ಒಮ್ಮೆಯಾದ್ರೂ 'ರಸ್ಕ್ ಹಲ್ವಾ' ಟೇಸ್ಟ್ ಮಾಡಿದ್ದೀರಾ?:ರಸ್ಕ್ನಿಂದ ರುಚಿಕರ ಹಲ್ವಾ ಮಾಡೋದು ಹೇಗೆ? - How to prepare rusk halwa - HOW TO PREPARE RUSK HALWA
Rusk Halwa Recipe in Kannada: ಹಲ್ವಾ ಎಂದರೆ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರಿಗೂ ಬಾಯಲ್ಲಿ ನೀರೂರಿಸುವ ಖಾದ್ಯ. ಅಂಥವರಿಗಾಗಿಯೇ ಸೂಪರ್ ಮತ್ತು ಸಖತ್ ಟೇಸ್ಟಿಯಾದ ಹಲ್ವಾ ರೆಸಿಪಿಯೊಂದನ್ನು ನಿಮಗಾಗಿ ತಂದಿದ್ದೇವೆ. ಅದುವೇ.. 'ರಸ್ಕ್ ಹಲ್ವಾ'. ಈ ಹಲ್ವಾವನ್ನು ಕಡಿಮೆ ಸಮಯದಲ್ಲಿ ತಯಾರಿಸುವುದು ತುಂಬಾ ಸರಳ ಮತ್ತು ಒಮ್ಮೆ ತಿಂದರೆ ಮತ್ತೆ ಮತ್ತೆ ಬೇಕು ಅನಿಸುತ್ತದೆ. ರಸ್ಕ್ ಹಲ್ವಾ ಹೇಗೆ ಮಾಡಬೇಕು ಎಂದು ಈ ಸ್ಟೋರಿಯಲ್ಲಿ ಕಲಿಯೋಣ ಬನ್ನಿ.
Rusk Halwa Recipe in Kannada: ಊಟದ ನಂತರ ಏನಾದರೂ ಸಿಹಿ ತಿನ್ನುವ ಅಭ್ಯಾಸ ಅನೇಕರಿಗೆ ಇರುತ್ತದೆ. ಆದರೆ, ಎಷ್ಟೇ ಬಗೆಯ ಸಿಹಿತಿಂಡಿಗಳಿದ್ದರೂ ಹಲ್ವಾಗೆ ಮಾತ್ರ ವಿಶೇಷ ಸ್ಥಾನವಿದೆ. ಬಾಯಲ್ಲಿ ನೀರೂರಿಸುವ ಈ ಸಿಹಿ ರೆಸಿಪಿಯನ್ನು ಮಕ್ಕಳಿಂದ ದೊಡ್ಡವರವರೆಗೂ ಇಷ್ಟಪಡುತ್ತಾರೆ. ನೀವು ಈಗಾಗಲೇ ಹಲ್ವಾದಲ್ಲಿ ಹಲವು ವೆರೈಟಿಗಳನ್ನು ಟ್ರೈ ಮಾಡಿರಬೇಕು. ಆದರೆ, ಒಮ್ಮಿಯಾದರೂ "ರಸ್ಕ್ ಹಲ್ವಾ" ರುಚಿ ನೋಡಿದ್ದೀರಾ? ಬಹುತೇಕ ರಸ್ಕ್ ಹಲ್ವಾ ಬಗ್ಗೆ ತಿಳಿದಿರುವುದೇ ಇಲ್ಲ. ಆದರೆ, ರುಚಿಯೇ ಬೇರೆ ಇರುತ್ತದೆ.
ಈ ಹಲ್ವಾದಲ್ಲಿ ಎಣ್ಣೆ, ತುಪ್ಪ ಜಾಸ್ತಿ ಹಾಕುವ ಅಗತ್ಯವಿಲ್ಲ. ಈ ಸಿಹಿಯನ್ನು ಒಮ್ಮೆ ತಿಂದರೆ ಸಾಕು ಮತ್ತೆ ಮತ್ತೆ ತಿನ್ನಬೇಕೆನಿಸುತ್ತದೆ. ರುಚಿ ಕೂಡ ಅದ್ಭುತವಾಗಿರುತ್ತದೆ. ಇದಲ್ಲದೇ, ಈ ಹಲ್ವಾ ಮಾಡುವುದು ತುಂಬಾ ಸುಲಭ! ಹಾಗಾದರೆ, ಈ ಸೂಪರ್ ಟೇಸ್ಟಿಯಾದ ರಸ್ಕ್ ಹಲ್ವಾ ಮಾಡಲು ಬೇಕಾಗುವ ಪದಾರ್ಥಗಳು ಯಾವುವು? ಈಗ ಅದನ್ನು ಹೇಗೆ ಸಿದ್ಧಪಡಿಸಬೇಕೆಂದು ತಿಳಿಯೋಣ.
