಸಿ ಬೇಜಾರ ಆಗಿದೆಯಾ? ಅದಕ್ಕಾಗಿಯೇ ಈ ಬಾರಿ ಮೈಸೂರು ಸ್ಟೈಲ್ ಟೊಮೆಟೊ ರಸಂ ಅಡುಗೆಯನ್ನು ನಿಮ್ಮ ಮುಂದೆ ತಂದಿದ್ದೇವೆ. ಈ ರಸಂನ ರುಚಿಯು ಸೂಪರ್ ಆಗಿರುತ್ತದೆ. ಮೈಸೂರು ಟೊಮೆಟೊ ರಸಂ ಮಾಡೋದು ಹೇಗೆ ಎಂಬುದನ್ನು ಕಲಿಯೋಣ..
How To Prepare Mysuru Tomato Rasam:ಊಟಕ್ಕಾಗಿ ಟೊಮೆಟೊ ರಸಂ ಮತ್ತು ಮೆಣಸಿನ ರಸಂ ಇದ್ದೇ ಇರುತ್ತದೆ. ಟೊಮೆಟೊ ರಸಂನಲ್ಲೂ ಹಲವು ವಿಧಗಳಿವೆ. ಇದನ್ನು ವಿವಿಧ ಪ್ರದೇಶಗಳಲ್ಲಿ ವಿಭಿನ್ನ ರುಚಿಯೊಂದಿಗೆ ತಯಾರಿಸಲಾಗುತ್ತದೆ. ಹಾಗಾದ್ರೆ ಈ ಬಾರಿ ನೀವು ಮನೆಯಲ್ಲಿಯೇ ಮೈಸೂರು ಸ್ಟೈಲ್ನ ಟೊಮೆಟೊ ರಸಂ ಟ್ರೈ ಮಾಡಿ ನೋಡಿ. ಮೈಸೂರು ಶೈಲಿಯಲ್ಲಿ ಟೊಮೆಮೊ ರಸಂ ತಯಾರಿಸಲು ಹೆಚ್ಚು ಸಮಯವೇನು ಬೇಕಾಗುವುದಿಲ್ಲ. ಇದರ ರುಚಿಯೂ ಸೂಪರ್ ಆಗಿರುತ್ತದೆ. ಈ ರಸಂ ಮಾಡುವುದು ಹೇಗೆ ಎನ್ನವುದನ್ನು ತಿಳಿಯೋಣ.
ಮೈಸೂರು ಟೊಮೆಟೊ ರಸಂಗೆ ಬೇಕಾಗುವ ಪದಾರ್ಥಗಳು:
ತೊಗರಿ ಬೇಳೆ: ನಾಲ್ಕು ಚಮಚ
ಹುಣಸೆಹಣ್ಣು- ಸುಮಾರು ನಿಂಬೆಹಣ್ಣಿನ ಗಾತ್ರದಷ್ಟು
ಟೊಮೆಟೊ - 4
ಮೆಣಸಿನಕಾಯಿ - 4
ಬೆಲ್ಲ - ಒಂದು ಚಮಚ
ಸ್ವಲ್ಪ ಕರಿಬೇವಿನ ಎಲೆಗಳು
ಅರಿಶಿನ - ಚಿಟಿಕೆ
ಅಡುಗೆ ಎಣ್ಣೆ -ಅಗತ್ಯಕ್ಕೆ ತಕ್ಕಷ್ಟು
ಉಪ್ಪು - ರುಚಿಗೆ ತಕ್ಕಷ್ಟು
ಸ್ವಲ್ಪ ಕೊತ್ತಂಬರಿ ಸೊಪ್ಪು
ರಸಂ ಪುಡಿಗಾಗಿ ಬೇಕಾಗುವ ಸಾಮಗ್ರಿಗಳು:
ಅಡುಗೆ ಎಣ್ಣೆ - 2 ಟೀ ಸ್ಪೂನ್
ಹಸಿ ಕಡಲೆ - ಒಂದು ಚಮಚ
ಹಸಿ ಕೊಬ್ಬರಿ - 1/2 ಕಪ್
ಕರಿಮೆಣಸು - 1 ಟೀ ಸ್ಪೂನ್
ಬ್ಯಾಡಗಿ ಕೆಂಪು ಮೆಣಸಿನಕಾಯಿ-3
ಧನಿಯಾ ಪುಡಿ - 1 ಟೇಬಲ್ ಸ್ಪೂನ್
ಜೀರಿಗೆ - ಅರ್ಧ ಚಮಚ
ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:
ಜೀರಿಗೆ- 1 ಟೀ ಸ್ಪೂನ್
ತುಪ್ಪ- 1 ಚಮಚ
ಸಾಸಿವೆ- 1 ಟೀ ಸ್ಪೂನ್
ಕಂಪು ಮೆಣಸಿನಕಾಯಿ - 2
ಇಂಗು - ಒಂದು ಟೀ ಚಮಚ
ಮೈಸೂರು ಟೊಮೆಟೊ ರಸಂ ಹೇಗೆ ತಯಾರಿಸೋದು ಹೇಗೆ?:
ಮೊದಲು ತೊಗರಿ ಬೇಳೆಯನ್ನು ನೀರಿನಲ್ಲಿ ಅರ್ಧ ಗಂಟೆ ನೆನೆಸಿಡಿ.
ನಂತರ ಕುಕ್ಕರ್‌ನಲ್ಲಿ ಈ ಬೇಳೆ ಹಾಕಿ, ಮತ್ತು ಅದಕ್ಕೆ ನೀರು ಹಾಕಿ ಎರಡು ಸೀಟಿ ಬರುವವರೆಗೆ ಕಡಿಮೆ ಉರಿಯಲ್ಲಿ ಬೇಯಿಸಿ. ಬೇಳೆ ಬೆಂದ ನಂತರ ಮುಚ್ಚಳ ತೆಗೆದು ಪಕ್ಕಕ್ಕೆ ಇಡಿ.
ಹಾಗೆಯೇ ಇನ್ನೊಂದು ಒಲೆಯ ಮೇಲೆ ಬಾಣಲೆ ಇಟ್ಟು ಎಣ್ಣೆ ಹಾಕಿ ಬ್ಯಾಡಗಿ ಮೆಣಸಿನಕಾಯಿ, ಹಸಿಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಜೀರಿಗೆ ಹಾಕಿ ಹುರಿಯಿರಿ.
ಇದರಲ್ಲಿ ಹಸಿಕೊಬ್ಬರಿ ಹಾಕಿ ಸಣ್ಣ ಉರಿಯಲ್ಲಿ ಚೆನ್ನಾಗಿ ಪರಿಮಳ ಬರುವವರೆಗೆ ಹುರಿಯಿರಿ. ರುಚಿಕರ ಮೈಸೂರು ಶೈಲಿಯ ರಸಂ ಸವಿಯಬೇಕಾದರೆ ಬ್ಯಾಡಗಿ ಮೆಣಸಿಕಾಯಿಯನ್ನೇ ಬಳಸಬೇಕು. ಇವು ಸೂಪರ್ ಮಾರ್ಕೆಟ್ಗಳಲ್ಲಿ ದೊರೆಯುತ್ತವೆ. ನಿಮ್ಮ ಬಳಿ ಬ್ಯಾಡಗಿ ಮೆಣಸಿನಕಾಯಿ ಇಲ್ಲದಿದ್ದರೆ, ನೀವು ಒಣ ಮಿರ್ಚಿಯನ್ನು ಬಳಸಬಹುದು.