ಹಲ್ವಾ ಸಿದ್ಧಪಡಿಸಲು ಬೇಕಾದ ಪದಾರ್ಥಗಳೇನು?:
ಒಂದು ಕಪ್ ರಸ್ಕ್ (10 ರಸ್ಕ್)
2 ಟೇಬಲ್ಸ್ಪೂನ್ ಒಣದ್ರಾಕ್ಷಿ
ಒಂದು ಹಿಡಿ ಗೋಡಂಬಿ
3 ಚಮಚ ತುಪ್ಪ
ಒಂದು ಕಪ್ ಸಕ್ಕರೆ
2 ಸಿಪ್ಪೆ ತೆಗೆದಿಟ್ಟ ಏಲಕ್ಕಿ
ಒಂದು ಚಿಟಿಕೆ ಕೇಸರಿ
ತಯಾರಿಸುವ ವಿಧಾನ?:
ಮೊದಲು ರಸ್ಕ್ ತೆಗೆದುಕೊಂಡು ತುಂಡುಗಳಾಗಿ ಕತ್ತರಿಸಿ. ಸಾಧ್ಯವಾಗದಿದ್ದರೆ ಮಿಕ್ಸಿಯಲ್ಲಿ ಹಾಕಿ ರುಬ್ಬಿಕೊಳ್ಳಬಹುದು. (ಇದು ನಯವಾಗಿರಬೇಕು ಮತ್ತು ತುಂಬಾ ಮೃದುವಾಗಿರಬಾರದು.)
ಈಗ ಒಲೆ ಆನ್ ಮಾಡಿ ಪಾತ್ರೆಯೊಂದರಲ್ಲಿ ತುಪ್ಪ ಹಾಕಿ ಬಿಸಿ ಮಾಡಿ.
ನಂತರ ಒಣದ್ರಾಕ್ಷಿ ಮತ್ತು ಗೋಡಂಬಿಯನ್ನು ಒಂದರ ನಂತರ ಒಂದರಂತೆ ಹಾಕಿ ಹುರಿದು ಪಕ್ಕಕ್ಕೆ ಇಡಿ.
ಆ ನಂತರ ಇನ್ನೂ ಸ್ವಲ್ಪ ತುಪ್ಪ ಹಾಕಿ ರಸ್ಕ್ ಪೌಡರ್ ಹಾಕಿ ಕಡು ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿ ಪಕ್ಕಕ್ಕೆ ಇಡಿ. (ಕಡಿಮೆ ಉರಿಯಲ್ಲಿ ಹುರಿಯಿರಿ)
ಈಗ ಅದೇ ಪಾತ್ರೆಯಲ್ಲಿ ಸಕ್ಕರೆ ಮತ್ತು ಒಂದೂವರೆ ಕಪ್ ನೀರು ಹಾಕಿ ಕುದಿಸಿ.
ಅದಕ್ಕೆ ಸಿಪ್ಪೆ ತೆಗೆದಿಟ್ಟ ಏಲಕ್ಕಿ ಮತ್ತು ಒಂದು ಚಿಟಿಕೆ ಕೇಸರಿ ಹಾಕಿ ಕುದಿಸಿ. (ಕೇಸರಿ ಸೇರಿಸುವುದರಿಂದ ಪರಿಮಳದ ಜೊತೆಗೆ ಬಣ್ಣ ಬರುತ್ತದೆ)
ಕುದಿದ ನಂತರ, ಪುಡಿ ಮಾಡಿದ ರಸ್ಕ್ ಮಿಶ್ರಣವನ್ನು ಸೇರಿಸಿ ಮತ್ತು ಚೆನ್ನಾಗಿ ಮಿಶ್ರಣ ಮಾಡಿ.
ಹುರಿದ ಒಣದ್ರಾಕ್ಷಿ ಮತ್ತು ಗೋಡಂಬಿ ಸೇರಿಸಿ ಮಿಕ್ಸ್ ಮಾಡಿದರೆ ಸಾಕು ರುಚಿಕರವಾದ ರಸ್ಕ್ ಹಲ್ವಾ!