ಈ ಮಿಶ್ರಣ ತಣ್ಣಗಾದ ನಂತರ ಮಿಕ್ಸಿ ಜಾರ್ಗೆ ಹಾಕಿ ರುಬ್ಬಿಕೊಂಡು ಪ್ಲೇಟ್ಗೆ ತೆಗೆದುಕೊಳ್ಳಿ.
ಈಗ ಒಂದು ಬೌಲ್ ತೆಗೆದುಕೊಂಡು ಕತ್ತರಿಸಿದ ಟೊಮೆಟೊ ತುಂಡುಗಳು, ಸ್ವಲ್ಪ ಉಪ್ಪು, ಬೆಲ್ಲ ಮತ್ತು ಅರಿಶಿನ ಸೇರಿಸಿ.
ಅಲ್ಲದೆ, ಅದರಲ್ಲಿ ಹುಣಸೆ ಹಣ್ಣು ಮತ್ತು ಕರಿಬೇವಿನ ಎಲೆಗಳನ್ನು ಹಾಕಿ ಮತ್ತು ಇನ್ನೊಂದು ಬಾರಿ ಬೆರೆಸಿ.
ಈಗ ದೊಡ್ಡ ಬಟ್ಟಲಿನಲ್ಲಿ ಟೊಮೆಟೊ ರಸವನ್ನು ತೆಗೆದುಕೊಳ್ಳಿ. ಅದರಲ್ಲಿ ಒಂದು ಲೀಟರ್ ನೀರನ್ನು ಸುರಿಯಿರಿ. ಜೊತೆಗೆ ಹಸಿರು ಮೆಣಸಿನಕಾಯಿಯನ್ನು ಹಾಕಿ ಸಣ್ಣ ಉರಿಯಲ್ಲಿ ರಸಂ ಅನ್ನು ಕುದಿ ಬರುವವರೆಗೆ ಬೇಯಿಸಿ.
ಕುದಿಯುವ ಟೊಮೆಟೊ ರಸಂ ಬೇಯಿಸಿದ ಬೇಳೆ, ರುಬ್ಬಿದ ಮಸಾಲಾ ಪುಡಿ ಮತ್ತು ಕೊತ್ತಂಬರಿ ಸೊಪ್ಪನ್ನು ಸೇರಿಸಿ ಮತ್ತು ಹೆಚ್ಚಿನ ಉರಿಯಲ್ಲಿ ಮತ್ತೆ ನಾಲ್ಕು ನಿಮಿಷ ಕುದಿಸಿ. ನಂತರ ರಸಂ ಕಡಿಮೆ ಉರಿಯಲ್ಲಿ ಕುದಿಸಿ.
ಇನ್ನೊಂದು ಕಡೆ ಒಲೆ ಆನ್ ಮಾಡಿ ಬಾಣಲೆಗೆ ತುಪ್ಪ ಹಾಕಿ ಸಾಸಿವೆ, ಜೀರಿಗೆ, ಕರಿಮೆಣಸು, ಇಂಗು, ಕರಿಬೇವಿನ ಸೊಪ್ಪು ಹಾಕಿ ಹುರಿಯಿರಿ.
ಈಗ ಕುದಿಯುತ್ತಿರುವ ರಸಂಗೆ ಒಗ್ಗರಣೆಯನ್ನು ಸೇರಿಸಿ ಕುದಿಸಿದರೆ ಸಾಕು, ಮೈಸೂರು ಟೊಮೆಟೊ ರಸಂ ರೆಡಿ.
ಈ ಮೈಸೂರು ಸ್ಟೈಲ್ ರಸಂ ಜೊತೆಗೆ ಅನ್ನ ಅಥವಾ ರಾಗಿ ಮುದ್ದೆ ತಿನ್ನಬಹುದು. ನಿಮಗೆ ಇಷ್ಟವಾದರೆ, ಈ ರಸಂ ಅನ್ನು ನೀವು ಮನೆಯಲ್ಲಿ ಟ್ರೈ ಮಾಡಿ ನೋಡಿ.